ವಾಂದಿ-ಭೇದಿ: ಹಲವು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು:  ಆಹಾರ ಸೇವಿಸಿದ ಬಳಿಕ ವಾಂತಿ ಭೇದಿ ಅನುಭವಗೊಂಡ ಕುಂಡಂಕುಳಿ ಸಾವಿತ್ರಿಭಾಯಿ ಫುಲೆ ಸರಕಾರಿ ಆಶ್ರಮ ಶಾಲೆಯ ಹಲವು ವಿದ್ಯಾರ್ಥಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಇದರಲ್ಲಿ ೨೧ ಮಂದಿ ವಿದ್ಯಾರ್ಥಿಗಳನ್ನು ಬೇಡಡ್ಕ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಇವರಲ್ಲಿ ೯ ಮಂದಿಯನ್ನು ನಿನ್ನೆ ಅಪರಾಹ್ನ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.  ಇದರ ಹೊರತಾಗಿ ಕಳೆದ ನಾಲ್ಕು ದಿನಗಳಲ್ಲಾಗಿ ಹಲವು ವಿದ್ಯಾರ್ಥಿಗಳು ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆ ಮೂಲಕ ಚಿಕಿತ್ಸೆ ಪಡೆದ …

ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ ವೇಳೆ ದುರಂತ ಸಂಭವಿಸಿದೆ. ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಪಂದನಾ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿಯಾಗಿದ್ದಾರೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ …

ರೈಲಿನಿಂದ ಬಿದ್ದು ಅಬಕಾರಿ ಅಧಿಕಾರಿ ಮೃತ್ಯು

ಕಾಸರಗೋಡು: ಅಬಕಾರಿ ಅಧಿಕಾರಿಯೊಬ್ಬರು ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಎಕ್ಸೈಸ್ ಕಾಸರಗೋಡು ಡಿವಿಶನ್‌ನ ಪ್ರಿವೆಂಟಿವ್ ಆಫೀಸರ್, ಕಲ್ಯಾಶೇರಿ ಸೆಂಟ್ರಲ್ ನಿವಾಸಿಯಾದ ಪಿ. ಅಶೋಕನ್ (೫೨) ಎಂಬವರು ಮೃತಪಟ್ಟ ದುರ್ದೈವಿ. ಶನಿ ವಾರ ರಾತ್ರಿ ಕೆಲಸ ಮುಗಿಸಿ ಕಾಚ್ಚೆಗುಡೆ ಎಕ್ಸ್‌ಪ್ರೆಸ್‌ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ಕಣ್ಣೂರು ರೈಲ್ವೇ ನಿಲ್ದಾಣಕ್ಕೆ ತಲುಪುವ ೩೦೦ ಮೀಟರ್ ಅಂತರದಲ್ಲಿ ಇವರು ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆನ್ನ ಲಾಗುತ್ತಿದೆ.

ಹೊಯ್ಗೆ ಸಾಗಾಟ: ವಾಹನ ವಶ

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಕುಂಬಳೆ ಎಸ್‌ಐ ರಿಜಿತ್ ವಶಪಡಿಸಿಕೊಂಡಿದ್ದಾರೆ. ಮೊಗ್ರಾಲ್ ಕೊಪ್ಪಳದಿಂದ ಹೊಯ್ಗೆ ಸಾಗಿಸುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಾಹನ ಚಾಲಕ ಮೊಗ್ರಾಲ್‌ನ ಮುಬೀನ್ ಫಯಾಸ್ (೨೩) ಎಂಬಾತನನ್ನು ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ನಟ ವಿಜಯ್ ರಾಘವೇಂದ್ರ ಅವರ ಪತ್ನಿ, ನಟಿ ಸ್ಪಂದನಾ ನಿಧನರಾಗಿದ್ದಾರೆ

ಕುಂಬಳೆಯಲ್ಲಿ ಯುವಕನಿಗೆ ಇರಿತ: ಕೊಲೆ ಪ್ರಕರಣದ ಆರೋಪಿ ಬಂಧನ

ಕುಂಬಳೆ:  ಕುಂಬಳೆಯಲ್ಲಿ ನಿನ್ನೆ ಸಂಜೆ ಯುವಕನೋರ್ವ ಇರಿತದಿಂದ ಗಾಯಗೊಂಡಿದ್ದು, ಈ ಸಂಬಂಧ ಕೊಲೆ ಪ್ರಕರಣದ ಆರೋಪಿಯನ್ನು   ಪೊಲೀಸರು ಬಂಧಿಸಿದ್ದಾರೆ.  ಪೆರುವಾಡು ಫಿಶರೀಸ್ ಕಾಲನಿ ನಿವಾಸಿಯೂ ಈಗ ಬಂಬ್ರಾಣದಲ್ಲಿ ವಾಸಿಸುವ ನಿಯಾಸ್ (೩೦) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ಸಂಜೆ  ಚಳಿಯಂಗೋಡು ಮೈಮೂನ್ ನಗರದ  ಶಾಹುಲ್ ಹಮೀದ್ ಯಾನೆ ಶಾನು(೨೮)  ಎಂಬವರಿಗೆ ನಿಯಾಸ್ ಇರಿದು ಗಾಯಗೊಳಿಸಿ ದ್ದಾನೆ. ಕುಂಬಳೆ-ಬದಿಯಡ್ಕ ರಸ್ತೆಯ ಗ್ಯಾರೇಜೊಂದರ ಸಮೀಪ ನಿಂತಿದ್ದ ಶಾಹುಲ್ ಹಮೀದ್‌ರ ಬಳಿಗೆ ಬಂದ ನಿಯಾಸ್ ಬಿಯರ್ ಬಾಟ್ಲಿಯಿಂದ ಶಾಹುಲ್ ಹಮೀದ್‌ರ ತಲೆಗೆ …

ಬೆಳ್ಳೂರು: ವ್ಯಾಪಾರಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬೆಳ್ಳೂರು: ನಾಟೆಕಲ್ಲಿನಲ್ಲಿ ವ್ಯಾಪಾರಿಯೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೆಟ್ಟಣಿಗೆ ಕಚ್ಚೇರಿ ಎಂಬಲ್ಲಿನ ದಿವಂಗತರಾದ ಕುಂಞಿಕಣ್ಣನ್ ಚೆಟ್ಟಿಯಾರ್-ಕೊರಪ್ಪಾಳು ದಂಪತಿಯ ಪುತ್ರ ಭಾಸ್ಕರ (೫೦) ಮೃತಪಟ್ಟ ವ್ಯಕ್ತಿ.  ನಾಟೆಕಲ್ಲಿನಲ್ಲಿ ವ್ಯಾಪಾರಿಯಾಗಿದ್ದ ಭಾಸ್ಕರ ಇಲ್ಲಿಗೆ ಸಮೀಪದ ಕಲೆರಿ ಎಂಬಲ್ಲಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಮೊನ್ನೆ ರಾತ್ರಿ ನೆಟ್ಟಣಿಗೆಯ ಮನೆಗೆ ತೆರಳಿದ್ದ ಅವರು ಮರಳಿ ಕ್ವಾರ್ಟರ್ಸ್‌ಗೆ ಬಂದಿದ್ದರು. ನಿನ್ನೆ   ಬೆಳಿಗ್ಗೆ ಕ್ವಾರ್ಟರ್ಸ್‌ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮಾಲಕರು ಕಿಟಿಕಿ ಮೂಲಕ ನೋಡಿದಾಗ ಕೊಠಡಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಭಾಸ್ಕರ ಪತ್ತೆಯಾಗಿದ್ದಾರೆ. …

ಕಾರು ಅಪಘಾತದಲ್ಲಿ ಗಾಯಗೊಂಡ: ಯುವಕ ಚಿಕಿತ್ಸೆ ಮಧ್ಯೆ ಮೃತ್ಯು

ಪೆರ್ಲ: ಕಾರು ಅಪಘಾತ ಕ್ಕೀಡಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.  ಮಣಿಯಂಪಾರೆ ಮನ್ನಂಗಳದ ಜಾನು ನಾಯ್ಕ್ ಎಂಬವರ ಪುತ್ರ ರೋಶನ್ ಎನ್.ಜೆ (೨೯) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಬೆಂಗಳೂರು ಕೇಂದ್ರೀಕರಿಸಿ ಕಾರ್ಯಾಚರಿಸುವ ಖಾಸಗಿ ಸಂಸ್ಥೆಯೊಂದರ ನೌಕರನಾಗಿ ರೋಶನ್ ದುಡಿಯುತ್ತಿದ್ದರು. ಮೊನ್ನೆ ರಾತ್ರಿ ಮಂಗಳೂರಿನಿಂದ ಇವರು ಮನೆಗೆ ಕಾರಿನಲ್ಲಿ ಮರಳುತ್ತಿದ್ದಾಗ ೧೨ ಗಂಟೆ ಹೊತ್ತಿಗೆ ಅಡ್ಕಸ್ಥಳದಲ್ಲಿ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಇವರು …

ಮಟ್ಕಾ: ಇಬ್ಬರ ಬಂಧನ

ಮಂಜೇಶ್ವರ: ತಲಪ್ಪಾಡಿಯಲ್ಲಿ ನಿನ್ನೆ ಸಂಜೆ ಮಟ್ಕಾ ನಿರತರಾಗಿದ್ದ ಇಬ್ಬರನ್ನು ಎಸ್‌ಐ ಅನೂಪ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕಣ್ವತೀರ್ಥ ನಿವಾಸಿಗಳಾದ ಪ್ರದೀಪ್ ಪೂಜಾರಿ(೩೯), ಅರುಣ್ ಕುಮಾರ್ (೪೧) ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ   ಒಟ್ಟು ೧೬೪೦ ರೂ. ವಶಪಡಿಸಲಾಗಿದೆ.

ತಾತ್ಕಾಲಿಕ ಅಧ್ಯಾಪಕರ ವೇತನ ಓಣಂ ಹಬ್ಬಕ್ಕೂ ಮುಂಚಿತ ವಿತರಣೆ- ಸಚಿವ

ಪಾಲಕ್ಕಾಡ್: ಶಾಲೆಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ಅಧ್ಯಾಪಕರ ವೇತನವನ್ನು ಓಣಂ ಹಬ್ಬದ ಮುಂಚಿತ ವಿತರಿಸಲಾಗುವುದೆಂದು ಸಚಿವ ವಿ. ಶಿವನ್ ಕುಟ್ಟಿ ನುಡಿದರು. ವೇತನ ವಿತರಣೆಯ ಸಾಫ್ಟ್‌ವೇರ್ ಆದ ಸ್ಪಾರ್ಕ್‌ನಲ್ಲಿ ಉಂ ಟಾದ ತಾಂತ್ರಿಕ ಸಮಸ್ಯೆಯಿಂದ ವಿತರಣೆ ಮೊಟಕಾಗಿತ್ತೆಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ೧೧,೨೦೦ ತಾತ್ಕಾಲಿಕ ಅಧ್ಯಾಪಕರ ವೇತನ ಕಳೆದ ಎರಡು ತಿಂಗಳಿಂದ ಮೊಟಕಾಗಿತ್ತು. ತಾತ್ಕಾಲಿಕ ಅಧ್ಯಾಪಕರ ವೇತನ ಮೊಟಕಾಗಿ ಅವರು ಕೆಲಸ ತ್ಯಜಿಸುವ ನಿರ್ಧಾರ ಕೈಗೊಂಡ ಬಗ್ಗೆ ನಿನ್ನೆ ಕಾರವಲ್ ವರದಿ ಪ್ರಕಟಿಸಿತ್ತು. ಜೂನ್, ಜುಲೈ …