ಬಿರುಸಾಗುತ್ತಿರುವ ಮಳೆ : ಸಾರ್ವಜನಿಕರಿಗೆ ನಿರ್ದೇಶಗಳು
ಕಾಸರಗೋಡು: ತೀವ್ರ ಮಳೆ ಲಭಿಸುತ್ತಿರುವ ಮಲೆನಾಡು ವಲಯದಲ್ಲಿ ಮಣ್ಣು ಕುಸಿತ, ಗುಡ್ಡೆ ಕುಸಿತ, ನೆರೆ ಸಾಧ್ಯತೆ ಇರುವ ಪ್ರದೇಶಗಳಲ್ಲಿರುವವರು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರ ಗೊಂಡು ವಾಸಮಾಡಬೇಕಾಗಿದೆ. ಹಗಲು ಹೊತ್ತಿನಲ್ಲಿಯೇ ಸ್ಥಳಾಂತರಗೊಳ್ಳ ಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕೇಂದ್ರ ಹವಾಮಾನ ಇಲಾಖೆ ನೀಡಿದ ಮುನ್ನೆಚ್ಚರಿಕೆ ಕ್ರಮದಂಗವಾಗಿ ಅಧಿಕಾರಿಗಳು ಈ ಎಚ್ಚರಿಗೆ ನೀಡಿದ್ದಾರೆ. ಸ್ಥಿರವಾಗಿ ನೀರು ಸಂಗ್ರಹವಾಗುತ್ತಿರುವ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಶಿಬಿರಗಳಿಗೆ ಸ್ಥಳಾಂತರವಾಗಬೇಕು. ತೀವ್ರವಾದ ಗಾಳಿಗೆ ಸಾಧ್ಯತೆ ಇರುವ ಕಾರಣ ಗಟ್ಟಿ ಮುಟ್ಟಾಗಿಲ್ಲದ ಮನೆಗಳಲ್ಲಿ ವಾಸಿಸುವ ವರು, ಛಾವಣಿಯಿಲ್ಲದ …