ಪಂಚಾಯತ್ಗಳ ವಾರ್ಡ್ ವಿಭಜನೆಯ ಅಂತಿಮ ಪಟ್ಟಿ ಪ್ರಕಟ: ಒಟ್ಟು 17,337 ವಾರ್ಡ್ಗಳು


ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆಯೇ, ಅದರ ಪೂರ್ವಭಾವಿಯಾಗಿ ನಡೆಸಲಾದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆಯಂತೆ ಗ್ರಾಮ ಪಂಚಾ ಯತ್ಗಳ ಅಂತಿಮ ವಾರ್ಡ್ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಹಲವು ವಾರ್ಡ್ಗಳನ್ನು ವಿಭಜಿಸಿ ಈ ಹೊಸ ಯಾದಿ ತಯಾರಿಸಲಾಗಿದೆ.
ಇದರಂತೆ ರಾಜ್ಯದ 941 ಗ್ರಾಮ ಪಂಚಾಯತ್ಗಳ ವಾರ್ಡುಗಳ ಸಂಖ್ಯೆ ಈಗ 15,962ರಿಂದ 17,337 ಕ್ಕೇರಿದೆ. ಅಂದರೆ ವಾರ್ಡ್ಗಳ ಸಂಖ್ಯೆಯಲ್ಲಿ 1375ರಷ್ಟು ಹೆಚ್ಚಳ ಉಂಟಾಗಿದೆ. 2010ರ ಬಳಿಕ ವಾರ್ಡ್ ವಿಭಜನೆ ನಡೆದಿದ್ದು ಇದೇ ಪ್ರಥಮವಾಗಿದೆ. ಇನ್ನು ನಗರಸಭೆಗಳು ಮತ್ತು ಕಾರ್ಪರೇಶನ್ಗಳ ವಾರ್ಡ್ ವಿಭಜನೆಯ ಅಂತಿಮ ಯಾದಿಯನ್ನು ಈ ತಿಂಗಳ ಕೊನೆ ಯೊಳಗಾಗಿ ಪ್ರಕಟಿಸಲಾಗುವುದು.

RELATED NEWS

You cannot copy contents of this page