ಕಲ್ಲಿಕೋಟೆಯಲ್ಲಿ ಲಘು ಭೂಕಂಪ

ಕಲ್ಲಿಕೋಟೆ: ಕಲ್ಲಿಕೋಟೆ ಜಿಲ್ಲೆಯ ಕಾಯಕೋಡಿ ಪಂಚಾಯತ್‌ನ ಎಲಿಕಂಪಾರದಲ್ಲಿ ಇಂದು ಬೆಳಿಗ್ಗೆ ಲಘು ಭೂಕಂಪ ಉಂಟಾಗಿದೆ. ಈ ಪಂಚಾಯತ್‌ನ 4 ಮತ್ತು 5ನೇ ವಾರ್ಡ್‌ನಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ನೆಲದ ಸಂಚಲನದೊಂದಿಗೆ ವಿಶಿಷ್ಟ ಶಬ್ದವೂ ಉಂಟಾಗಿತ್ತೆಂದು ಈ ಪ್ರದೇಶದ ಜನರು ಹೇಳಿದ್ದಾರೆ. 

ರಾಜೀವ್ ಗಾಂಧಿ ಸ್ಮೃತಿ ದಿನಾಚರಣೆ ಯಶಸ್ವಿಗೊಳಿಸಲು ಕರೆ

ಮಂಜೇಶ್ವರ: ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮೃತಿ ದಿನಾಚರಣೆ ಈ ತಿಂಗಳ 21 ರಂದು ನಡೆಸಲು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ತೀರ್ಮಾನಿಸಿದ್ದು, ಪ್ರಸ್ತುತ ಕಾರ್ಯಕ್ರಮ ಯಶಸ್ವಿಗೊಳಿಸಲು ಪಕ್ಷದ ವಿವಿಧ ಹಂತಗಳ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕರೆ ನೀಡಿದೆ.   ಹೊಸಂಗಡಿಯಲ್ಲಿ ನಡೆದ  ಸಮಿತಿ ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ವಹಿಸಿದ್ದರು. ಹಜ್ ಯಾತ್ರೆ ಕೈಗೊಳ್ಳಲಿರುವ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಖಲೀಲ್ ಬಜಾಲ್‌ರಿಗೆ ಪಕ್ಷದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ನೇತಾರರಾದ ಉಮ್ಮರ್ ಬೋರ್ಕಳ, ಚಂದ್ರಶೇಖರ ಶೆಟ್ಟಿ …

ಎಸ್‌ಎನ್‌ಡಿಪಿ ಹೊಸಂಗಡಿ ಶಾಖೆ ಪದಾಧಿಕಾರಿಗಳು

ಮಂಜೇಶ್ವರ: ಎಸ್‌ಎನ್‌ಡಿಪಿ ಹೊಸಂಗಡಿ ಶಾಖೆಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಎಂ.ಎಸ್. ಜಯರಾಜ್‌ರ ಅಧ್ಯಕ್ಷತೆಯಲ್ಲಿ ಪ್ರೇರಣಾ ಹೊಸಂಗಡಿಯಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಕೆ. ನಾರಾಯಣ್, ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ, ಉಪಾಧ್ಯಕ್ಷ ವಿಜಯ,  ಮೋಹನ್ ಯೂನಿಯನ್ ಕೌನ್ಸಿಲ್ ಮೆಂಬರ್, ನವೀನ್‌ರಾಜ್ ಕೆ.ಜೆ, ಪದ್ಮನಾಭ ಕಡಪ್ಪರ, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ  ಸುನಿತಾ ಕನಿಲ ಉಪಸ್ಥಿತರಿದ್ದರು. ರಮೇಶ್ ಬಿ.ಎಂ ಹೊಸಂಗಡಿ ಭಾಗವಹಿಸಿದರು. ಹೊಸ ಸಮಿತಿಗೆ ಗಂಗಾಧರ ದುರ್ಗಿಪಳ್ಳ ಅಧ್ಯಕ್ಷರಾಗಿ ಮಿನಿ ಮೋಳ್ ಕಾರ್ಯದರ್ಶಿಯಾಗಿ, ದೇವರಾಜ್ ಎಂ.ಎಸ್ ಉಪಾಧ್ಯಕ್ಷರಾಗಿ, ಪದ್ಮನಾಭ ಕಡಪ್ಪರ ಯೂನಿಯನ್ ಮೆಂಬರ್, …

ಪೆರ್ಲದಲ್ಲಿ ಅಬಕಾರಿ ತಂಡದ ಕಾರ್ಯಾಚರಣೆ ದಾಖಲು ಪತ್ರಗಳಿಲ್ಲದೆ ಸಾಗಿಸಲಾಗುತ್ತಿದ್ದ 10 ಕಿಲೋ ಬೆಳ್ಳಿ ಆಭರಣ ಪತ್ತೆ, ಓರ್ವ ಕಸ್ಚಡಿಗೆ

ಪೆರ್ಲ: ಅಕ್ರಮ ಮದ್ಯ ಸಾಗಾಟದ ವಿರುದ್ಧ ಅಬಕಾರಿ ತಂಡ ಆರಂಭಿಸಿರುವ ಆಪರೇಷನ್ ಕ್ಲೀನ್ ಸ್ಲೇಟ್ ಕಾರ್ಯಾ ಚರಣೆಯಂತೆ ಪೆರ್ಲ ಅಬಕಾರಿ ತಪಾ ಸಣಾ ಕೇಂದ್ರದಲ್ಲಿ  ನಡೆಸಿದ ವಾಹನ ತಪಾಸಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಬಸ್ಸೊಂದರಲ್ಲಿ  ಕಾಸರಗೋಡಿನತ್ತ ಸಾಗಿಸುತ್ತಿದ್ದ 10 ಕಿಲೋ ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕರ್ನಾಟಕ ನಿವಾಸಿ ಸತೀಶ್ ಆರ್. (45) ಎಂಬಾ ತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಕೆಮು ವಿಭಾಗದ ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದ ಅಬಕಾರಿ ತಂಡ ನಿನ್ನೆ …

ಮುಖಾರಿಕಂಡದಲ್ಲಿ ಹಾರ್ಡ್‌ವೇರ್ ಅಂಗಡಿ ಬೆಂಕಿಗಾಹುತಿ: ಅಪಾರ ನಷ್ಟ

ಸೀತಾಂಗೋಳಿ: ಮುಖಾರಿಕಂಡ ದಲ್ಲಿ ಭಾರೀ ಬೆಂಕಿ ಅವಾಂತರ ಸಂಭವಿಸಿದೆ. ಹಾರ್ಶ್ ಎಂಟರ್‌ಪ್ರೈಸಸ್ ಎಂಬ ಹಾರ್ಡ್‌ವೇರ್ ಸಂಸ್ಥೆಯು ಇಂದು ಬೆಳಿಗ್ಗೆ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಹಿಡಿಯಲು ಕಾರಣ ವೆಂದು ಶಂಕಿಸಲಾಗಿದೆ. ಬದಿಯಡ್ಕ ಪರಿಸರ ನಿವಾಸಿ ಹರ್ಷಾದ್‌ರ ಮಾಲಕತ್ವದ ಹಾರ್ಡ್‌ವೇರ್ ಅಂಗಡಿ ಇದಾಗಿದ್ದು, ಹಠಾತ್ ಆಗಿ ಕಾಣಿಸಿದ ಬೆಂಕಿಯಿಂದ ಅಂಗಡಿಯೊಳಗಿನ ಸಾಮಗ್ರಿಗಳು ಉರಿದು ನಾಶವಾಗಿವೆ. ಉಪ್ಪಳ, ಕಾಸರಗೋಡಿನ ಅಗ್ನಿಶಾಮಕ ದಳದ ಎರಡೆರಡು ತಂಡಗಳು, ಸ್ಥಳೀ ಯರು ಬೆಂಕಿ ನಂದಿಸಲು ನೆರವಾಗಿವೆ. ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ …

ಚುನಾವಣಾ ಅವ್ಯವಹಾರ ಹೇಳಿಕೆ : ಮಾಜಿ ಸಚಿವ ಜಿ. ಸುಧಾಕರನ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು

ಆಲಪ್ಪುಳ:1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಲಪ್ಪುಳ ಕ್ಷೇತ್ರದಲ್ಲಿ ಅಂಚೆ ಮತಗಳ ಕವರುಗಳನ್ನು ಒಡೆದು ಅದರಲ್ಲಿ ತಮ್ಮ ಪಕ್ಷದ ಪರವಾಗಿ ತಿದ್ದುಪಡಿ ತಂದಿದ್ದೆ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿರುವ ಸಿಪಿಎಂನ ಹಿರಿಯ ನೇತಾರ ಹಾಗೂ  ಮಾಜಿ ಸಚಿವರೂ ಆಗಿರುವ ಜಿ. ಸುಧಾಕರನ್ ವಿರುದ್ಧ ಆಲಪ್ಪುಳ ಸೌತ್ ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ಶಿಕ್ಷಾ ಕಾಯ್ದೆ (ಐಪಿಸಿ) ಸೆಕ್ಷನ್ ೪೬೮ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಈ ಪ್ರಕರಣ ದಾಖಲಿಸಲಾಗಿದೆ. ಚುನಾವಣಾ ಅವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿರುವ  …

ಜಿಲ್ಲೆಯಲ್ಲಿ ಭಾರೀ ವಿವಾದ ಸೃಷ್ಟಿಸಿದ ರೇಷ್ಮಾಳ ನಿಗೂಢ ಸಾವು: ವರ್ಷಗಳ ಬಳಿಕ ಆರೋಪಿ ಕೊನೆಗೂ ಸೆರೆ

ಕಾಸರಗೋಡು: ಜಿಲ್ಲೆಯಲ್ಲಿ ಭಾರೀ ವಿವಾದ ಹಾಗೂ ನಿಗೂಢಕ್ಕೆ ಕಾರಣವಾದ ಹೊಸದುರ್ಗ ತಾಲೂಕಿನ ಅಂಬಲತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಎಣ್ಣಪಾರ ಮೊಯೋಲಂ ಕಾಲನಿಯ ರಾಮನ್- ಕಲ್ಯಾಣಿ ದಂಪತಿ ಪುತ್ರಿ ರೇಷ್ಮ (20)ಳ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣದ ಆರೋಪಿಯನ್ನು ವರ್ಷಗಳ ಬಳಿಕಕ್ರೈಮ್ ಬ್ರಾಂಚ್ ಐ.ಜಿ. ಪಿ. ಪ್ರಕಾಶ್‌ರ ನೇತೃತ್ವದ ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಸಫಲವಾಗಿದೆ. ಪಾಣತ್ತೂರು ಬಾಪ್ಪಂಗಯ ನಿವಾಸಿ ಹಾಗೂ  ನಿರ್ಮಾಣ ವಲಯದ ಗುತ್ತಿಗೆ ದಾರನೂ ಆಗಿರುವ  ಬಿಜು ಪೌಲೋಸ್ (೪೦) ಬಂಧಿತ ಆರೋಪಿ. ಈತನ ಬಂಧನದ …

ಪಾಕಿಸ್ತಾನದ ಕರಾಳತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬಹಿರಂಗಪಡಿಸುವ ತಂಡದ ನಾಯಕನಾಗಿ ಶಶಿ ತರೂರ್ ಆಯ್ಕೆ

ನವದೆಹಲಿ: ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ಸರಿಯಾದ ಪಾಠ ಕಲಿಸಿದ  ಬೆನ್ನಲ್ಲೇ ಇದೀಗ ಪಾಕಿಸ್ತಾನದ ಕರಾಳತೆ ಹಾಗೂ ದುಷ್ಕೃತ್ಯಗಳನ್ನು ಅಂತಾರಾಷ್ಟ್ರೀ ಯ ಮಟ್ಟದಲ್ಲೂ ಬಹಿರಂಗಪಡಿಸಲು ಮೋದಿ ಸರಕಾರ ರೂಪು ನೀಡಿದ ವಿಶೇಷ ತಂಡವನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದರೂ ಆಗಿರುವ ಶಶಿ ತರೂರ್  ಮುನ್ನಡೆ ಸಲಿದ್ದಾರೆ. ಕೇಂದ್ರ ಸರಕಾರ ಇಂದು ಬೆಳಿಗ್ಗೆ ಹೊರಡಿಸಿದ ಸೂಚನೆಯಲ್ಲಿ ಈ ವಿಶೇಷ ತಂಡದ ನಾಯಕನನ್ನಾಗಿ ಶಶಿ ತರೂರ್‌ರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ. ಇದರಂತೆ …

ಪಾಕಿಸ್ತಾನ ರಹಸ್ಯ ತನಿಖೆ ವಿಭಾಗದ ಒತ್ತಾಸೆಯಿಂದ ಸಾಗಿಸಿದ ಹೆರಾಯಿನ್ ಸಹಿತ ಓರ್ವ ಸೆರೆ

ಚಂಢಿಗಡ: ಪಂಜಾಬಿನ ಪಂಜಾಬ್‌ನಲ್ಲಿ ಭಾರೀ ಮಾದಕ ಪದಾರ್ಥ ಭೇಟೆ ನಡೆಸಲಾಗಿದೆ. ಪಾಕಿಸ್ತಾನದ ರಹಸ್ಯ ತನಿಖಾ ವಿಭಾಗದ ಒತ್ತಾಸೆಯೊಂದಿಗೆ ಭಾರತಕ್ಕೆ ಸಾಗಿಸಿದ 200 ಕೋಟಿ ರೂ. ಮೌಲ್ಯದ 85 ಕಿಲೋ ಗ್ರಾಂ ಹೆರಾಯಿನ್ ಸಹಿತ ಅಮೃತಸರ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮರಜ್ಯೋತಿ ಸಿಂಗ್ ಎಂಬ ವ್ಯಕ್ತಿ ಸೆರೆಯಾಗಿದ್ದಾನೆ. ಪಾಕಿಸ್ತಾನದ ರಹಸ್ಯ ತನಿಖಾ ವಿಭಾಗದವಾದ ಐಎಸ್‌ಐ ನಿಯಂತ್ರಿಸುವ ಅಂತಾರಾಷ್ಟ್ರೀಯ ಮಾಧಕ ಪದಾರ್ಥ ಮಾಫಿಯಾದ ಪ್ರಧಾನ ಕೊಂಡಿಯಾಗಿದ್ದಾನೆಂದು ಈತ ಎಂದು ಪಂಜಾಬ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ತಿಳಿಸಿದ್ದಾರೆ. ಗಡಿಯ ಮೂಲಕ …

ಪೇಟೆಗೆಂದು ತೆರಳಿದ ಯುವತಿ ನಾಪತ್ತೆ

ಉಪ್ಪಳ: ಉಪ್ಪಳ ಪೇಟೆಗೆಂದು ತೆರಳಿದ ಯುವತಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದೆ. ಮಣ್ಣಂಗುಳಿ ನಿವಾಸಿ ಇಬ್ರಾಹಿಂ ಬಾತಿಷ್ ಮಂಜಿಲ್ ನಿವಾಸಿ ಬಾತಿಷರ ಪತ್ನಿ ರಂಸೀನ (27) ನಾಪತ್ತೆಯಾದ ಬಗ್ಗೆ ಸಹೋದರ ಶರೀಫ್ ಎ. ಮಂಜೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪೇಟೆಗೆ ತೆರಳಿ ಹಿಂತಿರುಗದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.