ಮುಖಾರಿಕಂಡದಲ್ಲಿ ಹಾರ್ಡ್‌ವೇರ್ ಅಂಗಡಿ ಬೆಂಕಿಗಾಹುತಿ: ಅಪಾರ ನಷ್ಟ

ಸೀತಾಂಗೋಳಿ: ಮುಖಾರಿಕಂಡ ದಲ್ಲಿ ಭಾರೀ ಬೆಂಕಿ ಅವಾಂತರ ಸಂಭವಿಸಿದೆ. ಹಾರ್ಶ್ ಎಂಟರ್‌ಪ್ರೈಸಸ್ ಎಂಬ ಹಾರ್ಡ್‌ವೇರ್ ಸಂಸ್ಥೆಯು ಇಂದು ಬೆಳಿಗ್ಗೆ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಹಿಡಿಯಲು ಕಾರಣ ವೆಂದು ಶಂಕಿಸಲಾಗಿದೆ. ಬದಿಯಡ್ಕ ಪರಿಸರ ನಿವಾಸಿ ಹರ್ಷಾದ್‌ರ ಮಾಲಕತ್ವದ ಹಾರ್ಡ್‌ವೇರ್ ಅಂಗಡಿ ಇದಾಗಿದ್ದು, ಹಠಾತ್ ಆಗಿ ಕಾಣಿಸಿದ ಬೆಂಕಿಯಿಂದ ಅಂಗಡಿಯೊಳಗಿನ ಸಾಮಗ್ರಿಗಳು ಉರಿದು ನಾಶವಾಗಿವೆ. ಉಪ್ಪಳ, ಕಾಸರಗೋಡಿನ ಅಗ್ನಿಶಾಮಕ ದಳದ ಎರಡೆರಡು ತಂಡಗಳು, ಸ್ಥಳೀ ಯರು ಬೆಂಕಿ ನಂದಿಸಲು ನೆರವಾಗಿವೆ. ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

RELATED NEWS

You cannot copy contents of this page