ಬೇಡಗಂನಲ್ಲಿ ಯುವಕ ಹಾಗೂ ಪೊಲೀಸ್‌ಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳನ್ನು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹ

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಾಡ್ ಅರಿಚ್ಚೆಪ್ಪು ಎಂಬಲ್ಲಿ ಅಧ್ಯಾಪಕ ದಂಪತಿಗಳಿಗೆ ಹಲ್ಲೆಗೈಯ್ಯಲು ಯತ್ನಿಸಿದ ವಿಷಯ ತಿಳಿದು ತಲುಪಿದ ಯುವಕ ಹಾಗೂ ಪೊಲೀಸ್‌ನನ್ನು ಕೊಲೆಗೈಯ್ಯ ಲೆತ್ನಿಸಿದ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ತೆಗೆದು ಘಟನೆ ಸ್ಥಳಕ್ಕೆ ತಲುಪಿಸಿ ಮಾಹಿತಿ ಸಂಗ್ರಹಿಸ ಲಾಯಿತು. ಅರಿಚ್ಚೆಪ್ಪು ಪುಳಿಕ್ಕಾಲ್ ಹೌಸ್‌ನ ಜಿಷ್ಣು ಸುರೇಶ್ ಯಾನೆ ಸುರೇಶ್ (24), ಸಹೋದರ ವಿಷ್ಣು ಸುರೇಶ್ (25) ಎಂಬಿವರಿಂದ ಬೇಡಗಂ ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವನ್ ವಲಿಯವಳಪ್ಪಿಲ್ ಅವರ ನೇತೃತ್ವದಲ್ಲಿ ಮಾಹಿತಿ ಸಂಗ್ರಹಿಸಲಾಯಿತು. ಘಟನೆ ನಡೆದ ಸ್ಥಳ, …

ಗುಡ್ಡೆಯಿಂದ ಮಣ್ಣು ಅಗೆದು ಸಾಗಾಟ ದಂಧೆ ವ್ಯಾಪಕ

ಕಾಸರಗೋಡು: ಮಡಿಕೈ ಕೊರಂಙನಾಡಿ ಎಂಬಲ್ಲಿ ಗುಡ್ಡೆ ಅಗೆದು ಭಾರೀ ಪ್ರಮಾಣದಲ್ಲಿ ಮಣ್ಣು ಸಾಗಾಟ ನಡೆಸುವುದನ್ನು ಪತ್ತೆಹಚ್ಚ ಲಾಗಿದೆ. ನಾಗರಿಕರು ನೀಡಿದ ಮಾಹಿತಿ ಮೇರೆಗೆ ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋ ತ್‌ರ ನೇತೃತ್ವದಲ್ಲಿ ನಿನ್ನೆ ನಡೆಸಿದ ಪರಿಶೀಲನೆ ವೇಳೆ  ಭಾರೀ ಪ್ರಮಾಣದ ಮಣ್ಣು ಕೊಳ್ಳೆಯನ್ನು ಪತ್ತೆಹಚ್ಚಿದ್ದಾರೆ. ಕೊರಂಙನಾಡಿ ಯುವಶಕ್ತಿ ಕ್ಲಬ್‌ನ ಸಮೀಪದಲ್ಲಿರುವ  ಸ್ಥಳದಿಂದ ಅಪಾಯಕಾರಿ ರೀತಿ ಯಲ್ಲಿ ಮಣ್ಣು ಅಗೆದು ಸಾಗಿಸ ಲಾಗಿದೆ. ಮುಂಜಾನೆ ಹೊತ್ತಿನಲ್ಲಿ ಆರಂಭಗೊಳ್ಳುವ ಮಣ್ಣು ಅಗೆಯುವ ಕೆಲಸ ರಾತ್ರಿ ವರೆಗೆ ಮುಂದುವ ರಿಯುತ್ತಿರುವುದಾಗಿ ಹೇಳಲಾಗುತ್ತಿದೆ. …

ಸಾಕುನಾಯಿ ಪರಚಿ ಗಾಯ : ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಆಲಪ್ಪುಳ: ಸಾಕುನಾಯಿ ಪರಚಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ತಗಳಿ ದೇವಸ್ವಂ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಸೂರಜ್ (17) ಮೃತಪಟ್ಟ ದುರ್ದೈವಿ. ಸಂಬಂಧಿಕರ ಮನೆಗೆ ಹೋಗಿದ್ದ ಈತನಿಗೆ ನಾಯಿ ಪರಚಿ ಗಾಯಗೊ ಳಿಸಿತ್ತು. ಆದರೆ ಅದನ್ನು ಆತ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅನಂತರ ಆತನಿಗೆ ಅಸೌಖ್ಯ ಕಾಣಿಸಿಕೊಂಡಿದೆ. ತಪಾಸಣೆ ನಡೆಸಿದಾಗ ನಾಯಿ ಪರಚಿದ ಪರಿಣಾಮ ಉಂಟಾದ ಗಾಯವೇ ಅಸೌಖ್ಯಕ್ಕೆ ಕಾರಣವೆಂದು ತಿಳಿದು ಬಂದಿದೆ. ಕೂಡಲೇ ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ …

ವೈದ್ಯರುಗಳ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ: 450 ಔಷಧ ಅಂಗಡಿಗಳ ಲೈಸನ್ಸ್ ಅಮಾನತು

ತಿರುವನಂತಪುರ: ವೈದ್ಯರುಗಳ ಲಿಖಿತ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಮಾರಾಟ ಮಾಡಿದ ರಾಜ್ಯದ ಅಂಗಡಿಗಳ ಲೈಸನ್ಸ್‌ನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಇದರ ಹೊರತಾಗಿ ಐದು ಔಷಧ ಅಂಗಡಿಗಳ ಲೈಸನ್ಸ್‌ಗಳನ್ನು ರದ್ದುಪಡಿಸಲಾಗಿದೆ. ಆಂಟಿ ಬಯೋಟಿಕ್ ಔಷಧಗಳ ಅಮಿತ ಸೇವನೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಹಾಗೂ ರೋಗ ದೇಹದಲ್ಲಿ ಪ್ರತಿರೋಧಕ ಶಕ್ತಿಗಳನ್ನು ಕಡಿಮೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮಿತವಾದ  ರೀತಿಯಲ್ಲಿ ಆಂಟಿ ಬ್ಯಾಟಿಕ್ ಔಷಧ  ಸೇವನೆಯನ್ನು ತಡೆಗಟ್ಟುವ ಕ್ರಮದಂತೆ ವೈದ್ಯರ ಲಿಖಿತ ಚೀಟಿಗಳಿಲ್ಲದೆ ಯಾವುದೇ ಆಂಟಿ ಬಯೋಟಿಕ್ ಔಷಧಗಳನ್ನು …

ವಾಹನ ಅಪಘಾತ: ಉಚಿತ ಚಿಕಿತ್ಸೆ ಕೇರಳದ 643 ಆಸ್ಪತ್ರೆಗಳಲ್ಲಿ ಲಭ್ಯ

ಕಾಸರಗೋಡು: ವಾಹನ ಅಪಘಾತದಿಂದ ಗಾಯಗೊಂಡವರಿಗೆ ಒಂದೂವರೆ ಲಕ್ಷ ರೂ. ತನಕ ಉಚಿತ ಚಿಕಿತ್ಸೆ ನೀಡುವ ಯೋಜನೆ ಪ್ರಕಾರ ಕೇರಳದ 643 ಆಸ್ಪತ್ರೆಗಳಲ್ಲಿ ಈ ಸೇವೆ ಲಭಿಸಲಿದೆ. ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಈ ಯೋಜನೆ ಪ್ರಕಾರ ಒಂದೂವರೆ ಲಕ್ಷ ರೂ. ತನಕ ಅಥವಾ ಏಳು ದಿನಗಳ ತನಕ ಉಚಿತ ಚಿಕಿತ್ಸೆ ಲಭಿಸಲಿದೆ. ಇದು ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್ ಆಫ್ ರೋಡ್ ಆಕ್ಸಿಡೆಂಟ್ ವಿಕ್ಟೀಮ್ ಸ್ಕೀಮ್- 2025 ಎಂಬ ಹೆಸರಲ್ಲಿ ಕೇಂದ್ರ ಸರಕಾರ ಜ್ಯಾರಿಗೊಳಿಸಿದ ಯೋಜನೆಯಾಗಿದೆ. ಇದರಂತೆ ಪ್ರಧಾನಮಂತ್ರಿ ಆರೋಗ್ಯ ಯೋಜನೆ …

ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತದಿಂದ  ನೀರಿನ ದಾಳಿ: ತತ್ತರಿಸಿದ ಪಾಕ್

ನವದೆಹಲಿ: ಗಡಿಯಲ್ಲಿ ವಾಯುದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡುತ್ತಿದೆ. ಪಾಕಿಸ್ತಾನ ನಡೆಸುತ್ತಿರುವ ಎಲ್ಲಾ ದಾಳಿಗಳನ್ನು ವಿಪಲಗೊಳಿಸುತ್ತಿರುವ ಭಾರತ ಇದೀಗ ಆದೇಶಕ್ಕೆ ಮತ್ತೊಂದು ತಿರುಗೇಟು ನೀಡಿದೆ. ರಿಯಾಸಿಯಲ್ಲಿರುವ ಚೈನಾಬ್ ನದಿಗೆ ನಿರ್ಮಿಸಿರುವ ಸಲಾಲ್ ಅಣೆಕಟ್ಟಿನ ಹಲವಾರು ಗೇಟುಗಳನ್ನು ತೆರೆದು ನೀರು ಬಿಡಲಾಗಿದೆ. ಆ ಮೂಲಕ ಭಾರತ ಪಾಕಿಸ್ತಾನಕ್ಕೆ ನೀರಿನ ದಾಳಿಯೂ ನಡೆಸಿದೆ. ಇದರಿಂದಾಗಿ ಪಾಕಿಸ್ತಾನದ ಹಲವು ಕಡೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈ ಹಿಂದೆಯೂ ಭಾರತ ಸಿಂದೂ ನದಿಯ ನೀರನ್ನು ಏಕಾಏಕಿಯಾಗಿ ಹರಿಸಿದ್ದರಿಂದ ಪಾಕ್‌ನಲ್ಲಿ ಪ್ರವಾಹ …

ಭಾರತದ ದಾಳಿಗೆ ಹೆದರಿ ಪಾಕ್ ಪ್ರಧಾನಿ, ಸೇನಾ ಮುಖ್ಯಸ್ಥ ನಾಪತ್ತೆ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋ ತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಆರಂಭಿಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿರುವಂತೆಯೇ ಭಾರತದ ದಾಳಿಗೆ ಹೆದರಿದ ಪಾಕಿ ಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಮತ್ತು  ಆ ದೇಶದ ಸೇನಾ ಮುಖ್ಯಸ್ಥ ಜನರಲ್ ಸಯಿದ್ ಆಸಿಮ್ ಮುನೀರ್ ಈಗ ದಿಢೀರ್ ಆಗಿ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾ ಬಾದ್‌ಗೆ ನೇರವಾಗಿ ನುಗ್ಗಿದ ಭಾರತದ ಯುದ್ಧ ವಿಮಾನಗಳು ಪ್ರಧಾನಿ ಶೆಹಬಾಜ್ ಷರೀಫ್‌ನ ಮನೆ ಬಳಿಯೇ ಕ್ಷಿಪಣಿ ದಾಳಿ ನಡೆಸಿದೆ. ಇವರ ಮನೆಯ …

ಭಾರತ- ಪಾಕ್ ಘರ್ಷಣೆ ಹಿನ್ನೆಲೆ: ಜಿಲ್ಲೆಯ ಮೂರು ಕೇಂದ್ರ  ಸಂಸ್ಥೆಗಳೂ ಸೇರಿ ನಾಲ್ಕು ಕೇಂದ್ರಗಳಿಗೆ ಬಿಗಿ ಭದ್ರತೆ

ಕಾಸರಗೋಡು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂದೂರ್ ಹೆಸರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆರಂಭಿಸಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದ್ದು ಅದು ಉಭಯದೇಶಗಳ ನಡುವೆ ಘರ್ಷಣೆಯ ವಾತಾವರಣ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿರುವ ಮೂರು ಕೇಂದ್ರ ಸರಕಾರಿ ಸಂಸ್ಥೆಗಳು ಸೇರಿದಂತೆ ಒಟ್ಟು ನಾಲ್ಕು ಕೇಂದ್ರಗಳಿಗೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಸೀತಾಂಗೋಳಿ ಕಿನ್‌ಫ್ರಾ ಕೈಗಾರಿಕಾ ಉದ್ಯಾನದ ಬಳಿ ಕಾರ್ಯವೆಸಗುತ್ತಿರುವ ಕೇಂದ್ರ ಸರಕಾರದ ರಕ್ಷಣಾ ಖಾತೆಯ ಎಚ್‌ಎಎಲ್ (ಹಿಂದೂಸ್ತಾನ್ ಏರೊನ್ಯಾಟಿಕ್ ಲಿಮಿಟೆಡ್),  ಕೂಡ್ಲಿನಲ್ಲಿರುವ ಕೇಂದ್ರೀಯ ತೋಟಗಾರಿಕಾ …

ಪೊಲೀಸರನ್ನು ಕಂಡು ಸ್ಕೂಟರ್‌ನಲ್ಲಿ  ಪರಾರಿಯಾದ ಯುವಕರ ಸೆರೆ: ಎಂಡಿಎಂಎ ಪತ್ತೆ

ಕಾಸರಗೋಡು: ಪೊಲೀಸರನ್ನು ಕಂಡೊಡನೆ ಸ್ಕೂಟರ್‌ನಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಬಳಿಕ ಅವರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಕಣ್ಣೂರು ವೆಳ್ಳೂರು ಕಾರಮೇಲ್ ದಾರುಲ್ ಫನ ಎಂಬಲ್ಲ್ಲಿನ ಜಾಬಿರ್ ಅಬ್ದುಲ್ ಖಾದರ್ (34), ಕಾರಮೇಲ್ ನಂಗಾರತ್ತ್ ಹೌಸ್‌ನ ಮುಶ್ ಫಿಕ್ (30) ಎಂಬಿವರನ್ನು ಚಂದೇರ ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಪ್ರಶಾಂತ್ ಹಾಗೂ ತಂಡ ಸೆರೆಹಿಡಿದಿದೆ. ನಿನ್ನೆ ರಾತ್ರಿ 8.30ರ ವೇಳೆ ವಡಕ್ಕೇ ತೃಕ್ಕರಿಪುರದಲ್ಲಿರುವ  ಪೂಚೋಲ್ ವಿಶ್ವಕರ್ಮ ಸಮುದಾಯ ಸ್ಮಶಾನ ಬಳಿಯಿಂದ ಯುವಕರನ್ನು ಸೆರೆಹಿಡಿದಿರುವುದಾಗಿ ಪೊಲೀಸರು …

ಕುಂಬಳೆ ಪೇಟೆಯಿಂದ ಯುವಕನನ್ನು  ಅಪಹರಿಸಿ ಹಣ ಲಪಟಾವಣೆ: ಓರ್ವ ಆರೋಪಿ ಬಂಧನ

ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು 18.46 ಲಕ್ಷ ರೂಪಾಯಿ ಲಪಟಾಯಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಧರ್ಮತ್ತಡ್ಕ ವಳಕುನ್ನು ಚಳ್ಳಂಗಯ ನಿವಾಸಿ ಸಯ್ಯದ್ ಎಸ್.ಎ (28) ಎಂಬಾತನನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ಎಸ್‌ಐ ಗಣೇಶ್ ನೇತೃತ್ವದಲ್ಲ್ಲಿ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಎಂಬವರನ್ನು ಅಪಹ ರಿಸಿ ಹಣ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಯ್ಯದ್‌ನನ್ನು ಬಂಧಿಸಲಾಗಿದೆ. ಈ ತಿಂಗಳ 6ರಂದು …