ಸಾಕುನಾಯಿ ಪರಚಿ ಗಾಯ : ಪ್ಲಸ್‌ಟು ವಿದ್ಯಾರ್ಥಿ ಮೃತ್ಯು

ಆಲಪ್ಪುಳ: ಸಾಕುನಾಯಿ ಪರಚಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ತಗಳಿ ದೇವಸ್ವಂ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಸೂರಜ್ (17) ಮೃತಪಟ್ಟ ದುರ್ದೈವಿ. ಸಂಬಂಧಿಕರ ಮನೆಗೆ ಹೋಗಿದ್ದ ಈತನಿಗೆ ನಾಯಿ ಪರಚಿ ಗಾಯಗೊ ಳಿಸಿತ್ತು. ಆದರೆ ಅದನ್ನು ಆತ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅನಂತರ ಆತನಿಗೆ ಅಸೌಖ್ಯ ಕಾಣಿಸಿಕೊಂಡಿದೆ. ತಪಾಸಣೆ ನಡೆಸಿದಾಗ ನಾಯಿ ಪರಚಿದ ಪರಿಣಾಮ ಉಂಟಾದ ಗಾಯವೇ ಅಸೌಖ್ಯಕ್ಕೆ ಕಾರಣವೆಂದು ತಿಳಿದು ಬಂದಿದೆ. ಕೂಡಲೇ ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.

You cannot copy contents of this page