ಪ್ಲಸ್‌ವನ್ ಪ್ರವೇಶಕ್ಕೆ ಮುಂದಾಗುವ ವಿದ್ಯಾರ್ಥಿಗಳು ತಿಳಿದಿರಬೇಕಾದ ವಿಷಯಗಳು

ಕಾಸರಗೋಡು: ಹತ್ತನೇ ತರಗತಿ ಪರೀಕ್ಷಾ ಫಲತಾಂಶ ಪ್ರಕಟಗೊಂಡ ಬಳಿಕ ಪ್ಲಸ್‌ವನ್ ತರಗತಿಗೆ ಕಾಯುತ್ತಿರುವ ವಿದ್ಯಾರ್ಥಿಗಳು ತಿಳಿಯಬೇಕಾದ ಕೆಲವು ಪ್ರಧಾನ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಹೈಯರ್ ಸೆಕೆಂಡರಿಯಲ್ಲಿ ನಾವುಆಯ್ಕೆ ಮಾಡುವ ಕೋರ್ಸ್‌ಗಳು ನಮ್ಮ ಭವಿಷ್ಯವನ್ನು ನಿರ್ಣಯಿಸುವುದಾಗಿದ್ದು, ಆದುದರಿಂದ ಬಹಳ ಜಾಗ್ರತೆಯಿಂದ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕು. ಮುಂದೆ ಏನಾಗಬೇಕು ಎಂದು ತೀರ್ಮಾನಿಸಿ ಅದಕ್ಕೆ ತಲುಪಲಿರುವ ಮೊದಲ  ಮೆಟ್ಟಿಲಾಗಿ ಪ್ಲಸ್‌ವನ್‌ನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ ಡಾಕ್ಟರ್ ಆಗಬೇಕೆಂದು ಆಗ್ರಹಿಸುವವರು ಬಯೋಲಜಿ, ಸಯನ್ಸ್ ವಿಷಯಗಳನ್ನು  ಆಯ್ಕೆ ಮಾಡಿದರೆ ಮಾತ್ರವೇ ತಮ್ಮ ಗುರಿಯತ್ತ ಸಾಗಬಹುದಾಗಿದೆ. …

ಬದಿಯಡ್ಕ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಭೆ ನಾಳೆ

ಬದಿಯಡ್ಕ: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಕಾಸರಗೋಡು  ಜಿಲ್ಲಾ ಸಮಿತಿ ಆಶ್ರಯದಲ್ಲಿ ನೂತನವಾದ ‘ಅರಿವು’ ಯೋಜನೆಗೆ ನಾಳೆ ಮಧ್ಯಾಹ್ನ 2 ಗಂಟೆಗೆ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಚಾಲನೆ ನೀಡಲಾಗುವುದು. ಜಿಲ್ಲೆಯ ಕನ್ನಡಿಗ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾರ್ಥಿಗಳಿಗೆ ಅಗತ್ಯ ವಿಚಾರಗಳಲ್ಲಿ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡುವುದು ಇದರ ಉದ್ದೇಶವಾಗಿದೆ.  ‘ಎಸ್‌ಎಸ್‌ಎಲ್‌ಸಿ ನಂತರ ಮುಂದೇನು’ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು. ಕಾರ್ಯಕ್ರಮವನ್ನು ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಉದ್ಘಾಟಿಸುವರು. ನಿವೃತ್ತ ಪ್ರಾಂಶುಪಾಲ …

ಪಾಕ್ ಮೇಲೆ ಮತ್ತೆ ‘ಆಪರೇಶನ್ ಸಿಂದೂರ-2’ ದಾಳಿಗೆ ಸಿದ್ಧತೆ: ಮಹತ್ವದ ಸರ್ವಪಕ್ಷ ಸಭೆ ಆರಂಭ

ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆಗಳಿಗೆ ಆಪರೇಶನ್ ಸಿಂಧೂರ್ ದಾಳಿ ನಡೆಸಿ ಅದು ಇಡೀ ಪಾಕಿಸ್ತಾನವನ್ನು ನಡುಗಿಸಿದ ಬೆನ್ನಲ್ಲೇ ಮತ್ತೆ ಆಪರೇಶನ್ ಸಿಂಧೂರ್-2 ದಾಳಿಗೆ ಭಾರತ ಅಗತ್ಯದ ಸಿದ್ಧತೆಯಲ್ಲಿ ತೊಡಗಿದೆ. ಇದರ ಪೂರ್ವ ಸೂಚಕವಾಗಿ ‘ಪಿಕ್ಚರ್ ಅಬೀ ಬಾಕಿ ಹೈ’ ಎಂಬ ಹೇಳಿಕೆಯನ್ನು ಭಾರತೀಯ ಮಾಜಿ ಸೇನಾ ಮುಖ್ಯಸ್ಥ ಜನರಲ್  ಮನೋಜ್ ನರವಣೆ ಈಗಾಗಲೇ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ವಿಚಾರ ಮತ್ತು ದೇಶದ ರಕ್ಷಣೆಯ ವಿಚಾರದಲ್ಲಿ ಸರಕಾರ ಕೈಗೊಂಡ ಕ್ರಮಗಳ …

ಪಹಲ್ಗಾಮ್ ದಾಳಿಯ ಸೂತ್ರಧಾರ ಸಜ್ಜಾದ್‌ಗುಲ್ ಕೇರಳದೊಂದಿಗೆ ನಂಟು ಹೊಂದಿರುವ ಸ್ಫೋಟಕ ಮಾಹಿತಿ ಬಯಲು

ತಿರುವನಂತಪುರ: ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರಾದ 26 ಮಂದಿ ಪ್ರವಾಸಿಗರನ್ನು ಕೊಂದ ಭಯೋತ್ಪಾದನಾ ದಾಳಿಯ ಪ್ರಧಾನ ಸೂತ್ರಧಾರ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ -ತೊಬಾದ ಉಪ ಸಂಘಟನೆಯಾದ ‘ದಿ ರೆಸಿಸ್ಟನ್ಸ್ ಫ್ರಂಟ್’ನ ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ (5೦) ಕೇರಳದೊಂದಿಗೂ ನಂಟು ಹೊಂದಿದ್ದನೆಂಬ ಸ್ಫೋಟಕ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಲಭಿಸಿದೆ. ಸಜ್ಜಾದ್‌ಗುಲ್ ಭಯೋತ್ಪಾದಕ ಗುಂಪಿಗೆ ಸೇರ್ಪಡೆಗೊಳ್ಳುವ ಮೊದಲು ಈ ಹಿಂದೆ ಕೇರಳದಲ್ಲಿ ಲ್ಯಾಬ್ ಟೆಕ್ನೀಶ್ಯನ್ ಕೋರ್ಸ್ ಕಲಿತಿದ್ದನು. ಈತನನ್ನು ಅಹಮ್ಮದ್ ಶೇಖ್ ಎಂದೂ ಕರೆಯಲಾಗುತ್ತಿದೆ. …

ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ಕಾರಿನಲ್ಲಿ ಅಪಹರಿಸಿ 18.46 ಲಕ್ಷ ರೂ. ದರೋಡೆ: ಮೂವರ ವಿರುದ್ಧ ಕೇಸು

ಕುಂಬಳೆ: ಕುಂಬಳೆ ಪೇಟೆಯಿಂದ ಯುವಕನನ್ನು ಹಾಡಹಗಲೇ ತಂಡವೊಂದು ಕಾರಿನಲ್ಲಿ ಅಪಹರಿಸಿ ಕೊಂಡೊಯ್ದು ಹಲ್ಲೆಗೈದು ಚಾಕು ತೋರಿಸಿ ಬೆದರಿಕೆಯೊಡ್ಡಿ 18.46, 127 ರೂಪಾಯಿಗಳನ್ನು ದರೋಡೆಗೈದ ಬಗ್ಗೆ ದೂರಲಾಗಿದೆ. ಕುಂಬಳೆ ಮುಳಿಯಡ್ಕ ರಹ್ಮಾನಿಯ ಮಂಜಿಲ್‌ನ ಅಬ್ದುಲ್ ರಶೀದ್ (32) ಎಂಬವರನ್ನು ತಂಡ ಅಪಹರಿಸಿ ಹಣ ದರೋಡೆ ನಡೆಸಿದೆ. ಈ ಬಗ್ಗೆ ಇವರು ನೀಡಿದ ದೂರಿನಂತೆ ಯೂಸಫ್ ಎಂಬ ವ್ಯಕ್ತಿ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ತಿಂಗಳ 6ರಂದು …

ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಂಡ್ಯ ತ್ತಡ್ಕ ತೋಪುರ ನಿವಾಸಿ ಯೂಸಫ್ (77) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಸಂಜೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಯೂಸಫ್, ಪುತ್ರ ಅಬ್ದುಲ್ ಖಾದರ್ ಹಾಗೂ ಅವರ ಪತ್ನಿ, ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಘಟನೆ ವೇಳೆ ಮಕ್ಕಳು ಮಾತ್ರವೇ ಮನೆಯಲ್ಲಿದ್ದರೆಂದು ಹೇಳಲಾಗುತ್ತಿದೆ. ಹೆಣ್ಮಕ್ಕಳ ಮದುವೆಗಾಗಿ ಹಣಕಾಸು ಸಂಸ್ಥೆಯಿಂದ ಯೂಸಫ್ ಭಾರೀ ಮೊತ್ತ …

 ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ: ಬಸ್‌ನಿಂದ ವಾರೀಸುದಾರರಿಲ್ಲದ 3.75 ಲೀಟರ್ ಕರ್ನಾಟಕ ಮದ್ಯ ವಶ

ಹೊಸಂಗಡಿ: ವಾಮಂ ಜೂರುನಲ್ಲಿರುವ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ವಾರೀ ಸುದಾರರಿಲ್ಲದ 3.75ಲೀಟರ್ ಕರ್ನಾಟಕ ಮದ್ಯವನ್ನು ವಶಪಡಿಸಲಾಗಿದೆ.ನಿನ್ನೆ ಸಂಜೆ 5.40ರ ವೇಳೆ ಇನ್ಸ್ಫೆಕ್ಟರ್ ಗಂಗಾಧರನ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಮಂಗಳೂರಿನಿAದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಹಿಂಬದಿ ಸೀಟ್‌ನ ಅಡಿಭಾಗದಲ್ಲಿ ಚೀಲದಲ್ಲಿ ವಾರೀಸುದಾರರಿಲ್ಲದ ಸ್ಥಿತಿಯಲ್ಲಿ ಮದ್ಯ ಪತ್ತೆಯಾಗಿದೆ. ಬಾಟಲಿ ಹಾಗೂ ಪ್ಯಾಕೇಟ್ ಮದ್ಯ ಒಳಗೊಂಡಿದೆ. ಪ್ರಿವೆಂಟಿವ್ ಆಫೀಸರುಗಳಾದ ಮೊಯಿದೀನ್ ಸಾಧಿಕ್, ವಿಜಯನ್, ರಾಹುಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಭಾರತ ವಿರೋಧಿ ಪ್ರಚಾರಗಳನ್ನು ಹತ್ತಿಕ್ಕಲು ರಾಜ್ಯಗಳಿಗೆ ಕೇಂದ್ರ ನಿರ್ದೇಶ

ನವದೆಹಲಿ: ಆಪರೇಶನ್ ಸಿಂಧೂರ್ ನಂತರ ಸಾಮಾಜಿಕ ಮತ್ತು ಡಿಜಿಟಲ್ ಪ್ಲಾಟ್ ಫಾಂಗಳಲ್ಲಿ ರಾಷ್ಟ್ರವಿರೋಧಿ ಪ್ರಚಾರದ ಕಣ್ಗಾವಲು ತೀವ್ರಗೊಳಿಸುವ ಮತ್ತು  ತಪ್ಪು ಮಾಹಿತಿ ಹರಡುವಿಕೆಯ ವಿರುದ್ಧ ತ್ವರಿತ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶ ನೀಡಿದೆ. ಗಡಿಯುದ್ಧಕ್ಕೂ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿ ನಡೆಸಿದ   ನಂತರ ಪಾಕಿಸ್ತಾನವು ವ್ಯಾಪಕವಾದ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಆ ಹಿನ್ನೆಲೆಯಲ್ಲಿ  ಹಾಗೂ  ಆಂತರಿಕವಾಗಿ ಹರಡಲಾಗುತ್ತಿರುವ ನಕಲಿ ಸುದ್ಧಿಗಳ ಹಾಗೂ ನಿರೂಪಣೆಗಳು ದೇಶದ ಭದ್ರತೆಯ ಮೇಲೆ ಪರಿಣಾಮ …

ಕೆ. ಸುಧಾಕರನ್‌ರಿಗೆ ಬೆಂಬಲ ಡಿಸಿಸಿ ಕಚೇರಿ ಮುಂದೆ ಫ್ಲೆಕ್ಸ್

ಕಾಸರಗೋಡು: ಕೆಪಿಸಿಸಿ ಅಧ್ಯಕ್ಷರಾಗಿ ಕೆ. ಸುಧಾಕರನ್ ಮುಂದುವರಿಯಲಿ ಎಂದು ಬರೆದಿರುವ ಫ್ಲೆಕ್ಸ್ ಬೋರ್ಡ್ ಡಿಸಿಸಿ ಕಚೇರಿ ಮುಂದೆ ಪ್ರತ್ಯಕ್ಷ ಗೊಂಡಿದೆ. ಸೇವ್ ಕಾಂಗ್ರೆಸ್ ಕಾಸರಗೋಡು ಎಂಬ ಹೆಸರಲ್ಲಿ ಬೋರ್ಡ್ ಸ್ಥಾಪಿಸಲಾಗಿದೆ. ಯುದ್ಧ  ಜಯಿಸಿ ಮುಂ ದುವರಿ ಯುವಾಗ ಸೇನಾಧಿ ಕಾರಿಯನ್ನು ಬದಲಾಯಿಸು ವುದು ವಿರೋಧ ಪಕ್ಷಗಳಿಗೆ ಪ್ರಯೋ ಜನಕಾರಿಯಾಗಲಿ ದೆಯೆಂದು ಬೋರ್ಡ್‌ನಲ್ಲಿ ಬರೆಯ ಲಾಗಿದೆ. ಬೋರ್ಡ್ ಪ್ರತ್ಯಕ್ಷಗೊಂ ಡಿರುವುದು ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಲಿದೆಯೆಂದು ಹೇಳಲಾಗುತ್ತಿದೆ.

ಬೆಂಗಳೂರಿಗೆಂದು ಹೋದ ಯುವಕ ಕಾಶ್ಮೀರದ ಕಾಡಿನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಬೆಂಗಳೂರಿಗೆಂದು ತಿಳಿಸಿ ಮನೆಯಿಂದ ಹೋದ ಪಾಲಕ್ಕಾಡ್ ನಿವಾಸಿ ಯುವಕ ಜಮ್ಮು ಕಾಶ್ಮೀರದ ಪುಲ್ವಾಮದ ಅರಣ್ಯ ಪ್ರದೇಶದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾಲಕ್ಕಾಡ್ ಕಾಂಞಿರಪುಳ ನಿವಾಸಿ ಮುಹಮ್ಮದ್ ಶಾನಿಬ್ (27) ಮೃತ ವ್ಯಕ್ತಿ. ಹತ್ತು ದಿನಗಳ ಹಿಂದೆಯೇ ಸಾವಿಗೀಡಾಗಿರ ಬಹದೆಂದು ಅಂದಾಜಿಸಲಾಗಿದೆ.  ಬೆಂಗಳೂರಿನ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಸಿಕ್ಕಿದೆಯೆಂದು ತಿಳಿಸಿ ಮುಹ ಮ್ಮದ್ ಶಾನಿಬ್ ಎಪ್ರಿಲ್ ೧೩ರಂದು ಮನೆಯಿಂದ ಹೋಗಿದ್ದಾರೆನ್ನಲಾಗಿದೆ. ಶಾನಿಬ್‌ರ ಸಹೋದರಿ ಶಿಫಾನ ಬೆಂಗಳೂರಿನಲ್ಲಿ ಅಕೌಂಟೆಂಟ್ ಆಗಿ ದ್ದಾರೆ. ಆದರೆ ಶಾನಿಬ್ ಅಲ್ಲಿಗೆ ತಲುಪಿ ರಲಿಲ್ಲ. …