ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಸಾಲದ ಹೊರೆ ಯಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಂಡ್ಯ ತ್ತಡ್ಕ ತೋಪುರ ನಿವಾಸಿ ಯೂಸಫ್ (77) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಸಂಜೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಯೂಸಫ್, ಪುತ್ರ ಅಬ್ದುಲ್ ಖಾದರ್ ಹಾಗೂ ಅವರ ಪತ್ನಿ, ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಘಟನೆ ವೇಳೆ ಮಕ್ಕಳು ಮಾತ್ರವೇ ಮನೆಯಲ್ಲಿದ್ದರೆಂದು ಹೇಳಲಾಗುತ್ತಿದೆ. ಹೆಣ್ಮಕ್ಕಳ ಮದುವೆಗಾಗಿ ಹಣಕಾಸು ಸಂಸ್ಥೆಯಿಂದ ಯೂಸಫ್ ಭಾರೀ ಮೊತ್ತ ಸಾಲ ತೆಗೆದಿದ್ದರೆನ್ನಲಾಗಿದೆ. ಆ ಮೊತ್ತ ಈಗ 5೦ ಲಕ್ಷ ರೂ.ಗೆ ತಲುಪಿದೆ. ಇದೇ ವೇಳೆ ಸಾಲ ನೀಡಿದವರು ಇತ್ತೀಚೆಗೆ ಯೂಸಫ್‌ರಿಗೆ ಬೆದರಿಕೆಯೊಡ್ಡಿರು ವುದಾಗಿಯೂ ಹೇಳಲಾಗುತ್ತಿದೆ. ಇದರಿಂದ ಮನನೊಂದು ಇವರು ನೇಣು ಬಿಗಿದು ಸಾವಿಗೀಡಾಗಿರಬಹು ದೆಂದು ಸಂಶಯಿಸಲಾಗುತ್ತಿದೆ. ಯೂಸಫ್‌ರ ಪತ್ನಿ ಮರಿಯಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಫಾತಿಮ, ಅಬ್ದುಲ್ ಖಾದರ್, ಕದೀಜ, ರುಖಿಯ, ನಸೀಮ, ಮಿಸ್ರಿಯ, ಆನಿಮ, ಹಲೀಮ, ಅವ್ವಾಬಿ, ಅಳಿಯ- ಸೊಸೆಯಂದಿರಾದ ಸಯ್ಯಿದ್, ಇಕ್ಬಾಲ್, ಅಶ್ರಫ್, ಅಶ್ರಫ್, ಹಸೈನಾರ್, ಶರಫ್, ಫಾರೂಕ್, ಸಾದಿಕ್, ಫೌಸಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page