ರಸ್ತೆ ಅಪಘಾತ: ಗಾಯಾಳುಗಳಿಗೆ ಒಂದೂವರೆ ಲಕ್ಷ ರೂ.ಗಳ ಚಿಕಿತ್ಸೆ ಉಚಿತ

ಹೊಸದಿಲ್ಲಿ:  ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವವರಿಗೆ ಒಂದೂವರೆ ಲಕ್ಷ ರೂಪಾಯಿ ವರೆಗಿನ ಚಿಕಿತ್ಸೆ ಉಚಿತವಾಗಿ  ನೀಡುವ ಯೋಜನೆ ಈ ತಿಂಗಳ 5ರಿಂದಲೇ ಜ್ಯಾರಿಗೆ ಬಂದಿದೆ.  ಕೇಂದ್ರ ಉನ್ನತ ಸಾರಿಗೆ ಸಚಿವಾಲಯ ಈ ಬಗ್ಗೆ ವಿಜ್ಞಾಪನೆ ಹೊರಡಿಸಿದೆ. ಅಪಘಾತ ಸಂಭವಿಸಿದ ದಿನದಿಂದ 7 ದಿನಗಳ ವರೆಗೆ ಉಚಿತ ಚಿಕಿತ್ಸೆ ಲಭಿಸುವುದು.  ದೇಶದ ಎಲ್ಲಿಯಾದರೂ ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ನಿಬಂಧನೆಗಳಿಗೆ ಅನುಸರಿಸಿ ಈ ಚಿಕಿತ್ಸಾ ಸೌಲಭ್ಯ ಲಭಿಸಲಿದೆ. ಪೊಲೀಸ್, ಆಸ್ಪತ್ರೆಗಳು, ರಾಜ್ಯ ಆರೋಗ್ಯ ಏಜೆನ್ಸಿಗಳು ಎಂಬಿವರನ್ನು ಸೇರಿಸಿಕೊಂಡು  ಏರ್ಪಡಿಸಲಾದ ಯೋಜನೆಯ ಹೊಣೆಗಾರಿಕೆ …

ಉದ್ಯೋಗಸ್ಥರ ಅನಾಸ್ಥೆಯಿಂದಾಗಿ ಅರ್ಜಿಗಳಲ್ಲಿ ಪರಿಹಾರ ಉಂಟಾಗುತ್ತಿಲ್ಲ- ಆಂಟನಿರಾಜು

ಕಾಸರಗೋಡು: ಅಧಿಕಾರಿಗಳ ಅನಾಸ್ಥೆಯಿಂದಾಗಿ ಹಲವಾರು ಅರ್ಜಿಗಳು ಪರಿಹಾರವಾಗದೆ ಉಳಿದು ಕೊಂಡಿದೆ ಎಂದು ಶಾಸಕ ಆಂಟನಿ ರಾಜು ನುಡಿದರು. ಜನಸಾಮಾನ್ಯರು ನೀಡುವ ಅರ್ಜಿಗಳಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಅಧಿಕಾರಿಗಳು ಮುಂದಾಗಬೇಕೆಂದು ಕೇರಳ ವಿಧಾನಸಭಾ ಸಮಿತಿ ಅಧ್ಯಕ್ಷನಾಗಿರುವ ಶಾಸಕರು ಆಗ್ರಹಿಸಿದರು. ಕೇರಳ ವಿಧಾನಸಭೆಯ ಅರ್ಜಿಗಳ ಬಗ್ಗೆ ಸಮಿತಿ ಕಾಸರಗೋಡಿನಲ್ಲಿ ನಡೆಸಿದ ಹೇಳಿಕೆ ದಾಖಲು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಭೂಹಕ್ಕು ಪತ್ರ ಲಭಿಸದೆ ಇರುವ ಹಲವಾರು ಅರ್ಜಿ ಗಳಲ್ಲಿ ಕ್ರಮ ಪೂರ್ತಿಗೊಳಿಸಲಾಯಿತು. ಜಿಲ್ಲೆಯಿಂದ ಲಭಿಸಿದ ದೂರು ಗಳಲ್ಲಿ ಅತ್ಯಂತ ಹೆಚ್ಚು ಭೂಮಿಗೆ ಸಂಬಂಧಪಟ್ಟವುಗಳಾಗಿತ್ತು. …

ಆಲ್ ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನ ಜೂನ್‌ನಲ್ಲಿ

ಕಾಸರಗೋಡು: ಆಲ್ ಕೇರಳ ರೀಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತಿಯ ಸಮ್ಮೇಳನ ಜೂನ್ 15ರಂದು ಎಕೆಆರ್‌ಆರ್‌ಡಿಎ ಭವನದಲ್ಲಿ ನಡೆಯಲಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಲವು ವರ್ಷಗಳಿಂದ ರೇಶನ್ ಅಂಗಡಿ ಮೂಲಕ ವಿತರಿಸುವ ಸೀಮೆಎಣ್ಣೆ ವಿತರಣೆ ಮೊಟಕುಗೊಂಡಿದ್ದು, ಜಿಲ್ಲೆಯ ಸೀಮೆಎಣ್ಣೆ ರಖಂ ವ್ಯಾಪಾರಿಗಳು ಡಿಪೋವನ್ನು ಮುಚ್ಚುಗಡೆಗೊಳಿಸಿದ್ದಾರೆ. ಈಗ ಜಿಲ್ಲೆಯಲ್ಲಿ ಇಬ್ಬರು ಮಾತ್ರವೇ ಸೀಮೆಎಣ್ಣೆ ರಖಂ ವ್ಯಾಪಾರ ಡಿಪೋ ಉಳಿಸಿಕೊಂಡಿದ್ದು, ಒಂದು ಮಂಜೇಶ್ವರ ಹಾಗೂ ಇನ್ನೊಂದು ಹೊಸದುರ್ಗ ತಾಲೂಕಿನಲ್ಲಿದೆ. ಕಾಸರಗೋಡು ಜಿಲ್ಲೆಯ …

ಈ ತಿಂಗಳಿಂದ ಎಲ್ಲಾ ರೇಶನ್ ಕಾರ್ಡ್‌ಗಳಿಗೂ ಸೀಮೆ ಎಣ್ಣೆ ವಿತರಣೆ

ತಿರುವನಂತಪುರ: ಕೇಂದ್ರ ಸರಕಾರ ಮಂಜೂರು ಮಾಡಿದ ಸೀಮೆ ಎಣ್ಣೆ ರಾಜ್ಯದಲ್ಲಿ ಈ ತಿಂಗಳಿAದ ವಿತರಿಸಲಾಗುವುದು. ಎಲ್ಲಾ ವಿಭಾಗ ರೇಶನ್ ಕಾರ್ಡ್ ಮಾಲಕರಿಗೆ ಹಾಗೂ ಪರಂಪರಾಗತ ಮೀನು ಕಾರ್ಮಿಕರ ಪರ್ಮಿಟ್ ಇರುವ ಮೀನುಗಾರಿಕಾ ಬೋಟ್ಗಳಿಗೆ ಸೀಮೆ ಎಣ್ಣೆ ಲಭಿಸಲಿದೆ.ಕೇಂದ್ರದಿAದ ಲಭಿಸಿದ 5676 ಕಿಲೋ ಲೀಟರ್ (56.76 ಲಕ್ಷ ಲೀಟರ್)ನಲ್ಲಿ 5088 ಕಿಲೋ ಲೀಟರ್ (50.88 ಲಕ್ಷಲೀಟರ್) ಸೀಮೆ ಎಣ್ಣೆ ರೇಶನ್ ಅಂಗಡಿಗಳ ಮೂಲಕ ಬಾಕಿ ಜೂನ್ನಲ್ಲಿ ಮೀನುಗಾರಿಕಾ ಬೋಟ್ಗಳಿಗೆ ವಿತರಿಸಲಾಗುವುದು.ಹಳದಿಕಾರ್ಡ್ ಮಾಲಕರಿಗೆ 1 ಲೀಟರ್, ಗುಲಾಬಿ, ನೀಲಿ, ಬಿಳಿ …

ಉರೂಸ್‌ನ ಫ್ಲೆಕ್ಸ್ ಬೋರ್ಡ್ ನಾಶಗೊಳಿಸಿ ಗಲಭೆ ಸೃಷ್ಟಿಗೆ ಯತ್ನ: ಪಚ್ಚಂಬಳ ನಿವಾಸಿ ವಿರುದ್ಧ ಜಾಮೀನು ರಹಿತ ಕೇಸು

ಕುಂಬಳೆ: ಶಿರಿಯಾ ಒಳಯಂ ಜುಮಾ ಮಸೀದಿಯ ಉರೂಸ್‌ನ ಪ್ರಚಾರಾರ್ಥ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್‌ನ್ನು ರಾತ್ರಿ ವೇಳೆ ಹರಿದು ನಾಶಗೊಳಿಸಿದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕಾಯ್ದೆ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದಾರೆ. ಅಡ್ಕದ ಅಬ್ದುಲ್ ಸತ್ತಾರ್‌ರ  ದೂರಿನ ಮೇರೆಗೆ ಕುಬಣೂರು ಪಚ್ಚಂಬಳದ ಫಾಯಿಸ್ (24) ಎಂಬಾತನ ವಿರುದ್ಧ 15 (ಎ) ಪ್ರಕಾರ ಕೇಸು ದಾಖಲಿಸಲಾಗಿದೆ. ಈತ ಇದೀಗ ತಲೆಮರೆಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಡ್ಕ ವೀರನಗರದಲ್ಲಿ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್‌ನ್ನು ಮೇ 1ರಂದು ರಾತ್ರಿ …

ಆವರಿಸಿದ ಯುದ್ಧದ ಕಾರ್ಮೋಡ: ಜನರ ಭದ್ರತೆ ಖಾತರಿಪಡಿಸುವುದೇ ನಾಳೆ ದೇಶಾದ್ಯಂತ ನಡೆಸುವ  ಅಣಕು ಕವಾಯತಿನ ಪ್ರಧಾನ ಉದ್ದೇಶ

ನವದೆಹಲಿ:  ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಯು ಯುದ್ಧದ ಕಾರ್ಮೋಡ ಆವರಿಸುವಂತೆ ಮಾಡಿದೆ. ಅದಕ್ಕಿರುವ ಒಂದು ಪೂರ್ವ ಸಿದ್ಧತೆ ಎಂಬಂತೆ ನಾಳೆ ದೇಶದ ಎಲ್ಲಾ ರಾಜ್ಯಗಳಲ್ಲಿ ಅಣಕು ಕವಾಯತ್ (ಮ್ಯಾಕ್‌ಡ್ರಿಲ್) ನಡೆಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಪರಿಣಾಮಕಾರಿ ಸನ್ನದ್ಧತೆ ಮತ್ತು ಪ್ರಕ್ರಿಯೆ ವಿಧಾನಗಳು ಜ್ಯಾರಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕವಾಯತ್ ಹೊಂದಿದೆ. ನಾಳೆ ಇದ್ದಕ್ಕಿದ್ದಂತೆಯೇ ಜೋರಾದ ಹಾಗೂ ಭಯಾನಕ ಸೈರನ್ ಶಬ್ದ ಕೇಳಿ ಬರಬಹುದು. ಹಾಗೆ ನಡೆದಲ್ಲಿ …

ಬಾಲಕನಿಗೆ ಸಲಿಂಗರತಿ ಕಿರುಕುಳ ಪ್ರಕರಣ: ಅಪರಾಧಿಗೆ 107 ವರ್ಷ ಸಜೆ, 4.5 ಲಕ್ಷ ರೂ. ಜುಲ್ಮಾನೆ

ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮು ರಮೇಶ್ ಚಂದ್ರಭಾನು ಅವರು ಪೋಕ್ಸೋ ಹಾಗೂ ಇತರ ವಿವಿಧ ಸೆಕ್ಷನ್ ಗಳಲ್ಲಾಗಿ ಒಟ್ಟು 107 ವರ್ಷ ಕಠಿಣ ಸಜೆ ಹಾಗೂ 4.5 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕೂಡ್ಲು ಪೆರಿಯಡ್ಕದ ಜಗನ್ನಾಥ ಅಲಿಯಾಸ್ ಜಗನ್ (41) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಒಂದೂವರೆ ವರ್ಷ ಹೆಚ್ಚುವರಿ ಕಠಿಣ …

ಕಾಪಾ ಕಾಯ್ದೆ ಉಲ್ಲಂಘಿಸಿ ಊರಿಗೆ ಬಂದ ಆರೋಪಿ ಬಂಧನ

ಕಾಸರಗೋಡು:  ಕಾಪಾ ಕಾಯ್ದೆ ಹೇರಿ ಗಡೀಪಾರು ಮಾಡಿದ ಆರೋಪಿ ಅನುಮತಿಯಿಲ್ಲದೆ ಜಿಲ್ಲೆಗೆ ಪ್ರವೇಶಿಸಿದ್ದು, ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಕಲ್ಯಾಣ್ ರೋಡ್ ನಿವಾಸಿ ಸುಧೀಶ್ ಕೆ (25) ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ಈತನಿಗೆ ನಿಯಂತ್ರಣ ಹೇರಲಾಗಿತ್ತು.  ಈ ನಿಯಂತ್ರಣವನ್ನು ಉಲ್ಲಂಘಿಸಿ  ಈತ ಕಾಞಂಗಾಡ್ ಹೊಸ ಬಸ್ ನಿಲ್ದಾಣ ಪರಿಸರ ಸಹಿತ ವಿವಿಧೆಡೆ ತಿರುಗಾಡುತ್ತಿರುವ ಬಗ್ಗೆ ತಿಳಿದು  ಪೊಲೀಸರು  ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹೊಸದುರ್ಗ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಾಗಿ …

27 ಗ್ರಾಂ ಎಂಡಿಎಂಎ ವಶ: ಇಬ್ಬರು ಯುವತಿಯರ ಸಹಿತ ನಾಲ್ವರ ಸೆರೆ

ಕಲ್ಲಿಕೋಟೆ: ಕಾರಿನಲ್ಲಿ ಸಾಗಿಸುತ್ತಿದ್ದ ೨೭ ಗ್ರಾಂ ಎಂಡಿಎಂಎ ವಶಪಡಿಸಿಕೊಂಡು ಇಬ್ಬರು ಯುವತಿಯರ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಕಣ್ಣೂರು ನಿವಾಸಿಗಳಾದ ಅಮರ್ ಪಿ (32), ವೈಷ್ಣವಿ ಎಂ.ಕೆ (27), ಕುಟ್ಯಾಡಿಯ ಟಿ.ಕೆ. ವಾಹಿದ್ (38), ತಲಶ್ಶೇರಿಯ ವಿ.ಕೆ. ಆದಿರ (30) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಕಲ್ಲಿಕೋಟೆ ಸಿಟಿ ಡೆಪ್ಯುಟಿ ಕಮಿಶನರ್ ಅರುಣ್ ಕೆ ಪವಿತ್ರನ್‌ರಿಗೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಕಲ್ಲಿಕೋಟೆ ಬೀಚ್ ರೋಡ್‌ನಲ್ಲಿ ಆಕಾಶವಾಣಿ ನಿಲಯದ ಸಮೀಪದಿಂದ ಆಂಟಿ ನಾರ್ಕೋಟಿಕ್ ಅಸಿಸ್ಟೆಂಟ್ ಕಮಿಶನರ್ ಜಿ ಬಾಲಚಂದ್ರನ್‌ರ ನೇತೃತ್ವದ …

ಹಾಲು, ಪತ್ರಿಕೆ ತರಲೆಂದು ಹೋದ ವ್ಯಕ್ತಿ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಹಾಲು ಮತ್ತು ಪತ್ರಿಕೆ ತರಲೆಂದು ಮನೆಯಿಂದ ಹೊರಗೆ ಹೋದ ವ್ಯಕ್ತಿ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಾಸರಗೋಡು ಕರಂದಕ್ಕಾಡು ಅಗ್ನಿಶಾಮಕದಳ ಕಚೇರಿ ಬಳಿಯ ನಿವಾಸಿ ಸುರೇಶ್ ಕಾಮತ್ (62) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ  ಹಾಲು ಮತ್ತು ಪತ್ರಿಕೆ ತರಲೆಂದು ಮನೆಯಿಂದ ಹೊರ ಹೋಗಿದ್ದರು. ನಂತರ ತಡವಾದರೂ ಅವರು ಮನೆಗೆ ಹಿಂತಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಕರಂದಕ್ಕಾಡ್ ಸರಕಾರಿ ಬೀಜೋತ್ಪಾದನಾ ಕೇಂದ್ರದ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕದಳ …