ಉರೂಸ್‌ನ ಫ್ಲೆಕ್ಸ್ ಬೋರ್ಡ್ ನಾಶಗೊಳಿಸಿ ಗಲಭೆ ಸೃಷ್ಟಿಗೆ ಯತ್ನ: ಪಚ್ಚಂಬಳ ನಿವಾಸಿ ವಿರುದ್ಧ ಜಾಮೀನು ರಹಿತ ಕೇಸು

ಕುಂಬಳೆ: ಶಿರಿಯಾ ಒಳಯಂ ಜುಮಾ ಮಸೀದಿಯ ಉರೂಸ್‌ನ ಪ್ರಚಾರಾರ್ಥ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್‌ನ್ನು ರಾತ್ರಿ ವೇಳೆ ಹರಿದು ನಾಶಗೊಳಿಸಿದ ಯುವಕನ ವಿರುದ್ಧ ಕುಂಬಳೆ ಪೊಲೀಸರು ಜಾಮೀನು ರಹಿತ ಕಾಯ್ದೆ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದಾರೆ.

ಅಡ್ಕದ ಅಬ್ದುಲ್ ಸತ್ತಾರ್‌ರ  ದೂರಿನ ಮೇರೆಗೆ ಕುಬಣೂರು ಪಚ್ಚಂಬಳದ ಫಾಯಿಸ್ (24) ಎಂಬಾತನ ವಿರುದ್ಧ 15 (ಎ) ಪ್ರಕಾರ ಕೇಸು ದಾಖಲಿಸಲಾಗಿದೆ. ಈತ ಇದೀಗ ತಲೆಮರೆಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಡ್ಕ ವೀರನಗರದಲ್ಲಿ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್‌ನ್ನು ಮೇ 1ರಂದು ರಾತ್ರಿ 10.45ರ ವೇಳೆ ಹರಿದಿರುವುದಾಗಿ ದೂರಲಾಗಿದೆ. ಈ ಕೃತ್ಯವನ್ನು ನೇರವಾಗಿ ಕಂಡಿರುವುದರಿಂದ ಆರೋಪಿಯ ಗುರುತು ಹಚ್ಚಲು ಸಾಧ್ಯವಾಯಿತು. ಎರಡು ವಿಭಾಗಗಳ ಮಧ್ಯೆ ಗುಂಪುಗಾರಿಕೆ ಹಾಗೂ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಆರೋಪಿ ಫ್ಲೆಕ್ಸ್ ಬೋರ್ಡ್ ಹರಿದು ನಾಶಗೊಳಿಸಿರು ವುದಾಗಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page