‘ಕಾಸರಗೋಲ್ಡ್’ ಸಿನಿಮಾದ ಸಹ ನಿರ್ದೇಶಕ ಗಾಂಜಾ ಸಹಿತ ಸೆರೆ

ಕಾಸರಗೋಡು: ಕಾಸರಗೋಡಿನ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ ‘ಕಾಸರ್‌ಗೋಲ್ಡ್’ ಎಂಬ ಸಿನಿಮಾದ ಸಹ ನಿರ್ದೇಶಕನನ್ನು ಗಾಂಜಾ ಸಹಿತ ಬಂಧಿಸಲಾಗಿದೆ. ಪಯ್ಯನ್ನೂರು ಕಂಡಾಂಗಳಿ ನಿವಾಸಿ ಎನ್. ನದೀಶ್ ನಾರಾಯಣ (31)ನನ್ನು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಕೆ. ದಿನೇಶ್ ಹಾಗೂ ತಂಡ ಸೆರೆ ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಈತನನ್ನು ಅಬಕಾರಿ ದಳ ನಿರೀಕ್ಷಿಸುತ್ತಿತ್ತು. ನಿನ್ನೆ ಸಂಜೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ನದೀಶ್‌ನನ್ನು ಬೆನ್ನಟ್ಟಿ ರೈಲ್ವೇ ನಿಲ್ದಾಣ ಪರಿಸರದಲ್ಲಿ ಬಂಧಿಸಲಾಗಿದೆ. ಅಬಕಾರಿ ತಂಡದಲ್ಲಿ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಟಿ.ವಿ. ಕಮಲಾಕ್ಷನ್, ವಿ.ಕೆ. ವಿನೋದ್, …

ಪೊಲೀಸ್ ಠಾಣೆಗೆ ನುಗ್ಗಿ ಎಸ್‌ಐ, ಪೊಲೀಸ್‌ಗೆ ಹಲ್ಲೆ: ಲಾರಿ ಚಾಲಕ ಸೆರೆ

ಹೊಸದುರ್ಗ: ದೂರು ನೀಡಲಿದೆ ಯೆಂದು ತಿಳಿಸಿ ನೀಲೇಶ್ವರ ಪೊಲೀಸ್ ಠಾಣೆಗೆ ತಲುಪಿ  ಎಸ್‌ಐ ಹಾಗೂ ಪೊಲೀಸ್‌ಗೆ ಹಲ್ಲೆಗೈದ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಚಾಯೋತ್ ಮಾನೂರಿನ ಕಿಳಕ್ಕೇವೀಟಿಲ್ ಕೆ.ವಿ.ಸಂತೋಷ್  (40) ಎಂಬಾತನನ್ನು ಪೊಲೀಸರು ಬಲಪ್ರಯೋಗಿಸಿ ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ 7.30ರ ವೇಳೆ ಘಟನೆ ನಡೆದಿದೆ. ದೂರು ನೀಡಲಿದೆಯೆಂದು ತಿಳಿಸಿ ಸಂ ತೋಷ್ ಪೊಲೀಸ್ ಠಾಣೆಗೆ ತಲುಪಿ ದ್ದನು. ದೂರು ಲಿಖಿತವಾಗಿ ನೀಡುವಂತೆ  ಪಿ.ಆರ್.ಒ ಕರ್ತವ್ಯದಲ್ಲಿದ್ದ ಎಎಸ್‌ಐ ಪ್ರಕಾಶನ್ ತಿಳಿಸಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಸಂತೋಷ್ ದೂರು ಬರೆದು ನೀಡಲು …

ಮೊಗ್ರಾಲ್ ಹೊಳೆಯಲ್ಲಿ ಬಚ್ಚಿಟ್ಟ 10 ದೋಣಿಗಳನ್ನು ಪತ್ತೆಹಚ್ಚಿ ನಾಶಗೊಳಿಸಿದ ಪೊಲೀಸ್: ಅನಧಿಕೃತ ಹೊಯ್ಗೆ ಸಂಗ್ರಹ ವಿರುದ್ಧ ಕಠಿಣ ಕ್ರಮ

ಕುಂಬಳೆ: ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅನಧಿಕೃತವಾಗಿ ಹೊಯ್ಗೆ  ಸಂಗ್ರಹಿಸಿ, ಸಾಗಾಟ ದಂಧೆಯೂ ವ್ಯಾಪಕಗೊಂ ಡಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಕಠಿಣ ಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದರಂತೆ ಇಂದು ಮುಂಜಾನೆ ಡಿವೈಎಸ್ಪಿ ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೊಗ್ರಾಲ್ ಹೊಳೆಯ ಕೊಪ್ಪಳ ಅಳಿವೆ ಬಾಗಿಲಿನಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹಕ್ಕೆ ಬಳಸುವ ಹತ್ತು ದೋಣಿಗಳನ್ನು ಪತ್ತೆಹಚ್ಚಲಾಗಿದೆ. ಈಪೈಕಿ ಹಲವು ದೋಣಿಗಳನ್ನು ನೀರಿನೊಳಗೆ ಮುಳುಗಿಸಿಡಲಾಗಿತ್ತು. ಅವುಗಳನ್ನು ಮೇಲಕ್ಕೆತ್ತಿ ದಡಕ್ಕೆ ತಲುಪಿಸಿ ಬಳಿಕ …

ಟೋಲ್ ಬೂತ್ ವಿರುದ್ಧ ಪ್ರತಿಭಟನೆ : ಕುಂಬಳೆಯಲ್ಲಿ ಬೃಹತ್ ದೊಂದಿ ಮೆರವಣಿಗೆ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ಸ್ಥಾಪಿಸುವುದರ ವಿರುದ್ಧ ಸರ್ವಪಕ್ಷ ಚಳವಳಿ ಸಮಿತಿ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ದೊಂದಿ ಮೆರವಣಿಗೆಯಲ್ಲಿ ನೂರಾರು ಮಂದಿ ನಾಗರಿಕರು ಭಾಗವಹಿಸಿದರು. ನಿಗದಿತ ಮಾನದಂಡಗಳನ್ನು ಉಲ್ಲಂಘಿಸಿ ಕುಂಬಳೆಯಲ್ಲಿ ಟೋಲ್ ಬೂತ್ ಸ್ಥಾಪಿಸುತ್ತಿರುವುದಾಗಿ ಚಳವಳಿ ನಿರತರು ಆರೋಪಿಸಿದರು. ಶಿಕ್ಷಣ, ಆಸ್ಪತ್ರೆ ಸಹಿತ ಎಲ್ಲಾ ಅಗತ್ಯಗಳಿಗೂ ಕಾಸರಗೋಡಿನ ಜನತೆ ಮಂಗಳೂರಿಗೆ ತೆರಳುತ್ತಿದ್ದಾರೆ. ಹಾಗೆ ತೆರಳಬೇಕಾದರೆ ಕುಂಬಳೆ ಹಾಗೂ ತಲಪಾಡಿಯಲ್ಲಿ ಟೋಲ್ ನೀಡಬೇಕೆಂದು ಹೇಳುವುದನ್ನು ಸವಾಲಾಗಿಯೇ ಕಾಣಬೇಕಾಗಿದೆಯೆಂದು ನಾಗರಿಕರು ತಿಳಿಸಿದ್ದಾರೆ. ಆದ್ದರಿಂದ ಕುಂಬಳೆಯಲ್ಲಿ ಟೋಲ್ …

ಸಿಪಿಎಂನ ಮಮತೆ ಶತ್ರು ರಾಷ್ಟ್ರಗಳೊಂದಿಗೆ- ಕೆ. ಸುರೇಂದ್ರನ್

ಕಾಸರಗೋಡು: ಕಮ್ಯೂನಿಸ್ಟ್ ಮಾರ್ಕಿಸ್ಟ್ ಪಕ್ಷಗಳು ಎಂದೂ ಮಮತೆ ಹೊಂದಿರುವುದು ಶತ್ರು ರಾಷ್ಟ್ರಗಳೊಂದಿಗೆ ಮಾತ್ರವಾಗಿದೆ ಎಂದೂ ಅಂತಹ ದೇಶಗಳನ್ನು ಬೆಂಬಲಿಸುವ ನಿಲುವನ್ನು ಆ ಪಕ್ಷಗಳು ಸದಾ ಅನುಸರಿಸುತ್ತಾ ಬಂದಿದೆ ಎಂದು ಬಿಜೆಪಿ  ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಗಳನ್ನು ಇಲ್ಲಿಂದ ಹೊರದಬ್ಬಬೇಕೆಂಬ  ಬೇಡಿಕೆ ಮುಂದಿರಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನಲ್ಲಿ ನಿನ್ನೆ ನಡೆದ ಧರಣಿ ಮುಷ್ಕರವನ್ನು ಉದ್ಘಾಟಿಸಿ ಸುರೇಂದ್ರನ್ ಮಾತನಾಡು ತ್ತಿದ್ದರು. ಪಾಕಿಸ್ತಾನಕ್ಕೆ ಸಹಾಯ ಒದಗಿಸುತ್ತಿರುವ ಚೈನಾದೊಂದಿಗೆ ಸಿಪಿಎಂ ಕಟಿಬದ್ದತೆ …

ಅಬ್ದುಲ್ ಅಸೀಸ್ ಮುಸ್ಲಿಯಾರ್ ನಿಧನ

ಕುಂಬಳೆ: ಪ್ರಮುಖ ದೀನಿ ಪಂಡಿತ ಮೊಗ್ರಾಲ್ ಮೈಮೂನ್ ನಗರದಲ್ಲಿ ವಾಸಿಸುವ ಅಂಗಡಿಮೊಗರು ಖಾಝಿ ಅಸೀಸ್ ಉಸ್ತಾದ್ ಎಂಬ ಹೆಸರಲ್ಲಿ ಕರೆಯಲ್ಪಡುವ ಅಬ್ದುಲ್ ಅಸೀಸ್ ಮುಸ್ಲಿಯಾರ್ (90) ನಿಧನಹೊಂದಿದರು. ಇವರು ದಿ| ಮೊಗ್ರಾಲ್ ಕೋಟೆ ಅಬ್ದುಲ್ ಖಾದರ್ ಮುಸ್ಲಿಯಾರ್‌ರ ಸಹೋದರಿಯ ಪತಿಯಾಗಿದ್ದಾರೆ. ಮೃತರು ಪತ್ನಿ ಸೈನಬ, ಮಕ್ಕಳಾದ ಯೂನುಸ್, ಅನ್ಸಾರ್,ತಾಜುದ್ದೀನ್, ನೌಫಲ್, ನೌಶಾದ್, ಸಾಹಿದ, ನಸೀಮ, ಅಳಿಯ-ಸೊಸೆಯಂದಿರಾದ ಮುಹಮ್ಮದ್ ಮುಸ್ಲಿಯಾರ್ ಮದನಿ, ಇಬ್ರಾಹಿಂ ಉದುಮ, ಸಾಜಿದ ತಾಯಿಲಂಗಾಡಿ, ಅನೀಸ ಮೊಗ್ರಾಲ್, ಶಂಶಾದ್ ಪೈವಳಿಕೆ, ಶಂಸೀನ ಬಾಯಾರು, ನಸೀಬ, ಸಹೋದರ-ಸಹೋದರಿಯರಾದ …

ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಸರಕಾರಿ ವಾಹನ ಅನಾಥ: ತುಕ್ಕು ಹಿಡಿದು ನಾಶದತ್ತ

ಮಂಜೇಶ್ವರ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ಬಳಿ ಮಾರಾಟ ತೆರಿಗೆ ಇಲಾಖೆಯ ವಾಹನ ಒಂದು ತುಕ್ಕು ಹಿಡಿದು ನಾಶವಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಈ ವಾಹನ ಈಗ ಯಾರಿಗೂ ಬೇಡದೆ ನಾಶವಾಗುತ್ತಿರುವುದು ಸ್ಥಳೀಯರಲ್ಲಿ ರೋಷ ಭಾವನೆ ಸೃಷ್ಟಿಸಿದೆ. ಈ ಮೊದಲು ಇಲ್ಲಿ ಅಬಕಾರಿ ಚೆಕ್‌ಪೋಸ್ಟ್ ಹಲವು ವರ್ಷಗಳ ಕಾಲ ಕಾರ್ಯಾಚರಿಸುತ್ತಿತ್ತು. ಇದರ ಬಳಿಯಲ್ಲೇ ಮಾರಾಟ ತೆರಿಗೆ ಇಲಾಖೆ ಕಚೇರಿಯೂ ಕಾರ್ಯಾಚರಿಸುತ್ತಿತ್ತು. ಆದರೆ ಜಿಎಸ್‌ಟಿ ವ್ಯವಸ್ಥೆ ಜ್ಯಾರಿಗೆ ಬಂದ ಬಳಿಕ ಮಾರಾಟ ತೆರಿಗೆ ಚೆಕ್‌ಪೋಸ್ಟ್ ಸ್ಥಗಿತಗೊಂಡರೂ ವಾಹನ ಮಾತ್ರ ಇಲ್ಲೇ …

ಮದ್ಯಪಾನ ಪ್ರಶ್ನಿಸಿದ ಯುವಕನಿಗೆ ಇರಿತ

ತಿರುವನಂತಪುರ: ವಿವಾಹ ಸತ್ಕಾರ ಮಧ್ಯೆ ಸಂಭವಿಸಿದ ಘರ್ಷಣೆಯಲ್ಲಿ ಯುವಕನಿಗೆ ಇರಿತವುಂಟಾಗಿದೆ. ಕಾಟಾಕಡ ಆರುಮಾನೂರ್ ನಿವಾಸಿ ಅಜೀರ್‌ನಿಗೆ ಬಿಯರ್ ಬಾಟಲಿಯಿಂದ ಇರಿಯಲಾಗಿದೆ. ಗಂಟಲಿಗೆ ಗಂಭೀರ ಗಾಯವಾದ ಅಜೀರ್‌ನನ್ನು ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟಾಕಡ ಸಭಾಂಗಣದಲ್ಲಿ ಘರ್ಷಣೆ ಉಂಟಾಗಿತ್ತು. ಸಭಾಂಗಣದ ಸಮೀಪ ತಂಡವೊಂದು ಮದ್ಯಪಾನಗೈದಿರುವುದನ್ನು ಅಜೀರ್ ಪ್ರಶ್ನಿಸಿರುವುದೇ ಘರ್ಷಣೆಗೆ ಕಾರಣವೆನ್ನಲಾಗಿದೆ. ಕಂಡಲ ನಿವಾಸಿ ಕಿರಣ್ ಕಣ್ಣನ್‌ನ ನೇತೃತ್ವದಲ್ಲಿ ಆಕ್ರಮಿಸಲಾಗಿದೆ ಎಂದು ದೂರಲಾಗಿದೆ.

ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯ: ವಧು ಕುಸಿದು ಬಿದ್ದು ಮೃತ್ಯು

ಲಕ್ನೋ: ವಿವಾಹದ ಹಿಂದಿನ ದಿನ ಮೆಹಂದಿ ಕಾರ್ಯಕ್ರಮದಲ್ಲಿ ನೃತ್ಯಗೈಯ್ಯುತ್ತಿದ್ದ ಮಧ್ಯೆ ವಧು ಕುಸಿದು ಬಿದ್ದು ಮೃತಪಟ್ಟಳು. ದೀಕ್ಷಾ (22) ಮೃತಪಟ್ಟ ಯುವತಿ. ಹೃದಯಾಘಾತವೇ ಮರಣಕ್ಕೆ ಕಾರಣವೆನ್ನಲಾಗಿದೆ. ಉತ್ತರ ಪ್ರದೇಶದ ಇಸ್ಲಾಂ ನಗರ್‌ನಲ್ಲಿ   ಘಟನೆ ನಡೆದಿದೆ. ದೀಕ್ಷಾ ಹಾಗೂ ಸೌರವ್‌ರೊಂದಿಗಿನ ವಿವಾಹ ನಿನ್ನೆ ನಡೆಯಬೇಕಾಗಿತ್ತು. ಇದರ ಹಿಂದಿನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮ ದಲ್ಲಿ ದುರ್ಘಟನೆ ಸಂಭವಿಸಿದೆ.

ವಿವಿಧ ಬೇಡಿಕೆ ಆಗ್ರಹಿಸಿ ಕಿಸಾನ್‌ಸೇನೆ ಆಶ್ರಯದಲ್ಲಿ ಕಂಗು ಕೃಷಿಕರ ಜಿಲ್ಲಾ ಸಮ್ಮೇಳನ

ಬದಿಯಡ್ಕ: ಹವಮಾನ ವೈಪರೀತ್ಯ ದಿಂದಾಗಿ ಕಂಗು ಕೃಷಿಗೆ ತಗಲಿದ ಹಳದಿ ರೋಗ, ಎಲೆ ಚುಕ್ಕಿ ರೋಗ, ಹಿಂಗಾರ ಕರಟುವುದು, ಮಹಾಳಿ ರೋಗ ಎಂಬಿವುಗಳಿಗೆ ಭೂಮಿಯ ವಿಸ್ತೀರ್ಣ ನೋಡದೆ ಪಂಚಾಯತ್‌ನ ಸ್ವಂತ ನಿಧಿ ಉಪಯೋಗಿಸಿ ಔಷಧಿ ಸಿಂಪಡಿಸ ಬೇಕು, ಕೃಷಿ ಸಾಲದ ಬಡ್ಡಿ ಮನ್ನಾ ಮಾಡಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಜಿಲ್ಲಾ ಕಿಸಾನ್ ಸೇನೆ ಆಶ್ರಯದಲ್ಲಿ ಬದಿಯಡ್ಕ ಗುರುಸದನದಲ್ಲಿ ನಡೆದ ಸಮ್ಮೇಳವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿ ಸಿದರು. ಬೆಳೆ ನಷ್ಟಗೊಂಡವರಿಗೆ ಸೂP ವಾದ ನಷ್ಟ ಪರಿಹಾರ …