‘ಕಾಸರಗೋಲ್ಡ್’ ಸಿನಿಮಾದ ಸಹ ನಿರ್ದೇಶಕ ಗಾಂಜಾ ಸಹಿತ ಸೆರೆ

ಕಾಸರಗೋಡು: ಕಾಸರಗೋಡಿನ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ ‘ಕಾಸರ್‌ಗೋಲ್ಡ್’ ಎಂಬ ಸಿನಿಮಾದ ಸಹ ನಿರ್ದೇಶಕನನ್ನು ಗಾಂಜಾ ಸಹಿತ ಬಂಧಿಸಲಾಗಿದೆ. ಪಯ್ಯನ್ನೂರು ಕಂಡಾಂಗಳಿ ನಿವಾಸಿ ಎನ್. ನದೀಶ್ ನಾರಾಯಣ (31)ನನ್ನು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಕೆ. ದಿನೇಶ್ ಹಾಗೂ ತಂಡ ಸೆರೆ ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಈತನನ್ನು ಅಬಕಾರಿ ದಳ ನಿರೀಕ್ಷಿಸುತ್ತಿತ್ತು. ನಿನ್ನೆ ಸಂಜೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ನದೀಶ್‌ನನ್ನು ಬೆನ್ನಟ್ಟಿ ರೈಲ್ವೇ ನಿಲ್ದಾಣ ಪರಿಸರದಲ್ಲಿ ಬಂಧಿಸಲಾಗಿದೆ. ಅಬಕಾರಿ ತಂಡದಲ್ಲಿ ಗ್ರೇಡ್ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಟಿ.ವಿ. ಕಮಲಾಕ್ಷನ್, ವಿ.ಕೆ. ವಿನೋದ್, ಶಿಜು ವಿ.ವಿ., ಶರತ್, ವಿನೀಶ್, ಟಿ.ವಿ. ಜುನಾ ಎಂಬಿವರಿದ್ದರು.

RELATED NEWS

You cannot copy contents of this page