ಸೂರ್ಲು ತೋಡಿಗೆ ಮಲಿನ ಜಲ ಹರಿಯಬಿಟ್ಟ ಸಂಸ್ಥೆಗೆ ದಂಡ : ವಿವಿಧ ಕಡೆ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ತಪಾಸಣೆ
ಕಾಸರಗೋಡು: ಸೂರ್ಲು ತೋಡಿಗೆ ಉಪಯೋಗಶೂನ್ಯ ಜಲವನ್ನು ಹರಿಯಬಿಟ್ಟು ಮಲಿನಗೊಳಿಸಲಾಗಿದೆ ಎಂಬ ದೂರಿನಂತೆ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್ ಮೆಂಟ್ ಸ್ಕ್ವಾಡ್ ನಡೆಸಿದ ಪರಿಶೀಲನೆ ಯಲ್ಲಿ ಹೊಸ ಬಸ್ ನಿಲ್ದಾಣ ಸಮೀಪದ ಕಾಂಪ್ಲೆಕ್ಸ್‌ನ ಹೋಟೆಲ್‌ನಿಂದ ಉಪ ಯೋಗಶೂನ್ಯ ಜಲವನ್ನು ಪ್ರತ್ಯೇಕ ವ್ಯವಸ್ಥೆ ಮೂಲಕ ಸಾರ್ವಜನಿಕ ಚರಂಡಿಗೆ ಹರಿಯ ಬಿಟ್ಟಿರುವುದನ್ನು ಪತ್ತೆಹಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲಕನಿಗೆ 10,000 ರೂ. ದಂಡ ಹೇರಲಾಯಿತು. ಕಾಂಪ್ಲೆಕ್ಸ್‌ಗೆ ಬೇಕಾಗಿ ಸಿದ್ಧಪಡಿಸಿದ ಸೋಕ್‌ಪಿಟ್‌ಗೆ ಉಪಯೋಗಶೂನ್ಯ ಜಲವನ್ನು ಹರಿಸಲು ನಿರ್ದೇಶ ನೀಡಲಾ ಯಿತು. ಕಾಂಪ್ಲೆಕ್ಸ್‌ನಿಂದಿರುವ ಮಲಿನ …