ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮುಸ್ಲಿಂ ಸಂಘಟನೆಗಳಿಂದ ಮಂಜೇಶ್ವರದಲ್ಲಿ ಮೆರವಣಿಗೆ

ಮಂಜೇಶ್ವರ: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಜಿಲ್ಲೆಯ ಮಂಜೇಶ್ವರದಲ್ಲಿ ಮುಸ್ಲಿಂ ಸಂಘಟನೆಗಳು ಸೇರಿಕೊಂಡು ವಕ್ಫ್ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕುಂಜತ್ತೂರಿನಿಂದ ಹೊಸಂಗಡಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆಗೆ ಮುಂಚಿತವಾಗಿ ಪಹಲ್ಗಾಮ್‌ನಲ್ಲಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಗಾಗಿ ಮೌನ ಪ್ರಾರ್ಥನೆ ನಡೆಸಲಾಯಿತು. ಮೆರವಣಿಗೆ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು.

ವಿದ್ಯಾರ್ಥಿಗಳ ಮಧ್ಯೆ ಪೂರ್ವ ದ್ವೇಷ: 10ನೇ ತರಗತಿ ವಿದ್ಯಾರ್ಥಿಯನ್ನು ಸಹಪಾಠಿ, ಗೆಳೆಯರು ಅಪಹರಿಸಿ ಹಲ್ಲೆ

ಮಲಪ್ಪುರಂ: 10ನೇ ತರಗತಿ ವಿದ್ಯಾರ್ಥಿಯನ್ನು ಸಹಪಾಠಿ ಹಾಗೂ ಗೆಳೆಯ ಸೇರಿ ಕ್ರೂರವಾಗಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಮೂರ್ಕನಾಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾದ ಮುಬಿನ್  ಗಾಯ ಗೊಂಡವನು. ಆರು ತಿಂಗಳ ಹಿಂದೆ ಮುಬಿನ್ ಹಾಗೂ ಸಹಪಾಠಿ ಮಧ್ಯೆ ವಿವಾದ ಉಂಟಾಗಿತ್ತು. ಆ ವೇಳೆ ಅಧ್ಯಾಪಕರ ಮಧ್ಯಸ್ಥಿಕೆಯಲ್ಲಿ ಅದನ್ನು ಪರಿಹರಿಸಲಾಗಿತ್ತು. ನಿನ್ನೆ ಸ್ಪೋರ್ಟ್ಸ್ ಕ್ಯಾಂಪ್ ಕಳೆದು ಮನೆಗೆ ಹಿಂತಿರುಗುತ್ತಿದ್ದ ಮುಬಿನ್‌ನನ್ನು ಸಹಪಾಠಿ ಹಾಗೂ ಆತನ ಗೆಳೆಯ ಸೇರಿದ ಆರು ಮಂದಿಯ ತಂಡ ಅಪಹರಿಸಿಕೊಂಡು ಹೋಗಿ ಕಲ್ಲಿನಿಂದ ತಲೆಗೆ ಗುದ್ದಿ …

ನವಚೇತನ ಯೂತ್‌ಕ್ಲಬ್ ವಾರ್ಷಿಕೋತ್ಸವ ಜನಪ್ರತಿನಿಧಿಗಳಿಗೆ ಗೌರವಾರ್ಪಣೆ

ಬಾಡೂರು: ನವಚೇತನ ಯೂತ್ ಕ್ಲಬ್ ಇದರ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಕ್ಲಬ್‌ನ ಅಧ್ಯಕ್ಷ ಸಚಿನ್‌ರಾಜ್ ಎಂ. ಅಧ್ಯಕ್ಷತೆ ವಹಿಸಿ ದರು. ಕಾರ್ಯದರ್ಶಿ ಕೃಪರಾಜ್ ಕೆ. ಸ್ವಾಗತಿಸಿದರು. ವಾರ್ಷಿಕೋತ್ಸವದಂ ಗವಾಗಿ ಕಬಡ್ಡಿ ಪಂದ್ಯಾಟ ನಡೆಸಲಾ ಯಿತು. ಪುತ್ತಿಗೆ ಪಂಚಾಯತ್ ಅಧ್ಯಕ್ಷ, ಕ್ಲಬ್‌ನ ಹಿರಿಯ ಸದಸ್ಯರಾಗಿರುವ ಡಿ. ಸುಬ್ಬಣ್ಣ ಆಳ್ವ, ಅನಿತಾ ಎಂ., ಪ್ರೇಮಾ ಎಸ್. ರೈ ಇವರನ್ನು ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಯಿತು.

ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಭಯೋತ್ಪಾದಕರ ಮನೆ ಧ್ವಂಸ

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪ್ರಕೃತಿ ರಮಣೀಯ ಪ್ರವಾಸಿ ಕೇಂದ್ರದಲ್ಲಿ ಎಪ್ರಿಲ್ 22ರಂದು ಅಮಾಯಕ ಪ್ರವಾಸಿಗರ ಮೇಲೆ ಏಕಾಏಕಿಯಾಗಿ ಗುಂಡಿನ ಸುರಿಮಳೆಗೈದು 26 ಮಂದಿಯನ್ನು ಕೊಲೆಗೈದು ಹಲವಾರು ಮಂದಿಯನ್ನು ಗಂಭೀರ ಗಾಯಗೊಳಿಸಿದ ಭಯೋತ್ಪಾದಕರ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಉಗ್ರರ ಮನೆಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯದಿಂದ ಭಾರತೀಯ ಸೇನೆ ಸ್ಫೋಟಿಸಿ ಧ್ವಂಸಗೊಳಿಸಿದೆ. ಪಹಲ್ಗಾಮ್ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ದಕ್ಷಿಣ ಕಾಶ್ಮೀರ ಬಿಜ್ ಬೆಹರಾ ನಿವಾಸಿ ಅದಿಲ್ ಮತ್ತು ದಕ್ಷಿಣ ಕಾಶ್ಮೀರದ ಇನ್ನೋರ್ವ ಉಗ್ರ ಅಸಿಫ್ …

ಪಹಲ್ಗಾಮ್ ಉಗ್ರರ ದಾಳಿ ದೇಶದ್ರೋಹ ಹೇಳಿಕೆ ನೀಡಿದ ಆರೋಪ: ಮುಸ್ಲಿಂ ಲೀಗ್ ನೇತಾರನ ವಿರುದ್ಧ ಕೇಸು ದಾಖಲು

ಕಾಸರಗೋಡು: ಜಮ್ಮು ಕಾಶ್ಮೀರದ  ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಮುಸ್ಲಿಂ ಲೀಗ್ ನೇತಾರ ಬಶೀರ್ ವೆಳ್ಳಿಕೋತ್ ದೇಶದ್ರೋಹ ಹೇಳಿಕೆ ನೀಡಿರುವುದಾಗಿ ಆರೋಪವುಂಟಾಗಿದೆ. ಹಿಂದೂ ಐಕ್ಯವೇದಿ ಕಾಸರಗೋ ಡು ಜಿಲ್ಲಾ ಅಧ್ಯಕ್ಷ ಎಸ್.ಪಿ.ಶಾಜಿ  ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆ 173 ಪ್ರಕಾರ ಕೇಸು ದಾಖಲಿಸಲಾಗಿದೆ. ಎಪ್ರಿಲ್ 23ರಂದು ಸಂಜೆ 6.30ಕ್ಕೆ ದೂರುಗಾರನಿಗೆ ಲಭಿಸಿದ ಫೇಸ್ ಬುಕ್ ಹೇಳಿಕೆಯನ್ನು ಪುರಾವೆ ಯಾಗಿಸಿ ಕೇಸು ದಾಖಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ …

ನಿದ್ರಿಸುತ್ತಿದ್ದ ತಾಯಿಗೆ ಇರಿತ : ಮಗ ಪೊಲೀಸ್ ಕಸ್ಟಡಿಯಲ್ಲಿ

ಉಪ್ಪಳ:  ನಿದ್ರಿಸುತ್ತಿದ್ದ ತಾಯಿಗೆ ಮಗ ಇರಿದು ಗಾಯಗೊಳಿಸಿದ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಮಣಿಮುಂಡ ಎಂಬಲ್ಲಿ ನಡೆದಿದೆ.  ಶಮೀಮಬಾನು ಎಂಬವರು ಇರಿತದಿಂದ ಗಾಯಗೊಂ ಡಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ.  ಇರಿತದಿಂದ ಮು ಖಕ್ಕೆ ಗಂಭೀರ ಗಾಯಗೊಂಡಿರುವ ಶಮೀಮಬಾನುರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಅನಂತರ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಮಗನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನನ್ನು  ತನಿಖೆಗೊಳಪಡಿಸಿದರೂ ಯಾವುದೇ ಮಾಹಿತಿ ಲಭಿಸಿಲ್ಲ. ಇರಿದು …

ಕುಂಬಳೆ: ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು ಸಮಗ್ರ ತನಿಖೆಗೆ ಒತ್ತಾಯಿಸಿ ಕ್ರಿಯಾ ಸಮಿತಿ ರಂಗಕ್ಕೆ

ಕುಂಬಳೆ: ಭಾರತೀಯ ಜನತಾ ಯುವ ಮೋರ್ಛಾ ಕುಂಬಳೆ ಮಂಡಲ ಉಪಾಧ್ಯಕ್ಷರೂ ಬಂ ಬ್ರಾಣ ಕಲ್ಕುಳದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ರಾಜೇಶ್ (26) ಅವರ ಸಾವಿನ ನಿಗೂಢತೆ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಬೇಡಿಕೆ ಮತ್ತೆ ತೀವ್ರಗೊಂಡಿದೆ. 2023 ಜುಲೈ 10ರಂದು ಮನೆಯಿಂದ ನಾಪತ್ತೆ ಯಾಗಿದ್ದ ರಾಜೇಶ್‌ರ ಮೃತದೇಹ 12ರಂದು  ನೇತ್ರಾವತಿ ಹೊಳೆಯ ಬೆಂಗರೆ ಎಂಬಲ್ಲಿ ಪತ್ತೆಯಾಗಿತ್ತು. ಇದೇ ವೇಳೆ ರಾಜೇಶ್‌ರ ಸಾವಿನ ಕುರಿತು ನಿಗೂಢತೆ ಹುಟ್ಟಿಕೊಂಡಿತ್ತು. ಇದರಿಂದ ರಾಜೇಶ್‌ರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ …

ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಕೇಸು ದಾಖಲು

ಬದಿಯಡ್ಕ:  ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಯುವಕನಿಂದ 1,30,000 ರೂಪಾಯಿ ಪಡೆದು ವಂಚಿಸಿದ ಆರೋಪದಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಇಚ್ಲಂಗೋಡು ನಿವಾಸಿ ಸುಧೀಶ್ ಎಂಬಾತನ ವಿರುದ್ಧ ಕೇಸು ದಾಖಲಿಸ ಲಾಗಿದೆ.  ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ನೀರ್ಚಾಲು ನಿವಾಸಿ ರೋಶನ್ ಎಂಬವರಿಂದ 2023 ಸೆಪ್ಟಂಬರ್ 26ರಂದು ಸುಧೀಶ್ ಹಣ ಪಡೆದು ಕೊಂಡಿರುವುದಾಗಿ ದೂರಲಾಗಿದೆ. ಆದರೆ ಇದುವರೆಗೆ ಉದ್ಯೋಗ ಅಥವಾ ಹಣ ಮರಳಿ ಲಭಿಸದ ಹಿನ್ನೆಲೆಯಲ್ಲಿ  ಈ ಬಗ್ಗೆ  ಬದಿಯಡ್ಕ ಪೊಲೀಸರಿಗೆ ರೋಶನ್ ದೂರು ನೀಡಿದ್ದರು.

ಮನೆಗೆ ಕಿಚ್ಚಿಟ್ಟ ಆರೋಪಿ ಸೆರೆ

ಕಾಸರಗೋಡು: ಪಳ್ಳಿಕ್ಕೆರೆ ಪೂಚಕ್ಕಾಡ್‌ನಲ್ಲಿ ಮನೆಗೆ ಕಿಚ್ಚಿಟ್ಟ ಪ್ರಕರಣದ ಮುಖ್ಯ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪೂಚಕ್ಕಾಡ್ ತೆಕ್ಕುಪುರದ ನಾಸರ್ ಎಂಬಾತ ಬಂಧಿತ ಆರೋಪಿ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಫೆಬ್ರವರಿ ೧೧ರಂದು ರಾತ್ರಿ 1.45ರ ವೇಳೆ  ಪೂಚಕ್ಕಾಡ್‌ನ ಫೈಸಲ್ ಎಂಬವರ ಮನೆಗೆ  ಕಿಚ್ಚಿಡಲಾಗಿತ್ತು. ಬೈಕ್‌ನಲ್ಲಿ ತಲುಪಿದ ತಂಡ ಸಿಟೌಟ್‌ನಲ್ಲಿದ್ದ ಸೋಫಾ ಸೆಟ್‌ಗೆ ಪೆಟ್ರೋಲ್ ಸುರಿದು  ಕಿಚ್ಚಿಟ್ಟಿರುವುದಾಗಿ ದೂರಲಾಗಿದೆ.

ರಿಕ್ಷಾ ಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ರಿಕ್ಷಾ ಚಾಲಕರೊಬ್ಬರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಅಡ್ಕತ್ತಬೈಲು ಕೋಟೆವಳಪ್ಪು ನಿವಾಸಿ  ಕೆ.ಅನಿಲ್ ಕುಮಾರ್ (53) ಮೃತಪಟ್ಟ ವ್ಯಕ್ತಿ. ಇವರು  ಕಾಸರಗೋಡು ನಗರದಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದರು. ನಿನ್ನೆ ಅಪರಾಹ್ನ 3 ಗಂಟೆ ವೇಳೆ ಮನೆ ಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಇವರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕೆ. ಬಾಬು-ದಿ| ಸರೋಜಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುರೇಖಾ, ಮಕ್ಕಳಾದ ಅನುರಾಗ್, ರಂಜು, ಅನಿರುದ್ಧ್, ಸಹೋದರ-ಸಹೋದರಿಯರಾದ  ಸುನಿಲ್, ಸಂತೋಷ್, ವಿನೋದ್, ಸವಿತಾ …