ಉದ್ಯೋಗ ಭರವಸೆಯೊಡ್ಡಿ ಹಣ ಪಡೆದು ವಂಚನೆ: ಕೇಸು ದಾಖಲು

ಬದಿಯಡ್ಕ:  ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಯುವಕನಿಂದ 1,30,000 ರೂಪಾಯಿ ಪಡೆದು ವಂಚಿಸಿದ ಆರೋಪದಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಇಚ್ಲಂಗೋಡು ನಿವಾಸಿ ಸುಧೀಶ್ ಎಂಬಾತನ ವಿರುದ್ಧ ಕೇಸು ದಾಖಲಿಸ ಲಾಗಿದೆ.  ಮಿಲಿಟರಿಯಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ನೀರ್ಚಾಲು ನಿವಾಸಿ ರೋಶನ್ ಎಂಬವರಿಂದ 2023 ಸೆಪ್ಟಂಬರ್ 26ರಂದು ಸುಧೀಶ್ ಹಣ ಪಡೆದು ಕೊಂಡಿರುವುದಾಗಿ ದೂರಲಾಗಿದೆ. ಆದರೆ ಇದುವರೆಗೆ ಉದ್ಯೋಗ ಅಥವಾ ಹಣ ಮರಳಿ ಲಭಿಸದ ಹಿನ್ನೆಲೆಯಲ್ಲಿ  ಈ ಬಗ್ಗೆ  ಬದಿಯಡ್ಕ ಪೊಲೀಸರಿಗೆ ರೋಶನ್ ದೂರು ನೀಡಿದ್ದರು.

RELATED NEWS

You cannot copy contents of this page