ಮಂಜೇಶ್ವರ ಲಾಡ್ಜ್‌ನಲ್ಲಿ ಎಂಡಿಎಂಎ ಬೇಟೆ: ಇಬ್ಬರು ಆರೋಪಿಗಳನ್ನು 3 ದಿನಕ್ಕೆ ಪೊಲೀಸ್ ಕಸ್ಟಡಿಗೆ

ಕಾಸರಗೋಡು: ಮಂಜೇಶ್ವರ ಲಾಡ್ಜ್‌ನಿಂದ 013.28 ಗ್ರಾಂ ಎಂಡಿಎಂಎ ಹಾಗೂ 7,22,070 ರೂಪಾಯಿ ವಶಪಡಿಸಿದ ಪ್ರಕರಣದ ಆರೋಪಿಗಳನ್ನು ಮೂರು ದಿನಗಳ ಕಾಲಕ್ಕೆ ಪೊಲೀಸ್ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಕುಂಜತ್ತೂರು ಮಾಡ ಖಲೀಲ್ ಮಂಜಿಲ್‌ನ ಮುಹಮ್ಮದ್ ಅನ್ವರ್ (36), ಬೆಳ್ತಂಗಡಿ ಕಾಳಿಯ ಗ್ರಾಮ ನಿವಾಸಿ ಮುಹಮ್ಮದ್ ಮನ್ಸೂರ್ (29) ಎಂಬಿವರನ್ನು ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಇ. ಅನೂಬ್ ಕುಮಾರ್‌ರ ಕಸ್ಟಡಿಗೆ ಬಿಡಲಾಗಿದೆ. ಮಾರ್ಚ್ ೨೦ರಂದು ಬೆಳಿಗ್ಗೆ 10.50೦ಕ್ಕೆ ಈ ಇಬ್ಬರನ್ನು ಲಾಡ್ಜ್‌ನಿಂದ ಸೆರೆ ಹಿಡಿಯಲಾಗಿತ್ತು.  ಇವರನ್ನು ತನಿಖೆಗೊಳಪಡಿಸಿದಾಗ ಮಾದಕ ವಸ್ತು ವ್ಯವಹಾರಕ್ಕೆ …

ವಲಸೆ ಕಾರ್ಮಿಕನ ಕೊಲೆ:  ಬಂಧಿತ ಆರೋಪಿ ಕೊಲೆಗೀಡಾದ ವ್ಯಕ್ತಿಯ ಬಾವ, ನ್ಯಾಯಾಂಗ ಬಂಧನ

ಕಾಸರಗೋಡು: ನಗರದ ಆನೆಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ಕಳೆದ ಭಾನುವಾರ ರಾತ್ರಿ ವಲಸೆ ಕಾರ್ಮಿಕ ಪಶ್ಚಿಮ ಬಂಗಾಳ ನಿವಾಸಿ ಸುಶಾಂತ್ ರಾಯ್ (28)ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಪಶ್ಚಿಮ ಬಂಗಾಳ ಜೈಪಾಲ್‌ಗುರಿ ನಿವಾಸಿ ಬೋಲ್‌ಬೆನ್‌ರಾಯ್ ಕೊಕೊವಪರ ಎಂಬವರ ಪುತ್ರ ಸಂಜಿತ್ ರಾಯ್ (35) ಕೊಲೆಗೀಡಾದ ವ್ಯಕ್ತಿಯ ಸಹೋದರಿಯ ಪತಿಯಾಗಿದ್ದಾನೆ. ಬಂಧಿತನನ್ನು ಪೊಲೀಸರು ಕಾಸರ ಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1)ದಲ್ಲಿ ಹಾಜರುಪಡಿ ಸಿದ್ದಾರೆ. ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಈ ವಲಸೆ …

ಲಾರಿಯ ಬದಿಗೆ ಕಾರು ಢಿಕ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದ ಡೀಸೆಲ್

ಉಪ್ಪಳ: ನೂತನ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರೊಂದು ಲಾರಿಯ ಡೀಸೆಲ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿ ಹೋಗಿದೆ. ನಿನ್ನೆ ರಾತ್ರಿ 9.30ರ ವೇಳೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಎರಡೂ ವಾಹನಗಳು ಕಾಸರಗೋಡು ಭಾಗದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದವು. ಉಪ್ಪಳದಲ್ಲಿ ಫ್ಲೈಓವರ್ ದಾಟಿ ಮುಂದೆ ಸಾಗುತ್ತಿದ್ದಂತೆ ಲಾರಿಯನ್ನು ಹಿಂದಿಕ್ಕಿ ಮುಂದೆ ಸಾಗಲೆತ್ನಿಸಿದ ಕಾರು ಲಾರಿಯ ಬದಿಯಲ್ಲಿರುವ ಡೀಸೆಲ್ ಟ್ಯಾಂಕ್‌ಗೆ ಬಡಿದಿದೆ. ಇದರಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಲಾರಿಯಿಂದ ಡೀಸೆಲ್ ಪೂರ್ಣವಾಗಿ …

ಮಡಲಿನ ಚಪ್ಪರಕ್ಕೆ ಬೆಂಕಿ ತಗಲಿ ಎರಡು ಬೈಕ್‌ಗಳು ಉರಿದು ನಾಶ

ಮಾನ್ಯ: ಮನೆಗೆ ಹೊಂದಿ ಕೊಂಡು ಮಡಲಿನಿಂದ ನಿರ್ಮಿ ಸಿದ ಚಪ್ಪರಕ್ಕೆ ಬೆಂಕಿ ತಗಲಿದ ಪರಿಣಾಮ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಬೈಕ್‌ಗಳು ಉರಿದು ನಾಶಗೊಂಡ ಘಟನೆ ಮಾನ್ಯ ಬಳಿಯ ಮುಂಡೋಡಿನಲ್ಲಿ ಸಂಭವಿಸಿದೆ. ಮುಂಡೋಡಿನ ನಾರಾಯಣ ನಾಯ್ಕ್‌ರ ಕಾಂಕ್ರೀಟ್ ಮನೆಯ ಛಾವಣಿಗೆ ಹೊಂದಿಕೊಂಡು ಮಡಲಿನ ಚಪ್ಪರ ನಿರ್ಮಿಸಲಾಗಿತ್ತು. ಚಪ್ಪರಕ್ಕೆ ನಿನ್ನೆ ಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದು, ಈ ವೇಳೆ ಚಪ್ಪರದ ಅಡಿಯಲ್ಲಿ ನಿಲ್ಲಿಸಲಾಗಿದ್ದ ಸ್ಪ್ಲೆಂಡರ್, ಕೆಟಿಎಂ 200 ಎಂಬೀ ಬೈಕ್‌ಗಳಿಗೆ ಬೆಂಕಿ ತಗಲಿದೆ. ವಿಷಯ ತಿಳಿದು ತಲುಪಿದ ಕಾಸರಗೋಡು ಅಗ್ನಿಶಾಮಕ ದಳದ …

ಆರು ತಿಂಗಳ ಹಿಂದೆ ನಾಪತ್ತೆಯಾದ ವ್ಯಕ್ತಿ ಮಾಹಿತಿ ಅಲಭ್ಯ: ಮತ್ತೆ ದೂರು

ಬದಿಯಡ್ಕ: ಆರು ತಿಂಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯನ್ನು ಇದುವರೆಗೆ ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಮನೆಯವರು ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಬದಿಯಡ್ಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬದಿಯಡ್ಕ ಬಳಿಯ ಬಾಂಜತ್ತಡ್ಕ ನಿವಾಸಿ ಸುರೇಂದ್ರನ್ (60) ಎಂಬವರು ನಾಪತ್ತೆಯಾದ ವ್ಯಕ್ತಿ. 2024 ಅಕ್ಟೋಬರ್ 13ರಂದು ಬೆಳಿಗ್ಗೆ 9 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದರೆನ್ನಲಾಗಿದೆ. ಇವರು ಮನೆಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ಇವರು ನಾಪತ್ತೆಯಾದ ಬಗ್ಗೆ ಅಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರೆನ್ನಲಾಗಿದೆ. ಆದರೆ ತನಿಖೆಯಲ್ಲಿ …

ಗೃಹಿಣಿ ಕುಸಿದು ಬಿದ್ದು ಮೃತ್ಯು

ಮುಳ್ಳೇರಿಯ: ಗೃಹಿಣಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನೆಟ್ಟಣಿಗೆ ಬಳಿಯ ಬಜಪಟ್ರಮೂಲೆ ನಿವಾಸಿ ದಿ| ರಾಮಚಂದ್ರ ಹೆಗ್ಡೆಯವರ ಪತ್ನಿ ಪಾರ್ವತಿ (62) ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಇವರು ಮನೆ ಅಂಗಳದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊ ಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ ಸಾವು ಸಂಭವಿಸಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪುತ್ರ ಹರೀಶ್, ಸೊಸೆ ಹರಿಣಾಕ್ಷಿ, ಸಹೋ ದರರಾದ ನಾರಾಯಣ, ಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್

ಕಾಸರಗೋಡು: ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಏರ್ಪಡಿಸಲಾಗುತ್ತಿದೆ. ಅಗತ್ಯದಷ್ಟು ವಿದ್ಯುತ್ ಲಭಿಸದೆ ಇರುವ ಹಾಗೂ ಅತೀ ಹೆಚ್ಚು ವಿದ್ಯುತ್ ಉಪಯೋಗಿಸುವ ಸಮಯ ನೋಡಿ ವಿದ್ಯುನ್ಮಂಡಳಿ ಕನಿಷ್ಠ 1 ನಿಮಿಷದಿಂದ ಅರ್ಧ ತಾಸಿನ ತನಕ ಫೀಡರ್ ಆಫ್ ಮಾಡಿ ಆ ಮೂಲಕ  ಈಗ ಅಘೋಷಿತ ಲೋಡ್ ಶೆಡ್ಡಿಂಗ್ ಜ್ಯಾರಿಗೊಳಿಸತೊಡಗಿದೆ.  ವಿದ್ಯುತ್ ಪೂರೈಕೆ ಮೊಟಕು ಗೊಳ್ಳುವ ಸಂದ ರ್ಭಗಳಲ್ಲಿ ಇಳಿಕೆ ದಾರರು ಸಂಬಂಧ ಪಟ್ಟ ವಿದ್ಯುತ್ ಸೆಕ್ಷನ್ ಕಚೇರಿಗಳಿಗೆ ಕರೆದು ಹೇಳುತ್ತಿರುವ ವೇಳೆ, ಅವರಿಗೆ ಅಲ್ಲಿನ ಸಿಬ್ಬಂದಿಗಳು ಇಂತಹ ಅಘೋಷಿತ …

ಭಯೋತ್ಪಾದಕ ದಾಳಿ: ಮಂಜೇಶ್ವರದಲ್ಲಿ ಬ್ಲೋಕ್ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂ ದ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಮೃತಪಟ್ಟವರಿಗೆ   ಹೊಸಂಗಡಿ ಪೇಟೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಕೈಲಾಗದೆ ದಿವಾಳಿಯಾದ ಪಾಕಿಸ್ತಾನ ಸರಕಾರ ಕೂಲಿ ಸಿಪಾಯಿಗಳನ್ನು ತನ್ನ ಚಾಳಿ ಮುಂದುವರಿಸಿದ್ದು ಭಾರತದ ನಾಗರಿಕರ ಬಲಿದಾನಕ್ಕೆ ಪಾಕಿಸ್ತಾನ ಬೆಲೆ ತೆರಬೇಕಾದೀತು ಎಂದು ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಡಿಎಂಕೆ ನುಡಿದರು. ಪಕ್ಷದ ಚಂದ್ರಶೇಖರ ಶೆಟ್ಟಿ ಬೆಜ್ಜ, ಖಲೀಲ್ ಬಜಾಲ್, ಫಾರೂಕ್ ಶಿರಿಯ, ನಾಗೇಶ್ ಮಂಜೇಶ್ವರ, ಫ್ರಾನ್ಸಿಸ್ ಡಿ’ಸೋಜಾ, ಹನೀಫ್ ಪಡಿಂಞಾರ್, …

ಭಯೋತ್ಪಾದಕ ದಾಳಿ ಖಂಡಿಸಿ ಬದಿಯಡ್ಕದಲ್ಲಿ ವಿ.ಹಿಂ.ಪ ಪ್ರತಿಭಟನೆ

ಬದಿಯಡ್ಕ: ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ನಡೆಸಿದ ಉಗ್ರಗಾಮಿಗಳ ವಿರುದ್ಧ ವಿಶ್ವಹಿಂದೂ ಪರಿಷತ್, ಭಜರಂಗದಳ ಬದಿಯಡ್ಕ ಇದರ ನೇತೃತ್ವದಲ್ಲಿ ಪ್ರತಿ ಭಟನಾ ಮೆರವಣಿಗೆ ನಡೆಸಲಾಯಿತು. ಬದಿಯಡ್ಕ ಗಣೇಶ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಹರೀಶ್ ನಾರಂಪಾಡಿ ಮಾತನಾಡಿ ಭಯೋ ತ್ಪಾದಕ ಸಂಘಟನೆಗಳ ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕು. ಪಶ್ಚಿಮ ಬಂಗಾಲ,  ಕಾಶ್ಮೀರದಲ್ಲಿ ಈಗ ಕಂಡುಬರುತ್ತಿರುವ ದಾಳಿ ನಾಳೆ ನಮ್ಮ ಕಾಲಬುಡಕ್ಕೂ ಬರಲು ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ  ಭಾರತದ ಮುಸ್ಲಿಂ ಸಮುದಾಯ ದೇಶದ ಜನರ ರಕ್ಷಣೆಗಾಗಿ …

ವಕ್ಫ್ ತಿದ್ದುಪಡಿ ವಿರುದ್ಧ ಸಮಸ್ತ ಕೇರಳ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಶನ್ ಪ್ರತಿಭಟನೆ

ಉಪ್ಪಳ: ಕೇಂದ್ರ ಸರಕಾರ ಮಂಡಿಸಿದ ವಕ್ಫ್ ಕಾನೂನು ತಿದ್ದುಪಡಿ ಹಿಂತೆಗೆಯಬೇಕೆಂದು ಆಗ್ರಹಿಸಿ ಸಮಸ್ತ ಕೇರಳ ಮದ್ರಸ ಮೆನೇಜ್‌ಮೆಂಟ್‌ಅಸೋಸಿಯೇಶನ್ ಜಿಲ್ಲಾ ಸಮಿತಿಯ ಆಹ್ವಾನ ಪ್ರಕಾರ ಉಪ್ಪಳ ರೇಂಜ್ ಕಮಿಟಿ ನೇತೃತ್ವದಲ್ಲಿ  ಉಪ್ಪಳ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮದ್ರಸ ಮೆನೇಜ್‌ಮೆಂಟ್ ಉಪ್ಪಳ ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿ ಆಕ್ರಮಣವನ್ನು ಸಭೆಯಲ್ಲಿ ಖಂಡಿಸಲಾಯಿತು. ಮೌನ ಪ್ರಾರ್ಥನೆ ನಡೆಸಲಾಯಿತು. ಪೋಪ್‌ರ ನಿಧನಕ್ಕೆ …