ಲಾರಿಯ ಬದಿಗೆ ಕಾರು ಢಿಕ್ಕಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದ ಡೀಸೆಲ್

ಉಪ್ಪಳ: ನೂತನ ರಾಷ್ಟ್ರೀಯ ಹೆದ್ದಾರಿ ಮೇಲೆ ಕಾರೊಂದು ಲಾರಿಯ ಡೀಸೆಲ್ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿ ಹೋಗಿದೆ. ನಿನ್ನೆ ರಾತ್ರಿ 9.30ರ ವೇಳೆ ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಎರಡೂ ವಾಹನಗಳು ಕಾಸರಗೋಡು ಭಾಗದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದವು. ಉಪ್ಪಳದಲ್ಲಿ ಫ್ಲೈಓವರ್ ದಾಟಿ ಮುಂದೆ ಸಾಗುತ್ತಿದ್ದಂತೆ ಲಾರಿಯನ್ನು ಹಿಂದಿಕ್ಕಿ ಮುಂದೆ ಸಾಗಲೆತ್ನಿಸಿದ ಕಾರು ಲಾರಿಯ ಬದಿಯಲ್ಲಿರುವ ಡೀಸೆಲ್ ಟ್ಯಾಂಕ್‌ಗೆ ಬಡಿದಿದೆ. ಇದರಿಂದ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಲಾರಿಯಿಂದ ಡೀಸೆಲ್ ಪೂರ್ಣವಾಗಿ ಹರಿದು ಹೆದ್ದಾರಿಯಲ್ಲಿ ತುಂಬಿಕೊಂಡಿತು. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ನೀರು ಹಾಕಿ ರಸ್ತೆಯನ್ನು ಶುಚಿಗೊಳಿಸಿದರು.

RELATED NEWS

You cannot copy contents of this page