ಪುತ್ತಿಗೆ ಪಂಚಾಯತ್: ನೂತನ ಕಾಂಕ್ರೀಟ್ ರಸ್ತೆ ನಾಡಿಗೆ ಸಮರ್ಪಣೆ

ಪುತ್ತಿಗೆ: ಪಂಚಾಯತ್ ವ್ಯಾಪ್ತಿಯ ಬಾಡೂರು ನಾಲ್ಕನೇ ವಾರ್ಡ್‌ಗೊಳ ಪಟ್ಟ ಬಾಡೂರು ಕಿದಾರು ನೂತನ ಕಾಂಕ್ರೀಟ್ ರಸ್ತೆಯನ್ನು ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿ ಸಿದರು.  ವಾರ್ಡ್ ಪ್ರತಿನಿಧಿ ಅನಿತಾ ಎಂ. ಅಧ್ಯಕ್ಷತೆ ವಹಿಸಿದರು. ಕೆ. ನಾರಾಯಣ ಬಾಡೂರು ಸ್ವಾಗತಿಸಿದರು. ಬಳಿಕ ರಾಮಕೃಷ್ಣ ಶೆಟ್ಟಿ ಕಿದಾರು ಸ್ಥಳೀಯರ ಪರವಾಗಿ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಹಾಗೂ ಸದಸ್ಯೆ ಅನಿತಾ ಎಂ.ರನ್ನು ಗೌರವಿಸಿದರು.

ಹರಿಜಾಲ್ ಶ್ರೀ ಧೂಮಾವತಿ ದೈವಸ್ಥಾನದಲ್ಲ್ಲಿ ನೇಮೋತ್ಸವ ನಾಳೆಯಿಂದ

ಮೊಗ್ರಾಲ್ ಪುತ್ತೂರು: ಬಳ್ಳೂರು ಕಲ್ಲಂಗೈ ಹರಿಜಾಲ್ ಶ್ರೀ ಧೂಮಾ ವತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಾಳೆಯಿಂದ ನಡೆಯಲಿದೆ.ನಾಳೆ ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಮುಡಿಪುಶುದ್ಧಿ, 9ಕ್ಕೆ ಭಜನೆ, ಮಧ್ಯಾಹ್ನ 1 ಗಂಟೆಗೆ ಶ್ರೀ ಧೂಮಾವತಿ ದೈವದ ತಂಬಿಲ ಸೇವೆ, ರಾತ್ರಿ 7ಕ್ಕೆ ಭಂಡಾರ ತೆಗೆಯುವುದು, 8ಕ್ಕೆ ಶ್ರೀ ಗುಳಿಗ ಹಾಗೂ ಉಪದೈವ ಗಳ ಕೋಲ, 9ಕ್ಕೆ ಶ್ರೀ ಕೊರತಿಯ ಮ್ಮನ ಕೋಲ ಬಳಿಕ ಅನ್ನಸಂತ ರ್ಪಣೆ, 25ರಂದು ಬೆಳಿಗ್ಗೆ 11ಕ್ಕೆ ಶ್ರೀ ಧೂಮಾವತಿ ದೈವದ ನೇಮ, ಮಧ್ಯಾಹ್ನ …

ವಿದೇಶ ಉದ್ಯೋಗ ವಂಚನೆ: ಕಾನೂನು ನಿರ್ಮಾಣಕ್ಕೆ ಮುಂದಾದ ಕೇರಳ

ತಿರುವನಂತಪುರ: ವಿದೇಶಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಬಳಿಕ ವಂಚಿಸುವ ನೇಮಕಾತಿ (ರಿಕ್ರೂಟ್‌ಮೆಂಟ್) ಸಂಸ್ಥೆಗಳನ್ನು ನಿಯಂತ್ರಿಸಲು ಹೊಸ ಕಾನೂನಿಗೆ ರೂಪು ನೀಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಸರಕಾರದ ಲೈಸನ್ಸ್ ಇಲ್ಲದೆ ಕೇರಳದಲ್ಲಿ ಸಹಸ್ರಾರು ನೇಮಕಾತಿ ಸಂಸ್ಥೆಗಳು ಕಾರ್ಯವೆಸಗುತ್ತಿರು ವುದಾಗಿ ಪತ್ತೆಹಚ್ಚಲಾಗಿದೆ. ಇದರ ಜತೆಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಳಿಕ ವಂಚಿಸುವ ದೂರು ಗಳೂ ಇನ್ನೊಂದೆಡೆ ಪ್ರತೀ ವರ್ಷ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಹೊಸ ಕಾನೂನಿಗೆ ರೂಪು ನೀಡಲು ಸರಕಾರ ತೀರ್ಮಾನಿಸಿದೆ. ಇದರಂತೆ ಅನಿವಾಸಿ ಕಲ್ಯಾಣ ಸಂಸ್ಥೆಯಾದ ನೋರ್ಕಾ …

ಬೇಸಿಗೆ ಬೇಗೆ: ಬೇಡಿಕೆ ಹೆಚ್ಚಿಸಿಕೊಂಡ ಸೀಯಾಳ: ಬೆಲೆಯಲ್ಲೂ ಏರಿಕೆ

ಕಾಸರಗೋಡು: ಬೇಸಿಗೆ ಕಾಲದ ಉಷ್ಣತೆಯಿಂದ ಪಾರಾಗಲು ಜನರು ವಿವಿಧ ರೀತಿಯ ಪಾನೀಯಗಳನ್ನು ಸೇವಿಸುತ್ತಿದ್ದಾರೆ. ತಂಪು ಪಾನೀಯ ಗಳೂ  ಜನರನ್ನು ಆಕರ್ಶಿಸುತ್ತಿರುವುದು ಕಂಡುಬರುತ್ತಿದೆ.  ಅದರ ಜೊತೆಗೆ ಶುದ್ಧವಾದ ಸೀಯಾಳ ನೀರನ್ನು ಕುಡಿಯಲು ಹೆಚ್ಚಿನವರು ಮುಂದಾಗುತ್ತಿದ್ದು ಇದರಿಂದ ಸೀಯಾಳಕ್ಕೆ ಬೇಡಿಕೆ ಹೆಚ್ಚಿದೆ. ಬೇಡಿಕೆ ಹೆಚ್ಚಿದಂತೆ  ಬೆಲೆಯೇರಿಕೆ ಕಂಡುಬರುತ್ತಿದೆ. ಇತ್ತೀಚೆಗೆವರೆಗೆ 45ರಿಂದ 50 ರೂ. ವರೆಗಿದ್ದ ಸೀಯಾಳಕ್ಕೆ ಇದೀಗ ಕೆಲವೆಡೆ 55ರಿಂದ 60ರೂಪಾಯಿ ಪಡೆಯು ವವರಾಗಿದ್ದಾರೆ. ತೆಂಗಿನಕಾಯಿಗೆ ಬೆಲೆಯೆರಿಕೆ ಯಾಗಿದ್ದು ಅದರ ಫಲವಾಗಿ ಸೀ ಯಾಳದ ಬೆಲೆಯೇರಿಕೆಯಾಗಿದೆ ಯೆಂದು ಹೇಳಲಾಗುತ್ತಿದೆ. ಆದರೆ …

ಯುಡಿಎಫ್ ಶಾಸಕರು ತಪ್ಪು ಭಾವನೆ ಮೂಡಿಸುತ್ತಿದ್ದಾರೆ- ಎಡರಂಗ

ಕಾಸರಗೋಡು: ಎಡರಂಗದ ಆಡಳಿತ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜ್ಯಾರಿಗೊಳಿಸಲಾಗುತ್ತಿಲ್ಲವೆಂಬ ಯುಡಿಎಫ್ ಶಾಸಕರ ನಿಲುವಿನಲ್ಲಿ  ಸತ್ಯಾಂಶವಿಲ್ಲವೆಂದು ಎಡರಂಗ ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ಹೇಳಿದ್ದಾರೆ. ಎಡರಂಗ ಸರಕಾರ ಜ್ಯಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳನ್ನು ಕಳಪೆ ರೀತಿಯಲ್ಲಿ ನೋಡುವುದು ಪ್ರಜಾಪ್ರಭುತ್ವ ರೀತಿಗೆ ಹೊಂದಿಕೊಳ್ಳುವಂತದ್ದಲ್ಲ. ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಹಾಗೂ ಪೆರಿಯದಲ್ಲಿ ಏರ್‌ಸ್ಟ್ರಿಪ್ ಇತ್ಯಾದಿ ಸಮಸ್ಯೆಗಳು ಪರಿಹರಿಸಬೇಕಾದ ವಿಷಯಗಳಾಗಿವೆ. ಅದನ್ನು ಮುಂದಿರಿಸಿಕೊಂಡು ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಅಭಿವೃದ್ಧಿ ಯೋಜನೆಗಳನ್ನು ಅರಿಯದಂತೆ ಯುಡಿಎಫ್ ಶಾಸಕರು ನಟಿಸುತ್ತಿರುವ ಯತ್ನಗಳನ್ನು …

ಕೆಎಎಸ್ ಪರೀಕ್ಷೆ: ಅರ್ಜಿ ಸಲ್ಲಿಕೆಯಲ್ಲಿ 3 ಲಕ್ಷದಷ್ಟು ಕುಸಿತ; ಪ್ರಾಥಮಿಕ ಪರೀಕ್ಷೆ ಜೂನ್ 14ರಂದು

ಕಾಸರಗೋಡು: ಇಂಡಿಯನ್ ಅಡ್ಮಿ ನಿಸ್ಟ್ರೇಟಿವ್ ಸರ್ವೀ ಸ್ (ಐಎಎಸ್) ಮಾದರಿಯಲ್ಲಿ ಕೇರಳ ಸರಕಾರ ಆರಂಭಿಸಿರುವ ಕೇರಳ ಅಡ್ಮಿನಿಸ್ಟ್ರೆ ಟಿವ್ ಸರ್ವೀಸ್ (ಕೆಎಎಸ್) ಪರೀಕ್ಷೆಗಾಗಿ ಈ ಬಾರಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಮೂರು ಲಕ್ಷದಷ್ಟು ಕುಸಿತ ಉಂಟಾಗಿದೆ.ಈ ಪರೀಕ್ಷೆಗಾಗಿ 2019ರಲ್ಲಿ ಹೊರಡಿಸಲಾದ ಮೊದಲು ಅಧಿಸೂಚನೆ ಪ್ರಕಾರ ರಾಜ್ಯದಲ್ಲಿ ಒಟ್ಟಾರೆಯಾಗಿ 5,47,543 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೇ ಪರೀಕ್ಷೆಗಾಗಿ ಈ ಸಲ ಕೇವಲ 2,15,942 ಮಂದಿ ಮಾತ್ರವೇ ಅರ್ಜಿ ಸಲ್ಲಿಸಿದ್ದಾರೆ. ಅಂದರೆ 2019ರೊಂದಿಗೆ ಹೋಲಿಸಿದಾಗ ಈ ಬಾರಿ ಸಲ್ಲಿಸಲಾಗಿರುವ …

ಕುಂಟಾರಿನಲ್ಲಿ ವಾಹನ ಅಪಘಾತ: ಯುವಕ ದಾರುಣ ಮೃತ್ಯು

ಮುಳ್ಳೇರಿಯ: ಕುಂಟಾರಿನಲ್ಲಿ ನಿನ್ನೆ ಸಂಜೆ ವಾಹನ ಅಪಘಾತದಲ್ಲಿ ಯುವಕನೋರ್ವ  ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಅಡೂರು ಕೊಟ್ಯಾಡಿಯ ಶೇಷಪ್ಪ ಎಂಬವರ ಪುತ್ರ ಯೋಗೀಶ್ (19) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ 5.30ರ ವೇಳೆ ಬೈಕ್ ಹಾಗೂ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಢಿಕ್ಕಿಯಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಯೋಗೀಶ್‌ರನ್ನು ಕೂಡಲೇ ಕಾಸರಗೋಡಿನ ಖಾಸಗಿ  ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ,ತಾಯಿ ಶಾರದ, ಸಹೋದರ ಶಿವಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತ ಬಗ್ಗೆ …

ಕೂಡ್ಲುನಲ್ಲಿ ಮನೆಯಿಂದ ನಗ-ನಗದು ಕಳವು

ಕಾಸರಗೋಡು: ಕೂಡ್ಲು ಶಾಸ್ತಾನಗರದಲ್ಲಿ ಮನೆಯಿಂದ ಹಣ ಹಾಗೂ ಚಿನ್ನಾಭರಣ ಕಳವು ನಡೆದ ಬಗ್ಗೆ ದೂರಲಾಗಿದೆ. ಶಾಸ್ತಾನಗರದ ಇಲ್ಯಾಸ್ ಮಂಜಿಲ್‌ನ ನಬೀಸ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಆದಿತ್ಯವಾರ ಸಂಜೆ 6 ಗಂಟೆಯಿಂದ ಸೋಮವಾರ ಸಂಜೆ 5.30೦ರ ಮಧ್ಯೆ ಕಳವು ನಡೆದಿದೆ. ಮನೆಯ ಅಡುಗೆ ಕೋಣೆ ಭಾಗದ ಬಾಗಿಲು ಮುರಿದು ಕಳ್ಳರು  ಒಳಗೆ ನುಗ್ಗಿದ್ದಾರೆ. ಬೆಡ್‌ರೂಂ ಕಪಾಟಿನ ಬೀಗ ಮುರಿದು ಒಂದು ಪವನ್ ಚಿನ್ನಾಭರಣ ಹಾಗೂ 22,000 ರೂಪಾಯಿ ಕಳವು ನಡೆಸಲಾಗಿದೆಯೆಂದು ದೂರಲಾಗಿದೆ.

ಚಹಾ ತಯಾರಿಸಿ ನೀಡಿಲ್ಲ: ತಂದೆಯಿಂದ ಅಪ್ರಾಪ್ತೆ ಪುತ್ರಿಗೆ ಹಲ್ಲೆ: ಕೇಸು ದಾಖಲು

ಉಪ್ಪಳ: ಚಹಾ ಮಾಡಿಕೊಡಲಿ ಲ್ಲವೆಂದು ೧೫ರ ಹರೆಯದ ಪುತ್ರಿಗೆ ಕೂದಲಲ್ಲಿ ಹಿಡಿದು ಕೆನ್ನೆಗೆ ಬಾರಿಸಿದ ಘಟನೆಯಲ್ಲಿ ತಂದೆ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಯಾರು ಬೆರಿಪದವು ನಿವಾಸಿ ಬಾಲಕಿಯ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಕರ ಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ಮಕ್ಕಳನ್ನು ಸಂರಕ್ಷಿಸಬೇಕಾದ ತಂದೆ ಇದಕ್ಕೂ ಮೊದಲು ಇದೇ ರೀತಿಯಲ್ಲಿ ಪುತ್ರಿಯ ಕೆನ್ನೆಗೆ ಹೊಡೆದು ಗಾಯಗೊಳಿಸಿರುವುದಾಗಿ ಮಂಜೇಶ್ವರ ಪೊಲೀಸರು ದಾಖ ಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ.

ತಲೆಗೆ ಏಟು ಬಿದ್ದಿರುವುದೇ ವಲಸೆ ಕಾರ್ಮಿಕನ ಸಾವಿಗೆ ಕಾರಣ: ನಾಲ್ವರ ತೀವ್ರ ವಿಚಾರಣೆ

ಕಾಸರಗೋಡು: ನಗರದ ಆನೆ ಬಾಗಿಲಿನಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿರುವ ಕ್ವಾರ್ಟರ್ಸ್‌ನಲ್ಲಿ ನಿನ್ನೆ ಬೆಳಿಗ್ಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ವಲಸೆ ಕಾರ್ಮಿಕ ಪಶ್ಚಿಮ ಬಂಗಾಲ ಬರೋಘರಿಯಾ ಜಿಲ್ ಫೈಗುರಿ, ಭಿಮ್ಚಿಯಾಬಾದ್ ಫರಿಯಾ ನಿವಾಸಿ  ಸುಭಾಷ್ ರಾಯ್ ಎಂಬವರ ಪುತ್ರ ಸುಶಾಂತ್ ರಾಯ್ (28)ನ ಸಾವಿಗೆ ತಲೆಗೆ ಬಲವಾದ ಏಟು ಬಿದ್ದಿರುವುದೇ ಕಾರಣವೆಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸುಶಾಂತ್ ರಾಯ್‌ನ  ಮೃತ ದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ  ನಿನ್ನೆ ಮರಣೋತ್ತರ ಪರೀಕ್ಷೆಗೊಳಪಡಿ …