ಚಹಾ ತಯಾರಿಸಿ ನೀಡಿಲ್ಲ: ತಂದೆಯಿಂದ ಅಪ್ರಾಪ್ತೆ ಪುತ್ರಿಗೆ ಹಲ್ಲೆ: ಕೇಸು ದಾಖಲು

ಉಪ್ಪಳ: ಚಹಾ ಮಾಡಿಕೊಡಲಿ ಲ್ಲವೆಂದು ೧೫ರ ಹರೆಯದ ಪುತ್ರಿಗೆ ಕೂದಲಲ್ಲಿ ಹಿಡಿದು ಕೆನ್ನೆಗೆ ಬಾರಿಸಿದ ಘಟನೆಯಲ್ಲಿ ತಂದೆ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಯಾರು ಬೆರಿಪದವು ನಿವಾಸಿ ಬಾಲಕಿಯ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಕರ ಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ಮಕ್ಕಳನ್ನು ಸಂರಕ್ಷಿಸಬೇಕಾದ ತಂದೆ ಇದಕ್ಕೂ ಮೊದಲು ಇದೇ ರೀತಿಯಲ್ಲಿ ಪುತ್ರಿಯ ಕೆನ್ನೆಗೆ ಹೊಡೆದು ಗಾಯಗೊಳಿಸಿರುವುದಾಗಿ ಮಂಜೇಶ್ವರ ಪೊಲೀಸರು ದಾಖ ಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page