ಕೊಮ್ಮಂಗಳದಲ್ಲಿ ಸೋಲಾರ್ ವಿದ್ಯುತ್ ಸಾಕಷ್ಟಿದೆ: ಸ್ಥಳೀಯರಿಗೆ ಮಾತ್ರ ವೋಲ್ಟೇಜ್ ಸಮಸ್ಯೆ

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕೊಮ್ಮಂಗಳ ಸೋಲಾರ್ ವಿದ್ಯುತ್ ಉತ್ಪಾದನಾ ಪ್ರದೇಶದ ಪರಿಸರದಲ್ಲೇ ವಿದ್ಯುತ್ ಸಮಸ್ಯೆಯಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿ ದ್ದಾರೆ. ಹಲವು ವರ್ಷಗಳಿಂದ ಇಲ್ಲಿ ವೋಲ್ಟೇಜ್ ಸಮಸ್ಯೆ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಸೋಲಾರ್ ಮೂಲಕ ಭಾರೀ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾದರೂ ಈ ಪರಿಸರದವರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಮ್ಮಂಗಳ ಸೋಲಾರ್ ಪ್ಲಾಂಟ್ ಸಮೀಪದಲ್ಲಿರುವ ಟ್ರಾನ್ಸ್‌ಫಾರ್ಮರ್‌ನಿಂದ ವೋಲ್ಟೇಜ್ ಸಮಸ್ಯೆ ಕಂಡು ಬರುತ್ತಿದೆ. ಕೊಮ್ಮಂಗಳ, ಕುರಿಯ, ಕೊರತಿಪಾರೆ, ಪಾರೆಕೋಡಿ ಮೊದಲಾದ ಪ್ರದೇಶಗಳ ಸುಮಾರು 200ರಷ್ಟು …

ಎನ್‌ವೈಎಲ್ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಬೇಕಲ್ ನಿಧನ

ಕಾಸರಗೋಡು: ಎನ್‌ವೈಎಲ್ ಜಿಲ್ಲಾ ಉಪಾಧ್ಯಕ್ಷ ರಾಶಿದ್ ಬೇಕಲ್ (43) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಕಾಞಂಗಾಡ್‌ನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಬೇಕಲ ನಿವಾಸಿಯಾದ ರಾಶಿದ್ ಪೆರಿಯಾಟಡ್ಕದಲ್ಲಿ ವಾಸಿಸುತ್ತಿದ್ದರು. ಫುಟ್ಭಾಲ್ ಟೂರ್ನಮೆಂಟ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ಇವರು ಕ್ಷೇಮ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದರು. ದಿ| ಕೆ. ಅಬೂಬಕರ್-ನಫೀಸ ದಂಪತಿಯ ಪುತ್ರನಾದ ಮೃತರು ಪತ್ನಿ ರಂಸೀನ, ಮಕ್ಕಳಾದ ಹಂಸ, ರಯಾನ್, ರಾಸಿ,ಸಹೋದರ-ಸಹೋದರಿಯರಾದ ದಾವೂದ್, ಹಾಶಿಂ, ಶಂಸುದ್ದೀನ್, ಅಶ್ರಫ್, ಸುಲೈಖ, ಬದ್ರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಡಿಫಿ ಫುಟ್ಬಾಲ್ ಪಂದ್ಯಾಟ: ಲಾಂಛನ ಬಿಡುಗಡೆ

ಮಂಜೇಶ್ವರ:  ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ಮೇ 4 ರಿಂದ ಉಪ್ಪಳದಲ್ಲಿ ನಡೆಸುವ ಅಖಿಲ ಭಾರತೀಯ ಹೊನಲು ಬೆಳಕಿನ ಸೆವನ್ಸ್ ಫುಟ್ಬಾಲ್ ಪಂದ್ಯಾಟದ ಲೋಗೋ ಬಿಡುಗಡೆ ಕಾಸರಗೋಡು ಎಕೆಜಿ ಮಂದಿರದಲ್ಲಿ ನಡೆಯಿತು. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ ಗೋವಿಂದನ್ ಮಾಸ್ಟರ್ ಬಿಡುಗಡೆಗೊಳಿಸಿದರು. ಕೆ.ಪಿ ಸತೀಶ್ಚಂದ್ರನ್, ರಜೀಶ್ ವೆಲ್ಲಾಟ್, ಶಾಲು ಮ್ಯಾಥ್ಯೂ, ಶಾಸಕರಾದ ಎಂ ರಾಜಗೋಪಾಲ್, ಸಿ.ಎಚ್ ಕುಂಞAಬು, ಸ್ವಾಗತ ಸಮಿತಿ ಅಧ್ಯಕ್ಷ ವಿ.ವಿ ರಮೇಶನ್, ಕೆ.ಆರ್ ಜಯಾನಂದ, ಸಾದಿಕ್ ಚೇರುಗೋಳಿ, ವಿನಯ್ ಕುಮಾರ್, ಆಕಾಶ್ ಪೈವಳಿಕೆ, ನೌಶಾದ್ …

ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಘೋಷಣೆ ಮಹಿಳೆಯರಿಗೂ ಹೆಚ್ಚಿನ ಪ್ರಾತಿನಿಧ್ಯ

ಕಾಸರಗೋಡು: ಬಿಜೆಪಿ  ಕಾಸರಗೋಡು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಘೋಷಿಸಲಾಗಿದೆ. ಪಕ್ಷದ ರಾಜ್ಯ ಅಧ್ಯಕ್ಷ ಈ ಘೋಷಣೆ ನಡೆಸಿದ್ದಾರೆ. ಇದರಂತೆ ಬಿಜೆಪಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನಾಗಿ ಎಂ. ಜನನಿ, ಎ.ಕೆ. ಕಯ್ಯಾರ್, ಎಂ. ಬಲ್‌ರಾಜ್, ಮಣಿಕಂಠ ರೈ, ಮುರಳೀಧರ ಯಾದವ್, ಎಚ್.ಆರ್. ಸುಕನ್ಯ (ಉಪಾಧ್ಯ ಕ್ಷರು), ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್ (ಪ್ರಧಾನ ಕಾರ್ಯದರ್ಶಿ ಗಳು), ಎನ್. ಮಧು, ಸಂಜೀವ ಪುಳ್ಕೂರು, ಮಹೇಶ್ ಗೋಪಾಲ್,  ಪ್ರಮೀಳಾ ಮಜಲ್, ಪುಷ್ಪಗೋ ಪಾಲನ್, ಅಶ್ವಿನಿ ಕೆ.ಎಂ …

ನೀರಿನ ಕ್ಷಾಮ: ಜಲಪ್ರಾಧಿಕಾರದ ಕಂಟ್ರೋಲ್ ರೂಮ್ ಆರಂಭ

ಕಾಸರಗೋಡು: ಬೇಸಿಗೆ ಕಾಲದಲ್ಲಿ ಕಠಿಣ ನೀರಿನ ಕ್ಷಾಮ ತಲೆದೋರುವ ಪ್ರದೇಶಗಳಿಗೆ ಶುದ್ದ ನೀರು ಪೂರೈಸಲು ಹಾಗೂ ನೀರಿನ ಕ್ಷಾಮದ ಬಗ್ಗೆ ದೂರುಗಳಿದ್ದಲ್ಲಿ ಅದನ್ನು ಪರಿಶೀಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೇರಳ ಜಲಪ್ರಾಧಿ ಕಾರದ ಕಾಸರಗೋಡು ಪಿಎಚ್ ಡಿವಿಶನ್ ಕಚೇರಿಯ ಆಶ್ರಯದಲ್ಲಿ  ಕಂಟ್ರೋಲ್ ರೂಮ್ ತೆರೆಯಲಾ ಗಿದ್ದು, ಅದು ಈಗಾಗಲೇ ಕಾರ್ಯಾ ರಂಭಗೊಂಡಿದೆ. ಜಿಲ್ಲೆಯ ನೀರಿನ ವಿತರಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಅದನ್ನು ಜನರು ಈ ಕಂಟ್ರೋಲ್ ರೂಮ್‌ನ  04994-255544 ಎಂಬ ನಂಬ್ರಕ್ಕೆ ತಿಳಿಸಬ ಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಐಲ ಕ್ಷೇತ್ರ ಜಾತ್ರೆ: ದೈವಕೋಲ ಇಂದು

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ವಿಷು ಜಾತ್ರೆ ಪ್ರಯುಕ್ತ ನಿನ್ನೆ ಸಂಜೆ ಆರಾಟೋತ್ಸವ, ರಾಜಾಂಗಣ ಪ್ರಸಾದ ನಡೆದ ಬಳಿಕ ಶ್ರೀ ದೇವರ ಬಲಿ ಉತ್ಸವ ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನಕ್ಕೆ ತೆರಳಿ ಅವಭೃತ ಸ್ನಾನ ನಡೆಯಿತು. ರಾತ್ರಿ ಧ್ವಜಾವರೋಹಣ, ನವಕ ಕಲಶ, ಸಂಪ್ರೋಕ್ಷಣೆಯೊAದಿಗೆ ವಿಷು ಜಾತ್ರೆ ಕಾರ್ಯಕ್ರಮ ಸಮÁಪ್ತಿಗೊಂಡಿತು. ಇಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ಕಾರುಣ್ಯ ಯೋಜನೆ ಅವಧಿ ವಿಸ್ತರಣೆ

ಕಾಸರಗೋಡು: ಬಡ ರೋಗಿಗಳಿಗೆ ಚಿಕಿತ್ಸಾ ನೆರವು ನೀಡುವ ಕಾರುಣ್ಯ ಬೆನವಲೆಂಟ್ ಫಂಡ್ (ಕೆಬಿಎಫ್) ಯೋಜನೆಯ ಅವಧಿಯನ್ನು ರಾಜ್ಯ ಸರಕಾರ ಜೂನ್ 30ರ ತನಕ ವಿಸ್ತರಿಸಿದೆ. ಪ್ರಸ್ತುತ ಯೋಜನೆಯ ಅವಧಿ ಮಾರ್ಚ್ 30ರಂದು ಕೊನೆಗೊಂಡಿತ್ತು. ಆ ಕಾರಣದಿಂದಾಗಿ ಹಲವು ಆಸ್ಪತ್ರೆಗಳು ಕಾರುಣ್ಯ ಯೋಜನೆ ಪ್ರಕಾರವಿರುವ ಚಿಕಿತ್ಸೆಯನ್ನು ನಿಲ್ಲಿಸಿದ್ದವು. ವರ್ಷಕ್ಕೆ ಮೂರು ಲಕ್ಷ ರೂ.ಗಿಂತ ಕೆಳಗೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಕಾರುಣ್ಯ ಯೋಜನೆ ಪ್ರಕಾರ ಚಿಕಿತ್ಸಾ ಧನ ಸಹಾಯ ಲಭಿಸುತ್ತಿದೆ. ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಸದಸ್ಯ ರಾಗದವರಿಗೆ …

ಪ್ರಮಾಣಪತ್ರ ಪಡೆಯಲೆಂದು ಕಾಲೇಜಿಗೆ ತಲುಪಿದ ಕಣ್ಣೂರು ನಿವಾಸಿ ಮಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಲಪಾಡಿ: ಕಾಲೇಜಿಗೆ ಪ್ರಮಾಣಪತ್ರ ಪಡೆಯಲೆಂದು ತಲುಪಿದ ಕಣ್ಣೂರು ಪಾನೂರು ನಿವಾಸಿ ವಿದ್ಯಾರ್ಥಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಾನೂರು ಕುಟ್ಟೇರಿಯ ಎಳುದುಪಳ್ಳಿ ಶಂಸುಲ್ ಹುದಾ ನಿವಾಸಿ ಶಂಸುದ್ದೀನ್ – ಖಮರುನ್ನೀಸಾ ದಂಪತಿ ಪುತ್ರ ಶಿಜಾಸ್ (24) ಮೃತಪಟ್ಟ ವಿದ್ಯಾರ್ಥಿ. ದೇರಳಕಟ್ಟೆ ಯೇನ ಪೊಯ ಕಾಲೇಜಿನಲ್ಲಿ ಎಸಿಸಿಎ ಕೋರ್ಸ್ ಪೂರ್ತಿಗೊಳಿಸಿದ ಶಿಜಾಸ್ ಪ್ರಮಾಣ ಪತ್ರ ಪಡೆಯ ಲೆಂದು ಇತ್ತೀಚೆಗೆ ಮಂಗಳೂರಿಗೆ ತಲುಪಿದ್ದನು. ನಿನ್ನೆ ಬೆಳಿಗ್ಗೆ ಈತ ವಾಸ ಮಾಡುತ್ತಿದ್ದ ಕೊಠಡಿ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಕೊಠಡಿಯಿಂದ …

ಮೊಗೇರ ಸಮಾಜದಿಂದ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ: ಅಭಿನಂದನೆ 20ರಂದು

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪ್ರಯುಕ್ತ ಸಮಸ್ತ ಮೊಗೇರ ಸಮಾಜದ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯನ್ನು ಯಶಸ್ವಿಗೊಳಿಸಿದ ಮೊಗೇರ ಸಮಾಜ ಬಾಂಧವರಿಗೆ ಅಭಿನಂದನಾ ಸಮಾರಂಭ ಈ ತಿಂಗಳ 20ರಂದು ಬೆಳಿಗ್ಗೆ 9.30ಕ್ಕೆ ಉಳಿಯತ್ತಡ್ಕದ ಅಟಲ್ಜಿ ಸಭಾಂಗಣದಲ್ಲಿ ನಡೆಯಲಿದೆ. ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ ಉದ್ಘಾಟಿಸುವರು. ಕವಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ಬೇಡು …

ಕಾಸರಗೋಡು ಜಿಲ್ಲೆ ನಿವಾಸಿ ಶಾರ್ಜಾದಲ್ಲಿ ವಾಹನ ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಶಾರ್ಜಾದಲ್ಲಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಕಾಸರಗೋಡು ಜಿಲ್ಲೆಯ ಮೀತಲ್ ಮವ್ವಲ್ ನಿವಾಸಿ ಹಾಗೂ ಶಾರ್ಜಾ ದೈದ್ ರಸ್ತೆ ೯ನೇ ನಂಬ್ರ ಸೇತುವೆ ಸಮೀಪ ಸೂಪರ್ ಮಾರ್ಕೆಟ್ ಮಾಲಕನಾದ ಇಬ್ರಾಹಿಂ (50) ಮೃತಪಟ್ಟರು. ಸೂಪರ್ ಮಾರ್ಕೆಟ್‌ನಿಂದ ರಸ್ತೆಯ ಎದುರು ಭಾಗದಲ್ಲಿರುವ ಇಲೆಕ್ಟ್ರಿಸಿಟಿ ಕಚೇರಿಗೆ ವಿದ್ಯುತ್ ಬಿಲ್ ಪಾವತಿಸಲು ರಸ್ತೆ ಅಡ್ಡ ದಾಟುತ್ತಿದ್ದ ಮಧ್ಯೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಢಿಕ್ಕಿಯ ಆಘಾತದಲ್ಲಿ ಎಸೆಯಲ್ಪಟ್ಟ ಇಬ್ರಾಹಿಂ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳೆದ ೩೫ ವರ್ಷದಿಂದ ಇವರು ಶಾರ್ಜಾದಲ್ಲಿ ಸೂಪರ್ …