ಐಲ ಕ್ಷೇತ್ರ ಜಾತ್ರೆ: ದೈವಕೋಲ ಇಂದು

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ವಿಷು ಜಾತ್ರೆ ಪ್ರಯುಕ್ತ ನಿನ್ನೆ ಸಂಜೆ ಆರಾಟೋತ್ಸವ, ರಾಜಾಂಗಣ ಪ್ರಸಾದ ನಡೆದ ಬಳಿಕ ಶ್ರೀ ದೇವರ ಬಲಿ ಉತ್ಸವ ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನಕ್ಕೆ ತೆರಳಿ ಅವಭೃತ ಸ್ನಾನ ನಡೆಯಿತು. ರಾತ್ರಿ ಧ್ವಜಾವರೋಹಣ, ನವಕ ಕಲಶ, ಸಂಪ್ರೋಕ್ಷಣೆಯೊAದಿಗೆ ವಿಷು ಜಾತ್ರೆ ಕಾರ್ಯಕ್ರಮ ಸಮÁಪ್ತಿಗೊಂಡಿತು. ಇಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

You cannot copy contents of this page