ಬಿಎಂಎಸ್ ನೇತಾರ ನ್ಯಾಯವಾದಿ ಸುಹಾಸ್ ಕೊಲೆ ಪ್ರಕರಣ: ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಪೆಷಲ್ ಪ್ರೋಸಿಕ್ಯೂಟರ್

ಕಾಸರಗೋಡು: 2008 ಎಪ್ರಿಲ್‌ನಲ್ಲಿ ಇಡೀ ಕಾಸರಗೋಡು ಜಿಲ್ಲೆಯನ್ನೇ ನಡುಗಿಸಿದ ಗಲಭೆಯ ವೇಳೆ ಕಾಸರಗೋಡು ತಾಲೂಕು ಕಚೇರಿ ಪರಿಸರ ನಿವಾಸಿ ಹಾಗೂ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ನ್ಯಾಯವಾದಿ ಪಿ. ಸುಹಾಸ್ (38)ರ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸರಕಾರದ ಪರ ವಾದಿಸಲು ಸ್ಪೆಷಲ್  ಪ್ರೋಸಿಕ್ಯೂಟರ್‌ರನ್ನಾಗಿ  ನೇಮಿಸಲಾಗಿದ್ದ ನ್ಯಾಯವಾದಿ ಜೋಸೆಫ್ ಥೋಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯಪರ ಕಾರಣದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಪೆಷಲ್ ಪ್ರೋಸಿಕ್ಯೂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಇದರಿಂದಾಗಿ …

ಕಾಸರಗೋಡಿನಲ್ಲಿ ಎ.ಟಿ.ಎಂ ದರೋಡೆಗೆ ಯತ್ನ: ಓರ್ವ ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ನಗರದ ಎಂಜಿ ರಸ್ತೆ ಬಳಿ ಕಾರ್ಯವೆಸಗು ತ್ತಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವನ್ನು ದರೋಡೆಗೈಯ್ಯುವ ಯತ್ನ ನಡೆಸಲಾಗಿದೆ.  ವಿಷು ದಿನದಂದು ರಾತ್ರಿ ಸುಮಾರು 1.15 ಗಂಟೆ ವೇಳೆ ಈ ದರೋಡೆಯತ್ನ ನಡೆದಿದೆ. ಆದರೆ ಈ ಎಟಿಎಂನಿಂದ ಹಣ ನಷ್ಟಗೊಂಡಿಲ್ಲ ಮಾತ್ರವಲ್ಲ ಅದು ಈಗಲೂ ಸುರ ಕ್ಷಿತವಾಗಿ ಕಾರ್ಯವೆಸಗುತ್ತಿದೆಯೆಂದು ಪೊಲೀಸರು ತಿಳಿಸುತ್ತಿದ್ದಾರೆ. ಎಟಿಎಂನ ಹಣ ಇರಿಸಲಾಗಿದ್ದ ಬಾಗಿಲನ್ನು ಒಡೆಯಲು ಕಳ್ಳರು   ಸತತ  ಯತ್ನ ನಡೆಸಿದರೂ ಅದು ಸಫಲವಾಗದಾಗ ಅದನ್ನು …

ಮೊಬೈಲ್ ರೀಚಾರ್ಜ್ ಮಾಡಲು ಹಣ ನೀಡದ ತಾಯಿಗೆ ಕಲ್ಲಿನಿಂದ ಹೊಡೆದ ಪುತ್ರ: ನರಹತ್ಯಾ ಯತ್ನ ಪ್ರಕರಣ ದಾಖಲು

ಕಾಸರಗೋಡು: ಮೊಬೈಲ್ ಫೋನ್ ರೀಚಾರ್ಜ್ ಮಾಡಲು ಹಣ ನೀಡದ ದ್ವೇಷದಿಂದ ಪುತ್ರ ತಾಯಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿ ಸಿದ ಬಗ್ಗೆ ದೂರು ಉಂಟಾಗಿದೆ. ಮಾಯಿಪ್ಪಾಡಿ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿರುವ  ವಿಶಾಲಾಕ್ಷಿ (56) ಎಂಬವರ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಇದರಿಂದ ಕಣ್ಣಿಗೆ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಗಾಯಾಳು ವಿಶಾಲಾಕ್ಷಿಯ ಮಗ ದೇವೀಪ್ರಸಾದ್ (35)ನ ವಿರುದ್ಧ ವಿದ್ಯಾನಗರ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಆತನನ್ನು …

ಕಡಲ್ಗಳ್ಳರು ಅಪಹರಿಸಿದ ಕಾಸರಗೋಡು ನಿವಾಸಿ ಸೇರಿದಂತೆ 10 ಮಂದಿ  ಕೊನೆಗೂ ಬಿಡುಗಡೆ

ಕಾಸರಗೋಡು: ಪಶ್ಚಿಮ ಆಫ್ರಿಕಾದ ರೋಮಾ ಬಂದಿರಿನಿಂದ ಕ್ಯಾಮೂರಾನ್‌ಗೆ ಹೋಗುತ್ತಿದ್ದ ಬಿ2 ರಿವರ್ ಎಂಬ ಹೆಸರಿನ ಸರಕು ಹಡಗನ್ನು ಮಾರ್ಚ್ 17ರಂದು ಕಡಲ್ಗಳ್ಳರು ಅಪಹರಿಸಿ ಅದರಲ್ಲಿದ್ದ ಕಾಸರ ಗೋಡು ಪನಯಾಲ್ ಅಂಬಂಗಾಡ್ ಕೋಟಪಾರಾಯಿ ನಿವಾಸಿ  ರಜೀಂದ್ರನ್ ಭಾರ್ಗವನ್ ಸೇರಿದಂತೆ 10 ಮಂದಿ ಯನ್ನು 28 ದಿನಗಳ ಬಳಿಕ ಕೊನೆಗೂ ಒತ್ತೆಸೆರೆಯಿಂದ ಬಿಡುಗಡೆಗೊಳಿಸಲಾಗಿದೆ. ಕಡಲ್ಗಳ್ಳರ ಒತ್ತೆಸೆರೆಯಿಂದ ಬಿಡುಗಡೆ ಗೊಂಡ ರಜೀಂದ್ರನ್ ಸೇರಿದಂತೆ 10 ಮಂದಿ ಶೀಘ್ರ ಮುಂಬೈಗೆ ಬಂದು ಸೇರಲಿ ದ್ದಾರೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಮಾತ್ರವಲ್ಲ  ಬಿಡುಗಡೆಗೊಂಡ …

ಮದುವೆ ಅಗತ್ಯಕ್ಕಾಗಿ ಕಾರು ಪಡೆದು ಹಿಂತಿರುಗಿಸದ ದೂರಿನಂತೆ ಕೇಸು ದಾಖಲು

ಕಾಸರಗೋಡು: ಮದುವೆಯ ಅಗತ್ಯಕ್ಕಾಗಿ ಕಾರು ಪಡೆದು ಬಳಿಕ ಅದನ್ನು ಹಿಂತಿರುಗಿಸದ ದೂರಿನಂತೆ ವಿದ್ಯಾನಗರ ಪೊಲೀಸರು ಆಲಂಪಾ ಡಿಯ ಹೈದರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಚೆಂಗಳ ಇಂದಿರಾನಗರದ ಮಹರೂಫ್ ಎಂಬವರು ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮದುವೆ ಅಗತ್ಯಕ್ಕಾಗಿ ಹೈದರ್ ಕಳೆದ ನವಂಬರ್ ೯ರಂದು ತನ್ನ ಕಾರು ಪಡೆದುಕೊಂಡಿದ್ದರೆಂದೂ ಬಳಿಕ ಅದನ್ನು ಆತ ಹಿಂತಿರುಗಿಸಿಲ್ಲವೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಮಹರೂಫ್  ಆರೋಪಿಸಿದ್ದಾರೆ.

ಅಂಗಡಿಯಿಂದ 3018 ಪ್ಯಾಕೆಟ್ ತಂಬಾಕು ಉತ್ಪನ್ನ ವಶ

ಕಾಸರಗೋಡು: ಚೆರ್ಕಳದಲ್ಲಿ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಅಂಗಡಿ ಯೊಂದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 3018 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಚೆರ್ಕಳದ ವ್ಯಾಪಾರಿ ಮೊಯ್ದೀನ್ ಕುಂಞಿ (45) ಎಂಬಾತನ ವಿರುದ್ಧ ಕೇಸು ದಾಖಲಿ ಸಲಾಗಿದೆ. ನಾಲ್ಕು ಪ್ಲಾಸ್ಟಿಕ್ ಚೀಲಗಳ ಲ್ಲಾಗಿ ಈ ತಂಬಾಕು ಉತ್ಪನ್ನಗಳನ್ನು   ಅಂಗಡಿಯಲ್ಲಿ ತುಂಬಿಸಿಡ ಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಕಾಡಾನೆ ಉಪಟಳ: ಅದಿರಪಳ್ಳಿಯಲ್ಲಿ ಹರತಾಳ

ತೃಶೂರು: ಅದಿರಪಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳಕ್ಕೆ ಪರಿಹಾರ ಕಾಣಬೇಕೆಂದು ಆಗ್ರಹಿಸಿ ಜನಪರ ಸಮಿತಿ ಕರೆ ನೀಡಿದ ಹರತಾಳ ಆರಂಭಗೊಂಡಿತು. ಎರಡು ದಿನದೊಳಗೆ ಕಾಡುತ್ಪನ್ನಗಳನ್ನು ಸಂಗ್ರಹಿಸಲು ತೆರಳಿದ ಬುಡಕಟ್ಟು ವಿಭಾಗಕ್ಕೊಳಪಟ್ಟ ಮೂರು ಮಂದಿ ಕಾಡಾನೆಗಳ ಆಕ್ರಮಣದಲ್ಲಿ ಕೊಲೆಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿದೆ. ಸಂಜೆ ೬ ಗಂಟೆ ವರೆಗೆ ಹರತಾಳ ಮುಂದುವರಿಯಲಿದೆ. ಆದಿತ್ಯವಾರ ಸೆಬಾಸ್ಟಿಯನ್ (20), ಸೋಮವಾರ ರಾತ್ರಿ ಸತೀಶ್ (34), ಅಂಬಿಕಾ (30) ಎಂಬಿವರು ಕಾಡಾನೆ ದಾಳಿಗೆ ಅಸುನೀಗಿದ್ದರು.

ಹೆಣ್ಮಕ್ಕಳ ಫೊಟೋ ಮೋರ್ಫ್ ಮಾಡಿ ಪ್ರಚಾರ ಯುವಕ ಸೆರೆ

ಕೊಚ್ಚಿ: ಹೆಣ್ಮಕ್ಕಳ ಭಾವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್ ನಿಂದ ತೆಗೆದು ಮೋರ್ಫ್ ಮಾಡಿ ಪ್ರಚಾರಪಡಿಸಿದ 23ರ ಹರೆಯದ ಯುವಕ ಸೆರೆಯಾಗಿದ್ದಾನೆ. ಕೋಟಯಂ ನಿವಾಸಿ ಅಮಲ್ ಮಿರ್ಸಾ ಸಲೀಂ ಸೆರೆಯಾದ ವ್ಯಕ್ತಿ. ಇನ್ಫೋ ಪಾರ್ಕ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೋಟಯಂ ನಿವಾಸಿಯಾದ ಯುವತಿ ಹಾಗೂ ಸಹೋದರಿ ಯರ ಚಿತ್ರಗಳನ್ನು ಇನ್‌ಸ್ಟಾ ಗ್ರಾಮ್‌ನಿಂದ ತೆಗೆದು ಮೋರ್ಫ್ ಮಾಡಿ ಪ್ರಚಾರಪಡಿಸಿರುವುದಾಗಿ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು.  ಮೋರ್ಫ್ ಮಾಡಿದ ಚಿತ್ರಗಳನ್ನು ಆ ಯುವತಿಯರಿಗೇ ಕಳುಹಿಸಿದ ಈತ ಅದರ ಜೊತೆಯಲ್ಲಿ ಅಸಭ್ಯ ಸಂದೇಶವನ್ನೂ ಕಳುಹಿಸಿದ್ದಾನೆನ್ನ …

ಆಟೋ ಚಾಲಕನ ಕೊಲೆ ಪ್ರಕರಣ: ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೆ ನಿರ್ಧಾರ: ಚಾಕು ಬಾವಿಗೆಸೆದಿರುವುದಾಗಿ ಆರೋಪಿ ಹೇಳಿಕೆ

ಮಂಜೇಶ್ವರ: ಮಂಗಳೂರು ಮುಲ್ಕಿ ಬಳಿಯ ಕೊಲ್ನಾಡು ನಿವಾಸಿಯೂ, ಮಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನಾದ ಮೊಹಮ್ಮದ್ ಶರೀಫ್ (52) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಸುರತ್ಕಲ್ ಬಳಿಯ ಕಲ್ಲಾಪುವಿನ ಅಭಿಷೇಕ್ ಶೆಟ್ಟಿ (25) ಎಂಬಾತನನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆಗೊಳಪಡಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ. ಆರೋಪಿ ಕಸ್ಟಡಿಯಿಂದ ಲಭಿಸಲಿರುವ ಅರ್ಜಿ ಇಂದು ಸಲ್ಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಕೊಲೆ ಕೃತ್ಯಕ್ಕೆ ಬಳಸಿದ ಚಾಕುವನ್ನು ಪತ್ತೆಹಚ್ಚಲು ಹಾಗೂ ಕೊಲೆ ಕೃತ್ಯದಲ್ಲಿ ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುವುದು ಪೊಲೀಸರ ಉದ್ದೇಶವಾಗಿದೆ. ಕಳೆದ ಗುರುವಾರ ಸಂಜೆ …

ಮಾದಕವಸ್ತುಗಳ ವಿರುದ್ಧ ಕ್ರಮ: ಅಧ್ಯಾಪಕರಿಗೆ ತರಬೇತಿ

ಕಾಸರಗೋಡು: ಶಾಲಾ ಅಧ್ಯಾಪಕರಿಗಿರುವ ಬೇಸಿಗೆಕಾಲದ ತರಬೇತಿಯಲ್ಲಿ ಈವರ್ಷದಿಂದ ಮಾದಕ ವಿರುದ್ಧ ಪಾಠವನ್ನು ಒಳಪಡಿಸಲಾಗಿದೆ. ಐದು ದಿನಗಳ ಕಾಲ ನಡೆಯುವ ತರಬೇತಿಯಲ್ಲಿ ಒಂದು ದಿನ ಮಕ್ಕಳನ್ನು ಮಾದಕ ವಸ್ತುಗಳಿಂದ ಹೇಗೆ ಪಾರು ಮಾಡ ಬಹುದು ಎಂಬುವುದರ ಕುರಿತು ಕಲಿಸಲಾಗುವುದು.  ಮಕ್ಕಳು ಹಾಗೂ ಯುವಕರು ಮಾದಕವಸ್ತುಗಳತ್ತ ಆಕರ್ಷಿತರಾಗುವುದನ್ನು  ಹಾಗೂ ಆಕ್ರಮಣ ಸ್ವಭಾವವನ್ನು ‘ಎದುರಿಸಲು ಬಾಲ್ಯ ಹಾಗೂ ಯೌವ್ವನದೊಂದಿಗೆ’ ಎಂಬ ಪ್ರಚಾರವನ್ನು ಶಾಲೆಗಳಲ್ಲಿ ನಡೆಸಲಾಗುವುದು. ಅಬಕಾರಿ ಅಧಿಕಾರಿಗಳು ಹಾಗೂ ಮಾನಸಿಕ ಆರೋಗ್ಯ ತಜ್ಞರು ತರಬೇತಿಯಲ್ಲಿ ಪಾಲ್ಗೊಳ್ಳುವರು.  ತಿಳುವಳಿಕಾ ಕಾರ್ಯಕ್ರಮಗಳಲ್ಲಿ ಪಿಟಿಎ ಹಾಗೂ …