ಕಾಡು ಹಂದಿಗೆ ಇರಿಸಿದ ಸ್ಫೋಟಕ ವಸ್ತು ಸಿಡಿದು ಹಸುವಿಗೆ ಗಂಭೀರ ಗಾಯ

ಪಾಲಕ್ಕಾಡ್: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕವಸ್ತು ಸಿಡಿದು ಹಸುವಿನ ಬಾಯಿಗೆ ಗಂಭೀರ ಗಾಯಗೊಂಡ ಘಟನೆ ಪಾಲಕ್ಕಾಡ್ ಪುದುನಗರ ಎಂಬಲ್ಲಿ ನಡೆದಿದೆ. ಕೊಯ್ಲು ಮುಗಿದ ಗದ್ದೆಯಲ್ಲಿ ಕಾಡು ಹಂದಿಯನ್ನು ಕೊಲ್ಲಲೆಂದು ಪರೋಟದೊಳಗೆ ಸ್ಫೋಟಕ ವಸ್ತುವನ್ನು ಇರಿಸಲಾಗಿತ್ತೆನ್ನಲಾಗಿದೆ. ಇದೇ ವೇಳೆ ಗದ್ದೆಯಲ್ಲಿ ಮೇಯುತ್ತಿದ್ದ ಹಸು ಪರೋಟವನ್ನು ತಿನ್ನಲು ಯತ್ನಿಸಿದೆ. ಅಷ್ಟರಲ್ಲಿ ಸ್ಫೋಟಕ ವಸ್ತು ಸಿಡಿದಿದ್ದು, ಇದರಿಂದ ಹಸುವಿನ ಬಾಯಿಗೆ ಗಂಭೀರಗಾಯಗಳಾಗಿವೆ. ಒಂದು ಲಕ್ಷ ರೂಪಾಯಿ ಮೌಲ್ಯವುಳ್ಳ ಹಸು ಹೆರಿಗೆಯಾಗಿ ೨೦ ದಿನಗಳು ಮಾತ್ರವೇ ಆಗಿದೆಯೆನ್ನಲಾಗಿದೆ. ಹಸುವಿಗೆ ಗಾಯವಾಗುವು ದರೊಂದಿಗೆ …

ಮಧೂರು ಕ್ಷೇತ್ರ ಜಾತ್ರೆ: ಇಂದು ನಡುದೀಪೋತ್ಸವ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಆರಂಭಗೊA ಡಿದ್ದು. ಎಪ್ರಿಲ್ 17ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆ. ಮಹೋತ್ಸವದಂಗವಾಗಿ ಇಂದು ಮುಂಜಾನೆ ದೀಪೋತ್ಸವ, ಉತ್ಸವಬಲಿ ನಡೆಯಿತು. ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಾಯಂಬಕ, ದೀಪಾರಾಧನೆ, ರಾತ್ರಿ 8ಕ್ಕೆ ನಡುದೀಪೋತ್ಸವ, ಉತ್ಸವಬಲಿ, ಸೇವೆಸುತ್ತುಗಳು ನಡೆಯಲಿದೆ.ನಾಳೆ ಮುಂಜಾನೆ 5ಕ್ಕೆ ಉತ್ಸವ ಬಲಿ, ದೀಪೋತ್ಸವ, ದರ್ಶನಬಲಿ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆಗಳು, 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5ಕ್ಕೆ …

ಮಸ್ಕತ್ ಗಡಿನಾಡ ಉತ್ಸವ 18ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನ್‌ನ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ತಿಂಗಳ 18ರಂದು ಮಸ್ಕತ್‌ನ ಮಜಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಆರ್ಥಿಕ ತಜ್ಞ ಎನ್. ರಮಾನಂದ ಪ್ರಭು ಬಿಡುಗಡೆಗೊಳಿಸಿದರು. ಬ್ಯಾಂಕ್ ದೋಫಾರ್‌ನ ಹಿರಿಯ ಅಧಿಕಾರಿ ಜಿ.ವಿ. ರಾಮಕೃಷ್ಣ, ಒಮಾನ್ ಇಂಡಿಯನ್ ಸೋಶ್ಯಲ್ ಕ್ಲಬ್‌ನ ಆಡಳಿತ …

ಐಲ ಕ್ಷೇತ್ರದಲ್ಲಿ ವಿಷು ಜಾತ್ರೆಗೆ ಚಾಲನೆ: ದೇವಿಗೆ ಪಲ್ಲಕ್ಕಿ ಸಮರ್ಪಣೆ

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ವರ್ಷಾವಧಿ ವಿಷುಜಾತ್ರೆಗೆ ಭಾನುವಾರ ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ದ್ವಜಾರೋಹಣಗೊಂಡಿತು. ಬಳಿಕ ಬಲಿ ಉತ್ಸವ ನಡೆಯಿತು. ಹರಿಶ್ಚಂದ್ರ ಆಚಾರ್ಯ ಬೇಕೂರು ಇವರು ಸೇವೆಯಾಗಿ ನೀಡಿದ ನೂತನ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಈ ತಿಂಗಳ 18ರಂದು ಜಾತ್ರೆ ಸಮಾಪ್ತಿಗೊಳ್ಳಿದೆ.

ಬಿಜೆಪಿ ಕುಂಬಳೆ ಉತ್ತರ ವಲಯ ಸಮಿತಿ ವತಿಯಿಂದ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕುಂಬಳೆ: ಬಿಜೆಪಿ ಕುಂಬಳೆ ಉತ್ತರವಲಯ ಸಮಿತಿ ವತಿಯಿಂದ ಕಿದೂರು ಕುಂಟಂಗೇರಡ್ಕ ಕಾಲನಿಯ ಶಿವನಾಥರವರ ಮನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಉತ್ತರವಲಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಉದ್ಘಾಟಿಸಿದರು. ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ರಾಜ್ಯ ಉತ್ತರವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿದರು. ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ ಮಡ್ವ, ಉತ್ತರವಲಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕಿದೂರು ಭಾಗವಹಿಸಿದರು. …

ಶ್ರೀ ಅಯ್ಯಪ್ಪ ಬಾಲಗೋಕುಲ ಉದ್ಘಾಟನೆ

ಮಂಜೇಶ್ವರ: ಹೊಸಂಗಡಿ ಪ್ರೇರಣದಲ್ಲಿ ಶ್ರೀ ಅಯ್ಯಪ್ಪ ಮಾತೃ ಸಮಿತಿಯ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಬಾಲಗೋಕುಲ ಹೊಸಂಗಡಿ ಸಮಿತಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು. ಹೊಸAಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅರ್ಚಕ ತಿರುಮಲೇಶ್ ಆಚಾರ್ಯ ಮತ್ತು ಅಧ್ಯಕ್ಷ ಪದ್ಮನಾಭ ಕಡಪ್ಪುರ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಶಂಕರನಾರಾಯಣ ಭಟ್ ಮಣ್ಣಿಪಾಡಿ ಬೌದ್ಧಿಕ್ ನೀಡಿದರು. ನಂತರ ಜಿಲ್ಲಾಧ್ಯಕ್ಷ ನಾರಾಯಣ ಮಾಸ್ತರ್ ಪ್ರಥಮ ಬಾಲಗೋಕುಲ ತರಗತಿಯನ್ನು ನಡೆಸಿದರು. ದಿನಕರ ಹೊಸಂಗಡಿ ನಿರೂಪಿಸಿ,  ಬಾಲಗೋಕುಲ ಅಧ್ಯಕೆÀ್ಷ ಅನುಪಮ ನವೀನ್ ರಾಜ್ ಸ್ವಾಗತಿಸಿದರು.

ಪರೋಲ್‌ನಲ್ಲಿ ಹೊರ ಬಂದ ಆರೋಪಿ ಮತ್ತೆ ವಿವಾಹ, ಸೆರೆ

ದೆಹಲಿ: ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸುತ್ತಿದ್ದ ಮಧ್ಯೆ ಪರೋಲ್‌ನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ನಿವೃತ್ತ ಸೈನಿಕ 20 ವರ್ಷಗಳ ಬಳಿಕ ಪೊಲೀಸರ ವಶವಾಗಿದ್ದಾನೆ. ಅನಿಲ್ ಕುಮಾರ್ ತಿವಾರಿ (೫೮)ನನ್ನು ಮಧ್ಯಪ್ರದೇಶದಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. 1989ರಲ್ಲಿ ಅನಿಲ್ ಪತ್ನಿಯನ್ನು ಕೊಂದು ಮೃತದೇಹಕ್ಕೆ ಕಿಚ್ಚಿರಿಸಿದ್ದನು. ಬಳಿಕ ಆತ್ಮಹತ್ಯೆಗೆತ್ನಿಸಿದ್ದನಾದರೂ ಪೊಲೀಸರು ಈತನನ್ನು ಸೆರೆ ಹಿಡಿದಿದ್ದರು. ನ್ಯಾಯಾಲಯ ಈತನಿಗೆ ಜೀವನ ಪರ್ಯಂತ ಶಿಕ್ಷೆ ಘೋಷಿಸಿತ್ತು. ಈ ಮಧ್ಯೆ 2005ರಲ್ಲಿ ದೆಹಲಿ ಹೈಕೋರ್ಟ್ ಎರಡು ವಾರದ ಪರೋಲ್ ನೀಡಿತ್ತು. ಈ ವೇಳೆ …

ಚೇರಾಲು ಕುಡಿಯುವ ನೀರು ಯೋಜನೆಗೆ ಶಾಸಕರಿಂದ ಚಾಲನೆ

ಚೇರಾಲು : ಕೇರಳ ಸರ್ಕಾರದ ಭೂಗರ್ಭಜಲ ಇಲಾಖೆಯ 2024-25ನೇ ಸಾಲಿನ ಯೋಜನೆಯಡಿಯಲ್ಲಿ, 6,60,000ರೂ. ವೆಚ್ಚದಲ್ಲಿ ಆರಂಬಿsಸಿದ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚೇರಾಲ್ ರಂಬಾಯಮೂಲೆ ಕುಡಿ ಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಪೈವಳಿಕೆ ಪಂ. ಸದಸ್ಯೆ ಗೀತಾ ಎಂ ಅಧ್ಯಕ್ಷತೆ ವಹಿಸಿ ದರು. ಸ್ಥಳೀಯ ಮುಖಂ ಡರಾದ ಸದಾಶಿವ ಚೇರಾಲ್, ಯೂಸಫ್ ಚೇರಾಲ್, ಅಝೀಝ್ ಕಳಾಯಿ ಹಾಗೂ ಗುತ್ತಿಗೆದಾರರಾದ  ಸಿರ್ಸಿ ಅಬ್ದುಲ್ಲ ಕುಂಞÂ ಹಾಜಿ ಚೆರ್ಕಳ   ಉಪಸ್ಥಿತರಿದ್ದರು. ರಾಘವ ಚೇರಾಲ್ …

ಸಿಪಿಐ ಮಂಜೇಶ್ವರ ಲೋಕಲ್ ಸಮ್ಮೇಳನ

ಮಂಜೇಶ್ವರ: ಸಿಪಿಐ ಮಂಜೇಶ್ವರ ಲೋಕಲ್ ಸಮ್ಮೇಳನದ ಪೂರ್ವಭಾವಿಯಾಗಿ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ ಮಂಜೇಶ್ವರ ಟಿ.ವಿ ಥೋಮಸ್ ಸ್ಮಾರಕ ಮಂದಿರ ಬಳಿ ನಡೆಯಿತು. ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಬಡಾಜೆ, ನಾರಾಯಣಿ ರಾಜನ್, ಪವಿತ್ರಾ ಶ್ರೀಧರ್, ರೇಖಾ ಪ್ರೇಮ್ ದಾಸ್, ಚಿತ್ರಾವತಿ ಅಂಜರೆ, ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಸ್ವಾಗತ ಸಮಿತಿ ಕನ್ವೀನರ್ ದಯಾಕರ ಮಾಡ, ಗಣೇಶ್ ಕುಂಜತ್ತೂರ್ ನೇತೃತ್ವ ನೀಡಿದರು. ಬಳಿಕ ನಡೆದ ಸಾರ್ವಜನಿಕ ಸಭೆಯನ್ನು ಸಿಪಿಐ ರಾಜ್ಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್ …

ಕುಂಜತ್ತೂರು ಬಳಿ ಆಟೋ ಚಾಲಕನ ಸಾವು ಕೊಲೆಯೆಂದು ಸಾಬೀತು

ಮಂಜೇಶ್ವರ: ಕುಂಜತ್ತೂರು ಬಳಿಯ ಅಡ್ಕಪ್ಪಳ್ಳ ಮಾನಿಗುಡ್ಡೆ ಎಂಬಲ್ಲಿನ ಆವರಣಗೋಡೆಯಿಲ್ಲದ ಬಾವಿಯಲ್ಲಿ ಮಂಗಳೂರಿನ ಆಟೋ ಚಾಲಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕೊಲೆಕೃತ್ಯವಾಗಿ ದೆಯೆಂದು ದೃಢೀಕರಿಸಲಾಗಿದೆ. ಕುತ್ತಿಗೆ ಹಾಗೂ ತಲೆಯ ಹಿಂಭಾಗದಲ್ಲಿ ಉಂಟಾದ ಇರಿತದ ಗಾಯವೇ ಸಾವಿಗೆ ಕಾರಣವೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ. ಮಂಗಳೂರು ಬಳಿಯ ಮುಲ್ಕಿ ಕೊಲ್ನಾಡು ನಿವಾಸಿಯೂ, ಮಂಗಳೂ ರಿನಲ್ಲಿ ಆಟೋ ಚಾಲಕನಾಗಿದ್ದ ಮೊಹ ಮ್ಮದ್ ಶರೀಫ್ (52) ಎಂಬವರು ಮೊನ್ನೆ ಸಂಜೆ ಮಾನಿಗುಡ್ಡೆಯ ನಿರ್ಜನ …