ಮಸ್ಕತ್ ಗಡಿನಾಡ ಉತ್ಸವ 18ರಂದು: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನ್‌ನ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ತಿಂಗಳ 18ರಂದು ಮಸ್ಕತ್‌ನ ಮಜಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಆರ್ಥಿಕ ತಜ್ಞ ಎನ್. ರಮಾನಂದ ಪ್ರಭು ಬಿಡುಗಡೆಗೊಳಿಸಿದರು. ಬ್ಯಾಂಕ್ ದೋಫಾರ್‌ನ ಹಿರಿಯ ಅಧಿಕಾರಿ ಜಿ.ವಿ. ರಾಮಕೃಷ್ಣ, ಒಮಾನ್ ಇಂಡಿಯನ್ ಸೋಶ್ಯಲ್ ಕ್ಲಬ್‌ನ ಆಡಳಿತ ಮಂಡಳಿ ಸದಸ್ಯ ಎಸ್.ಡಿ.ಟಿ. ಪ್ರಸಾದ್, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಮಂಜನಾಥ ಸಂಗಟ್ಟಿ, ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡಮಿ ಒಮಾನ್ ಘಟಕದ ಅಧ್ಯಕ್ಷ ಅಬೂಬಕ್ಕರ್ ರೋಯಲ್ ಬೊಳ್ಳಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಒಮಾನ್ ಘಟಕದ ಸಲಹಾ ಸಮಿತಿ ಸದಸ್ಯ ಶಿವಾನಂದ ಕೋಟ್ಯಾನ್, ಯುವರಾಜ್ ಸಾಲಿಯಾನ್, ಹಿತೇಶ್ ಮಂಗಳೂರು, ರೇಷ್ಮಾ ಹಿತೇಶ್, ನ್ಯೂ ವೈಬ್ರಂಟ್ ಪಿ.ಯು. ಕಾಲೇಜ್ ಮೂಡುಬಿದಿರೆ ಇದರ ನಿರ್ದೇಶಕ ಅಮರೇಶ್ ವಾ ಟಗಲ್, ಸಮಾಜ ಸೇವಕ ಪದ್ಮಾಕರ ಮೆಂಡನ್, ರವಿ ಆಚಾರ್ಯ, ಭಾಸ್ಕರ ಕೋಟ್ಯಾನ್, ಪ್ರಸಾದ್ ಮರಾಠೆ, ಕಾರ್ತಿಕ್ ಕುಂದರ್, ಅನಿಲ್ ಪೂಜಾರಿ, ಅಕ್ಷಯ್ ಮೂಡಬಿದಿರೆ, ಶ್ವೇತಾ ಕೋಟ್ಯಾನ್ ಉಪಸ್ಥಿತರಿದ್ದರು.

You cannot copy contents of this page