ಉಪ್ಪಳದಲ್ಲಿ ಭಾರೀ ಪ್ರಮಾಣದ ತ್ಯಾಜ್ಯಕ್ಕೆ ಬೆಂಕಿ: ಸ್ಥಳೀಯರಲ್ಲಿ ಆತಂಕ

ಉಪ್ಪಳ: ಉಪ್ಪಳ ಬಸ್ ನಿಲ್ದಾಣ ಸಮೀಪ ಖಾಸಗಿ ವ್ಯಕ್ತಿಯ ಖಾಲಿ ಸ್ಥಳದಲ್ಲಿ ಉಪೇಕ್ಷಿಸಲಾದ ಭಾರೀ ಪ್ರಮಾಣದ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ಉರಿಸಿದ ಘಟನೆ ನಡೆದಿದೆ. ಇದ ರಿಂದ ಅದರ ದುರ್ವಾಸನೆ ಹಾಗೂ ಹೊಗೆಯಿಂದ ಪರಿಸರ ನಿವಾಸಿಗಳು ಆತಂಕಗೊAಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಘಟನೆ ನಡೆದಿದೆ. ಎರಡು ದಿನಗಳ ತನಕ ಉಪ್ಪಳ ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸಿತ್ತು. ಇದೀಗ ಹೊಗೆಯೇಳುತ್ತಿದೆ. ಈ ಪರಿಸರದಲ್ಲಿ ಪ್ಲಾಟ್ ಸಹಿತ ಹಲವು ಮನೆಗಳಿವೆ. ಇಲ್ಲಿ ಭಾರೀ ಪ್ರಮಾಣದ ತ್ಯಾಜ್ಯಗಳು …

ವಿವಿಧತೆಯಲ್ಲಿ ಏಕತೆಯನ್ನು ನಾವು ಕಂಡುಕೊಳ್ಳಬೇಕು- ವಜ್ರದೇಹಿಶ್ರೀ

ಮಧೂರು: ದೈವೇಚ್ಚೆಯಂತೆ ಕಾರ್ಯಗಳು ನಡೆಯುತ್ತದೆ. ಮನುಷ್ಯ ಪ್ರಯತ್ನ ಧರ್ಮ ಸಾಧನೆಯಲ್ಲಿ ಮಾತ್ರ. ಭಗವಂತ ಕೊಟ್ಟಂತೆ ಸ್ವೀಕರಿಸಬೇಕು. ಈ ಹಿನ್ನೆಲೆಯಲ್ಲಿ ಮಧೂರಿನಲ್ಲಿ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆ ಸುಧೀರ್ಘ ಕಾಲದ ಬಳಿಕ ನಡೆಯುತ್ತಿರುವುದು ಈ ಕಾಲದ ಪುಣ್ಯ ಎಂದು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ನುಡಿದರು.ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಅಂಗವಾಗಿ ನಿನ್ನೆ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.ನಮ್ಮ ಸಮಾಜ ವಿಭಿನ್ನವಾಗಿದ್ದು, ಹಲವು ಆಯಾಮ, ಚಿಂತನೆಗಳಿರು ವುದೇ ಇದಕ್ಕೆ ಕಾರಣ. …

ಕಾಸರಗೋಡು ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಬೇಕು- ಮುಖ್ಯ ಕಾರ್ಯದರ್ಶಿಗೆ ಮಾನವ ಹಕ್ಕು ಆಯೋಗ ನಿರ್ದೇಶ

ಕಾಸರಗೋಡು: ಆರೋಗ್ಯರಂಗದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸೌಕರ್ಯ ಗಳು ತೀರಾ ಕಡಿಮೆಯಾಗಿರುವುದರಿಂದ ನಿರ್ದಿಷ್ಟ ಮೆಡಿಕಲ್ ಕಾಲೇಜಿನ ನಿರ್ಮಾಣ ಶೀಘ್ರ ಪೂರ್ತಿಗೊಳಿಸಲು ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕೆಂದು ಮಾನವಹಕ್ಕು ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶಿಸಿದ್ದಾರೆ. ಜಿಲ್ಲೆಯಲ್ಲಿ ಆರೋಗ್ಯ ರಂಗದಲ್ಲಿ ಸೌಕರ್ಯಗಳು ಕಡಿಮೆಯಾಗಿರು ವುದರಿಂದ ಇಲ್ಲಿನ ಜನತೆ ಕರ್ನಾಟಕವನ್ನು ಆಶ್ರಯಿಸಬೇಕಾಗಿ ಬರುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ ದೂರಿನ ಮೇಲೆ ಆಯೋಗ ಈ ನಿರ್ದೇಶ ನೀಡಿದೆ. ಜಿಲ್ಲಾಧಿಕಾರಿ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತುತ ಆಸ್ಪತ್ರೆ ಬ್ಲೋಕ್‌ನ ನಿರ್ಮಾಣ ಚಟುವಟಿಕೆ ನಿಲುಗಡೆ …

ಕಾಸರಗೋಡು ಬ್ಲೋಕ್ ಮಟ್ಟದ ತ್ಯಾಜ್ಯಮುಕ್ತ ನವಕೇರಳ ಘೋಷಣೆ

ಕಾಸರಗೋಡು: ಕಾಸರಗೋಡು ಬ್ಲೋಕ್ ಪಂಚಾಯತ್ ಮಟ್ಟದ ತ್ಯಾಜ್ಯಮುಕ್ತ ನವಕೇರಳ ಬ್ಲೋಕ್ ಮಟ್ಟದ ಶುಚಿತ್ವ ಘೋಷಣೆ  ಬ್ಲೋಕ್ ಪಂಚಾಯತ್ ಹಾಲ್‌ನಲ್ಲಿ ನಡೆಯಿತು. ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲ ಹಾಜಿ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂ. ಅಧ್ಯಕ್ಷೆ ಸೈಮಾ ಸಿ.ಎ ಉದ್ಘಾಟಿಸಿದರು.  ವಿವಿಧ ಗ್ರಾಮ ಪಂಚಾಯತ್‌ಗಳಿಂದ ಹಾಗೂ ನಗರಸಭೆಗಳಿಂದ ಆಯ್ಕೆಗೊಂ ಡವರ ಪೈಕಿ  ಶುಚಿತ್ವ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಗೈದವರನ್ನು ಹಾಗೂ ಸಂಸ್ಥೆಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದೇಹದಾರ್ಢ್ಯ ಪಟು ನೇಣು ಬಿಗಿದು ಸಾವು

ಮಲಪ್ಪುರಂ: ದೇಹದಾರ್ಢ್ಯ ಪಟುವಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕೊಂಡೋಟಿ ಕೋಟಪ್ಪುರಂ  ಅಂದಿಯೂರ್‌ಕುನ್ನು ವೆಳ್ಳಾರತ್ತೋಡಿ ನಿವಾಸಿ ಮುಹಮ್ಮದ್ ಕುಟ್ಟಿ ಎಂಬವರ ಪುತ್ರ ಯಾಸಿರ್ ಅರಾಫತ್ (34) ಮೃತ ಯುವಕ.  ನಿನ್ನೆ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ. ಜಿಲ್ಲಾ, ರಾಜ್ಯ ಮಟ್ಟದಲ್ಲಿ ನಡೆದ ವಿವಿಧ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದರು. ಇವರು ಈ ಹಿಂದೆ ಮಿಸ್ಟರ್ ಕೇರಳ ಪ್ರಶಸ್ತಿ ಗೆದ್ದುಕೊಂಡಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಶ್ವ ಆಟಿಸಂ ದಿನಾಚರಣೆ

ಕಾಸರಗೋಡು: ವಿಶ್ವ ಆಟಿಸಂ ದಿನದ ಅಂಗವಾಗಿ ಕಾಸರಗೋಡು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು (ಡಿ.ಎಲ್.ಎಸ್.ಎ) ಕಾಸರಗೋಡು ವಿಕಲಚೇತನರÀ ಕ್ಷೇಮಾಭಿವೃದ್ಧಿ ಸಹಕಾರಿ ಸಂಘದ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಿತಾ ಉದ್ಘಾಟನೆ ನಿರ್ವಹಿಸಿದರು. ವಿಕಲಚೇತನರ ಕ್ಷೇಮ ಸಹಕಾರ ಸಂಘದ ಅಧ್ಯಕ್ಷ ಪಿ.ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂಡೋಸಲ್ಫಾನ್ ಸೆಲ್ ಡೆಪ್ಯುಟಿ ಕಲೆಕ್ಟರ್ ಜಿಜೋ ಲಾರೆನ್ಸ್ ಕೆ.ಎ.ಎಸ್, ಡಿ.ಎಲ್.ಎಸ್.ಎ ಸೆಕ್ಷನ್ ಆಫೀಸರ್ ಕೇಶವನ್ ಎ.ಪಿ, ಕಾಸರಗೋಡು ಪೀಪಲ್ಸ್ ಫೋರಂ ಅಧ್ಯಕ್ಷ ಪ್ರೊ.ವಿ. …

ನಿಧನ

ನೀರ್ಚಾಲು: ಬೇಳ ವಿಷ್ಣು ಮೂರ್ತಿ ನಗರ ನಿವಾಸಿ ಭಂಡಾರಿ ಶೆಟ್ಟಿ (85) ಎಂಬವರು ನಿಧನಹೊಂದಿದರು.  ಇವರು ಚಿಕ್ಕಮಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ರಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ  ಭಾಗೀರಥಿ, ಪುತ್ರಿ ಅನುರಾಧ, ಸಹೋದರ-ಸಹೋದರಿ ಯರಾದ ರಾಜ್‌ಮೋಹನ್ ಶೆಟ್ಟಿ, ಜಯನಾರಾಯಣ ಶೆಟ್ಟಿ, ಸೀತಾರತ್ನ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಭಂಡಾರಿ ಶೆಟ್ಟಿಯವರ ಇನ್ನೋರ್ವೆ ಪುತ್ರಿ ಸುಧಾ ಹಾಗೂ   ಸಹೋದರರಾದ ರಾಮಯ್ಯ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ, ದಮಣ್ಣ ಶೆಟ್ಟಿ, ಸಹೋದರಿ ಶ್ಯಾಮಲಾ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

ಪುತ್ತಿಗೆಯಲ್ಲಿ ಸ್ಮಾರ್ಟ್ ವಿಲ್ಲೇಜ್ ಆಫೀಸ್ ಉದ್ಘಾಟನೆಗೆ ಸಿದ್ಧ

ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಸ್ಮಾರ್ಟ್ ಗ್ರಾಮ ಕಚೇರಿ ನಿರ್ಮಾಣ  ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಕಟ್ಟಡದಲ್ಲಿ ಇನ್ನು ಪೀಠೋಪಕರಣ ಹಾಗೂ ಐಟಿ ವ್ಯವಸ್ಥೆ ಏರ್ಪಡಿಸಲು ಮಾತ್ರವೇ ಬಾಕಿಯಿದೆ. ಈ ಕೆಲಸ ಪೂರ್ತಿಗೊಂಡರೆ ಸಂಬಂ ಧಪಟ್ಟ ಇಲಾಖೆಯಿಂದ  ಉದ್ಘಾಟನೆ ದಿನ ನಿಗದಿಯಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 75 ಲಕ್ಷ ರೂಪಾಯಿ ವ್ಯಯಿಸಿ ಎರಡು ಅಂತಸ್ತಿನ  ಕಟ್ಟಡ ನಿರ್ಮಿ ಸಲಾಗಿದೆ. 2023 ಅಗೋಸ್ತ್‌ನಲ್ಲಿ ಶಾಸಕ ಎಕೆಎಂ ಅಶ್ರಫ್ ಈ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ್ದರು.

ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ನೇಮೋತ್ಸವ ಆರಂಭ

ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ನಿನ್ನೆಯಿಂದ ಆರಂಭ ಗೊಂಡಿದ್ದು, ನಾಳೆ ತನಕ ನಡೆಯಲಿದೆ. ನಿನ್ನೆ ಬೆಳಿಗ್ಗೆ ಗಣಹೋಮ, ಸಂಜೆ ಭಂಡಾರ ಮನೆಯಲ್ಲಿ ಶ್ರೀ ಗುಳಿಗ ದೈವ, ಶ್ರೀ ಕೊರತಿ ದೈವದ ನೇಮ, ರಾತ್ರಿ ಶ್ರೀ ಕೊರಗ ತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮೋತ್ಸವ, ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ನವದುರ್ಗಾ ಕುಣಿತಾ ಭಜನಾ ಸಂಘ ಪುಳಿಕುತ್ತಿ ಇವರಿಂದ ಕುಣಿತ ಭಜನೆ, ಸ್ಥಳೀಯ ಪ್ರತಿಭೆಗಳಿಂದ ನೄತ್ಯ, ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಿತು.

450 ಗ್ರಾಂ ಹ್ಯಾಶಿಶ್ ವಶ: ಕಾರು ಸಹಿತ ಓರ್ವ ಸೆರೆ

ಮಂಜೇಶ್ವರ: ಕೋಡಿಬೈಲು ಗ್ರಾಮದ ಮಣ್ಣಂಗುಳಿ ತೆಕ್ಕೇಕುನ್ ಎಂಬಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತುವಾದ 130   ಗ್ರಾಂ ಹ್ಯಾಶಿಶ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆಸಂಬಂಧಿಸಿ ಬಂಟ್ವಾಳ ತಾಲೂಕಿನ ಮಡುಕುಂಜೆ ನಿವಾಸಿ ಕಲಂದರ್ ಶಾಫಿ (30) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈತ ಈಗ ಮಣ್ಣಂಗುಳಿ ತೆಕ್ಕೇಕುನ್ನಿನಲ್ಲಿ ವಾಸಿಸುತ್ತಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮಾಲು ಸಾಗಿಸಲು ಬಳಸಲಾದ ಮಾರುತಿ ಸ್ವಿಫ್ಟ್ಟ್ ಕಾರು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟಿ …