ಕಾಸರಗೋಡು ಬ್ಲೋಕ್ ಮಟ್ಟದ ತ್ಯಾಜ್ಯಮುಕ್ತ ನವಕೇರಳ ಘೋಷಣೆ

ಕಾಸರಗೋಡು: ಕಾಸರಗೋಡು ಬ್ಲೋಕ್ ಪಂಚಾಯತ್ ಮಟ್ಟದ ತ್ಯಾಜ್ಯಮುಕ್ತ ನವಕೇರಳ ಬ್ಲೋಕ್ ಮಟ್ಟದ ಶುಚಿತ್ವ ಘೋಷಣೆ  ಬ್ಲೋಕ್ ಪಂಚಾಯತ್ ಹಾಲ್‌ನಲ್ಲಿ ನಡೆಯಿತು. ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಸಕೀನಾ ಅಬ್ದುಲ್ಲ ಹಾಜಿ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂ. ಅಧ್ಯಕ್ಷೆ ಸೈಮಾ ಸಿ.ಎ ಉದ್ಘಾಟಿಸಿದರು.  ವಿವಿಧ ಗ್ರಾಮ ಪಂಚಾಯತ್‌ಗಳಿಂದ ಹಾಗೂ ನಗರಸಭೆಗಳಿಂದ ಆಯ್ಕೆಗೊಂ ಡವರ ಪೈಕಿ  ಶುಚಿತ್ವ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಗೈದವರನ್ನು ಹಾಗೂ ಸಂಸ್ಥೆಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

You cannot copy contents of this page