ಮುಂದಿನ ವರ್ಷದಿಂದ ಕೌಶಲ್ಯೋತ್ಸವ-ಸಚಿವ

ತಿರುವನಂತಪುರ: ರಾಜ್ಯದಲ್ಲಿ ಯುವಜನೋತ್ಸವದ ಮಾದರಿಯಲ್ಲಿ ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯು ತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೌಶಲ್ಯೋತ್ಸವ ನಡೆಸಲಾಗುವು ದೆಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ. 22ಕ್ಕಿಂತ ಕೆಳಪ್ರಾಯದ ವಿದ್ಯಾ ರ್ಥಿಗಳಿಗಾಗಿ ವಿವಿಧ ಉದ್ಯೋಗ ವಲಯಗಳ ಬಗ್ಗೆ ಜ್ಞಾನ ಮೂಡಿಸಲು ಹಾಗೂ ಅಂತಹ ವಲಯಗಳಲ್ಲ್ಲಿ ವೈವಿಧ್ಯಮಯ ಉದ್ಯೋಗ ಲಭಿಸು ವಂತೆ ಮಾಡಲು ಕೌಶಲ್ಯೋತ್ಸವ ಸಹಾಯಕವಾಗಲಿದೆಯೆಂದು ಸಚಿವ ರು ತಿಳಿಸಿದ್ದಾರೆ. ಇದು ವಿದ್ಯಾರ್ಥಿ ಗಳಿಗೆ ಉದ್ಯೋಗ ಸಾಧ್ಯತೆ ಲಭಿಸು ವಂತೆ ಮಾಡಲು ಸಹಾಯಕವಾಗ ಲಿದೆ. ಇದರ ಹೊರತಾಗಿ …

ಮಂಜೇಶ್ವರ ಬ್ಲೋಕ್ ಪಂಚಾಯತ್ ಬಜೆಟ್ನಲ್ಲಿ ಆರೋಗ್ಯ, ವಸತಿ, ಶುಚಿತ್ವಕ್ಕೆ ಆದ್ಯತೆ

ಮಂಜೇಶ್ವರ: ಆರೋಗ್ಯ, ವಸತಿ, ಶುಚಿತ್ವ, ತ್ಯಾಜ್ಯ ಸಂಸ್ಕರಣೆ ಎಂಬಿವುಗಳಿಗೆ ಆದ್ಯತೆ ನೀಡಿ ಮಂಜೇಶ್ವರ ಬ್ಲೋಕ್ ಪಂಚಾಯತ್ನ 2025-26ನೇ ವರ್ಷದ ಬಜೆಟ್ನ್ನು ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ.ಕೆ ಮಂಡಿ ಸಿದರು. 92,98,292ರೂ. ಪ್ರಾರಂಭಿಕ ಬಾಕಿ ಹಾಗೂ 37,78,049,73 ರೂ. ವೆಚ್ಚ ಮತ್ತು 1,00,23,065 ರೂ. ಉಳಿಕೆ ನಿರೀಕ್ಷಿಸುವ ಬಜೆಟ್ ಮಂಡಿಸಲಾಗಿದೆ. ಬ್ಲೋಕ್ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಾದ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ಮಂಜೇಶ್ವರ ಸಿಎಚ್ಸಿ ಎಂಬೀ ಆಸ್ಪತ್ರೆಗಳಲ್ಲಿ ಔಷಧ ಲಭ್ಯಗೊಳಿಸಲು 2 ಕೋಟಿ ರೂ. ಮೀಸಲಿಡಲಾಗಿದೆ. ಎಲ್ಲರಿಗೂ ಮನೆ ಎಂಬ …

ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ: ಜಿಲ್ಲಾ ಮಟ್ಟದಲ್ಲಿ ಬೃಹತ್ ರ‍್ಯಾಲಿ-ಎಡರಂಗ ಸಂಚಾಲಕ

ತಿರುವನಂತಪುರ: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕದಂ ಗವಾಗಿ ರಾಜ್ಯದ  ಎಲ್ಲಾ ಜಿಲ್ಲೆಗಳಲ್ಲೂ ಬೃಹತ್ ರ‍್ಯಾಲಿಗಳನ್ನು ನಡೆಸಲಾಗುವು ದೆಂದು ಎಡರಂಗ ರಾಜ್ಯ ಸಂಚಾಲಕ ಟಿ.ಪಿ. ರಾಮಕೃಷ್ಣನ್ ತಿಳಿಸಿದ್ದಾರೆ. ರ‍್ಯಾಲಿಗಳನ್ನು ಯಶಸ್ವಿಗೊಳಿಸಲು ಜಿಲ್ಲಾ  ಮಟ್ಟದಲ್ಲಿ ಎಡರಂಗ ಸಭೆಗಳನ್ನು ಕರೆದು ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಸರಕಾರದ ನಾಲ್ಕನೇ ವಾರ್ಷಿಕ ರಾಜ್ಯ ಮಟ್ಟದ ಉದ್ಘಾಟನೆ ಎಪ್ರಿಲ್ 21ರಂದು ಕಾಸರಗೋಡಿನಲ್ಲಿ ನಡೆಯಲಿದೆ. ಅಂದು ಕಾಸರಗೋಡಿನಲ್ಲಿ  ಎಡ ರಂಗದಿಂದ ಬೃಹತ್ ರ‍್ಯಾಲಿಯೂ ನಡೆಯಲಿದೆ. ನಂತರದ ವಿವಿಧ ದಿನಗಳಲ್ಲಾಗಿ ರಾಜ್ಯದ ಇತರ ಎಲ್ಲಾ ಜಿಲ್ಲೆಗಳಲ್ಲೂ ರ‍್ಯಾಲಿ ನಡೆಸಲಾಗು …

ರಾಜ್ಯದಲ್ಲಿ ಅರ್ಬನ್ ಮೈನಿಂಗ್ ಆರಂಭಿಸಲು ತೀರ್ಮಾನ

ಕಾಸರಗೋಡು: ರಾಜ್ಯದಲ್ಲಿ ಇಲೆಕ್ಟ್ರೋನಿಕ್ ತ್ಯಾಜ್ಯ (ಇ-ತ್ಯಾಜ್ಯ) ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹಾಗೂ ಅದರಲ್ಲಿ ರುವ ಖನಿಜಾಂಶಗಳನ್ನು ಬೇರ್ಪಡಿಸಿ ಅಂತಹ ಖನಿಜಾಂ ಗಳನ್ನು ಮರು ಬಳಕೆಗಾಗಿ ರಾಜ್ಯದಲ್ಲಿ ಅರ್ಬನ್ ಮೈನಿಂಗ್ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ.ಸೆAಟರ್ ಫೋರ್ ಮೆಟೀರಿ ಯಲ್ಸ್ ಫೋರ್ ಇಲೆಕ್ಟ್ರೋನಿಕ್ಸ್ ಟೆಕ್ನೋಲಜಿ (ಸಿ-ಮೆಟ್) ಖಾಸಗಿ ಪಾಲುದಾಕೆ ಯೊಂದಿಗೆ ಈ ಯೋಜನೆ ಜ್ಯಾರಿಗೊಳಿಸಲಾಗು ವುದು. ಇಲೆಕ್ಟ್ರೋನಿಕ್ ತ್ಯಾಜ್ಯಗಳಲ್ಲಿ ಲಿಥಿಯಂ ಕೋಬೋಲ್ಡ್, ನಿಕ್ಕಲ್ ಎಂಬಿತ್ಯಾದಿ ಖನಿಜಾಂಶಗಳು ಒಳ ಗೊಂಡಿದ್ದು, ಅರ್ಬನ್ ಮೈನಿಂಗ್ ಮೂಲಕ …

ಕೇರಳ ರಾಜ್ಯ ಲಾಟರಿಯಲ್ಲಿ ನಾಲ್ಕರ ಹೆಸರು ಬದಲಾವಣೆ: ಪ್ರಥಮ ಬಹುಮಾನ ಇನ್ನು 1 ಕೋಟಿ ರೂ.

ಕಾಸರಗೋಡು: ಕೇರಳ ರಾಜ್ಯ ಲಾಟರಿಯ ಅಕ್ಷಯ, ವಿನ್-ವಿನ್, ಫಿಫ್ಟಿ-ಫಿಫ್ಟಿ, ಮತ್ತು ನಿರ್ಮಲ್ ಎಂಬೀ ಹೆಸರುಗಳನ್ನು ಬದಲಾ ಯಿಸಲು ಲಾಟರಿ ಇಲಾಖೆ ತೀರ್ಮಾನಿಸಿದೆ. ಇದರಂತೆ ಈ ಲಾಟರಿ ಟಿಕೆಟ್ಗಳ ಹೆಸರನ್ನು ಇನ್ನು ಅನುಕ್ರಮವಾಗಿ ಸಂವೃದ್ಧಿ, ಧನಲಕ್ಷ್ಮಿ, ಭಾಗ್ಯಧಾರ ಹಾಗೂ ಸುವರ್ಣ ಕೇರಳಂ ಎಂದಾಗಿ ಬದಲಾಯಿಸ ಲಾಗುವುದು. ಮಾತ್ರವಲ್ಲ ಈ ಎಲ್ಲಾ ಲಾಟರಿ ಟಿಕೆಟ್ಗಳ ದರವನ್ನು ಈಗಿರುವ 40 ರೂ.ನಿಂದ 50 ರೂ.ಗೇರಿಸಲು ತೀರ್ಮಾನಿಸ ಲಾಗಿದೆ. ಇವುಗಳ ಪ್ರಥಮ ಬಹುಮಾನ ಮೊತ್ತವನ್ನು ಒಂದು ಕೋಟಿ ರೂ.ಗೇರಿಸುವ ತೀರ್ಮಾನ ವನ್ನೂ ಇಲಾಖೆ …

5.12 ಲಕ್ಷ ಆದ್ಯತಾ ಕಾರ್ಡ್ ಸದಸ್ಯರಿಗೆ ರೇಶನ್ ನಷ್ಟಹೊಂದುವ ಸಾಧ್ಯತೆ

ತಿರುವನಂತಪುರ: ಆದ್ಯತಾ ವಿಭಾಗಕ್ಕೆ ಸೇರಿದ ಹಳದಿ ಮತ್ತು ಪಿಂಕ್ ಕಾರ್ಡ್ಗಳಲ್ಲಿ ಸದಸ್ಯರಾಗಿರುವವರ ಪೈಕಿ 5.12 ಲಕ್ಷ ಮಂದಿ ಇನ್ನೂ ಮಸ್ಟರಿಂಗ್ ನಡೆಸದೇ ಇರುವ ಕಾರಣದಿಂದಾಗಿ ಅವರಿಗೆ ರೇಶನ್ ನಷ್ಟಹೊಂದುವ ಸಾಧ್ಯತೆ ಇದೆ. ಮಸ್ಟರಿಂಗ್ ನಡೆಸಲು ಕೇಂದ್ರ ಸರಕಾರ ನೀಡಿದ ಸಮಯ ವ್ಯಾಪ್ತಿ ಈಗಾಗಲೇ ಕೊನೆಗೊಂಡಿದೆ. ಅದನ್ನು ಮತ್ತೆ ವಿಸ್ತರಿಸುವಂತೆ ಮಾಡುವ ಪ್ರಯತ್ನದಲ್ಲೂ ಕೇರಳ ಸರಕಾರ ಇನ್ನೊಂದೆಡೆ ತೊಡಗಿದೆ.ಆದ್ಯತಾ ವಿಭಾಗಕ್ಕೊಳಪಟ್ಟ ರೇಶನ್ ಕಾರ್ಡ್ಗಳಲ್ಲಿ ಸದಸ್ಯರಾಗಿ ರುವವರ ಪೈಕಿ ಶೇ. 96.40ರಷ್ಟು ಮಂದಿ ಮಾತ್ರವೇ ಮಸ್ಟರಿಂಗ್ ನಡೆಸಿದ್ದಾರೆ. ಈ ವಿಭಾಗದಲ್ಲಿ …

ಪ್ರತಾಪನಗರ ಪರಿಸರದಲ್ಲಿ ಬೀದಿ ನಾಯಿ ಕಾಟ: 20ರಷ್ಟು ಕೋಳಿಗಳು ನಾಪತ್ತೆ

ಮಂಗಲ್ಪಾಡಿ:  ಪಂಚಾಯತ್‌ನ ಪ್ರತಾಪನಗರ, ಪುಳಿಕುತ್ತಿ ಪರಿಸರಗಳಲ್ಲಿ  ಬೀದಿ ನಾಯಿಗಳ ಕಾಟ ವ್ಯಾಪಕ ಗೊಂಡಿರುವುದಾಗಿ ದೂರಲಾಗಿದೆ. ಕೋಳಿ ಗೂಡಿನಿಂದ 20ರಷ್ಟು ಕೋಳಿಗಳನ್ನು ಬೀದಿ ನಾಯಿಗಳು ಕೊಂಡೊಯ್ದಿರುವುದಾಗಿ ಸ್ಥಳೀಯರು ದೂರುತ್ತಾರೆ. ರಾತ್ರಿ ಹೊತ್ತಿನಲ್ಲಿ  ಗೂಡಿನ ನೆಟ್ ತುಂಡುಮಾಡಿ ಕೋಳಿಗಳನ್ನು ಕೊಂಡೊಯ್ಯುತ್ತಿರು ವುದಾಗಿ ಸ್ಥಳೀಯರು ತಿಳಿಸುತ್ತಿದ್ದು, ಇಲ್ಲಿನ ಸೋಮನಾಥ ಶೆಟ್ಟಿ, ರಮೇಶ್ ಕಾರ್ನವರ್, ಲಕ್ಷ್ಮಣ್‌ದಾಸ್, ಕೃಷ್ಣ ಶೆಟ್ಟಿಗಾರ್, ಸುಂದರಿ ಪುಳಿಕುತ್ತಿ ಇವರ ಕೋಳಿಗಳನ್ನು ಬೀದಿನಾಯಿಗಳು ಕೊಂಡೊಯ್ದಿವೆ ಎಂದಿದ್ದಾರೆ. ಹಗಲು ರಾತ್ರಿ ಹಿಂಡುಹಿಂಡಾಗಿ ನಾಯಿಗಳು ಈ ಪ್ರದೇಶದಲ್ಲಿ ಸುತ್ತಾಡುತ್ತಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ.

ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೈದ ಘಟನೆ: ಸ್ವಯಂ ಪ್ರಕರಣ ದಾಖಲಿಸಿದ ರಾಷ್ಟ್ರೀಯ ಮಾನವಹಕ್ಕು ಆಯೋಗ

ಕಾಸರಗೋಡು: ಹೊಸದುರ್ಗ ಖಾಸಗಿ ನರ್ಸಿಂಗ್  ಕಾಲೇಜೊಂದರ ತೃತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಚೈತನ್ಯ ಕುಮಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕು ಆಯೋಗ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಂಡಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೈದ ಪ್ರಕರಣದ ಕುರಿತಾದ ಪೂರ್ಣ ವರದಿಯನ್ನು ನಾಲ್ಕು ವಾರದೊಳಗಾಗಿ ಸಲ್ಲಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ನಿರ್ದೇಶ ನೀಡಿದೆ. ನರ್ಸಿಂಗ್ ಹಾಸ್ಟೆಲ್‌ನಲ್ಲಿ ಅದರ ವಾರ್ಡನ್ ಮಾನಸಿಕ ಕಿರುಕುಳ ನೀಡುತ್ತಿದ್ದು, ಅದುವೇ  ಚೈತನ್ಯ ಕುಮಾರಿ ಆತ್ಮಹತ್ಯೆಗೈಯ್ಯಲು ಕಾರಣವಾಗಿತ್ತೆಂಬ ಆರೋಪ ಉಂಟಾಗಿದೆ. …

107 ಕಿಲೋ ಗಾಂಜಾ ವಶ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಹೋದ ಅಬಕಾರಿ ಅಧಿಕಾರಿಗಳಿಗೆ ಇರಿದು ಕೊಲೆಗೈಯ್ಯಲೆತ್ನ; ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಅಬಕಾರಿ ಅಧಿಕಾರಿಗ ಳಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಅತೀ ಸಾಹಸದಿಂದ ಸೆರೆಹಿಡಿಯಲಾಗಿದೆ. ಬಂಬ್ರಾಣ ನಿವಾಸಿ ಅಬ್ದುಲ್ ಬಾಸಿತ್ (40) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಈತನನ್ನು ಕಾಸರಗೋಡು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ   ರಿಮಾಂಡ್ ವಿಧಿಸಲಾಗಿದೆ. ಕಳೆದ ವರ್ಷ ಅಬಕಾರಿ ಅಧಿಕಾ ರಿಗಳು ನಡೆಸಿದ ಕಾರ್ಯಾಚರಣೆ ಯೊಂದರಲ್ಲಿ 107 ಕಿಲೋ ಗಾಂಜಾ ವಶಪಡಿ ಲಾಗಿತ್ತು. ಈ ಪ್ರಕರಣದಲ್ಲಿ ಅಬ್ದುಲ್ ಬಾಸಿತ್‌ನನ್ನು ನಾಲ್ಕನೇ ಆರೋಪಿಯಾಗಿ ಕೇಸು ದಾಖಲಿಸ ಲಾಗಿತ್ತು. ಆದರೆ ಅನಂತರ ಆರೋಪಿ ತಲೆಮರೆಸಿಕೊಂಡಿದ್ದನು. ಈತ ನಿನ್ನೆ …

ಮಧೂರು: ಸಾಧ್ವಿ ಶ್ರೀ ಮಾತಾನಂದಮಯಿಯವರಿಗೆ ಇಂದು ಪೂರ್ಣಕುಂಭ ಸ್ವಾಗತ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ಇಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳಾಗಿ ಶ್ರೀ ಧರ್ಮಶಾಸ್ತ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಸನ್ನಿಧಿಯಲ್ಲಿ ಕಲಶಾಭಿಷೇಕ, ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ ನಡೆಯಿತು. ಸಂಜೆ 5ರಿಂದ ಭದ್ರಕಮಂಡಲಪೂಜೆ, ಪಂಚ ವಿಂಶತಿ ದ್ರವ್ಯ ಮೀಳಿತ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ನವಕುಂಡಗಳಲ್ಲಿ ಅಧಿವಾಸ ಹೋಮಗಳು, ಮಹಾಗಣಪತಿ ದೇವರಿಗೆ 109 ಕಲಶಪ್ರತಿಷ್ಠೆ, ಅಧಿವಾಸ ಹೋಮ ನಡೆಯಲಿರುವುದು. ಇಂದು ಬೆಳಿಗ್ಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನAನ ಸಾಧ್ವಿ ಶ್ರೀ ಮಾತಾನಂದಮಯಿ …