ಮುಂದಿನ ವರ್ಷದಿಂದ ಕೌಶಲ್ಯೋತ್ಸವ-ಸಚಿವ

ತಿರುವನಂತಪುರ: ರಾಜ್ಯದಲ್ಲಿ ಯುವಜನೋತ್ಸವದ ಮಾದರಿಯಲ್ಲಿ ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯು ತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೌಶಲ್ಯೋತ್ಸವ ನಡೆಸಲಾಗುವು ದೆಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದ್ದಾರೆ.

22ಕ್ಕಿಂತ ಕೆಳಪ್ರಾಯದ ವಿದ್ಯಾ ರ್ಥಿಗಳಿಗಾಗಿ ವಿವಿಧ ಉದ್ಯೋಗ ವಲಯಗಳ ಬಗ್ಗೆ ಜ್ಞಾನ ಮೂಡಿಸಲು ಹಾಗೂ ಅಂತಹ ವಲಯಗಳಲ್ಲ್ಲಿ ವೈವಿಧ್ಯಮಯ ಉದ್ಯೋಗ ಲಭಿಸು ವಂತೆ ಮಾಡಲು ಕೌಶಲ್ಯೋತ್ಸವ ಸಹಾಯಕವಾಗಲಿದೆಯೆಂದು ಸಚಿವ ರು ತಿಳಿಸಿದ್ದಾರೆ. ಇದು ವಿದ್ಯಾರ್ಥಿ ಗಳಿಗೆ ಉದ್ಯೋಗ ಸಾಧ್ಯತೆ ಲಭಿಸು ವಂತೆ ಮಾಡಲು ಸಹಾಯಕವಾಗ ಲಿದೆ. ಇದರ ಹೊರತಾಗಿ ಕೈಸ್‌ನ ನೇತೃತ್ವದಲ್ಲಿ  ಕೌಶಲ್ಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜ್ಯಾರಿ ಗೊಳಿಸಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.

You cannot copy contents of this page