ಬಿ.ಎಂ.ಎಸ್ ಕಾರ್ಯಕರ್ತ ಜ್ಯೋತಿಷ್ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿಗಳಾದ ಎಸ್ಡಿಪಿಐ ಕಾರ್ಯಕರ್ತರ ಖುಲಾಸೆ

ಕಾಸರಗೋಡು: ಬಿಎಂಎಸ್ ಕಾರ್ಯಕರ್ತನಾಗಿದ್ದ ಅಣಂಗೂರು ಜೆಪಿ ಕಾಲನಿಯ ಜ್ಯೋತಿಷ್ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಗಳಾಗಿರುವ ಎಸ್ಡಿಪಿಐ ಕಾರ್ಯಕರ್ತರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.ಎಸ್ಡಿಪಿಐ ಕಾರ್ಯಕರ್ತರಾದ ರಫೀಕ್ ಅಣಂಗೂರು, ಹಮೀದ್ ಕಡಪ್ಪುರಂ, ಸಾಬೀರ್ ಚೇರಂಗೈ ಮತ್ತು ಅಶ್ರಫ್ ಅಣಂಗೂರು ಎಂಬವರು ಈ ಪ್ರಕರಣದ ಆರೋಪಿಗಳಾಗಿದ್ದು, ಅವರ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.2017 ಅಗೋಸ್ತ್ 10ರಂದು ಜ್ಯೋತಿಷ್ ಬೈಕ್ನಲ್ಲಿ ಅಣಂಗೂರಿ …

ರೈಲಿನಲ್ಲಿ ತೆರಳಿದ ವ್ಯಕ್ತಿ ಹಿಂತಿರುಗಿಲ್ಲ ದೂರು ದಾಖಲು

ಕಾಸರಗೋಡು: ನೋರ್ತ್ ತೃಕರಿಪುರ್, ಪೂಚೋಲ್ ನಿವಾಸಿ ಸುರೇಶ್ (59) ನಾಪತ್ತೆಯಾ ಗಿರುವುದಾಗಿ ದೂರಲಾಗಿದೆ. ಸಹೋದರಿ ಪಿ.ವಿ. ಶೀಜಾ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿ ಸಿದರು. ಈ ತಿಂಗಳ 20ರಂದು ಬೆಳಿಗ್ಗೆ 7 ಗಂಟೆಗೆ ತೃಕರಿಪುರ ರೈಲು ನಿಲ್ದಾಣಕ್ಕೆ ತಲುಪಿ ರೈಲುಗಾಡಿ ಹತ್ತಿ ತೆರಳಿರುವುದಾಗಿ ಶೀಬಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ದಿನಗಳು ಹಲವು ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಟ್ರೇಡಿಂಗ್ ಕಂಪೆನಿಯ ಶೇರು ಭರವಸೆ ನೀಡಿ ವ್ಯಕ್ತಿಯ 43 ಲಕ್ಷ ರೂ. ವಂಚಿಸಿದ ಬಗ್ಗೆ ಸೈಬರ್ ಠಾಣೆಗೆ ದೂರು

ಕಾಸರಗೋಡು: ಟ್ರೇಡಿಂಗ್ ಕಂಪೆನಿಯಲ್ಲಿ ಶೇರು ನೀಡುವುದಾಗಿ ತಿಳಿಸಿ ಮಾಂuಟಿಜeಜಿiಟಿeಜಡ್ ನಿವಾಸಿಯ 43 ಲಕ್ಷ ರೂ. ಅಪಹರಿಸಿರುವುದಾಗಿ ದೂರಲಾಗಿದೆ. ಬಾರಾ ನಿವಾಸಿ ಇ. ರಾಜಗೋಪಾಲನ್ ನೀಡಿದ ದೂರಿನಂತೆ ಸೈಬರ್ ಪೊಲೀಸ್ ಕೇಸು ದಾಖಲಿಸಿದ್ದಾರೆ.ಕಾಸರಗೋಡು ಸೈಬರ್ ಠಾಣೆಯಲ್ಲಿ ಈ ವರ್ಷ ನೋಂದಾಯಿಸಿದ ಮೊದಲ ಪ್ರಕರಣವಾಗಿದೆ ಇದು. 2025 ಫೆಬ್ರವರಿ 22ರಿಂದ ಮಾರ್ಚ್ 21ರವರೆಗಿರುವ ದಿನಗಳಲ್ಲಿ 73 ಎಎಸ್ಕೆ ಎಲೈಟ್ ವೆಲ್ತ್ ಟ್ರೇಡಿಂಗ್ ಕಂಪೆನಿಯ ಪ್ರತಿನಿಧಿ ಎಂಬ ನೆಲೆಯಲ್ಲಿ ಫೋನ್ ಕರೆ ಮಾಡಿ ವಂಚನೆ ನಡೆಸಲಾಗಿತ್ತು. ಬಳಿಕ ವಾಟ್ಸಪ್ ಸಂದೇಶದ ಮೂಲಕ …

1000 ರೂ. ಲಂಚ ಪಡೆದ ವಿಲ್ಲೇಜ್ ಆಫೀಸರ್ಗೆ: 2 ವರ್ಷ ಕಠಿಣ ಸಜೆ, 40,000 ರೂ. ದಂಡ

ಕಾಸರಗೋಡು: ಸ್ಥಳದ ಸ್ಕೆಚ್ ನೀಡಲು 1000 ರೂಪಾಯಿ ಲಂಚ ಪಡೆದ ವಿಲ್ಲೇಜ್ ಆಫೀಸರ್ಗೆ ನ್ಯಾಯಾಲಯ ಎರಡು ವರ್ಷಗಳ ಕಠಿಣ ಸಜೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಆದೂರು ಗ್ರೂಪ್ ವಿಲ್ಲೇಜ್ ಆಫೀಸರ್ ಆಗಿದ್ದ ಕೆ. ಅನಿಲ್ ಕುಮಾರ್ (47)ಗೆ ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಧೀಶ ಕೆ. ರಾಮಕೃಷ್ಣನ್ ಈ ಶಿಕ್ಷೆ ವಿಧಿಸಿದ್ದಾರೆ. ಅನಿಲ್ ಕುಮಾರ್ ಚೆಮ್ನಾಡ್ನ ಪರವನಡ್ಕ ನಿವಾಸಿಯಾ ಗಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿ ಸಬೇಕೆಂದೂ ನ್ಯಾಯಾಲಯದ ತೀರ್ಪಿನಲ್ಲಿ …

ಸಿಕ್ಕಿಬಿದ್ದ ಚಿರತೆ ತೃಶೂರು ಪಾರ್ಕ್‌ಗೆ ಇದು ಕಳೆದ ತಿಂಗಳು ಬೋನಿಗೆ ಬಿದ್ದು ತಪ್ಪಿಸಿಕೊಂಡಿದ್ದ ಚಿರತೆ

ಕಾಸರಗೋಡು: ಬೇಡಡ್ಕ ಕೊಳತ್ತೂರು ಬರೋಟಿಗೆ ಸಮೀಪದ ಎ.ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನೊಳಗೆ ಸಿಲುಕಿದ ಚಿರತೆಯನ್ನು ಅರಣ್ಯಪಾಲಕರು ನಿನ್ನೆ ರಾತ್ರಿ ಭಾರತದಲ್ಲಿ ಮೊತ್ತಮೊದಲಾಗಿ ಆರಂಭಿಸಿರುವ ಡಿಸೈನ್ ಮೃಗಾಲಯವಾದ ತೃಶೂರಿನ ಪುತ್ತೂರು ಝುವೋಲಜಿಕಲ್ ಪಾರ್ಕ್‌ಗೆ ಸಾಗಿಸಿದ್ದಾರೆ. ಇದು ಐದು ವರ್ಷ ಪ್ರಾಯದ ಗಂಡು ಚಿರತೆಯಾಗಿದೆ.  ಇದರ ಶರೀರದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಅದರಿಂದಾಗಿ ಅರಣ್ಯ ಪಾಲಕರು ಅದಕ್ಕೆ ಮಾದಕಗುಂಡು ಹಾರಿಸಿ  ನಂತರ ಪಶುವೈದ್ಯರಿಂದ ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ಅದನ್ನು ಗೂಡಿನ ಸಹಿತ ತೃಶೂರಿಗೆ …

ಗೂಂಡಾ ನೇತಾರನನ್ನು ಮನೆಗೆ ನುಗ್ಗಿ ಕೊಲೆ

ಕೊಲ್ಲಂ: ಕರುನಾಗಪಳ್ಳಿಯಲ್ಲಿ ಗೂಂಡಾ ನೇತಾರನನ್ನು ಮನೆಗೆ ನುಗ್ಗಿ ತಂಡವೊಂದು ಇರಿದು ಕೊಲೆಗೈದ ಘಟನೆ ನಡೆದಿದೆ. ಕರುನಾಗಪಳ್ಳಿ ನಿವಾಸಿ ಜಿಮ್ ಸಂತೋಷ್ ಯಾನೆ ಸಂತೋಷ್ ಎಂಬಾತ ಕೊಲೆಗೀಡಾದ ವ್ಯಕ್ತಿ. ಹತ್ಯೆಯತ್ನ ಪ್ರಕರಣದಲ್ಲಿ ಸಂತೋಷ್ ಆರೋಪಿಯಾಗಿದ್ದಾ ನೆನ್ನಲಾಗಿದೆ. ಇಂದು ಮುಂಜಾನೆ 2.15ರ ವೇಳೆ ಘಟನೆ ನಡೆದಿದೆ.

ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪ್ರಕರಣ: ಮಗ ತಪ್ಪಿತಸ್ಥ

ಕಾಸರಗೋಡು: ಕಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ಕೊಲೆಗೈದ ಪ್ರಕರಣದ ಆರೋಪಿಯಾ ಗಿರುವ ಮಗನ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಂಡಿದ್ದು, ಆ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥನೆಂದು ವಿಚಾರಣಾ ನ್ಯಾಯಾಲಯವಾದ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣ ಘೋಷಣೆಯನ್ನು ನ್ಯಾಯಾಲಯ ಮೀಸಲಿರಿಸಿದೆ. ಮಾಲೋಂ ಅದಿರಾಂಬು ಕಾಲ ನಿಯ ಪಾಪಿನ್ ವೀಡಿಲ್ ಅನೀಶ್ (36) ಈ ಪ್ರಕರಣದ ಆರೋಪಿ ಯಾಗಿದ್ದಾನೆ.  ೨೦೧೯ ಜೂನ್ ೨೮ರಂದು ರಾತ್ರಿ 11.45ರ ವೇಳೆ   ತಂದೆ …

ಪತ್ನಿಗೆ ನಿಂದಿಸಿ ಹಲ್ಲೆ: ಪತಿ ವಿರುದ್ಧ ಕೇಸು

ಕುಂಬಳೆ: ಯುವತಿಯನ್ನು ನಿಂದಿಸಿ, ಹಲ್ಲೆಗೈದು ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಪತಿ ವಿರುದ್ಧ ಕುಂಬಳೆ ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ. ಪೆರಿಂಗಡಿ ನಿವಾಸಿ ಜಾಸ್ಮಿನ್ ಪಿ (39) ನೀಡಿದ ದೂರಿನಂತೆ ಪತಿ ಬಂಬ್ರಾಣ ಕಕ್ಕಳಂಕುನ್ನುವಿನ ಅಬ್ದುಲ್ಲ ಕುಂಞಿ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2005 ಮಾರ್ಚ್ 18ರಂದು ಜಾಸ್ಮಿನ್ ಹಾಗೂ ಅಬ್ದುಲ್ಲ ಕುಂಞಿಯವರ ಮದುವೆ ನಡೆದಿದೆ. 2021 ಮೇ ತಿಂಗಳಿಂದ ಪತಿ ಅವಾ ಚ್ಯವಾಗಿ ನಿಂದಿಸಿ ಹಲ್ಲೆಗೈಯ್ಯುತ್ತಿರು ವುದಾಗಿ ಜಾಸ್ಮಿನ್ ಆರೋಪಿಸಿದ್ದಾರೆ.

ಮಧೂರು ಬ್ರಹ್ಮಕಲಶೋತ್ಸವ: ವಾಹನ ನಿಲುಗಡೆಗೆ ಮೂರು ಕಡೆ ವ್ಯವಸ್ಥೆ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳನ್ನು ನಿಲುಗಡೆಗೊಳಿಸಲು ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಕೊಲ್ಯ ಏರಿಕ್ಕಳ ಬಯಲು, ಚೇನಕ್ಕೋಡು ಬಯಲು, ಪರಕ್ಕಿಲದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಕಾಸರಗೋಡು ಭಾಗದಿಂದ ಬರುವವರು ಮಧೂರು ಬಯಲಿನಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬೇಕು. ಪುತ್ತೂರು, ವಿಟ್ಲ, ಬದಿಯಡ್ಕ, ಪೆರ್ಲ, ನೀರ್ಚಾಲು ಭಾಗದಿಂದ ಬರುವವರು ಕೊಲ್ಯ ಏರಿಕ್ಕಳ ಬಯಲಿನಲ್ಲಿ, ಮಂಗಳೂರು, ಸುಳ್ಯ, ಕಾಞಂಗಾಡ್ ಮೊದಲಾದೆಡೆಗಳಿಂದ ಬರುವವರು ಚೇನಕ್ಕೋಡ್‌ನಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಬೆಂಬಲ ಸೂಚಿಸಿ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ

ವರ್ಕಾಡಿ: ವೇತನ ಹೆಚ್ಚಳ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ತಿರುವನಂತಪುರದಲ್ಲಿ ನಡೆಸುತ್ತಿರುವ ಹೋರಾಟವನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಪಿಣರಾಯಿ ಸರಕಾರ ಆಶಾ ಕಾರ್ಯಕರ್ತೆಯರ ಕಣ್ಣೀರಿನ ಶಾಪವನ್ನು ಎದುರಿಸಲಿದೆ ಎಂದು ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ನುಡಿದರು. ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ಅವರು ಘೋಷಿಸಿದರು. ವರ್ಕಾಡಿ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ವರ್ಕಾಡಿ ಪಂಚಾಯತ್ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ …