ಮಧ್ಯವಯಸ್ಕ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಮಧ್ಯವಯಸ್ಕ ನೋರ್ವ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ಮಲಾರ್‌ಕೋಡಿ ನಿವಾಸಿ ದಿ| ತಿಮ್ಮಪ್ಪ ನಾಯ್ಕರ ಪುತ್ರ ಶಿವಪ್ಪ ನಾಯ್ಕ (45) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಪಾತೂರು ಗ್ರಾಮದ ಮಲಾರ್ ಹೊಳೆಯಲ್ಲಿ ನಿನ್ನೆ ಸಂಜೆ 4 ಗಂಟೆಗೆ ಮೃತದೇಹ ಕಂಡುಬಂದಿದೆ. ವಿಷಯ ತಿಳಿದು ಮಂಜೇಶ್ವರ ಪೊಲೀಸರು ಹಾಗೂ ಸ್ಥಳೀಯರು ತಲುಪಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಕೂಲಿ ಕಾರ್ಮಿಕನಾದ ಶಿವಪ್ಪ ನಾಯ್ಕ ಕೆಲವು ಕಾಲದಿಂದ ಏಕಾಂಗಿಯಾಗಿ ವಾಸಿಸುತ್ತಿ ದ್ದರೆನ್ನ ಲಾಗಿದೆ. ಅಪಸ್ಮಾರ ರೋಗಿಯೂ ಆಗಿದ್ದರೆಂದು ಹೇಳಲಾಗುತ್ತಿದೆ. …

ನಾಪತ್ತೆಯಾಗಿದ್ದ ಯುವತಿ ಪ್ರಿಯತಮನನ್ನು ಮದುವೆಯಾಗಿ ಠಾಣೆಯಲ್ಲಿ ಹಾಜರು

ಕಾಸರಗೋಡು: ನಾಪತ್ತೆಯಾ ಗಿದ್ದ ಯುವತಿ ಪ್ರಿಯತಮನನ್ನು ಮದುವೆಯಾಗಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದಾಳೆ. ಪಟ್ಲ ಕುದ್ರೆಪ್ಪಾಡಿಯ ರುಶಾಲಿ (18) ಎಂಬಾಕೆ  ಠಾಣೆಯಲ್ಲಿ ಹಾಜರಾದ ಯುವತಿಯೆಂದು ವಿದ್ಯಾನಗರ ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಯುವತಿಯನ್ನು ಸ್ವ-ಇಚ್ಛೆಯಂತೆ ಬಿಡುವುದರೊಂದಿಗೆ ಆಕೆ ಪತಿಯೊಂದಿಗೆ ತೆರಳಿದಳು. ನಿನ್ನೆ ಮುಂಜಾನೆ ೪ ಗಂಟೆಗೆ ರುಶಾಲಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ತಾಯಿ  ಕೆ. ಮಲ್ಲಿಕ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು.    ಮೀಪುಗುರಿಯಲ್ಲಿ ವಾಸಿಸುವ ಲೋಕೇಶ್ ಎಂಬ ಯುವಕನೊಂದಿಗೆ ಹೋಗಿರುವುದಾಗಿ ಸಂಶಯಿಸುವುದಾ ಗಿಯೂ ದೂರಿನಲ್ಲಿ ತಿಳಿಸಲಾಗಿತ್ತು. ಪೊಲೀಸರು …

ಸಿಪಿಐ ನೇತಾರನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಇಬ್ಬರು ಆರೋಪಿಗಳಿಗೆ 9 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಸಿಪಿಐ ನೇತಾ ರರನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯ ಅವರು ಒಂಬತ್ತು ವರ್ಷ ಕಠಿಣ ಸಜೆ ಹಾಗೂ 60,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ನೀರ್ಚಾಲು ಬಾಂಜತ್ತಡ್ಕದ ರವಿತೇಜ ಬಿ. (31) ಮತ್ತು ನೀರ್ಚಾಲು ಕೈಲಂಕಜೆಯ ಪ್ರದೀಪ್ ರಾಜ್ ಕೆ. ಅಲಿಯಾಸ್ ಕುಟ್ಟ (31) ಎಂಬವರಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಆರು ತಿಂಗಳ ಹೆಚ್ಚುವರಿ …

ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು

ಹೊಸದುರ್ಗ: ನರ್ಸಿಂಗ್ ಕಾಲೇ ಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಯತ್ನ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ವಿದ್ಯಾರ್ಥಿನಿ ಮೃತಪಟ್ಟಳು. ಪಾಣ ತ್ತೂರು ನಿವಾಸಿ ಚೈತನ್ಯ (21) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಶನಿವಾರ ಮಧ್ಯಾಹ್ನ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದಿದ್ದಾಳೆ. ಕಳೆದ ಡಿಸೆಂಬರ್ ೭ರಂದು ಕಾಞಂಗಾಡ್‌ನ ನರ್ಸಿಂಗ್ ಹಾಸ್ಟೆಲ್‌ವೊಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು.  ಹಾಸ್ಟೆಲ್ ವಾರ್ಡನ್ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಯತ್ನ ನಡೆಸಿದ್ದಾಳೆಂದು ಅಂದು ದೂರಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು  ವಿವಿಧ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವಿವಿಧ …

ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಜೆಪಿಯ ಕೇರಳದ ಹೊಸ ಸಾರಥಿ

ತಿರುವನಂತಪುರ: ಬಿಜೆಪಿಯ ಕೇರಳ ಘಟಕದ ಹೊಸ ಅಧ್ಯಕ್ಷರನ್ನಾಗಿ ಮಾಜಿಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ರನ್ನು ಆರಿಸಲಾಗಿದೆ. ತಿರುವನಂತಪುರ ಬಿಜೆಪಿಯ ರಾಜ್ಯ ಕಚೇರಿಯಾದ ಮಾರಾರ್ಜಿ ಭವನದಲ್ಲಿ ನಿನ್ನೆ ನಡೆದ ಬಿಜೆಪಿ ರಾಜ್ಯ ಕೋರ್ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಸಲಾ ಯಿತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಚಂದ್ರಶೇಖರ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಅವರನ್ನು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ಆರಿಸಲಾಯಿ ತು. ಬಿಜೆಪಿಯ ಕೇರಳ ಘಟಕದ ಪ್ರಭಾರಿ ಪ್ರಕಾಶ್ ಜಾವ್ದೇಕರ್ ಹಾಗೂ ಪಕ್ಷದ ಹೆಚ್ಚಿನ ಎಲ್ಲ್ಲಾ ರಾಜ್ಯ …

ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ಆಪರೇಶನ್ ಡಿ-ಹಂಟ್ ಕಾರ್ಯಾಚರಣೆಯಂತೆ ಚಂದೇರ ಪೊಲೀಸರು ಅಲ್ಲಿನ ಮಡಕ್ಕರ ಸೇತುವೆ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ 700 ಗ್ರಾಂ ಗಾಂಜಾ ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಒಡಿಸ್ಸಾ ನಿವಾಸಿ ಪದ್ಮಾಲೋಚನ್ ಗಿರಿ (42) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆರೋಪಿ ಪೊಲೀಸರ ಕೈಯಿಂದ ತಪ್ಪಿಸಿ ಪರಾರಿಯಾಗಿದ್ದನು. ತಕ್ಷಣ ಪೊಲೀಸರು ಆತನನ್ನು ಸೆರೆ ಹಿಡಿಯುವಲ್ಲಿ ಸಫಲರಾದರು.

ಸಿಪಿಎಂ ಸ್ಥಳೀಯ ನೇತಾರ ನಿಧನ

ನೀರ್ಚಾಲು: ಸಿಪಿಎಂ ನೇತಾರ ನಾದ ಏಳ್ಕಾನ ನಿವಾಸಿ ನಾರಾಯಣ ಶೆಟ್ಟಿ (87) ನಿಧನಹೊಂದಿದರು. ಈ ಹಿಂದೆ ಟೈಲರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಹಿರಿಯ ಕೃಷಿಕನೂ ಆಗಿದ್ದರು. ಸಿಪಿಎಂ ಮಾಜಿ ಏರಿಯಾ ಕಮಿಟಿ ಸದಸ್ಯನೂ, ಪ್ರಸ್ತುತ ಸಿಪಿಎಂ ಏಳ್ಕಾನ ಬ್ರಾಂಚ್ ಸಮಿತಿ ಸದಸ್ಯರಾಗಿದ್ದರು. ಅಲ್ಲ್ಲದೆ ಕರ್ಷಕ ಸಂಘದಲ್ಲೂ ಸಕ್ರಿಯರಾಗಿದ್ದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ದಿವಾಕರ, ವಸಂತ, ಪ್ರೇಮಾವತಿ, ಸುನಿತ, ಚಂದ್ರಿಕ, ಹರೀಶ್, ಅಳಿಯ-ಸೊಸೆಯಂದಿರಾದ ಹರಿಣಾಕ್ಷಿ, ಮುಕ್ತ, ವಿಜಯ ಕುಮಾರ್, ನಾಗೇಶ್, ಮಾಧವ (ಅಡೂರು ದೇಲಂಪಾಡಿ), ದೀಪ …

ಗಿಳಿವಿಂಡುನಲ್ಲಿ ಗೋವಿಂದ ಪೈಗಳ 142ನೇ ಜನ್ಮ ದಿನಾಚರಣೆ- ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ

ಮಂಜೇಶ್ವರ: ಕನ್ನಡದ ಮೊದಲ ರಾಷ್ಟçಕವಿ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಕೇರಳದಲ್ಲಿರುವುದ ರಿಂದ ಅದನ್ನು ಸಮರ್ಥವಾಗಿ ನಿರ್ವ ಹಿಸಬೇಕಾದ ಹೊಣೆ ಎಲ್ಲರಿಗಿಂತ ಹೆಚ್ಚು ಕೇರಳ ಸರ್ಕಾರಕ್ಕಿದೆ. ರಾಷ್ಟç ಕವಿಯ ಕನಸುಗಳನ್ನು ಸಾಕಾರ ಗೊಳಿಸಲು, ಸಾಹಿತ್ಯಿಕ ಮೌಲ್ಯಗಳನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ಪರಂಪರೆಗೆ ಧಕ್ಕೆ ಬಾರದಂತೆ ಆಧುನಿಕ ಕೌಶಲ್ಯಗಳಿಂದೊಡಗೂಡಿ ಸ್ಮಾರಕ ನಿವೇಶನ ಇನ್ನಷ್ಟು ಪ್ರವರ್ಧಮಾನಕ್ಕೆ ತರಬೇಕು ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥದಾರಿ, ಡಾ.ರಮಾನಂದ ಬನಾರಿ ತಿಳಿಸಿದರು.ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯ ದಲ್ಲಿ ಕರ್ನಾಟಕ …

ಮಾತೆಯರ ಕುಣಿತ ಭಜನೆಯೊಂದಿಗೆ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ ಶೋಭಾಯಾತ್ರೆ 26ರಂದು

ಮಧೂರು: ಪ್ರಸಿದ್ಧ ಶ್ರೀ ಮಧೂರು ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ನಾಡು ನಗರ ಸಜ್ಜುವಾಗುತ್ತಿದೆ. ಊರ, ಪರವೂರ, ಹೊರರಾಜ್ಯ, ಹೊರನಾಡ ಪ್ರಜ್ಞಾವಂತ ಭಕ್ತರು ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಶ್ವರ, ಗಣೇಶರ ಜೊತೆ ಯಲ್ಲಿ ಉಪದೇವತೆಗಳಾದ ದುರ್ಗಾ ಪರಮೇಶ್ವರಿ, ಅಯ್ಯಪ್ಪ, ಸುಬ್ರಹ್ಮಣ್ಯರು ಇಲ್ಲಿ ಭಕ್ತರನ್ನು ಹರಸುತ್ತಿದ್ದಾರೆ. ತುಳುನಾಡಿನ ಆರು ಪ್ರಮುಖ ಗಣಪತಿ ದೇವಸ್ಥಾನಗಳಲ್ಲಿ ಒಂದಾಗಿರುವ ನಮ್ಮ ಮಧೂರು ಕ್ಷೇತ್ರದ ಬ್ರಹ್ಮಕಲಶೋತ್ಸವ ಈ ತಿಂಗಳ ೨೭ರಿಂದ ಪ್ರಾರಂಭವಾಗ ಲಿದೆ. ಇದರ ಪೂರ್ವಭಾವಿಯಾಗಿ 26ರಂದು ಅಪರಾಹ್ನ 2 …

ಮಧೂರು ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ, ಮೂಡಪ್ಪಸೇವೆಗೆ ದಿನಗಣನೆ ಆರಂಭ

ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಕಾರ್ಯಕ್ರಮಗಳ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಈ ತಿಂಗಳ 27ರಿಂದ ಎಪ್ರಿಲ್ 7ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ  ಹಾಗೂ ಮೂಡಪ್ಪ ಸೇವೆ ನಡೆಯಲಿರುವುದು. ಕಾರ್ಯಕ್ರಮಗಳ ಯಶಸ್ವಿಗಾಗಿ ಸಿದ್ಧತೆಗಳು ಭರದಿಂದ  ಸಾಗಿದ್ದು, ಇದೀಗ ಅಂತಿಮ ಹಂತದಲ್ಲಿದೆ. ನಾಡಿನ ವಿವಿಧ ಭಾಗಗಳಲ್ಲಿ ಭಕ್ತರು ಸಮಿತಿ ರೂಪೀಕರಿಸಿದ್ದು, ವಿವಿಧ ಶ್ರಮದಾನ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಲಿದ್ದಾರೆ. …