ರೆಡ್ ಆರ್ಮಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಫ್ತಾರ್ ಸಂಗಮ

ಬಾಯಾರು : ರೆಡ್ ಆರ್ಮಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬಾಯಾರು ಪದವುನಲ್ಲಿ ಮಾದಕ ದ್ರವ್ಯ ವಿರುದ್ಧ ಜಾಗೃತಿ ಅಭಿಯಾನ ಹಾಗೂ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಪಂ. ಅಧ್ಯಕ್ಷೆ ಜಯಂತಿ.ಕೆ ಉದ್ಘಾಟಿಸಿದರು. ಪುರುಷೋತ್ತಮ ಬಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಪಂ.ಅಬಿsವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ರಝಾಕ್ ಚಿಪ್ಪಾರು, ರೆÀhÄಡ್. ಎ ಕಯ್ಯಾರ್, ಹಾರಿಸ್ ಪೈವಳಿಕೆ, ರಹಮತ್ ರಹ್ಮಾನ್, ಎಂ. ಚಂದ್ರ ನಾಯ್ಕ, ಸತ್ತಾರ್ ಬಳ್ಳೂರು ಮಾತನಾಡಿದರು. ವಿನಯ್ ಕುಮಾರ್ ಬಾಯಾರು ಸ್ವಾಗತಿಸಿದರು.

ಕಡಂಬಾರ್ ಜುಮಾ ಮಸೀದಿಯಲ್ಲಿ ಇಫ್ತಾರ್ ಸಂಗಮ

ಮಂಜೇಶ್ವರ: ಕಡಂಬಾರ್ ಜುಮಾ ಮಸೀದಿಯಲ್ಲಿ ಪವಿತ್ರ ರಂಜÁನ್ ಪ್ರಯುಕ್ತ ವೆಲ್ಫೇರ್ ಕಮಿಟಿ ಅಧ್ಯಕ್ಷ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ 10ನೇ ವಾರ್ಡ್ ಅಧ್ಯಕ್ಷ  ಉಸ್ಮಾನ್ ಕಡಂಬಾರ್‌ರ ನೇತೃತ್ವದಲ್ಲಿ ಇಫ್ತಾರ್ ಸಂಗಮ ಹಾಗೂ ಔತಣ ಕೂಟ ನಡೆಯಿತು. ಊರಿನ ಮುಖಂಡರು, ರಾಜಕೀಯ ಹಾಗೂ ಸಾಮಾಜಿಕ ಧಾರ್ಮಿಕ ಸಂಘಟನೆಗಳ ನೇತಾರರು ಪಾಲ್ಗೊಂಡರು. ಈ ಸಂದರ್ಭ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹ್ಮಾನ್, ಉಸ್ಮಾನ್ ಹಾಜಿ ಕಡಂಬಾರ್, ಶಾಫಿ ಬರ್ವ, ಜನ ಪ್ರತಿನಿಧಿಗಳಾದ ಹಮೀದ್ ಹೊಸಂಗಡಿ, ಮೊಹಮ್ಮದ್ ಸಿದ್ದೀಖ್, ನೇತಾರರಾದ …

ತಿಂಗಳ ಹಿಂದೆ ಕೊಲ್ಲಿಯಿಂದ ತಲುಪಿದ್ದ ಯುವಕ ರೈಲಿನಡಿಗೆ ಹಾರಿ ಆತ್ಮಹತ್ಯೆ

ಕಾಸರಗೋಡು: ಒಂದು ತಿಂಗಳ ಹಿಂದೆ ಕೊಲ್ಲಿಯಿಂದ ಊರಿಗೆ ತಲುಪಿದ ಯುವಕ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೈದನು. ಕಣ್ಣೂರು ಪೇರಾಲ್ ಕಾರಕುನ್ನ್ ಹೌಸ್ ನಿವಾಸಿ, ಮಾವುಂಗಲ್ ಪೇರಡ್ಕದಲ್ಲಿ ವಾಸ ಮಾಡುತ್ತಿರುವ  ಜಮೀಶ್ ಫಿಲಿಪ್ (40) ಮೃತಪಟ್ಟವರು. ಇಂದು ಮುಂಜಾನೆ ಕಾಞಂಗಾಡ್ ರೈಲ್ವೇ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಲೋಕೋ ಪೈಲೆಟ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೊಸದುರ್ಗ ಠಾಣಾ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದರು. ಮೃತದೇಹವು ಎರಡು ತುಂಡಾಗಿ ಪತ್ತೆಯಾಗಿದೆ. ಜಮೀಶ್ ಫಿಲಿಪ್ ಆತ್ಮಹತ್ಯೆಗೈಯ್ಯಲು …

ಮನೆಯಲ್ಲಿ ಬೆಂಕಿ ಅನಾಹುತ : ಲಕ್ಷಾಂತರ ರೂ.ಗಳ ನಷ್ಟ

ಕಾಸರಗೋಡು: ಮನೆಗೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ನೆಲ್ಲಿಕಟ್ಟೆಗೆ ಸಮೀಪದ ಚಂದ್ರಂಪಾರದಲ್ಲಿ ನಿನ್ನೆ ರಾತ್ರಿ 11.45ರ ವೇಳೆ ಸಂಭವಿಸಿದೆ. ಚಂದ್ರಂಪಾರದ ಶಾಫಿ ಎಂಬವರ ಮನೆಯಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಮನೆಯ ಅಡುಗೆ ಕೊಠಡಿಯೊಳಗಿದ್ದ ಫ್ರಿಡ್ಜ್, ಗ್ರೈಂಡರ್, ವಾಶಿಂಗ್ ಮೆಶಿನ್, ಸ್ಟೌವ್  ಸೇರಿದಂತೆ ಮನೆ ಸಾಮಗ್ರಿಗಳೆಲ್ಲವೂ ಬೆಂಕಿಗಾಹುತಿಯಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಎಂ.ಕೆ. ರಾಜೇಶ್‌ರ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ …

ಬೈಕ್‌ಗೆ ಕಾರು ಢಿಕ್ಕಿ ಯುವಕನಿಗೆ ಗಾಯ

ಕುಂಬಳೆ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಯುವಕ ಗಾಯಗೊಂಡ ಘಟನೆ ನಡೆದಿದೆ. ಬಾಡೂರು ಪಾಡಿಯ ವಿ.ಪಿ. ಸಂದೇಶ್ ಕುಮಾರ್ (21) ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ದಿನ ಮುಂಜಾನೆ ಬಾಡೂರು ಪದವು ಎಂಬಲ್ಲಿ ಅಪಘಾತವುಂ ಟಾಗಿತ್ತು.  ಸಂದೇಶ್ ಕುಮಾರ್ ಚಲಾಯಿಸುತ್ತಿದ್ದ ಬೈಕ್‌ಗೆ ಎದುರು ಭಾಗದಿಂದ ಬಂದ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿ ರುವುದಾಗಿ ತಿಳಿಸಲಾಗಿದೆ.

ಅಂಗಡಿಮೊಗರು ನಿವಾಸಿ ಜಿದ್ದಾದಲ್ಲಿ ಕುಸಿದುಬಿದ್ದು ಮೃತ್ಯು

ಕುಂಬಳೆ: ಅಂಗಡಿಮೊಗರು ಕಮ್ಮಂದಳ ಎಂಬಲ್ಲಿನ ಕೆ.ಎಸ್. ಸೂಫಿ (50) ಎಂಬವರು ಜಿದ್ದಾದಲ್ಲಿ ಕುಸಿದುಬಿದ್ದು ಮೃತಪಟ್ಟರು. ಕಳೆದ ಮಂಗಳವಾರ ಅಲ್ಲಿನ ವಾಸಸ್ಥಳದಲ್ಲಿ ನಮಾಜು ನಡೆಸಲು ಸಿದ್ಧತೆಯಲ್ಲಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟಿರುವು ದಾಗಿ ತಿಳಿದುಬಂದಿದೆ. ಕಳೆದ ೩೦ ವರ್ಷಗಳಿಂದ ಜಿದ್ದಾದ ಸೂಪರ್ ಮಾರ್ಕೆಟ್‌ನಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಊರಿಗೆ ಬಂದು ಮರಳಿದ್ದರು. ಇವರ ನಿಧನ ಸುದ್ದಿ ತಿಳಿದು ಯು.ಕೆ ಯಲ್ಲಿರುವ ಪುತ್ರ ಸುಹೈಲ್ ಜಿದ್ದಾಕ್ಕೆ ತಲುಪಿದ್ದಾರೆ.  ಮೃತದೇಹದ ಅಂತ್ಯ ಸಂಸ್ಕಾರ ಇಂದು ಮುಂಜಾನೆ ಜಿದ್ದಾದ ಹಯಲ್ …

ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಮೈತ್ರಿ ಬೇಡ, ಏಕಾಂಗಿಯಾಗಿ ಸ್ಪರ್ಧಿಸಬೇಕು- ಕಾಂಗ್ರೆಸ್ ಕೇರಳ ಘಟಕ ಆಗ್ರಹ

ನವದೆಹಲಿ: ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದು ಬೇಡವೆಂದೂ, ತನ್ನ ಸ್ವಂತ ಬಲದಲ್ಲೇ ಪಕ್ಷ ಸ್ಪರ್ಧಿಸಬೇಕೆಂದು ಕಾಂಗ್ರೆಸ್‌ನ ಕೇರಳ ಘಟಕ ಪಕ್ಷದ ಕೇಂದ್ರ ನೇತೃತ್ವ ದೊಂದಿಗೆ ಆಗ್ರಹಿಸಿದೆ. ನವದೆಹಲಿ ಯಲ್ಲಿ ರಾಹುಲ್ ಗಾಂಧಿ ಕರೆದ ಕಾಂಗ್ರೆಸ್‌ನ ಕೇರಳ ಘಟಕದ ನೇತಾರರ ಸಭೆ ಯಲ್ಲಿ ಪಕ್ಷದ ಕೇರಳ ನೇತಾರರು ಈ ಬೇಡಿಕೆ ಮುಂದಿ ರಿಸಿದ್ದಾರೆ.  ಪಶ್ಚಿಮ ಬಂಗಾಲದಲ್ಲಿ ಸಿಪಿಎಂನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಲ್ಲಿ ಅದ ಕೇರಳದಲ್ಲಿ ಯುಡಿಎಫ್‌ಗೆ ಪ್ರತಿಕೂಲಕರವಾಗಿ ಪರಿಣಮಿಸಲಿದೆಯೆಂದು ಕಾಂಗ್ರೆಸ್‌ನ ಕೇರಳ ಘಟಕದ ಹೆಚ್ಚಿನ ನೇತಾರರು …

ಆಶಾ ಕಾರ್ಯಕರ್ತೆಯರಿಂದ ಸೆಕ್ರೆಟರಿಯೇಟ್ ಮುಂದೆ ಉಪವಾಸ ಸತ್ಯಾಗ್ರಹ

ತಿರುವನಂತಪುರ: ರಾಜ್ಯದಲ್ಲ್ಲಿ ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆ ಮುಂದಿರಿಸಿ ಸೆಕ್ರೆಟರಿಯೇಟ್ ಮುಂದೆ ಉಪಪಾಸ ಸತ್ಯಾಗ್ರಹ ಆರಂಭಿಸಿದ್ದಾರೆ.  ಇದೇ ವೇಳೆ  ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್  ದಿಲ್ಲಿಗೆ ತೆರಳಿದ್ದಾರೆ. ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚೆ ನಡೆಸುವ ಉದ್ದೇಶದಿಂದ ಸಚಿವೆ   ದೆಹಲಿಗೆ ತೆರಳಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ ರಾಜ್ಯ ಆರೋಗ್ಯ ಸಚಿವೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ ಆಶಾ ಕಾರ್ಯಕರ್ತೆಯರು ರಂಗಕ್ಕಿಳಿ ದಿದ್ದಾರೆ. ಗೌರವಧನ ೨೧,೦೦೦ರೂ. ಗೇರಿಸಬೇಕೆಂಬ ಬೇಡಿಕೆಯಿಂದ ಹಿಂಜರಿಯುವುದಿಲ್ಲವೆಂದು ಚಳವಳಿಗೆ ನೇತೃತ್ವ ನೀಡುವ ಎಂ.ಎ. ಬಿಂದು, ಎಸ್. ಮಿನಿ …

ಕೇರಳ ಸಂಗೀತ ನಾಟಕ ಅಕಾಡೆಮಿ ಮಾಜಿ ಕಾರ್ಯದರ್ಶಿ ಪಿ. ಅಪ್ಪುಕುಟ್ಟನ್ ನಿಧನ

ಹೊಸದುರ್ಗ: ಕೇರಳ ಸಂಗೀತ ನಾಟಕ ಅಕಾಡೆಮಿ ಮಾಜಿ ಕಾರ್ಯದರ್ಶಿ ಪಿ. ಅಪ್ಪುಕುಟ್ಟನ್ (85) ನಿಧನ ಹೊಂದಿದರು. ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಪುರೋಗಮನ ಕಲಾ ಸಾಹಿತ್ಯ ಸಂಘ ರಾಜ್ಯ ಕಾರ್ಯದರ್ಶಿ, ನಾಟಕ ಕಲಾವಿದ, ಅಧ್ಯಾಪಕ ಎಂಬೀ ರೀತಿಯಲ್ಲಿ ಪ್ರಸಿದ್ಧರಾಗಿದ್ದರು. 1996ರಿಂದ ಐದು ವರ್ಷಗಳ ಕಾಲ ಕೇರಳ ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಿ.ಪಿ. ವತ್ಸಲ, ಮಕ್ಕಳಾದ ಸಿ.ಪಿ. ಶ್ರೀಹರ್ಷನ್, ಸಿ.ಪಿ. ಸರಿತ,  ಸಿ.ಪಿ. ಪ್ರಿಯದರ್ಶನ್, ಅಳಿಯ ಚಿತ್ತರಂಜನ್, …

ಖ್ಯಾತ ಹಾವು ಹಿಡಿತಗಾರ ನಾಗರಹಾವಿನ ಕಡಿತದಿಂದ ಸಾವು

ಚೆನ್ನೈ: ತಮಿಳುನಾಡಿನಲ್ಲಿ ಖ್ಯಾತ ಹಾವು ಹಿಡಿತಗಾರನಾದ ಸಂತೋಷ್ ಕುಮಾರ್ (39) ಎಂಬವರು ನಾಗರಹಾವಿನ ಕಡಿತದಿಂದ ಸಾವಿಗೀಡಾದರು. ಮಡವಳ್ಳಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ನಾಗರಹಾವನ್ನು ಹಿಡಿಯಲೆತ್ನಿಸಿದಾಗ ಅದು ಕಚ್ಚಿತ್ತು. ಕೂಡಲೇ ಕೊಯಂಬತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಂತೋಷ್ ಕುಮಾರ್ 10ನೇ ಹರೆಯದಲ್ಲೇ ಹಾವು ಹಿಡಿಯಲು ಆರಂಭಿಸಿದ್ದರು. 25 ವರ್ಷಗಳ ಮಧ್ಯೆ ಕಾಳಿಂಗ ಸರ್ಪ ಸಹಿತ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು.