ವಸತಿಸಾಲ: ಕೇರಳದಲ್ಲಿ 1.25 ಲಕ್ಷ ಕೋಟಿ ರೂ.

ಮುಂಬಯಿ: ಕೇರಳದಲ್ಲಿ ಪ್ರಸ್ತುತ 1,25,013 ಕೋಟಿ ರೂಪಾಯಿಗಳಿರು ವುದಾಗಿ ನೇಶನಲ್ ಹೌಸಿಂಗ್ ಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ. ಇದು 2024 ಸೆಪ್ಟಂಬರ್ವರೆಗಿನ ಲೆಕ್ಕವಾಗಿದೆ. ರಾಜ್ಯ ಜಿಡಿಪಿಯ 10.91 ಶೇಕಡಾವಾಗಿದೆ. ಇದರಲ್ಲಿ 72,963 ಕೋಟಿ ರೂಪಾಯಿ ಸಾರ್ವಜನಿಕ ವಲಯ ಬ್ಯಾಂಕ್ ಗಳದ್ದಾಗಿದೆ. ಖಾಸಗಿ ಬ್ಯಾಂಕ್ಗಳಲ್ಲಿ 41,010 ಕೋಟಿ, ವಸತಿ ಸಾಲ ಸಂಸ್ಥೆಗಳಲ್ಲಿ 11, 040 ಕೋಟಿ ರೂಪಾಯಿಗಳ ಸಾಲವಿದೆ. 2024 ಮಾರ್ಚ್ ವರೆಗೆ 1,21,720 ಕೋಟಿ ರೂ.ಗಳ ವಸತಿ ಸಾಲವಿತ್ತು.

ಬೆಂಕಿ ತಗಲಿ ಮನೆ ನಾಶ: ಅಂಬಾಕ್ಷಿ ರೈಗೆ ಜಿಲ್ಲಾ ಬಂಟರ ಸಂಘದಿಂದ ಸಹಾಯ ಧನ ಹಸ್ತಾಂತರ

ಬಂದಡ್ಕ: ಇಲ್ಲಿಗೆ ಸಮೀಪದ ಬೇತಾಳ ಎಂಬಲ್ಲಿ ಇತ್ತೀಚೆಗೆ ಬೆಂಕಿ ತಗಲಿ ಮನೆ ಸಂಪೂರ್ಣ ನಾಶ ಹೊಂದಿದ ಅಂಬಾಕ್ಷಿ ರೈಯವರಿಗೆ ಜಿಲ್ಲಾ ಬಂಟರ ಸಂಘದ ವತಿಯಿಂದ ಸಹಾಯ ಧನ ನೀಡಲಾಯಿತು. ಸ್ಥಳಕ್ಕೆ ಇತ್ತೀಚೆಗೆ ಭೇಟಿ ನೀಡಿದ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಜಿಲ್ಲಾ ಸಮಿತಿ ವತಿಯಿಂದ ಸಹಾಯ ಧನ ಹಸ್ತಾಂತರಿಸಿದರು. ಈ ವೇಳೆ ಜಿಲ್ಲಾ ಕಾರ್ಯದರ್ಶಿ ಮೋಹನ್ ರೈ, ಜೊತೆ ಕಾರ್ಯದರ್ಶಿ ಕಿರಣ್ ಮಾಡ ಆದೂರು, ಜಿಲ್ಲಾ ಸಮಿತಿ ಸದಸ್ಯ ರವೀಂದ್ರ ರೈ ಬಂದಡ್ಕ, ಕಾಸರಗೋಡು …

ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಮಾತೃಸಂಗಮದಲ್ಲಿ ಶ್ರೀ ಮಾತಾನಂದಮಯಿ ಆಶೀರ್ವಚನ

ಮಂಜೇಶ್ವರ: ಸರಳತೆ ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಸಾದ್ದಿ ಮಾತಾನಂದಮಯ ನುಡಿದರು. ಅವರು ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಡೆದ “ಮಾತೃ ಸಂಗಮ” ವನ್ನು ಉದ್ಘಾಟಿಸಿ ಮಾತನಾಡಿದರು. ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬದುಕುವುದರೊಂದಿಗೆ ಬೇರೆಯವರಿಗೆ ಬದುಕುವುದಕ್ಕಾಗಿ ಅವಕಾಶ ಮಾಡಿಕೊಡಬೇಕು . ಜೀವನದ ಸಾರ್ಥಕತೆ ಅದಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು. ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ …

ಮಜಿಬೈಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆ ಉದ್ಘಾಟನೆ

ಮಂಜೇಶ್ವರ:ಮAಜೇಶ್ವರ ಬ್ಲಾಕ್ ಪಂಚಾಯತ್ ವಾರ್ಷಿಕ ಯೋಜನೆ ಯಲ್ಲಿ ಸೇರಿಸಿ ನವೀಕೃತಗೊಳಿಸಿದ ಮಜಿಬೈಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹನೀಫ್ ಪಿ.ಕೆ ಉದ್ಘಾಟಿಸಿದರು.ವಾರ್ಡ್ ಪ್ರತಿನಿಧಿ ಆಶಾಲತಾ, ಸೂಫಿ ಉಮರ್. ಅಲಿ ಹಾಜಿ, ನಾರಾಯಣ ಭಟ್, ಅನ್ಸಾಫ್, ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದರು.

ಸ್ಫೋಟಕವಸ್ತು ಸಿಡಿದು ಉದ್ಯೋಗ ಖಾತರಿ ಕಾರ್ಮಿಕೆಗೆ ಗಾಯ

ಕಣ್ಣೂರು: ಸ್ಫೋಟಕವಸ್ತು ಸಿಡಿದು ಉದ್ಯೋಗ ಖಾತರಿ ಕಾರ್ಮಿಕೆ ಗಾಯಗೊಂಡ ಘಟನೆ ಇರಿಟ್ಟಿ ಆಯಿರಕ್ಕಳ ಎಂಬಲ್ಲಿ ನಡೆದಿದೆ. ಆಯಿರಕ್ಕಳ ನಿವಾಸಿ ರೋಹಿಣಿ ಎಂಬವರು ಗಾಯ ಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಶುಚೀಕರಣ ಕೆಲಸ ನಡೆಯುತ್ತಿದ್ದಂತೆ ಗೋಣಿ ಚೀಲವೊಂದನ್ನು ಕತ್ತಿಯಿಂದ ತೆರವುಗೊಳಿಸುತ್ತಿದ್ದಾಗ  ಸ್ಫೋಟ ನಡೆದಿದೆ. ವನ್ಯಮೃಗಗಳು ದಾಳಿ ನಡೆಸುವ ಪ್ರದೇಶ ಇದಾಗಿದೆ. ಇದರಿಂದ ಯಾರಾದರೂ ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕವಸ್ತು ಇದಾಗಿರಬಹುದೆಂದು ಅಂದಾಜಿ ಸಲಾಗಿದೆ.

ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸುತ್ತುಗೋಪುರ ಶಿಲಾನ್ಯಾಸ ನಾಳೆ

ಕೂಡ್ಲು: ಬಾದಾರ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತೆಂಕು ಭಾಗದ ಸುತ್ತುಗೋಪುರಕ್ಕೆ ಶಿಲಾನ್ಯಾಸ ನಾಳೆ ಬೆಳಿಗ್ಗೆ 11.45ರಿಂದ ನಡೆಯಲಿದೆ. ಇದರಂಗವಾಗಿ 11.30ಕ್ಕೆ ಮಹಾಪೂಜೆ ಬಳಿಕ ಬ್ರಹ್ಮಶ್ರೀ ಅರವತ್ತು ಪದ್ಮನಾಭ ತಂತ್ರಿ ವರ್ಯರಿಂದ ಶಿಲಾನ್ಯಾಸ, 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ವಸಂತ ಪೈ ಉದ್ಘಾಟಿಸುವರು. ಬ್ರಹ್ಮಶ್ರೀ ಅರವತ್ತು ಪದ್ಮನಾಭ ತಂತ್ರಿ ಆಶೀರ್ವಚನ ನೀಡುವರು. ಶಿಲ್ಪಿ ರಮೇಶ ಕಾರಂತ, ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಬ್ರಹ್ಮ ವಾಹಕ …

ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿ ರಸ್ತೆಗೆ ಬಿದ್ದು ಗಾಯಗೊಂಡ ಗೃಹಿಣಿ ಮೃತ್ಯು

ಕಾಸರಗೋಡು: ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಗೃಹಿಣಿ ಮೃತಪಟ್ಟರು. ಮಧೂರು ಬಳಿಯ ಕಾಂದಲ ಎಂಬಲ್ಲಿನ ಜೋಯ್ ಥೋಮಸ್ ಎಂಬವರ ಪತ್ನಿ ಐರಿನ್ ಡಿ’ಸೋಜಾ (44) ಮೃತಪಟ್ಟ ದುರ್ದೈವಿ. ಮಾರ್ಚ್ ೨ರಂದು ಬೇಳ ದರ್ಭೆತ್ತ ಡ್ಕದಲ್ಲಿ ಅಪಘಾತ ಸಂಭವಿಸಿತ್ತು.  ಕುಂಬಳೆ ಶಾಂತಿಪಳ್ಳದಲ್ಲಿರುವ ಸಹೋದರನ ಪುತ್ರನ ತೊಟ್ಟಿಲು ಕಟ್ಟುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸೀರೆ ಬೈಕ್‌ನ ಚಕ್ರಕ್ಕೆ ಸಿಲುಕಿದುದರಿಂದ ಐರಿನ್ ಡಿ’ಸೋಜಾ ರಸ್ತೆಗೆ ಬಿದ್ದು ತಲೆಗೆ ಗಾಯವುಂಟಾ ಗಿತ್ತು. ಇದರಿಂದ ಮಂಗಳೂರಿನ …

ವಿವಿಧ ಅಪರಾಧ ಕೃತ್ಯಗಳು: ಕಾಸರಗೋಡಿನ ವಿವಿಧೆಡೆಗಳ ಐದು ಮಂದಿ ಮಂಗಳೂರಿನಲ್ಲಿ ಸೆರೆ

ಕಾಸರಗೋಡು: ವಿವಿಧ ಅಪರಾಧ ಕೃತ್ಯಗಳಿಗೆ ಸಂಬAಧಿಸಿ ಮಂಜೇಶ್ವರ ಸಹಿತ ಕಾಸರಗೋಡಿನ ವಿವಿಧ ಭಾಗ ಗಳ ಐದು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿAದ ಮೂರು ಪಿಸ್ತೂಲು, 6 ಸಜೀವ ಮದ್ದುಗುಂಡುಗಳು, 12.895 ಕಿಲೋ ಗಾಂಜಾ, 3 ಕಾರು ಮೊದಲಾ ದವುಗಳನ್ನು ವಶಪಡಿಸಲಾಗಿದೆ.ಮಂಗಲ್ಪಾಡಿ ನಿವಾಸಿಯೂ ಪ್ರಸ್ತುತ ಮಲಪ್ಪುರಂ ಕೊಂಡೋಟಿಯಲ್ಲಿ ವಾಸಿಸುವ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ (24)ನನ್ನು ಮಂ ಗಳೂರು ನಗರದಲ್ಲಿ ಸೆರೆಹಿಡಿಯಲಾಗಿದೆ. ಈತನ ಕೈಯಿಂದ 12.895 ಕಿಲೋ ಗಾಂಜಾ ಹಾಗೂ ಅದನ್ನು ಸಾಗಿಸಲು ಬಳಸಿದ …

ಚಿನ್ನಾಭರಣ ನಿರ್ಮಾಣ ಸಂಸ್ಥೆಯ ಮಾಲಕನ 18 ಲಕ್ಷ ರೂ.ಮೌಲ್ಯದ ಚಿನ್ನ ಸಹಿತ ಪರಾರಿಯಾದ ಯುವತಿಯರು ಕಾಞಂಗಾಡ್‌ನಿಂದ ಸೆರೆ

ಕಲ್ಲಿಕೋಟೆ: ಚಿನ್ನಾಭರಣ ತಯಾರಿ ಸಂಸ್ಥೆಯ ಮಾಲಕನಿಂದ ಅಪಹರಿಸಿದ 200 ಗ್ರಾಂ ಚಿನ್ನ ಸಹಿತ ಮುಂಬಯಿಗೆ ಪರಾರಿಯಾಗುತ್ತಿದ್ದ ಮಧ್ಯೆ ಇಬ್ಬರು ಯುವತಿಯರನ್ನು ಕಾಞಂಗಾಡ್‌ನಿಂದ ಬಂಧಿಸಲಾಗಿದೆ. ಮುಂಬಯಿ ಜೋ ಗೇಶ್‌ವಾರಿ ಸಮರ್ಥ್ ನಗರದ ಶ್ರದ್ಧಾ ರಮೇಶ್ ಯಾನೆ ಫಿರ್ದಾ (37), ಮುಂಬಯಿ ವಾದ್ರ ರಂಜುಗಡ್ ನಗರದ ಸಲ್ಮಾ ಖಾದರ್ ಖಾನ್ (42) ಎಂಬಿ ವರನ್ನು ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋತ್, ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಎಂಬಿವರ  ನೇತೃತ್ವದಲ್ಲಿ  ಬಂಧಿಸಲಾಗಿದೆ. ಕಲ್ಲಿ ಕೋಟೆ ನಲ್ಲಳದ ಹನೀಫ್‌ರ ದೂರಿನಂತೆ ನಲ್ಲಳ ಪೊಲೀಸರು …

ಕಾಲೇಜು ಹಾಸ್ಟೆಲ್‌ನಲ್ಲಿ 2 ಕಿಲೋ ಗಾಂಜಾ ಪತ್ತೆ: 3 ವಿದ್ಯಾರ್ಥಿಗಳ ಸೆರೆ

ಕೊಚ್ಚಿ: ಕಳಮಶ್ಶೇರಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಗಂಡು ಮಕ್ಕಳ ಹಾಸ್ಟೆಲ್‌ನಿಂದ ಎರಡು ಕಿಲೋ ಗಾಂಜಾ ವಶಪಡಿಸಲಾಗಿದೆ. ನಿನ್ನೆ ರಾತ್ರಿ ಪೊಲೀಸರು ನಡೆಸಿದ ದಾಳಿಯಲ್ಲಿ ಗಾಂಜಾ ಪತ್ತೆಹಚ್ಚಲಾಗಿದೆ. ಮೂರು ವಿದ್ಯಾರ್ಥಿಗಳು ಈ ಪ್ರಕರಣದಲ್ಲಿ ಸೆರೆಯಾಗಿದ್ದಾರೆ. ಜೊತೆಗಿದ್ದವರು ಪರಾರಿಯಾದರು. ಹರಿಪ್ಪಾಡ್ ನಿವಾಸಿ ಆದಿತ್ಯನ್, ಕರುನಾಗಪಳ್ಳಿ ನಿವಾಸಿ ಅಭಿರಾಜ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಆಕಾಶ್‌ನ ಕೊಠಡಿಯಿಂದ 1.9 ಕಿಲೋ ಗಾಂಜಾ ವಶಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಎರಡು ಮೊಬೈಲ್ ಫೋನ್ ಹಾಗೂ ಗುರುತು ಚೀಟಿಗಳನ್ನು ವಶಪಡಿಸಲಾಗಿದೆ. ಕಾಲೇಜ್ ಹಾಸ್ಟೆಲ್‌ನಲ್ಲಿ …