ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಮಾತೃಸಂಗಮದಲ್ಲಿ ಶ್ರೀ ಮಾತಾನಂದಮಯಿ ಆಶೀರ್ವಚನ

ಮಂಜೇಶ್ವರ: ಸರಳತೆ ಸಜ್ಜನಿಕೆಯನ್ನೊಳಗೊಂಡು ಸಮಾಜಮುಖಿಯಾಗಿ ಜೀವನ ಸಾಗಿಸಿದರೆ ಸಮಗ್ರ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಸಾದ್ದಿ ಮಾತಾನಂದಮಯ ನುಡಿದರು. ಅವರು ಮಂಜೇಶ್ವರ ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದಂಗವಾಗಿ ನಡೆದ “ಮಾತೃ ಸಂಗಮ” ವನ್ನು ಉದ್ಘಾಟಿಸಿ ಮಾತನಾಡಿದರು. ಆದರ್ಶ ಬದುಕು ನಮ್ಮದಾಗಬೇಕಾದರೆ ನಾವು ಬದುಕುವುದರೊಂದಿಗೆ ಬೇರೆಯವರಿಗೆ ಬದುಕುವುದಕ್ಕಾಗಿ ಅವಕಾಶ ಮಾಡಿಕೊಡಬೇಕು . ಜೀವನದ ಸಾರ್ಥಕತೆ ಅದಾಗಿದೆ ಎಂದು ತಮ್ಮ ಆಶೀರ್ವಚನದಲ್ಲಿ ನುಡಿದರು. ಶ್ರೀ ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ಶೈಲೇಶ್ ಅಧ್ಯಕ್ಷತೆ ವಹಿಸಿದರು. ಡಾ. ಕೆ.ವಿ. ಮಾಲಿನಿ, ನಿವೃತ ಪ್ರಾಂಶುಪಾಲೆ, ಶಶಿಕಲಾ ಸುವರ್ಣ, ಅಶ್ವಿನಿ ಎಮ್ ಎಲ್, ಪ್ರೊ. ಸುಜಾತ , ಜೀನ್ ಲವಿನಾ ಮೊಂತೇರೋ , ಕೃಷ್ಣವೇಣಿ , ರೇಖಾ ಪ್ರೇಮ್ ದಾಸ್. ಸುಪ್ರೀಯಾ ಶೆಣೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕ್ಷೇತ್ರದ ಮಹಿಳಾ ಸಂಘದ ಸದಸ್ಯೆ ತೃಪ್ತಿ ಪ್ರಾರ್ಥನೆ ಹಾಡಿ, ಸ್ವಾಗತಿಸಿದರು. ಅನುಷಾ ಶರತ್ ನಿರೂಪಿಸಿ, ಮಹಿಳಾ ಸಂಘದ ಸದಸ್ಯೆ ಸ್ನೇಹ ನವೀನ ವಂದಿಸಿದರು

You cannot copy contents of this page