ಕರಾವಳಿ ಹರತಾಳ ಆರಂಭ: ಸ್ತಬ್ದಗೊಂಡ ಮೀನುಗಾರಿಕಾ ವಲಯ
ಕಾಸರಗೋಡು: ಸಮುದ್ರ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಫಿಶರೀಸ್ ಕೋರ್ಡಿನೇಶನ್ ಸಮಿತಿ ಘೋಷಿಸಿದ 24 ತಾಸುಗಳ ಕರಾವಳಿ ಹರತಾಳ ರಾಜ್ಯದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ಹರತಾಳ ರಾಜ್ಯದ ಮೀನುಗಾರಿಕಾ ವಲಯವನ್ನು ಪೂರ್ಣವಾಗಿ ಸ್ತಬ್ದಗೊಳಿಸಿದೆ. ಹರತಾಳದಲ್ಲಿ ಬೆಸ್ತರು ಮತ್ತು ಮೀನು ಮಾರಾಟ ಕಾರ್ಮಿಕರು ಸಹ ಕರಿಸುತ್ತಿದ್ದು, ಅದಕ್ಕೆ ಬೆಂಬಲ ಸೂಚಿಸಿ ಮೀನುಗಾರರು ಇಂದು ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯಲಿಲ್ಲ. ಮಾತ್ರವಲ್ಲ ಮೀನು ಮಾರಾಟಗಾರರೂ ಇಂದು ಮೀನು ಮಾರಾ ಟದಿಂದ ದೂರ ಸರಿದು …