ನಾಡಿನಾದ್ಯಂತ ಇಂದು ಮಹಾ ಶಿವರಾತ್ರಿ ಆಚರಣೆ

ಕಾಸರಗೋಡು:  ಮಹಾ ಶಿವರಾತ್ರಿ ಹಬ್ಬವನ್ನು ನಾಡಿನಾದ್ಯಂತ ಇಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ಭಕ್ತಿಪೂರ್ವಕ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಕಾಸg ಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಪರಕ್ಕಿಲ ಶ್ರೀ ಮಹಾದೇವ ಶಾಸ್ತಾವಿನಾಯಕ ಕ್ಷೇತ್ರ, ಎಡನೀರು ಮಠ, ನಾರಂಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರ, ಅಡೂರು ಶ್ರೀ ಮಹತೋಬಾರ ಶ್ರೀ ಮಹಾ ಲಿಂಗೇಶ್ವರ  ಮಹಾವಿಷ್ಣು ವಿನಾಯಕ ಕ್ಷೇತ್ರ, ಶಿರಿಯ ಶ್ರೀ ಶಂಕರನಾರಾಯಣ ಕ್ಷೇತ್ರ, ಪಾಡಿ ಕೈಲಾರ್ ಶಿವಕ್ಷೇತ್ರ, …

ಕಾಂಗ್ರೆಸ್‌ನೊಂದಿಗೆ ಭಿನ್ನಮತದ ಬೆನ್ನಲ್ಲೇ ಬಿಜೆಪಿ ನೇತಾರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಶಶಿ ತರೂರ್; ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ

ತಿರುವನಂತಪುರ: ಕೈಗಾರಿಕಾ ವಲಯದಲ್ಲಿ ಎಡರಂಗ ಸರಕಾರದ ಮಹತ್ತರ ಸಾಧನೆಗಳನ್ನು  ಹೊಗಳಿದ ಕಾಂಗ್ರೆಸ್ ನೇತಾರ ಹಾಗೂ ತಿರುವನಂತಪುರ ಸಂಸದ ಶಶಿ ತರೂರ್‌ರ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬಿದ್ದ ಬೆನ್ನಲ್ಲೇ ಅದು ಕಾಂಗ್ರೆಸ್‌ನ  ಕೇರಳ ಘಟಕದಲ್ಲಿ ಭಾರೀ ಭಿನ್ನಮತ ತಲೆಯೆತ್ತುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಶಶಿ ತರೂರ್ ಇನ್ನೊಂದೆಡೆ ಬಿಜೆಪಿ ನೇತಾರ ಹಾಗೂ ಕೇಂದ್ರ ಸಚಿವರೂ ಆಗಿರುವ ಪೀಯೂಶ್ ಗೋಯಲ್‌ರೊಂದಿಗೆ ಸೆಲ್ಫಿ ತೆಗೆದು ಅದನ್ನು ಪ್ರಚಾರಮಾಡಿದ್ದು ಅದು ಇನ್ನೊಂದೆಡೆ ಕೇರಳ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸುವಂತೆ ಮಾಡಿದೆ. ಎಡರಂಗ …

ಪತಿ ಮನೆಯಿಂದ ತಾಯಿಮನೆಗೆ ಹೋದ ಯುವತಿ ನಾಪತ್ತೆ

ಕಾಸರಗೋಡು: ಪತಿಯ ಮನೆಯಿಂದ ತವರು ಮನೆಗೆ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ವಲಿಯಪರಂಬ ಮಾಡಕ್ಕಾಲ್ ತೆಟ್ಟನ್ ಹೌಸ್‌ನ ಟಿ. ಲಾಲು ಎಂಬವರ ಪತ್ನಿ ಆದಿರ (22) ನಾಪತ್ತೆಯಾಗಿದ್ದಾಳೆನ್ನಲಾಗಿದೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಆದಿರ ತಾಯಿ ಮನೆಗೆ ಹೋಗುವುದಾಗಿ ತಿಳಿಸಿ ಪತಿ ಮನೆಯಿಂದ ಹೋಗಿದ್ದಳು. ಆದರೆ ಮರಳಿ ತಲುಪಿಲ್ಲವೆಂದು ಲಾಲು ಚಂದೇರ ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

34ರ ಹರೆಯದ ಗೃಹಿಣಿ 14ರ ಬಾಲಕನೊಂದಿಗೆ ಪರಾರಿ

ಕಾಸರಗೋಡು: ೩೫ರ ಹರೆಯದ ಗೃಹಿಣಿಯೋರ್ವೆ ಮಗನ ಸ್ನೇಹಿತನಾದ 14ರ ಹರೆಯದ ಬಾಲಕನೊಂದಿಗೆ ಪರಾರಿಯಾದ ಘಟನೆ ಪಾಲಕ್ಕಾಡ್ ಬಳಿ ಆಲತ್ತೂರಿನಲ್ಲಿ ನಡೆದಿದೆ. ಕುನ್ನಿಶ್ಶೇರಿ ಕುದಿರಪ್ಪಾರ ನಿವಾಸಿಯಾದ 11ರ ಹರೆಯದ ಮಗನ ಸ್ನೇಹಿತನಾದ 14ರ ಹರೆಯದ ಬಾಲಕನೊಂದಿಗೆ ಗೃಹಿಣಿ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ಶಾಲೆಗೆ ತೆರಳಿದ  ಬಾಲಕ  ಮರಳಿ ಮನೆಗೆ  ಬಾರದ ಹಿನ್ನೆಲೆಯಲ್ಲಿ ಆತನ ಮನೆಯವರು ಹುಡುಕಾಟ ನಡೆಸಿದರು. ಈ ವೇಳೆ ಬಾಲಕ ಗೃಹಿಣಿಯೊಂದಿಗೆ ಹೋಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಆಲತ್ತೂರು ಪೊಲೀಸರಿಗೆ ಮನೆಯವರು ದೂರು ನೀಡಿದ್ದು, ಇದರಂತೆ …

45 ಲೀಟರ್ ಹುಳಿರಸ ವಶ

ಕಾಸರಗೋಡು: ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ಭೀಮನಡಿ ಕೂವಪ್ಪಾರ ಕಾಲನಿಯಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಕಳ್ಳಭಟ್ಟಿ ಸಾರಾಯಿ ನಿರ್ಮಿಸಲು ಸಿದ್ಧಪಡಿಸ ಲಾಗಿದ್ದ 45 ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕೂವಪ್ಪಾರ ಕಾಲನಿಯ ಪ್ರಭು ಕೆ. ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗ ಳಾದ ಪ್ರಶಾಂತ್ ಕುಮಾರ್, ನೌಶಾದ್, ಸಿಇಒಗಳಾದ ಅತುಲ್, ಧನ್ಯ, ಸಜೀಶ್ (ಚಾಲಕ) ಎಂಬ ವರು ಈ …

ಮುಂಬೈಯಿಂದ ಬರುತ್ತಿದ್ದ ತಳಂಗರೆ ನಿವಾಸಿ ರೈಲಿನಲ್ಲಿ ಸಾವು

ಕಾಸರಗೋಡು: ವ್ಯಾಪಾರದ ಅಗತ್ಯಕ್ಕಾಗಿ ಮುಂಬೈಗೆ ಹೋಗಿ ಅಲ್ಲಿಂದ ಹಿಂತಿರುಗುತ್ತಿದ್ದ ತಳಂಗರೆ ನಿವಾಸಿ ರೈಲಿನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ತಳಂಗರೆ ನಿವಾಸಿ ಹಾಗೂ ಈಗ ಪೂಚಕ್ಕಾಡ್‌ನಲ್ಲಿ ವಾಸಿಸುತ್ತಿರುವ ಮುಹಮ್ಮದ್ ಹಬೀಬುಲ್ಲಾ (69) ಸಾವನ್ನಪ್ಪಿದ ವ್ಯಕ್ತಿ.  ಇವರು ಮುಂಬೈಯಿಂದ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಊರಿಗೆ ಹಿಂತಿರುತ್ತಿದ್ದ ದಾರಿ ಮಧ್ಯೆ ರತ್ನಗಿರಿಗೆ ತಲುಪಿದಾಗ ರೈಲಿನೊಳಗೆ ದಿಢೀರ್ ಆಗಿ ಕುಸಿದು ಸಾವನ್ನಪ್ಪಿದ್ದಾರೆ.  ಹೃದಯಾಘಾತವೇ ಸಾವಿಗೆ ಕಾರಣವಾಗಿದೆಯೆಂದು ತಿಳಿಸಲಾಗಿದೆ. ಮೃತರು ಪತ್ನಿ ಆಯಿಷಾ ತುರ್ತಿ, ಮಕ್ಕಳಾದ ಶಮೀಮಾ ಸಿದ್ದಿಕ್, ಲುಯುನಾ, ಸರ್ಫೀನಾ, …

ಪೆರಿಯ ಕೇಂದ್ರೀಯ ವಿ.ವಿ. ಸಮೀಪ ಚಿರತೆ ಪತ್ತೆ

ಕಾಸರಗೋಡು: ಪೆರಿಯ ಕೇಂದ್ರೀಯ ವಿಶ್ವವಿದ್ಯಾಲಯ ಸಮೀಪ ಚಿರತೆ ಪತ್ತೆಯಾಗಿರುವುದಾಗಿ ವರದಿಯಾಗಿದೆ. ನಿನ್ನೆ ರಾತ್ರಿ 8.40 ರ ವೇಳೆ ಚಾಲಿಂಗಾಲ್ ಮೊಟ್ಟ ಎಂಬಲ್ಲಿ  ವಾಹನದಲ್ಲಿ ಸಂಚರಿಸುತ್ತಿದ್ದವರು ಚಿರತೆಯನ್ನು ಕಂಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯವನ್ನು ಅವರು ಕೂಡಲೇ ಸ್ಥಳೀಯರಲ್ಲಿ ತಿಳಿಸಿದ್ದಾರೆ. ರಸ್ತೆಗೆ ಅಡ್ಡವಾಗಿ ಓಡಿದ ಚಿರತೆ ಬಳಿಕ ಎಲ್ಲಿಗೆ ಹೋಯಿತೆಂದು ತಿಳಿದು ಬಂದಿಲ್ಲ. ಕೆಲವು ದಿನಗಳ ಹಿಂದೆ  ಅಂಬಲತ್ತರ ಸಮೀಪ ತಟ್ಟುಮ್ಮಲ್ ಹಾಗೂ ಮೀಂಙೋತ್ ಎಂಬೆಡೆಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಾಲಿಂಗಾಲ್ ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಪವೇ ದೂರದಲ್ಲಿ ಇದೀಗ ಚಿರತೆ ಕಾಣಿಸಿದೆ. …

ಕಣ್ಣೂರಿನಲ್ಲಿ ರಸ್ತೆ ಅಡ್ಡಗಟ್ಟಿ ಚಳವಳಿ: ಸಿಪಿಎಂ ನೇತಾರರ ವಿರುದ್ಧ ಕೇಸು

ಕಣ್ಣೂರು: ಕೇಂದ್ರ ಕೇರಳವನ್ನು ಅವಗಣಿಸುತ್ತಿದೆ ಎಂದು ಆರೋಪಿಸಿ ರಸ್ತೆಯಲ್ಲಿ ಚಪ್ಪರ ನಿರ್ಮಿಸಿ ಹಾಗೂ ಕುರ್ಚಿಗಳನ್ನಿರಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವುದರ ವಿರುದ್ಧ ಹೈಕೋರ್ಟ್ ಹೊರಡಿಸಿದ ನಿರ್ದೇಶ ಉಲ್ಲಂಘಿಸಿದ ಆರೋಪದಂತೆ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜನ್, ಶಾಸಕ ಕೆ.ವಿ. ಸುಮೇಶ್ ಸಹಿತ ೫೦೦೦ದಷ್ಟು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಿಪಿಎಂ ನೇತೃತ್ವದಲ್ಲಿ ನಿನ್ನೆ ನಡೆದ ಅಂಚೆ ಕಚೇರಿ ಮಾರ್ಚ್ ವಿರುದ್ಧ ಕೇಸು ದಾಖಲಿಸಲಾಗಿದೆ.

ಯುವಕನ ಕೊಲೆ :ಇನ್ನೋರ್ವನಿಗೆ ಇರಿತ

ತೃಶೂರು: ತೃಶೂರು ವಡಕಾಂ ಚೇರಿಯಲ್ಲಿ ಯುವಕನೋರ್ವನನ್ನು ಇರಿದು ಕೊಲೆಗೈಯ್ಯಲಾಗಿದೆ. ವಡಕ್ಕಾಂಚೇರಿ ನಿವಾಸಿ ಸೇವಿಯರ್ (45) ಕೊಲೆಗೈಯ್ಯಲ್ಪಟ್ಟ ಯುವಕ. ಈತನ ಜತೆಗಿದ್ದ ಅನೀಶ್ ಎಂಬಾತ  ಇರಿತಕ್ಕೊಳಗಾಗಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹಲವು ಕ್ರಿಮಿನಲ್ ಪ್ರಕರಣ ಗಳಲ್ಲಿ ಆರೋಪಿಯಾಗಿರುವ ವಿಷ್ಣು ಎಂಬಾತ ಸೇವಿಯರ್‌ರನ್ನು ಇರಿದಿರುವುದಾಗಿ ಆರೋಪಿ ಸಲಾಗಿದೆ. ಆತ ಬಳಿಕ ತಲೆಮ ರೆಸಿಕೊಂಡಿದ್ದಾನೆ. ಸೇವಿಯರ್ ಮತ್ತು ಅನೀಶ್ ಸೇರಿ ಆರೋಪಿ ವಿಷ್ಣುವಿನ ಮನೆಗೆ ಅಕ್ರಮವಾಗಿ ನುಗ್ಗಿ ಆತನ ಮೇಲೆ ಹಲ್ಲೆ ನಡೆಸಲೆತ್ನಿಸಿದರೆಂದೂ, ಆ ವೇಳೆ ವಿಷ್ಣು ಅವರಿಬ್ಬರಿಗೆ ಇರಿದಿರುವುದಾಗಿ ಆರೋಪಿ …

ಅಪರಿಚಿತ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಮೃತ್ಯು

ಕಾಸರಗೋಡು: ಚಂದೇರ ಹಾಗೂ ಚೆರುವತ್ತೂರು ರೈಲ್ವೇ ನಿಲ್ದಾಣಗಳ ಮಧ್ಯೆ ಪಿಲಿಕ್ಕೋಡು ಕೊಲ್ಲರೋಡಿ ರೈಲು ಹಳಿ ಸಮೀಪ ಅಪರಿಚಿತ ವ್ಯಕ್ತಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ 8 ಗಂಟೆ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹ ಗುರುತು ಪತ್ತೆಹಚ್ಚಲಾಗದಷ್ಟು ಛಿದ್ರಗೊಂಡಿದೆ.  ಮೃತ ವ್ಯಕ್ತಿ ಪುರುಷನಾಗಿದ್ದು, 60 ವರ್ಷ ಪ್ರಾಯ  ಅಂದಾಜಿಸಲಾಗಿದೆ. ಮೃತದೇಹವನ್ನು ಪೊಲೀಸರು ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದ್ದಾರೆ.