ಕಾನತ್ತೂರು ಬಳಿ ಮತ್ತೆ ಚಿರತೆ ಪತ್ತೆ

ಮುಳ್ಳೇರಿಯ: ಕೆಲವು ದಿನಗಳ ಬಿಡುವಿನ ಬಳಿಕ ಮುಳಿಯಾರು ಪಂಚಾಯತ್ ವ್ಯಾಪ್ತಿಯ ಬೀಟಿಯಡ್ಕದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಲ್ಲಿನ ಅಂಗನವಾಡಿ ಪರಿಸರದಲ್ಲಿ ಚಿರತೆ ಕಂಡಿರುವುದಾಗಿ ಸಜಿ ಎಂಬವರು ತಿಳಿಸಿದ್ದಾರೆ. ಇಂದು ಮುಂಜಾನೆ ೫.೪೫ರ ವೇಳೆ ರಬ್ಬರ್ ಟ್ಯಾಪಿಂಗ್‌ಗೆ ತೆರಳುತ್ತಿದ್ದ ಸಜಿಯವರಿಗೆ ಚಿರತೆ ಕಾಣಿಸಿದೆ.  ಕೂಡಲೇ ಅವರು ಸ್ಥಳೀಯರಿಗೆ  ವಿಷಯ ತಿಳಿಸಿದ್ದಾರೆ. ಮುಳಿಯಾರು, ಕಾರಡ್ಕ ಪಂಚಾಯತ್ ವ್ಯಾಪ್ತಿಯಲ್ಲಿರುವ ಪಯಸ್ವಿನಿ  ಹೊಳೆ ಬದಿಯ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ ಹಾವಳಿ ತೀವ್ರಗೊಂಡಿದೆ. ಕಾನತ್ತೂರು, ಬೀಟಿಯಡ್ಕ, ಮೂಡಯಂವೀಡ್, ನೆಯ್ಯಂಗಯ, ಕೊಟ್ಟಂಗುಳಿ, ಪಾಣೂರು ಎಂಬೀ ಪ್ರದೇಶಗಳಲ್ಲಿ ಸಾಕು …

ಯುವತಿಗೆ ಹಲ್ಲೆಗೈದು ಕೊಲೆಗೆತ್ನ : ಆರೋಪಿ ಪತಿ ಬಂಧನ

ಬದಿಯಡ್ಕ: ಯುವತಿಗೆ ಹಲ್ಲೆಗೈದು, ಕುತ್ತಿಗೆ ಬಿಗಿದು ಕೊಲೆಗೈಯ್ಯಲು ಯತ್ನಿ ಸಲಾಯಿತೆಂಬ ಆರೋಪದಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೇಳ ಕುಂಜಾರು ನಿವಾಸಿ ಕೆ.ಎ. ಖೈರುನ್ನೀಸ (37) ನೀಡಿದ ದೂರಿನಂತೆ ಈಕೆಯ ಪತಿ ಅಬ್ದುಲ್ ರಹ್ಮಾನ್‌ನನ್ನು ಬದಿ ಯಡ್ಕ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಮುಂಜಾನೆ 2  ಗಂಟೆ ವೇಳೆ ಪತಿ ಅಬ್ದುಲ್ ರಹ್ಮಾನ್ ತನಗೆ ಹಲ್ಲೆಗೈದು ಕೊಲೆಗೈಯ್ಯಲು  ಯತ್ನಿಸಿರುವುದಾಗಿ ಆರೋಪಿಸಿ ಖೈರುನ್ನೀಸ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಅಬ್ದುಲ್ ರಹ್ಮಾನ್ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ …

ಕೊಲೆಯತ್ನ ಪ್ರಕರಣ: ನಾಲ್ವರ ಬಂಧನ

ಕಾಸರಗೋಡು: ಕೊಲೆಯತ್ನ ಪ್ರಕರಣದ ನಾಲ್ವರು ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ವಿವೇಕಾನಂದ ನಗರ ಕಮಲ ನಿಲಯದ ಸುನಿಲ್ ಕುಮಾರ್ ಆರ್.(29), ಕೂಡ್ಲು ಎನ್.ಎಂ. ಕಂಪೌಂಡ್ ಶಿವಕೃಷ್ಣ ನಿಲಯದ ಹರೀಶ್ ಪಿ. (35), ಕೂಡ್ಲು ವಿವೇಕಾನಂದ ನಗರ ಶಾಸ್ತಾ ನಿಲಯದ ವಿಶ್ವಾಸ್ ಕೆ. (37) ಮತ್ತು ಆತೀಷ್ ಕೆ. (38) ಬಂಧಿತ ಆರೋಪಿಗಳಾಗಿದ್ದಾರೆ. ಕೂಡ್ಲು ಮನ್ನಿಪ್ಪಾಡಿ ಡಿಎಸ್‌ಸಿ ಮೈದಾನ ಬಳಿಯ ಅಂಗಡಿಯೊಂದರ ಬಳಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಈ ನಾಲ್ವರ ವಿರುದ್ಧ ಪೊಲೀಸರು ಕೊಲೆಯತ್ನ …

ಇತಿಹಾಸ ಸೃಷ್ಟಿಸಿದ ಮಹಾಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ 50 ಕೋಟಿ ಭಕ್ತರಿಂದ ಪುಣ್ಯಸ್ನಾನ

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ 50 ಕೋಟಿ ದಾಟಿದೆ. ಈ ಸಂಖ್ಯೆಯು ಎರಡು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ಜನಸಂಖ್ಯೆಯನ್ನು ಮೀರುತ್ತಿದೆ. ಉತ್ತರಪ್ರದೇಶ ಸರಕಾರ ಬಿಡುಗಡೆಮಾಡಿದ ಮಾಹಿತಿ ಪ್ರಕಾರ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಇಷ್ಟೊಂದು ಭಕ್ತರು ಬಂದು ಸೇರುತ್ತಿರುವುದು ಇದೇ ಮೊದಲು ಆಗಿದೆ. ನಾವು ಸೇರಿದಂತೆ 50 ಕೋಟಿಗೂ ಹೆಚ್ಚು ಮಂದಿ ಕುಂಭಮೇ ಳದಲ್ಲಿ ಪವಿತ್ರ ಸ್ನಾನ …

ಯುವಕನನ್ನು ಅಪಹರಿಸಿ ದರೋಡೆ : 5 ಮಂದಿ ವಿರುದ್ಧ ಕೇಸು

ಉಪ್ಪಳ: ಮಂಜೇಶ್ವರ ಕಡಂಬಾರು ಅರಿಮಲೆಯ ಪ್ರವೀಣ್ ಎ.(32) ಎಂಬ ವರನ್ನು ಆಟೋರಿಕ್ಷಾದಲ್ಲಿ ಅಪಹರಿಸಿ ಹಲ್ಲೆಗೈದು ಚಿನ್ನದ ಸರ, ಹಣ, ಮೊಬೈಲ್ ಫೋನ್ ದರೋಡೆಗೈದ ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕಡಂಬಾರು ನಿವಾಸಿಗಳಾದ ಶ್ರಾವಣ್, ಅಜಿತ್, ಪಾಚು, ಪ್ರಜಾಚು ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ಕಾನೂನು ವಿರುದ್ಧವಾಗಿ ಗುಂಪುಸೇರುವಿಕೆ, ಅಪಹರಣ, ಹಲ್ಲೆ ಮೊದಲಾದ ಕಾಯ್ದೆ ಪ್ರಕಾರ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಕಡಂಬಾರ್‌ನಲ್ಲಿ  ನಡೆದುಹೋಗುತ್ತಿದ್ದ …

ಹಲವು  ಪ್ರಕರಣಗಳ ಆರೋಪಿ : ಕಾಪಾ ಪ್ರಕಾರ ಬಂಧನ

ಕಾಸರಗೋಡು: ಹಲವು ಅಪರಾಧ ಪ್ರಕರಣಗಳ ಆರೋಪಿಯ ಮೇಲೆ ಕಾಸರಗೋಡು ಪೊಲೀಸರು ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿದ್ದಾರೆ.ಕಾಸರಗೋಡು ಬಟ್ಟಂಪಾರೆ ನಿವಾಸಿ ಹಾಗೂ ಈಗ ಕೂಡ್ಲು ವಿವೇಕಾನಂದ ನಗರದಲ್ಲಿ ವಾಸಿಸುತ್ತಿರುವ ಕೆ. ಮಹೇಶ್ (31) ಬಂಧಿತ ಆರೋಪಿ. ಈತನ ವಿರುದ್ಧ ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಗಳಲ್ಲಾಗಿ ಹಲವು ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನರಹತ್ಯಾ ಯತ್ನ, ಕೊಲೆ, ಕೊಲೆಯತ್ನ, ಗೂಂಡಾಗಿರಿ ಇತ್ಯಾದಿ ಹಲವು ಪ್ರಕರಣಗಳಲ್ಲಿ ಬಂಧಿತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.2017, 2021, 2022, 2023 ಮತ್ತು 2024ರಲ್ಲಿ …

ನೈತಿಕ ಪೊಲೀಸ್‌ಗಿರಿ ಸೋಗಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣ: ಇಬ್ಬರಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಹುಟ್ಟು ಹಬ್ಬದ ಸಲುವಾಗಿ ಸಹಪಾಠಿಗಳೊಂದಿಗೆ ಐಸ್ ಕ್ರೀಂ ಸೇವಿಸುತ್ತಿದ್ದ ವಿದ್ಯಾರ್ಥಿಗೆ ಇರಿದು ಗಾಯಗೊಳಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ಎರಡು ವರ್ಷ ಒಂಭತ್ತು ತಿಂಗಳ ಸಜೆ ಹಾಗೂ  5೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಜುಲ್ಮಾನೆ ಪಾವತಿ ದಿದ್ದಲ್ಲಿ ಆರೋಪಿಗಳು ಒಂದು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಚೆರ್ಕಳ ತೋಟ್ಟತ್ತಿಲ್ ಹೌಸ್‌ನ …

ವ್ಯಾಪಾರ ಸಂಸ್ಥೆಯಿಂದ 60 ಸಾವಿರ ರೂ. ಮೌಲ್ಯದ ಸಾಮಗ್ರಿ ಕಳವು

ಕಾಸರಗೋಡು: ನಗರದ ಬ್ಯಾಂಕ್ ರಸ್ತೆ ಬಳಿಯ ಕಟ್ಟಡವೊಂದರಲ್ಲಿ  ಕಾರ್ಯ ವೆಸಗುತ್ತಿರುವ  ಹೊಸದುರ್ಗದ ರಾಮ ಕೃಷ್ಣನ್ ಎಂಬವರ ಮಾಲಕತ್ವದ ಅಂಗಡಿ ಯಿಂದ ಸುಮಾರು ೬೦ ಸಾವಿರ ರೂ. ಮೌಲ್ಯದ ಎರಡು ಇಲೆಕ್ಟ್ರಿಕಲ್  ಮೋಟಾರ್, ವಾಟರ್ ಟ್ಯಾಂಕ್, ಪಿವಿಸಿ ಪೈಪ್‌ಗಳು ಮತ್ತು ಕಬ್ಬಿಣದ ಸ್ಟ್ಯಾಂಡ್ ಗಳನ್ನು ಕಳವುಗೈದಿರುವುದಾಗಿ ಕಾಸರಗೋ ಡು ಪೊಲೀಸರಿಗೆ ದೂರು ನೀಡಲಾಗಿದೆ.  ಈ ತಿಂಗಳ 13ರಂದು ರಾತ್ರಿ ಕಳವು ನಡೆದಿದೆ. ಇಬ್ಬರು ಈ ಕೃತ್ಯ ವೆಸಗಿರುವು ದಾಗಿ ಸಂಶಯಿಸುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.

ಮೂವರು ಯುವಕರಿಗೆ ಹಲ್ಲೆ : 6 ಮಂದಿ ವಿರುದ್ಧ ಕೇಸು

ಉಪ್ಪಳ: ಯುವಕರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಉಪ್ಪಳ ಹಿದಾಯತ್ ನಗರ ಕಸಾಯಿಗಲ್ಲಿಯ ಮುಹಮ್ಮದ್ ಶಕೀರ್ (20), ಉಪ್ಪಳದ ಶೇಖ್ ಮುಹಮ್ಮದ್ ನಿಹಾಲ್ (18), ಪತ್ವಾಡಿ ರೋಡ್ ಮಜಲ್‌ನ ಮುಹಮ್ಮದ್ ರಿಸ್ವಾನ್ (18) ಎಂಬಿವರಿಗೆ ತಂಡ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಇವರು ನೀಡಿದ ದೂರಿನಂತೆ ಉಪ್ಪಳ ನಿವಾಸಿಗಳಾದ ಮಕ್ಳು, ಮುರ್ಶಿದ್, ಸಿಲಾಲ್, ಫೈಸಲ್, ಸಫ್ವಾನ್, ಅಶ್ಪಾಕ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ …

ವೃದ್ಧನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: 80 ವರ್ಷದ ಮಾವನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಮೇಲ್ಪ ರಂಬ ಪೊಲೀಸರು ಬಂಧಿಸಿದ್ದಾರೆ. ಸಿಪಿಎಂ ಮಾಜಿ ನೇತಾರ ಹಾಗೂ ಪುಲ್ಲೂರು ಪೆರಿಯ ಗ್ರಾಮ ಪಂಚಾ ಯತ್‌ನ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷರಾಗಿದ್ದ  ಎನ್. ಕೃಷ್ಣನ್‌ರನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂಬಲತ್ತರ ನಿಲಾಂಕಾ ವಿನ ಎನ್. ಸುರೇಶ್ ಬಾಬು ಅಲಿ ಯಾಸ್ ಸೋಡಾ ಬಾಬು ಎಂಬಾತ ನನ್ನು ಪೊಲೀಸರು ಬಂಧಿಸಿದ್ದಾರೆ.  ಫೆ. 9ರಂದು ತನ್ನ ಮಾವ  ಕೃಷ್ಣನ್ ತಮ್ಮ ಹಿತ್ತಿಲಲ್ಲಿ ಮರ ಕಡಿದು ಸಾಗಿಸುತ್ತಿದ್ದು, ಅಲ್ಲಿಗೆ ಆಗಮಿಸಿ …