ಗುರುಸ್ವಾಮಿ ನಿಧನ

ಕಾಸರಗೋಡು: ಅಣಂಗೂರು ಜೆ.ಪಿ ನಗರ ನಿವಾಸಿ ಬಾಬು ಪೂಜಾರಿ (74) ನಿಧನ ಹೊಂದಿದರು.  ಇವರು ಶ್ರೀ ಅಯ್ಯಪ್ಪ ಗುರುಸ್ವಾಮಿಯೂ, ಜೆ.ಪಿ ನಗರ ಶ್ರೀ ಕೊರಗಜ್ಜ ಸನ್ನಿಧಿಯ ಮೊಕ್ತೇಸರರೂ ಆಗಿದ್ದರು. ಇತ್ತೀಚೆಗೆ ಇವರು ಬಿದ್ದು ತಲೆಗೆ ಗಂಭೀರ ಗಾಯಗೊಂಡು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖ ಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ಪತ್ನಿ ಸುಂದರಿ, ಮಕ್ಕ ಳಾದ  ರೂಪ, ದೀಪ, ಸಂತೋಷ್, ಅಳಿಯ ರಮೇಶ್ (ಬೆಳ್ಳೂರು ಪಂಬೆಜಾಲ್), ಸೊಸೆ ಭಾರತಿ, ಸಹೋದರ-ಸಹೋದರಿಯರಾದ ನಾರಾಯಣ, ಕೃಷ್ಣ, …

ಕಣ್ವತೀರ್ಥದಲ್ಲಿ ಮನೆ ಕಳವು: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಮಂಜೇಶ್ವರ: ಕುಂಜತ್ತೂರು ಬಳಿಯ ಕಣ್ವತೀರ್ಥದಲ್ಲಿ ಉತ್ತರ ಪ್ರದೇಶ ನಿವಾಸಿ ಯೋಗೀಶ್ ಎಂಬ ವರು ವಾಸಿಸುವ ಬಾಡಿಗೆ ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಪ್ರಕರ ಣದಲ್ಲಿ ಆರೋಪಿಯನ್ನು ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉತ್ತರಪ್ರದೇಶ ನಿವಾಸಿಯೂ, ಕಣ್ವತೀರ್ಥದಲ್ಲಿ ವಾಸಿಸುತ್ತಿರುವ ಗಣಪತಿ (30) ಎಂಬಾತ ಕಸ್ಟಡಿಯ ಲ್ಲಿರುವ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಈತನನ್ನು  ತನಿಖೆಗೊಳಪಡಿಸಿದ ಬಳಿಕ ಬಂಧನ ದಾಖಲಿಸಲಾಗುವುದೆಂದು ತಿಳಿಸಲಾ ಗಿದೆ. ಕಳೆದ    ಬುಧವಾರ ಹಗಲು ಹೊತ್ತಿನಲ್ಲಿ ಯೋಗೀಶ್‌ರ ಮನೆ ಯಿಂದ ಕಳವು ನಡೆದಿತ್ತು.  ಮನೆಯ ಮರದ ಕಿಟಿಕಿಯನ್ನು …

ಬಸ್ ನಿಲ್ದಾಣದಲ್ಲಿ ಜಾನುವಾರುಗಳ ಹಾವಳಿ: ಪ್ರಯಾಣಿಕರಿಗೆ ಸಮಸ್ಯೆ

 ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದಲ್ಲಿ ಜಾನುವಾರುಗಳು ಮಲಗುತ್ತಿರುವುದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದ ಬಗ್ಗೆ ದೂರಲಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಇಲ್ಲಿ ಜಾನುವಾರುಗಳು ತುಂಬಿರುತ್ತಿದ್ದು, ಇದರಿಂದ ಬಸ್‌ಗೆ ಹತ್ತಬೇಕಾದರೆ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಬೇಡಿಕೆ ತೀವ್ರಗೊಂಡಿದೆ.

ಕೇಂದ್ರ ಸಚಿವ ಅಮಿತ್ ಷಾ ಇಂದು ರಾಜ್ಯಕ್ಕೆ : ಬಿಜೆಪಿ ಸ್ಥಳೀಯಾಡಳಿತ ಚುನಾವಣೆ ಪ್ರಚಾರಕ್ಕೆ ನಾಳೆ ಚಾಲನೆ

ತಿರುವನಂತಪುರ: ಬಿಜೆಪಿಯ ಸ್ಥಳೀಯಾಡಳಿತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಕೇರಳಕ್ಕೆ ತಲುಪಲಿದ್ದಾರೆ. ರಾತ್ರಿ 11 ಗಂಟೆಗೆ ತಿರುವನಂತಪುರಕ್ಕೆ ತಲುಪುವ ಅಮಿತ್ ಷಾ ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬಿಜೆಪಿ ರಾಜ್ಯ ಸಮಿತಿ ಕಚೇರಿಯ ಉದ್ಘಾಟನೆಯನ್ನು ಅವರು ನಿರ್ವಹಿಸುವರು. ಬಳಿಕ ಪುತ್ತರಿಕಂಡಂ ಮೈದಾನದಲ್ಲಿ ನಡೆಯುವ ವಾರ್ಡ್ ಮಟ್ಟದ ನಾಯಕತ್ವ ಸಭೆಯಲ್ಲಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕೇರಳ ಮಿಷನ್ 2025 ಘೋಷಿಸುವರು. ಇದರೊಂದಿಗೆ ಚುನಾವಣೆಯ ಸಂಘಟನಾ ಮಟ್ಟದ ಪ್ರಚಾರಕ್ಕೆ ಅಧಿಕೃತವಾಗಿ …

ಕುಂಬಳೆ ಪಂಚಾಯತ್ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ 4ತಿಂಗಳ ಹಿಂದೆ ವಿಜಿಲೆನ್ಸ್‌ಗೆ ಬಿಜೆಪಿ ದೂರು: ತನಿಖೆ ಆಮೆನಡಿಗೆಯಲ್ಲಿ ಆರೋಪ

ಕುಂಬಳೆ: ಪಂಚಾಯತ್ ಕಚೇರಿಯ ಒಳಗೆ ನುಗ್ಗಿ ಕಾರ್ಯದರ್ಶಿ ಇಲ್ಲದ ವೇಳೆ ಕಚೇರಿಯ ಕಡತಗಳನ್ನು ಹುಡುಕಾಡುತ್ತಿದ್ದ ವೀಡಿಯೋ 5 ತಿಂಗಳ ಹಿಂದೆ ನಡೆದ ಘಟನೆಯಾಗಿದೆ ಎಂದು ಬಹಿರಂಗಗೊಂಡಿದೆ. ಪಂಚಾಯತ್ ಅಧ್ಯಕ್ಷೆಯ ಪತಿ ಕಡತಗಳನ್ನು ಪರಿಶೀಲಿಸಲು ಅನಧಿ ಕೃತವಾಗಿ ಕಚೇರಿಗೆ ನುಗ್ಗಿರುವುದಾಗಿ ದೂರಲಾಗಿದೆ. ಈ ದೃಶ್ಯ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಳೆದ ಮಾರ್ಚ್‌ನಲ್ಲೇ ಬಿಜೆಪಿ ವಿಜಿಲೆನ್ಸ್‌ಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಕುಂಬಳೆ ಮಂಡಲ ಬಿಜೆಪಿ ಕಾರ್ಯದರ್ಶಿ ಎಂ. ಪ್ರದೀಪ್ ಕುಮಾರ್ ದೂರು ನೀಡಿ ಪ್ರಕರಣ ದಾಖಲಾಗಿದ್ದರೂ …

ವಿವಿಧ ಬೇಡಿಕೆ ಮುಂದಿಟ್ಟು ಕಿಸಾನ್ ಸೇನೆಯಿಂದ ಪುತ್ತಿಗೆ ಪಂ. ಕೃಷಿ ಭವನಕ್ಕೆ ಮಾರ್ಚ್

ಪುತ್ತಿಗೆ: ಕೃಷಿಭವನದ ವಿರುದ್ಧ ಕಿಸಾನ್ ಸೇನೆ ವಿವಿಧ ಬೇಡಿಕೆ ಮುಂದಿಟ್ಟು ನಡೆಸಿದ ಪ್ರತಿಭಟನಾ ಮಾರ್ಚ್‌ನ್ನು ರಾಷ್ಟ್ರೀಯ ಕಿಸಾನ್ ಮಹಾ ಸಂಘ್ ಕೋ-ಆರ್ಡಿನೇಟರ್ ಕೆ.ವಿ. ಬಿಜು ಉದ್ಘಾಟಿಸಿದರು. ಕಿಸಾನ್ ಸೇನೆ ಪುತ್ತಿಗೆ ಪಂ. ಅಧ್ಯಕ್ಷ ಪಿ. ಅಬ್ದುಲ್ಲ ಕಂಡತ್ತಿಲ್ ಅಧ್ಯಕ್ಷತೆ ವಹಿಸಿದರು. ಕಿಸಾನ್ ಸೇನೆ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಪ್ರಧಾನ ಭಾಷಣ ಮಾಡಿದರು. ಸುಲೈಖ ಮಾಹಿನ್, ನಾಸಿರ್ ಚೆರ್ಕಳ, ಸಚ್ಚಿನ್ ಕುಂಟಾರ್, ಶಾಜಿ ಕಾಡಮನೆ, ಥೋಮಸ್ ಡಿಸೋಜಾ, ಬಾಲಸುಬ್ರಹ್ಮಣ್ಯ ಭಟ್, ಸುರೇಶ್ ಅಡ್ಕತ್ತೊಟ್ಟಿ, ಪ್ರಸಾದ್ ಕಕ್ಕೆಪ್ಪಾಡಿ, ಖಮರುದ್ದೀನ್, …

ಕಾಸರಗೋಡು-ಮಂಗಳೂರು ರೂಟ್‌ನಲ್ಲಿ ‘ರಾಜಹಂಸ ಬಸ್’ ಸೇವೆ ಆರಂಭ

ಕಾಸರಗೋಡು: ಮಂಗಳೂರು-ಕಾಸರಗೋಡು ರೂಟ್ ನಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಹೆಚ್ಚಿನ ಪ್ರಯೋಜನಕಾರಿ ಯಾಗುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ದಾಗಿ ‘ರಾಜಹಂಸ’ ಬಸ್ ಆರಂಭಿಸಿದೆ.ಬಸ್ಗಳು ದೈನಂದಿನ ಆರು ಸೇವೆ ಗಳನ್ನು ನಡೆಸಲಿವೆ. ಇದರಂತೆ ಬೆಳಿಗ್ಗೆ 6.30, 7.30, 10.30, 11.30, ಮಧ್ಯಾಹ್ನ ನಂತರ 3 ಮತ್ತು 3.30ಕ್ಕೆ ಮಂಗಳೂರಿನಿAದ ಕಾಸರಗೋಡಿಗೆ ಸೇವೆ ನಡೆಸುತ್ತಿದೆ. ಕಾಸರಗೋಡಿನಿಂದ ಬೆಳಿಗ್ಗೆ 8.30, 9.30, ಮಧ್ಯಾಹ್ನದ ಬಳಿಕ 1.30, 5 ಮತ್ತು 5.30ಕ್ಕೆ ಈ ಬಸ್ ಸಂಚಾರ ನಡೆಸುತ್ತಿದೆ.ಸಾಧಾರಣ ಕೆಎಸ್ಆರ್ಟಿಸಿ ಬಸ್ಗಳು ಕಾಸರಗೋಡಿನಿಂದ …

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಆರಂಭ

ಎಡನೀರು: ಎಡನೀರು ಮಠದಲ್ಲಿ ನಿನ್ನೆ ಗುರುಪೂರ್ಣಿಮೆ ಯಂದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬೆಳಗ್ಗೆ ವ್ಯಾಸಪೂಜೆಯನ್ನು ನೆರವೇರಿಸಿ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿದರು. 108 ಕಾಯಿ ಮಹಾಗಣಪತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ 60 ದಿನಗಳ ಭಜನಾ ಕಾರ್ಯಕ್ರಮ ಆರಂ ಭವಾಯಿತು. ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಎಡನೀರು ಇವರು ಭಜನೆಗೆ ಚಾಲನೆ ನೀಡಿದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿ ಸಂಗೀತ, ಮಧ್ಯಾಹ್ನ ಮಹಾಪೂಜೆ ನಡೆಯಿತು.ಇಂದು ಸಂಜೆ 6ರಿಂದ ಕುರಿಯ ವಿಠಲ …

ಎಸ್‌ಎಸ್‌ಎಫ್ ಕುಂಬಳೆ, ಮಂಜೇಶ್ವರ ಡಿವಿಷನ್ ಸಾಹಿತ್ಯೋತ್ಸವಕ್ಕೆ ನಾಳೆ ಚಾಲನೆ

ಕುಂಬಳೆ: ಎಸ್‌ಎಸ್‌ಎಫ್ 32ನೇ ಕುಂಬಳೆ ಡಿವಿಷನ್ ಸಾಹಿತ್ಯೋತ್ಸವ ನಾಳೆ ಕಳತ್ತೂರು ತಾಜುಲ್ ಉಲಮಾ ಎಜ್ಯುಕೇಶನ್ ಸೆಂಟರ್‌ನಲ್ಲಿ ಆರಂಭ ಗೊಳ್ಳಲಿದೆ. ಡಿವಿಷನ್‌ನ ವಿವಿಧ ಸಾಹಿತ್ಯೋತ್ಸವಗಳಲ್ಲಿ ಸ್ಪರ್ಧಿಸಿ ಅರ್ಹತೆ ಗಳಿಸಿದ  ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಸಹಿತ ಸಾಂಸ್ಕೃತಿಕ, ಆತ್ಮೀಯ ಸಂಗಮಗಳು ನಡೆಯಲಿದೆ. ಇಂದು ಮಧ್ಯಾಹ್ನ ಸಿಯಾರತ್ ಸಂಗಮಗಳು, ಸಂಜೆ ಧ್ವಜಾರೋಹಣ ನಡೆಯಲಿದೆ. ನಾಳೆ ಸಂಜೆ ನಡೆಯುವ ಉದ್ಘಾಟನಾ ಸಂಗಮವನ್ನು ರಾಜ್ಯ ಅಧ್ಯಾಪಕ ಪ್ರಶಸ್ತಿ ವಿಜೇತ ನಿರ್ಮಲ್ ಕುಮಾರ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್ ಭಾಗವಹಿಸುವರು. ಆದಿತ್ಯವಾರ ಸಂಜೆ ಸಮಾರೋಪ …

ಹೊಸಂಗಡಿ ರೈಲ್ವೇ ಗೇಟ್ ಸಮೀಪ ರಸ್ತೆ ಬದಿ ನೀರು ಕಟ್ಟಿ ನಿಂತು ಸಮಸ್ಯೆ: ಶುಚೀಕರಣಕ್ಕೆ ಒತ್ತಾಯ

ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಸಮೀಪದ ರಸ್ತೆ ಬದಿಯಲ್ಲಿ ಮಳೆಗೆ ನೀರು ಕಟ್ಟಿ ನಿಂತು ಕೆಸರುಗದ್ದೆಯಾಗಿ ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆ ಉಂಟಾಗಿದೆ. ಬಂಗ್ರ ಮಂಜೇಶ್ವರ, ಕಟ್ಟೆಬಜಾರ್ ಮೊದಲಾದ ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಹಿತ ಜನರು ಬಸ್‌ಗಾಗಿ ಕಾಯುವ ಪ್ರದೇಶವಿದಾ ಗಿದೆ. ಆಟೋರಿಕ್ಷಾ ನಿಲುಗಡೆ, ಗೂಡಂಗಡಿ ವ್ಯಾಪಾರಿಗಳು ಇಲ್ಲಿದ್ದು, ದುರ್ವಾಸನೆ ಸಹಿಸಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಪರಿಸರದಲ್ಲಿರುವ ಸರ್ವೀಸ್ ರಸ್ತೆ ಎತ್ತರಗೊಳಿಸಲಾಗಿದ್ದು, ಇದರಿಂದ ನೀರು ಕಟ್ಟಿ ನಿಲ್ಲಲು ಕಾರಣವಾಗಿದೆ. ಆದರೆ ರಸ್ತೆ ಅಭಿವೃದ್ಧಿ ವೇಳೆ ಈ ಪರಿಸರದಲ್ಲಿ …