ಜಿಲ್ಲಾ ಮೊಗೇರ ಸಂಘದಿಂದ ಪ್ರತಿಭಾ ಪುರಸ್ಕಾರ

ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮ ಜರಗಿತು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕಿಶನ್‌ರಾಜ್ ಕೆ ಕೆ, ಧನ್ಯಶ್ರೀ ಎ.ಕೆ., ಹಾಗೂ +2ವಿನಲ್ಲಿ ಅತ್ಯದಿsಕ ಅಂಕ ಗಳಿಸಿದ ಜ್ಯೋತಿಕ ಮಜೀರ್‌ಪಳ್ಳಕಟ್ಟೆ ಇವರನ್ನು ಅಭಿನಂದಿ ಸಲಾಯಿತು. ಬದಿಯಡ್ಕ ಪಂ. ಸದಸ್ಯ ಶಂಕರ ಡಿ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಮದರು ಮಹಾಮಾತೆ ಅಧ್ಯಕ್ಷ ವಸಂತ ಅಜಕೊಡು, ಅಂಬೇಡ್ಕರ್ …

ಓಣಂಗೆ ಹೆಚ್ಚುವರಿ ಅಕ್ಕಿ ನ್ಯಾಯಬೆಲೆಗೆ ನೀಡುವುದಾಗಿ ಸಚಿವ ಜಿ.ಆರ್. ಅನಿಲ್

ತಿರುವನಂತಪುರ: ಕೇಂದ್ರ ಸರಕಾರದ ಸಹಾಯ ಲಭಿಸದಿದ್ದರೂ ಓಣಂ ಹಬ್ಬದ ಸಂದರ್ಭದಲ್ಲಿ ಸಪ್ಲೈ ಕೋ ಮಾರಾಟದಂಗಡಿಗಳಲ್ಲೂ ರೇಶನ್ ಅಂಗಡಿಗಳ ಮೂಲಕ ಹೆಚ್ಚುವರಿಯಾಗಿ ಅಕ್ಕಿಯನ್ನು ನ್ಯಾಯಬೆಲೆಗೆ ವಿತರಿಸುವು ದಾಗಿ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಸಪ್ಲೈ ಕೋ ಮೂಲಕ ರೇಶನ್ ಕಾರ್ಡ್ ಮಾಲಕರಿಗೆ 29 ರೂ.ಗೆ ನೀಡುವ 2 ಕಿಲೋ ಗ್ರಾಂ ಬೆಳ್ತಿಗೆ ಅಕ್ಕಿ ಹಾಗೂ 33 ರೂ.ಗೆ ನೀಡುವ 8 ಕಿಲೋ ಗ್ರಾಂ ಶಬರಿ ಅಕ್ಕಿ ಮತ್ತೂ ಬೆಲೆ ಕಡಿತಗೊ ಳಿಸಿ ನೀಡಲಾಗುವುದು. ತೆಂಕಣ ಜಿಲ್ಲೆಗಳಲ್ಲಿ ಕುಚ್ಚಿಲಕ್ಕಿ ಹಾಗೂ …

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಸಾಧ್ಯತೆ ಇದೆ ಎಂದು ಮೃಗಸಂರಕ್ಷಣೆ ಕ್ಷೀರೋತ್ಪಾದಕ ಸಚಿವೆ ಚಿಂಜುರಾಣಿ ತಿಳಿಸಿದ್ದಾರೆ. ಮಿಲ್ಮಾ ಹಾಗೂ ಕೃಷಿಕರ ಮಧ್ಯೆ ನಡೆಯುವ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಲೀಟರ್ ಒಂದಕ್ಕೆ 10 ರೂ.ನಂತೆ ಹೆಚ್ಚಿಸಬೇಕೆಂದು ಮಿಲ್ಮಾ ತಿರುವನಂತಪುರ ವಲಯ ಘಟಕ ಆಡಳಿತ ಸಮಿತಿ ಸಭೆ ಶಿಫಾರಸ್ಸು ಮಾಡಿತ್ತು. ಎರ್ನಾಕುಳಂ, ಮಲಬಾರ್ ಘಟಕಗಳು ಬೆಲೆ ಹೆಚ್ಚಿಸಬೇಕೆಂಬ ಬೇಡಿಕೆಯೊಡ್ಡಿತ್ತು. ಉತ್ಪಾದನೆ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ  ಹಾಲಿನ ದರ ಹೆಚ್ಚಿಸಲು ಘಟಕಗಳು …

ಬಿಇಎಂ ಶಾಲೆಗೆ ನೂತನ ಬಸ್ ಕೊಡುಗೆ

ಕಾಸರಗೋಡು: ನಗರದ ಬಿಇಎಂ ಹೈಸ್ಕೂಲ್‌ಗೆ ಮೆನೇಜ್‌ಮೆಂಟ್, ಅಧ್ಯಾಪಕ,. ಸಿಬ್ಬಂದಿ ವರ್ಗದವರು ಕೊಡುಗೆಯಾಗಿ ನೀಡಿದ ಶಾಲಾ ಬಸ್‌ನ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಮೆನೇಜರ್ ರೆವರೆಂಡ್ ಫಾ| ಸುನಿಲ್ ಪುದಿಯಾಟಿಲ್ ಉದ್ಘಾಟಿಸಿ ದರು. ಪ್ರಾಂಶುಪಾಲ ರಾಜೇಶ್ಚಂದ್ರ, ಮುಖ್ಯೋಪಾಧ್ಯಾಯ ಗಣೇಶ್ ಕೆ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರೇಮ್‌ಜಿತ್, ಪಿಟಿಎ ಸದಸ್ಯರು, ಯಶವಂತ ಮಾಸ್ತರ್, ಬಾಲ ಕೃಷ್ಣ, ಸಂಧ್ಯಾಕುಮಾರಿ, ಸಿಬ್ಬಂದಿವರ್ಗ, ಮಕ್ಕಳು ಉಪಸ್ಥಿತರಿದ್ದರು.

ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ಕುಂಬಳೆ: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ನಿನ್ನೆ ನಡೆಯಿತು. ವ್ಯವಸ್ಥಾಪಕ ಎಂ. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಉದ್ಘಾಟಿಸಿದರು. ಪಂಚಾಯತ್ ಸದಸ್ಯೆ ಪುಷ್ಪಲತಾ ಶೆಟ್ಟಿ ಪ್ರತಿಭಾ ಪುರಸ್ಕಾರ ವಿತರಿಸಿದರು. ಎಲ್‌ಎಸ್‌ಎಸ್, ಯುಎಸ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್. ಶಿವರಾಮ ಭಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಮಾತೃಸಂಘದ ಅಧ್ಯಕ್ಷೆ ಸುಧಾ ಟೀಚರ್, ಪಿಟಿಎ ಉಪಾಧ್ಯಕ್ಷ …

ಎಂಡಿಎಂಎ, ಕಾರು ವಶ: ನಾಲ್ಕು ಯುವಕರು ಸೆರೆ

ಕಾಸರಗೋಡು: ಎಂಡಿಎಂಎ ಹಾಗೂ ಕಾರು ಸಹಿತ ೪ ಮಂದಿ ಯುವಕರನ್ನು ಪಾಲಕುನ್ನುನಲ್ಲಿ ಸೆರೆ ಹಿಡಿಯಲಾಗಿದೆ. ಕೋಟಿಕುಳಂ ನಿವಾಸಿ ಇಮ್ತಿಶಾನ್ (25), ಚಿತ್ತಾರಿ ಮುಕುಟ್ ನಿವಾಸಿ ಎಂ.ಕೆ. ಹೌಸ್‌ನ ಎಂ.ಕೆ. ಶರಫುದ್ದೀನ್ (27), ಕೋಟಿಕುಳಂ ರೈಲ್ವೇ ನಿಲ್ದಾಣ ಸಮೀಪದ ಎಂ.ಎ. ಮೊಹಮ್ಮದ್ ಆರೀಫ್ (24), ಕಳನಾಡು ಅಬ್ದುಲ್ ಮುನವರ್ (22) ಎಂಬಿವರನ್ನು ಬೇಕಲ ಎಸ್‌ಐ ಎಂ. ಸತೀಶ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಪಾಲಕುನ್ನು ಪೇಟೆಯಲ್ಲಿ ಕಾಸರಗೋಡು ಭಾಗಕ್ಕೆ ತೆರಳುವ ಪ್ರಯಾಣಿಕರಿಗಾಗಿ …

ಮನೆ ಮೇಲೆ ಗುಂಡು ಹಾರಾಟ: ಕಿಟಿಕಿ ಗಾಜು ಹಾನಿ ನಿದ್ರಿಸುತ್ತಿದ್ದ ಕುಟುಂಬ ಅಪಾಯದಿಂದ ಪಾರು

ಮಂಜೇಶ್ವರ: ಮುಂಜಾನೆ ಹೊತ್ತಿನಲ್ಲಿ ಮನೆ ಮೇಲೆ  ಗುಂಡು ಹಾರಾಟ ನಡೆದ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಬಳಿ ನಡೆದಿದೆ. ಗುಂಡು ತಾಗಿ ಬೆಡ್‌ರೂಂನ  ಕಿಟಿಕಿ  ಗಾಜು ಪುಡಿಗೈಯ್ಯಲ್ಪಟ್ಟಿದೆ. ಶಬ್ದ ಕೇಳಿ ಮನೆಯವರು ನಿದ್ರೆಯಿಂದ ಎಚ್ಚೆತ್ತು ನೋಡಿದಾಗಲೇ ಘಟನೆ ಅರಿವಿಗೆ ಬಂದಿದೆ.  ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ವರ್ಕಾಡಿ ಜಂಕ್ಷನ್ ಬಳಿಯ ನಲ್ಲೆಂಗಿಪದವು ನಿವಾಸಿ ಹರೀಶ ಬಿ.ಎಂ ಎಂಬವರ ಮನೆ ಮೇಲೆ  ಗುಂಡು ಹಾರಾಟ ನಡೆದಿದೆ. ನಿನ್ನೆ ಮುಂಜಾನೆ 2.30ರ ವೇಳೆ ಈ ಘಟನೆ ನಡೆದಿದೆ. …

ಶಾಲೆಗೆಂದು ತಿಳಿಸಿ ಮನೆಯಿಂದ ಹೊರಟು ಊರುಬಿಡಲು ಪ್ರಯತ್ನಿಸಿದ ಬಾಲಕ; ರೈಲ್ವೇ ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕನ ಪತ್ತೆ

ಕುಂಬಳೆ: ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿ  ಊರು ಬಿಡಲು ಪ್ರಯತ್ನಿಸಿದ 12ರ ಹರೆಯದ ಬಾಲಕನನ್ನು ರೈಲ್ವೇ ಪೊಲೀಸರು ಪತ್ತೆಹಚ್ಚಿ ಹೆತ್ತವರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ೪ಗಂಟೆ ವೇಳೆ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಏಳನೇ ತರಗತಿ ವಿದ್ಯಾರ್ಥಿ ಮಂಗಳೂರು-ತಿರುವನಂತಪುರ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಪ್ರಯಾಣಿಸಿದ್ದನು. ರೈಲು ಪಯ್ಯನ್ನೂರಿಗೆ ತಲುಪಿದಾಗ ಕರ್ತವ್ಯದಲ್ಲಿದ್ದ ಎಸ್‌ಐ ಎಂ.ವಿ. ಪ್ರಕಾಶನ್, ಎಎಸ್‌ಐ ಪ್ರದೀಪ್ ಕುಮಾರ್ ಎಂಬಿವರು ಏಕಾಂಗಿ ಯಾಗಿ ಕುಳಿತಿರುವ ಬಾಲಕನನ್ನು ಕಂಡಿದ್ದಾರೆ. ಸಂಶಯ ತೋರಿದ ಪೊಲೀಸರು …

ತಾಯಿಯನ್ನು ಕೊಲೆಗೈದ ಆರೋಪಿಯನ್ನು ಮನೆಗೆ ತಲುಪಿಸಿ ಮಾಹಿತಿ ಸಂಗ್ರಹ

ಮಂಜೇಶ್ವರ: ವರ್ಕಾಡಿ ನಲ್ಲೆಂಗಿಯಲ್ಲಿ ದಿ| ಲೂಯಿಸ್ ಮೊಂತೆರೋರ  ಪತ್ನಿ ಹಿಲ್ಡಾ ಮೊಂತೆರೋ (60 )ಎಂಬವರನ್ನು  ಕಿಚ್ಚಿಟ್ಟು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಮೆಲ್ವಿನ್ ಮೊಂತೆರೋ (33)ನನ್ನು ಪೊಲೀಸರು ನಿನ್ನೆ ಆತನ ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಿದರು.  ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್, ಎಎಸ್‌ಐ ಮಧುಸೂದನನ್, ಸಿಪಿಒ ಧನೇಶ್ ಎಂಬಿವರ ನೇತೃತ್ವದಲ್ಲಿ ಮೆಲ್ವಿನ್‌ನನ್ನು  ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ. ತಾಯಿಯನ್ನು ಹೊಡೆದು ಕೊಲೆಗೈಯ್ಯಲು ಬಳಸಿದ  ಮರದ ಬೆತ್ತವನ್ನು ಮನೆಯ ಬಳಿಯಿಂದ ಪತ್ತೆಹಚ್ಚಲಾಯಿತು. ಕಳೆದ ಗುರುವಾರ ಮುಂ ಜಾನೆ …

ಭಾರತಾಂಬೆ ಚಿತ್ರ ವಿವಾದ: ರಾಜ್ಯಪಾಲರೊಂದಿಗೆ ಅಗೌರವ ; ಕೇರಳ ವಿ. ವಿ. ರಿಜಿಸ್ಟ್ರಾರ್ ಅಮಾನತು

ತಿರುವನಂತಪುರ: ಕೇರಳ ರಾಜ್ಯಪಾಲರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರವಿರಿಸಿದ ವಿಷಯದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಖರ್‌ರ ಮೇಲೆ ಅಗೌರವ ತೋರಿಸಿದ ಕಾರಣ ನೀಡಿ ಕೇರಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕೆ.ಎಸ್. ಅನಿಲ್ ಕುಮಾರ್‌ರನ್ನು ಪ್ರಸ್ತುತ ವಿವಿಯ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್‌ರವರು ತನಿಖಾ ವಿಧೇಯಗೊಳಿಸಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಈ ಅಮಾನತುಕ್ರಮ ಕೈಗೊಂಡ ಬೆನ್ನಲ್ಲೇ ಅದನ್ನು ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲು ರಿಜಿಸ್ಟ್ರಾರ್ ಮುಂದಾಗಿ ದ್ದಾರೆ. ಈ ಕ್ರಮವನ್ನು ನಾನು ಕಾನೂನಾ ತ್ಮಕವಾಗಿ ಎದುರಿಸುವುದಾಗಿಯೂ ಅವರು ಹೇಳಿದ್ದಾರೆ. ರಿಜಿಸ್ಟ್ರಾರ್‌ರನ್ನು …