ಇನ್ನು ನಾವು ಹೇಳುತ್ತೇವೆ, ನೀವು ಕೇಳಿ’  ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ಸೀನಿಯರ್‌ಗಳಿಂದ ಮಿಠಾಯಿ ಬೆದರಿಕೆ

ಕಾಸರಗೋಡು: ಇನ್ನು ನಾವು ಹೇಳುತ್ತೇವೆ ಅದನ್ನು ನೀವುಕೇಳಿ ಅನುಸರಿಸಬೇಕು  ಇದು ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ನೀಡಿರುವ ಬೆದರಿಕೆ. ಅಂದರೆ ಈ ಬೆದರಿಕೆಯನ್ನು ನೇರವಾಗಿ  ಬಾಯಿಮಾತಿನಿಂದ ನೀಡಲಾಗಿಲ್ಲ. ಅದನ್ನು ಪ್ಲಸ್‌ವನ್ ವಿದ್ಯಾರ್ಥಿಗಳಿಗೆ ವಿತರಿಸಲು ತರಲಾದ ಚಾಕ್ಲೆಟ್ ಕವರ್‌ನಲ್ಲಿ ಮುದ್ರಿಸಲಾಗಿದೆ. ಇದು ನಡೆದಿರುವುದು ಕಾಸರಗೋಡು ತಳಂಗರೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಈ ಶಾಲೆಗೆ ಕಾರೊಂದರಲ್ಲಿ ಬರುತ್ತಿದ್ದ ಕೆಲವು ವಿದ್ಯಾರ್ಥಿಗಳು,  ಪೊಲೀಸರನ್ನು ಕಂಡು ಹೆದರಿ ಕಾರನ್ನು ಅಲ್ಲೇ ಬಿಟ್ಟು ಜಾಗ ಖಾಲಿಮಾಡಿದ್ದರು. ಶಂಕೆಗೊಂಡ ಪೊಲೀಸರು ಆ ಕಾರನ್ನು …

ಅಗಲ್ಪಾಡಿ ಶಾಲೆ ಪ್ಯೂನ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಅಗಲ್ಪಾಡಿ ಎಸ್‌ಎಪಿ ಹೈಯರ್ ಸೆಕೆಂಡರಿ ಶಾಲೆಯ ಪ್ಯೂನ್ ರಬ್ಬರ್ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಂಬ್ಡಾಜೆ ಉಬ್ರಂಗಳ ಸೀತಾಂ ಗುಲಿ ನಿವಾಸಿ ಎಸ್. ಬಾಲಕೃಷ್ಣ (48) ಮೃತಪಟ್ಟ ವ್ಯಕ್ತಿ. ಶನಿವಾರ ರಾತ್ರಿ ಊಟ ಮಾಡಿ ಇವರು ನಿದ್ರಿಸಿದ್ದರು. ನಿನ್ನೆ ಮುಂಜಾನೆ  ನಾಪತ್ತೆಯಾಗಿದ್ದರೆನ್ನಲಾಗಿದೆ. ಇದರಿಂದ ಮನೆಯವರು ಹುಡುಕಾಟ ನಡೆಸುತ್ತಿದ್ದಾಗ ಮನೆ ಸಮೀಪದ ರಬ್ಬರ್ ತೋಟದ ಮರದ ರೆಂಬೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ನಡೆಸಲಾಯಿತು. ಘಟನೆ ಬಗ್ಗೆ …

ಮುಸ್ಲಿಂ ಲೀಗ್ ನೇತಾರ ಸಿ.ಎಚ್. ಹುಸೈನಾರ್ ತೆಕ್ಕಿಲ್ ನಿಧನ

ಕಾಸರಗೋಡು: ಮುಸ್ಲಿಂ ಲೀಗ್ ನೇತಾರ ಹಾಗೂ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ತೆಕ್ಕಿಲ್ ಉಕ್ರಂಪಾಡಿಯ ಸಿ.ಎಚ್. ಹುಸೈನಾರ್ ತೆಕ್ಕಿಲ್ (63) ನಿಧನಹೊಂದಿದರು. ಚಟ್ಟಂಚಾಲ್ ಎಂ.ಐ.ಸಿ ಕೇಂದ್ರ ಸಮಿತಿ ಸದಸ್ಯ, ಚಟ್ಟಂಚಾಲ್ ಅರ್ಬನ್ ಸೊಸೈಟಿ ನಿರ್ದೇಶಕ,  ಮೋಟಾರು ಕಾರ್ಮಿಕ ಸಂಘಟನೆ (ಎಸ್‌ಟಿಯು) ಜಿಲ್ಲಾ ಉಪಾಧ್ಯಕ್ಷ ಮುಸ್ಲಿಂ ಲೀಗ್‌ನ ಚಟ್ಟಂಚಾಲ್  ಟೌನ್ ಸಮಿತಿ ಅಧ್ಯಕ್ಷರೂ ಆಗಿದ್ದಾರೆ  ಹಸೈನಾರ್ ತೆಕ್ಕಿಲ್. ಚೆಮ್ನಾಡ್ ಪಂಚಾಯತ್ ಮಾಜಿ ಸದಸ್ಯ ದಿ| ಚೂತರವಳಪ್ಪು ಮೊಹಮ್ಮದ್ ಕುಂಞಿ ಹಾಜಿ-ಆಯಿಷಾ ದಂಪತಿ  ಪುತ್ರನಾಗಿ ರುವ ಮೃತರು …

ಬಾಲಕನಿಗೆ ದೌರ್ಜನ್ಯ: ಪೊಲೀಸರಿಂದ ಪೋಕ್ಸೋ ಪ್ರಕರಣ ದಾಖಲು; ತಲೆಮರೆಸಿಕೊಂಡ ಆರೋಪಿ

ಕಾಸರಗೋಡು: 11 ವರ್ಷದ ಗಂಡು ಮಗುವನ್ನು ಕರೆದೊಯ್ದು ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ಕೊಲ್ಲಿಯಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಈ ಮಾಹಿತಿ ತಿಳಿದು ಆರೋಪಿ ಪೆರುಂಬಳ ನಿವಾಸಿ ಹಾರಿಸ್ ತಲೆಮರೆಸಿಕೊಂಡಿ ರುವುದಾಗಿ ತಿಳಿದುಬಂದಿದೆ. ಕೊಲ್ಲಿಗೆ ಪರಾರಿಯಾಗಲು ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಿಗೆ  ಪೊಲೀಸರು ಮಾಹಿತಿ ನೀಡಿದ್ದಾರೆಂಬ ಸೂಚನೆ ಲಭಿಸಿದೆ. ನಿನ್ನೆ ಸಂಜೆ ಘಟನೆ ನಡೆದಿದೆ. ಇದೇ ವೇಳೆ ಇನ್ನೊಂದು ದೂರಿನಲ್ಲಿ ಮಂಜೇಶ್ವರ ಪೊಲೀಸರು ಇನ್ನೊಂದು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಅಂಗಡಿಗೆ …

ಕುಂಬಳೆ ಪಂ. ಕಚೇರಿಗೆ ನಾಳೆ ಸಿಪಿಎಂ ಮಾರ್ಚ್

ಕುಂಬಳೆ: ಕುಂಬಳೆ  ಪಂ.ನಲ್ಲಿ ಆಡಳಿತ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರುದ್ಧ ಬೃಹತ್ ಹೋರಾಟ ನಡೆಸುವುದಾಗಿ ಸಿಪಿಎಂ ಕುಂಬಳೆ ಪಂಚಾಯತ್ ಸಮಿತಿ ತಿಳಿಸಿದೆ. ಪಂಚಾಯತ್‌ನಲ್ಲಿ ನಡೆದಿರುವ ಭ್ರಷ್ಟಾಚಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಳೆ ಪಂಚಾಯತ್ ಕಚೇರಿಗೆ ಸಿಪಿಎಂ ಮಾರ್ಚ್ ನಡೆಸಲಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ಬದಿಯಡ್ಕ ಅನಿಲ್ ಕುಂಬಳೆ ರಸ್ತೆಯಿಂದ ಮಾರ್ಚ್ ಆರಂಭಿ ಸುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಕುಂಬಳೆ ಪಂ. ಲೀಗ್ ಅಧ್ಯಕ್ಷ, ಕಾರ್ಯದರ್ಶಿ, ಯೂತ್ ಲೀಗ್ ಅಧ್ಯಕ್ಷರ ಅಮಾನತು

ಕಲ್ಲಿಕೋಟೆ: ಮುಸ್ಲಿಂ ಲೀಗ್ ಕುಂಬಳೆ ಪಂಚಾಯತ್ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಕಾರ್ಯ ದರ್ಶಿ ಕೆ.ವಿ.ಯೂಸಫ್, ಯೂತ್ ಲೀಗ್ ಪಂಚಾಯತ್ ಅಧ್ಯಕ್ಷ ಕೆ.ಎಂ. ಅಬ್ಬಾಸ್ ಎಂಬಿವರನ್ನು ಪಕ್ಷದ ಹುದ್ದೆಗಳಿಂದ ಹೊರಹಾಕಿರುವುದಾಗಿ ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ತಿಳಿಸಿದ್ದಾರೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ಜಿಲ್ಲಾ ಕಾರ್ಯಕಾರಿ  ಸಮಿತಿ ಸದಸ್ಯ ಅಶ್ರಫ್ ಕಾರ್ಳೆ, ಕುಂಬಳೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಯೂಸಫ್ ಉಳುವಾರು ಎಂಬಿವರಿಗೆ ಪಕ್ಷ ತಾಕೀತು ನೀಡಿದೆ. ಮುಸ್ಲಿಂ ಲೀಗ್ …

ಕುಂಬಳೆ ಪಂ.ನಲ್ಲಿ ಆಡಳಿತ ನಡೆಸುವುದು ಲೀಗ್ ಸದಸ್ಯೆಯರ ಪತಿಯಂದಿರು-ಸಿಪಿಎಂ

ಕುಂಬಳೆ: ಕುಂಬಳೆ ಪಂಚಾಯ ತ್‌ನಲ್ಲಿ ಆಡಳಿತ ನಡೆಸುತ್ತಿರುವುದು ವಂಚನಾ ತಂಡವಾಗಿದೆಯೆಂದೂ ಆಡಳಿತಕ್ಕೆ ಚುಕ್ಕಾಣಿ ಹಿಡಿಯುತ್ತಿ ರುವುದು ಲೀಗ್‌ನ ಮಹಿಳಾ ಸದಸ್ಯೆಯರ ಪತಿಯರಾಗಿದ್ದಾರೆಂದು ಸಿಪಿಎಂ ಲೋಕಲ್ ಸಮಿತಿ ಆರೋಪಿಸಿದೆ. ಕುಂಬಳೆ ಪೇಟೆಯಲ್ಲಿ  ೩೯ ಲಕ್ಷ ರೂಪಾಯಿ ವ್ಯಯಿಸಿ ಬಸ್ ವೈಟಿಂಗ್ ಶೆಡ್ ನಿರ್ಮಿಸಿರುವುದು ಹಾಗೂ 40 ಲಕ್ಷ ರೂ. ವ್ಯಯಿಸಿ ‘ಟೇಕ್ ಎ ಬ್ರೇಕ್’ ನಿರ್ಮಿಸಿರವುದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆಯೆಂದೂ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಲೋಕಲ್ ಸಮಿತಿ ಒತ್ತಾಯಿಸಿದೆ. ಇದೇ ಬೇಡಿಕೆ ಮುಂದಿರಿಸಿ ಸ್ಥಳೀಯಾಡಳಿತ ಖಾತೆ …

ಬಸ್ ವೈಟಿಂಗ್ ಶೆಡ್‌ನಲ್ಲಿ ಸದಸ್ಯರ ಭಾವಚಿತ್ರಗಳು: ತಮ್ಮ ಫೊಟೋಗಳನ್ನು ತೆರವುಗೊಳಿಸುವಂತೆಬಿಜೆಪಿ, ಸಿಪಿಎಂನಿಂದ ಮನವಿ

ಕುಂಬಳೆ: ಕುಂಬಳೆ ಪೇಟೆಯ ಕುಂ ಬಳೆ- ಬದಿಯಡ್ಕ ರಸ್ತೆ ಜಂಕ್ಷನ್‌ನಲ್ಲಿರುವ ಬಸ್ ವೈಟಿಂಗ್ ಶೆಡ್‌ನಲ್ಲಿ ಸ್ಥಾಪಿಸಿರುವ ಪಂಚಾಯತ್ ಸದಸ್ಯರ ಫೋಟೋಗಳಿಂದ ತಮ್ಮ  ಫೋಟೋಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಬಿಜೆಪಿ 11ನೇ ವಾರ್ಡ್ ಸದಸ್ಯೆ ಸುಲೋಚನ ಪಿ. ಪಂಚಾಯತ್ ಕಾರ್ಯದರ್ಶಿಯವರಲ್ಲಿ ಆಗ್ರಹಪಟ್ಟಿದ್ದಾರೆ. ಬಿಜೆಪಿ ಸದಸ್ಯರಾದ ಪ್ರೇಮಾವತಿ, ಅಜಯ್ ಎಂ, ಪ್ರೇಮಲತ ಎಸ್, ವಿವೇಕ್ ಚಂದ್ರಶೆಟ್ಟಿ, ಮೋಹನ ಕೆ,  ಶೋಭಾ ಎಸ್, ವಿದ್ಯಾ ಎನ್ ಪೈ, ಪುಷ್ಪಲತ ಎಂಬಿವರು ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ ಈ ಬೇಡಿಕೆ ಮುಂದಿರಿಸಿ ದ್ದಾರೆ. ವಿವಾದಿತ ಬಸ್ …

ಒಂದರ ಹಿಂದೆ ಮತ್ತೊಂದು ಭ್ರಷ್ಟಾಚಾರ ಆರೋಪ: ಕುಂಬಳೆಯಲ್ಲಿ ನೂರಾರು ಮಂದಿ ಮುಸ್ಲಿಂ ಲೀಗ್, ಯೂತ್ ಲೀಗ್ ಕಾರ್ಯಕರ್ತರು ರಾಜೀನಾಮೆಯತ್ತ

ಕುಂಬಳೆ: ಕುಂಬಳೆಯಲ್ಲಿ ಬಸ್ ವೈಟಿಂಗ್ ಶೆಡ್ ನಿರ್ಮಾಣ ಗುತ್ತಿಗೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪಂಚಾಯತ್ ಕಾರ್ಯದರ್ಶಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಬಳಿಕ ಹುಟ್ಟಿಕೊಂಡ ವಿವಾದಗಳ ಬೆನ್ನಲ್ಲೇ ಹೊಯ್ಗೆ ಕಡವಿಗೆ ಸಂಬಂಧಿಸಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಹೀಗೆ ಭ್ರಷ್ಟಾಚಾರಗಳ ಸರಣಿಯೇ ಕೇಳಿ ಬಂದುದರಿಂದ ಅಸಮಾ ಧಾನಗೊಂಡ ಕುಂಬಳೆಯ  ನೂರಾರು ಮಂದಿ ಮುಸ್ಲಿಂ ಲೀಗ್, ಯೂತ್ ಲೀಗ್ ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದಾರೆ. ಹೊಯ್ಗೆಕಡವಿಗೆ ಸಂಬಂಧಿಸಿ ಯೂತ್ ಲೀಗ್ ನೇತಾರನನ್ನು ಸೂಪರ್‌ವೈಸರ್ ಸ್ಥಾನದಿಂದ ತೆರವುಗೊಳಿಸಿದ ಬೆನ್ನಲ್ಲೇ ಭ್ರಷ್ಟಾಚಾರ ಆರೋಪಗಳ …

ನವಜಾತ ಶಿಶುಗಳ ಕೊಲೆ: ಮಕ್ಕಳನ್ನು ಹೂತುಹಾಕಿದ ಹೊಂಡ ತೆರೆದು ಫಾರೆನ್ಸಿಕ್ ತಪಾಸಣೆ

ತೃಶೂರು: ಇಲ್ಲಿನ ಪುದುಕ್ಕಾಡ್‌ನಲ್ಲಿ ಅವಿವಾಹಿತರಾದ ಜೋಡಿ ನವಜಾತ ಶಿಶುಗಳನ್ನು ಕೊಲೆಗೈದ ಪ್ರಕರಣದಲ್ಲಿ ಹೂತುಹಾಕಿದ ಸ್ಥಳವನ್ನು ತೆರೆದು ಇಂದು ಪರಿಶೀಲಿಸಲಾಗುವುದು. ಮೊದಲ ಮಗುವನ್ನು ಹೂತುಹಾಕಿದ ಒಂದನೇ ಆರೋಪಿ ಅನಿಶಾಳ ಮನೆಯ ಪರಿಸರ ಹಾಗೂ ದ್ವಿತೀಯ ಮಗುವನ್ನು ಹೂತುಹಾಕಿದ ಎರಡನೇ ಆರೋಪಿ ಭವಿನ್‌ನ ಮನೆಯ ಪರಿಸರವನ್ನು ಫಾರೆನ್ಸಿಕ್ ತಂಡ ತಪಾಸಣೆ ನಡೆಸಲಿದೆ. ಈ ಮೊದಲು ಇವರಿಬ್ಬರನ್ನು ಮನೆಗೆ ಕರೆದುಕೊಂಡು ಬಂದು ಹೇಳಿಕೆ ದಾಖಲಿಸಲಾಗಿತ್ತು. ಆದಿತ್ಯವಾರ ಮುಂಜಾನೆ 12.30ರ ವೇಳೆ ಆಂಬಲ್ಲೂರು ನಿವಾಸಿ ಭವಿನ್ ನವಜಾತ ಶಿಶುಗಳ ಅಸ್ಥಿಯೊಂದಿಗೆ ಪೊದುಕ್ಕಾಡ್ ಪೊಲೀಸ್ …