ಮುಸ್ಲಿಂ ಲೀಗ್ ನೇತಾರ ಸಿ.ಎಚ್. ಹುಸೈನಾರ್ ತೆಕ್ಕಿಲ್ ನಿಧನ

ಕಾಸರಗೋಡು: ಮುಸ್ಲಿಂ ಲೀಗ್ ನೇತಾರ ಹಾಗೂ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ತೆಕ್ಕಿಲ್ ಉಕ್ರಂಪಾಡಿಯ ಸಿ.ಎಚ್. ಹುಸೈನಾರ್ ತೆಕ್ಕಿಲ್ (63) ನಿಧನಹೊಂದಿದರು.

ಚಟ್ಟಂಚಾಲ್ ಎಂ.ಐ.ಸಿ ಕೇಂದ್ರ ಸಮಿತಿ ಸದಸ್ಯ, ಚಟ್ಟಂಚಾಲ್ ಅರ್ಬನ್ ಸೊಸೈಟಿ ನಿರ್ದೇಶಕ,  ಮೋಟಾರು ಕಾರ್ಮಿಕ ಸಂಘಟನೆ (ಎಸ್‌ಟಿಯು) ಜಿಲ್ಲಾ ಉಪಾಧ್ಯಕ್ಷ ಮುಸ್ಲಿಂ ಲೀಗ್‌ನ ಚಟ್ಟಂಚಾಲ್  ಟೌನ್ ಸಮಿತಿ ಅಧ್ಯಕ್ಷರೂ ಆಗಿದ್ದಾರೆ  ಹಸೈನಾರ್ ತೆಕ್ಕಿಲ್. ಚೆಮ್ನಾಡ್ ಪಂಚಾಯತ್ ಮಾಜಿ ಸದಸ್ಯ ದಿ| ಚೂತರವಳಪ್ಪು ಮೊಹಮ್ಮದ್ ಕುಂಞಿ ಹಾಜಿ-ಆಯಿಷಾ ದಂಪತಿ  ಪುತ್ರನಾಗಿ ರುವ ಮೃತರು ಪತ್ನಿ ನಸೀಮ, ಮಕ್ಕಳಾದ ನಜಾದ್, ನಿಶಾದ್, ನಸೀದ, ನಿಯಾದ್, ಅಳಿಯ ರಯೀಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page