ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 52 ವರ್ಷ ಸಜೆ

ಕಾಸರಗೋಡು: 15ರ ಹರೆಯದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ  ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೫೨ ವರ್ಷ ಕಠಿಣ ಸಜೆ ಹಾಗೂ 2.21  ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಮುನ್ನಾಡ್ ವಟ್ಟಂತ್ತಟ್ಟ ಉನ್ನುಪ್ಪುಂ ಕಲ್ಲಿನ ಎಚ್. ಸುರೇಶ್ (34) ಎಂಬಾ ತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ  …

ಪ್ಲಸ್‌ಟು ಅಂಕಪಟ್ಟಿಯಲ್ಲಿ ವ್ಯಾಪಕ ತಪ್ಪುಗಳು: ಸಮಗ್ರ ತನಿಖೆಗೆ ಆದೇಶ

ತಿರುವನಂತಪುರ: ಪ್ಲಸ್‌ಟು ಅಂಕಪಟ್ಟಿ ಮುದ್ರಣದಲ್ಲಿ ವ್ಯಾಪಕ ತಪ್ಪುಗಳು ಉಂಟಾಗಿದ್ದು, ಆ ಬಗ್ಗೆ ಸಮಗ್ರ ತನಿಖೆಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ನಿರ್ದೇಶ ನೀಡಿದ್ದಾರೆ. ನಾಲ್ಕುಲಕ್ಷದಷ್ಟು ಪ್ಲಸ್‌ಟು ಅಂಕಪಟ್ಟಿ ಮುದ್ರಿಸಲಾಗಿದ್ದು ಅದರಲ್ಲಿ 10,೦೦೦ ಅಂಕಪಟ್ಟಿಯಲ್ಲಿ ತಪ್ಪುಗಳು ಪತ್ತೆಯಾಗಿವೆ. ಇದರಲ್ಲಿ ಅಂಕಗಳನ್ನೂ ತಪ್ಪಾಗಿ  ಮುದ್ರಿಸಲಾಗಿದೆ.  ಹೀಗೆ ತಪ್ಪುಗಳು ಪತ್ತೆಯಾದ ಅಂಕಪಟ್ಟಿ ಗಳನ್ನು  ಹಿಂದಕ್ಕೆ ಪಡೆದುಕೊಳ್ಳುವಂತೆ  ಹೈಯರ್ ಸೆಕೆಂಡರಿ ಪರೀಕ್ಷಾ ವಿಭಾಗದ ಜಂಟಿ ಕಾರ್ಯದರ್ಶಿ ಡಾ. ಕೆ. ಮಾಣಿಕ್ಯರಾಜ್ ಸಂಬಂಧಪಟ್ಟ ಹೈಯರ್ ಸೆಕೆಂಡರಿ ಶಾಲೆಗಳ ಪ್ರಾಂಶುಪಾಲರಿಗೆ ನಿರ್ದೇಶ ನೀಡಿದ್ದಾರೆ.ಪ್ಲಸ್‌ಟು ಅಂಕ …

ಕೇರಳ ಪ್ರಿಂಟರ್ಸ್ ಅಸೋಸಿಯೇಷನ್ ಜಿಲ್ಲಾ ಸಮ್ಮೇಳನ ನಾಳೆ

ಕಾಸರಗೋಡು: ಕೇರಳ ಪ್ರಿಂಟರ್ಸ್ ಅಸೋಸಿಯೇಷನ್‌ನ   ಕಾಸರಗೋಡು ಜಿಲ್ಲಾ ಸಮ್ಮೇಳನ ನಾಳೆ  ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿರುವ ಆರ್.ಕೆ. ಮಾಲ್‌ನಲ್ಲಿ ನಡೆಯಲಿದೆ ಎಂದು ಈ ಪ್ರಯುಕ್ತ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮುಜೀಬ್ ಅಹಮ್ಮದ್, ಟಿ.ಪಿ. ಅಶೋಕ್ ಕುಮಾರ್, ಮೊ ದೀನ್, ಎ.ಬಿ. ಅಜಯ್ ಕುಮಾರ್, ಸುಧೀಶ್ ಸಿ. ಜಿತು ಪನಯಾಲ್ ಮತ್ತು ಶಶಿ ತೋಟತ್ತಿಲ್ ತಿಳಿಸಿದ್ದಾರೆ. ಜೂನ್ ೨೯ರಂದು ಬೆಳಿಗ್ಗೆ ೯.೩೦ಕ್ಕೆ ಸ್ವಾಗತ ಸಂಘದ ಸಂಚಾಲಕ ಸಿ.ಬಿ. ಕೊಡಿಯಂ ಕುನ್ನೇಲ್ ಧ್ವಜಾರೋಹಣಗೈಯ್ಯುವ ಮೂಲಕ ಸಮ್ಮೇಳನಕ್ಕೆ …

ಪುತ್ರನಿಂದ ಕೊಲೆಗೀಡಾದ ಹಿಲ್ಡಾ ಮೊಂತೇರೊ ಮೃತದೇಹದ ಅಂತ್ಯ ಸಂಸ್ಕಾರ

ಮಂಜೇಶ್ವರ: ಪುತ್ರನಿಂದಲೇ ದಾರುಣವಾಗಿ ಕೊಲೆಗೀಡಾದ ವರ್ಕಾಡಿ ನಲ್ಲೆಂಗಿ ನಿವಾಸಿ ಹಿಲ್ಡಾ ಮೊಂತೇರೊ (60)ರ ಮೃತದೇಹದ ಅಂತ್ಯ ಸಂಸ್ಕಾರ ನಿನ್ನೆ ಜರಗಿತು. ಕೊಲ್ಲಿಯಿಂದ ಇನ್ನೋರ್ವ ಪುತ್ರ ಆಲ್ವಿನ್ ಮೊಂತೇರೊ ನಿನ್ನೆ ಬೆಳಿಗ್ಗೆ ಆಗಮಿಸಿದ್ದು, ಅಪರಾಹ್ನ 3 ಗಂಟೆಗೆ ವರ್ಕಾಡಿ ಸೇಕ್ರೆಡ್ ಹಾರ್ಟ್‌ಆಫ್ ಜೀಸಸ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ರೆ| ಫಾ. ಬೇಸಿಲ್‌ವಾಸ್ ಧಾರ್ಮಿಕ ಕಾರ್ಯಗಳಿಗೆ ನೇತೃತ್ವ ನೀಡಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ, ಹರ್ಷಾದ್ ವರ್ಕಾಡಿ, ಅಬ್ದುಲ್ ಅಸೀಸ್ ಮರಿಕೆ, ಮೊಹಮ್ಮದ್ ಮಜಾಲ್, ಪುರುಷೋತ್ತಮ …

ಕುಂಬಳೆ ಬಸ್ ನಿಲ್ದಾಣದಲ್ಲಿ ಅವ್ಯವಹಾರ: ತನಿಖೆಗೆ ಬಿಜೆಪಿಯಿಂದ ಕಾರ್ಯದರ್ಶಿಗೆ ಮನವಿ

ಕುಂಬಳೆ: ಕುಂಬಳೆ ಬಸ್ ನಿಲ್ದಾಣ ನಿರ್ಮಾಣದಲ್ಲಿ ವ್ಯಾಪಕ ಅವ್ಯವಹಾರ ಹಾಗೂ ಭ್ರಷ್ಟಾಚಾರ ಆರೋಪ ಮೂಡಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕುಂಬಳೆ ಪಂಚಾಯತ್ ಬಿಜೆಪಿ ನಿಯೋಗ ಪಂಚಾಯತ್ ಕಾರ್ಯದರ್ಶಿಗೆ ಮನವಿ ನೀಡಿದೆ. ಬಸ್ ನಿಲ್ದಾಣಕ್ಕಾಗಿ ಯಾವುದೇ ಮೊತ್ತ ಮಂಜೂರು ಮಾಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಹಲವು ವರ್ಷಗಳಿಂದ ಉಪಯೋಗಿಸುತ್ತಿದ್ದ ಬಸ್ ನಿಲ್ದಾಣ ಕಟ್ಟಡ ಶೋಚನೀಯಗೊಂಡ ಹಿನ್ನೆಲೆಯಲ್ಲಿ ಮುರಿದು ತೆಗೆಯಲಾಗಿತ್ತು.  ಆ ಬಳಿಕ ಬಸ್ ನಿಲ್ದಾಣವಿಲ್ಲದೆ ಸಂಕಷ್ಟಪಡುತ್ತಿದ್ದು ಈಗ ನೂತನ ಬಸ್ ಶೆಲ್ಟರ್ ನಿರ್ಮಿಸಿದ ಆಡಳಿತ …

ಕಾಸರಗೋಡು ನಿವಾಸಿ ರಾಜೇಶ್ ರೈ ಚಟ್ಲ ಸಹಿತ 53 ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ

ಮಂಗಳೂರು: ಕಾಸರಗೋಡು ನಿವಾಸಿ, ಪ್ರಜಾವಾಣಿ ಪತ್ರಿಕೆಯ ವರದಿಗಾರ ರಾಜೇಶ್ ರೈ ಚಟ್ಲರಿಗೆ ಮಾಧ್ಯಮ ಕ್ಷೇತ್ರದಲ್ಲಿ ನಡೆಸಿದ ಸಾಧನೆಗಾಗಿ  ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡರ 516ನೇ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 1 ಲಕ್ಷ ರೂ. ನಗದು ಹಾಗೂ ಫಲಕ ಪ್ರಶಸ್ತಿ ಒಳಗೊಂಡಿದೆ. ಇವರ ಜೊತೆಯಲ್ಲೇ ಇತರ ಹಲವರಿಗೂ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೇಶ್ ರೈ ಚಟ್ಲರಿಗೆ ಪ್ರಶಸ್ತಿ ಪ್ರದಾನ …

ಅಮಿತ್‌ಶಾ ಜುಲೈ 13ರಂದು ಕೇರಳಕ್ಕೆ

ಕಾಸರಗೋಡು: ರಾಜ್ಯದ ಸ್ಥಳೀ ಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚು ನಾವಣೆ ನಡೆಯಲಿರುವಂತೆ ಅದಕ್ಕಿರು ವ ಪೂರ್ವಭಾವಿ ಚಟುವಟಿಕೆಗಳಿಗೆ ರೂಪು ನೀಡಲು ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ ಜುಲೈ 13ರಂದು ಕೇರಳಕ್ಕೆ ಆಗಮಿಸುವರು. ರಾಜ್ಯದ ಏಳು ಕಂದಾಯ ಜಿಲ್ಲೆಗಳ ವಾರ್ಡ್ ಸಮಿತಿ  ಪದಾಧಿಕಾರಿಗಳ ಸಭೆ ಅಂದು ತೃಶೂರಿನಲ್ಲಿ ನಡೆಯಲಿದ್ದು ಅದರಲ್ಲಿ ಅಮಿತ್ ಶಾ ಭಾಗವಹಿಸು ವರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮಾದಕವಸ್ತು ತಂದು ಹಾಸ್ಟೆಲ್‌ಗಳಲ್ಲಿ ವಿತರಣೆ: ಇಬ್ಬರು ಯುವಕರು ಸೆರೆ

ಎರ್ನಾಕುಳಂ: ಬೆಂಗಳೂರಿ ನಿಂದ ಎಂಡಿಎಂಎ ತಂದು ಎರ್ನಾಕುಳಂನ ಹಾಸ್ಟೆಲ್‌ಗಳಲ್ಲಿ ವಿತರಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ದ್ದಾರೆ. ಪತ್ತನಂತಿಟ್ಟ ನಿವಾಸಿಯಾದ ಅಶ್ವಿನ್, ಕೋಟಯಂ ನಿವಾಸಿಯಾದ ಅಕ್ಬರ್ ಖಾನ್ ಸೆರೆಯಾದವರು. 106 ಗ್ರಾಂ ಎಂಡಿಎಂಎ ಇವರಿಂದ ವಶಪಡಿಸಲಾಗಿದೆ. ರಹಸ್ಯ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆಯಲ್ಲಿ ಪಾಲಾರಿವೆಟ್ಟಂ ಸೌತ್ ಜನತ ರಸ್ತೆ ಪರಿಸರದಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. ಎಂಡಿಎಂಎ ಪಾಕೆಟ್‌ನಲ್ಲೂ, ಶೋಲ್ಡರ್ ಬ್ಯಾಗ್‌ನಲ್ಲೂ ಅಡಗಿಸಿಟ್ಟಿದ್ದರು. ಬೆಂಗಳೂರಿನ ರಖಂ ವ್ಯಾಪಾರಿಗಳಿಂದ ಮಾದಕ ಪದಾರ್ಥ ಖರೀದಿಸಿ ಕಲೂರು, ಪಾಲಾರಿವಟ್ಟಂ ಪ್ರದೇಶಗಳಲ್ಲಿ ಯುವಕರು ವಾಸಿಸುವ …

ತಾಯಿಯನ್ನು ಕಿಚ್ಚಿಟ್ಟು ಕೊಲೆ: ಬಂಧಿತ ಪುತ್ರನ ಸಮಗ್ರ ತನಿಖೆ

ಮಂಜೇಶ್ವರ:  ವರ್ಕಾಡಿ ಬಳಿಯ ನಲ್ಲೆಂಗಿ ಎಂಬಲ್ಲಿನ ದಿ| ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) ಅವರನ್ನು ಕೊಲೆಗೈದ ಪ್ರಕರಣದ ಆರೋಪಿಯಾದ ಪುತ್ರ ಮೆಲ್ವಿನ್ ಮೊಂತೇರೋ (33)ನನ್ನು ಮಂಜೇಶ್ವರ ಪೊಲೀಸರು ಸಮಗ್ರ ತನಿಖೆಗೊಳಪಡಿಸುತ್ತಿದ್ದಾರೆ. ಆರ್ಥಿಕ ಸಂದಿಗ್ಧತೆಯೇ ಕೊಲೆಗೆ ಕಾರಣವೆಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಲಸವಿಲ್ಲದೆ ಸಮಸ್ಯೆಗೀಡಾದ ಆರೋಪಿ ತನ್ನ ತಾಯಿಯಿಂದ ಜಮೀನು ಅಡವಿರಿಸಿ 1 ಲಕ್ಷ ರೂಪಾಯಿ ಸಾಲ ಪಡೆದು ನೀಡುವಂತೆ ತಿಳಿಸಿದ್ದನೆಂದೂ ಆದರೆ ಅದಕ್ಕೆ ತಾಯಿ ಒಪ್ಪದಿರುವುದೇ ಈ ಕೊಲೆ ಕೃತ್ಯಕ್ಕೆ ಕಾರಣವಾಗಿದೆಯೆಂದು …

ಸಮಯ ವಿಷಯದಲ್ಲಿ ಬಸ್ ಸಿಬ್ಬಂದಿಗಳ ಮಧ್ಯೆ ಘರ್ಷಣೆ: ಇಬ್ಬರ ಸೆರೆ

ಕುಂಬಳೆ: ಸಮಯದ ವಿಷಯದಲ್ಲಿ ಖಾಸಗಿ ಬಸ್ ಕಾರ್ಮಿಕರ ನಡುವೆ ಘರ್ಷಣೆ ಉಂಟಾಗಿ ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ನಾಲ್ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಇಬ್ಬರನ್ನು ಬಂಧಿಸಿದ್ದಾರೆ. ತಲಪಾಡಿ- ಕಾಸರಗೋಡು ರೂಟ್‌ನ ಖಾಸಗಿ ಬಸ್ಸೊಂದರ ಕಾರ್ಮಿಕ ಕುಂಬಳೆ ಕಂಚಿಕಟ್ಟೆಯ ರೋಷನ್ (22) ಮತ್ತು ಆತನ ಸ್ನೇಹಿತ ಕೊಪಾಡಿ ಕಡಪ್ಪುರದ ಖಾಲೀದ್ (44) ಎಂಬವರು ಬಂಧಿತ ರಾದವರು. ಚೇರೂರು- ತಲಪಾಡಿ ರೂಟಿನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್‌ನ ಚಾಲಕ ಮುಟ್ಟತ್ತೋಡಿ ಕಲ್ಲಕಟ್ಟೆ ಜುಮ್ಮ ಮಸೀದಿ ಬಳಿ …