ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 52 ವರ್ಷ ಸಜೆ

ಕಾಸರಗೋಡು: 15ರ ಹರೆಯದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ  ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು ೫೨ ವರ್ಷ ಕಠಿಣ ಸಜೆ ಹಾಗೂ 2.21  ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

ಮುನ್ನಾಡ್ ವಟ್ಟಂತ್ತಟ್ಟ ಉನ್ನುಪ್ಪುಂ ಕಲ್ಲಿನ ಎಚ್. ಸುರೇಶ್ (34) ಎಂಬಾ ತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ  ಎರಡು ವರ್ಷ ೯ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿ ನಲ್ಲಿ ತಿಳಿಸಲಾಗಿದೆ. 2022ರಂದು ಓಣಂ ಸಮಯದಲ್ಲಿ ೧೫ರ ಹರೆಯದ ಬಾಲಕಿಯನ್ನು  ಉತ್ಸವಕ್ಕೆ ಕರೆದು ಕೊಂಡು ಹೋಗಿ ನಂತರ ಅಲ್ಲಿಂದ ಬೈಕ್‌ನಲ್ಲಿ  ಹಿಂತಿರುಗುವ ದಾರಿ ಮಧ್ಯೆ ಮನೆ ಪಕ್ಕದ ರಸ್ತೆ ಬಳಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಆರೋಪಿ ಸುರೇಶ್‌ನ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಆತನಿಗೆ ಈ ಶಿಕ್ಷೆ ವಿಧಿಸಿದೆ. ಅಂದು ಬೇಡಗಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಟಿ. ದಾಮೋದರನ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ  ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರ ಹೊಸದುರ್ಗ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page