ಪ್ರಗತಿಪರ ಕೃಷಿಕ ವಸಂತ ಭಂಡಾರಿ ನಿಧನ

ಮಂಜೇಶ್ವರ: ಬಾಕ್ರಬೈಲ್ ಕಯ್ಯ ನಿವಾಸಿ ಬಿಜೆಪಿ, ಆರ್.ಎಸ್.ಎಸ್ ನೇತಾರ, ಪ್ರಗತಿಪರ ಕೃಷಿಕ ವಸಂತ ಭಂಡಾರಿ ಕಯ್ಯ (78) ನಿಧನರಾದರು. ಇವರು ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಮಾಜಿ ಅಧ್ಯಕ್ಷ, ಪಾತೂರು ಸೂರ್ಯೇಶ್ವರ ಕ್ಷೇತ್ರ ಟ್ರಸ್ಟಿಯÁಗಿದ್ದರು. ಭಜನೆಗಾ ರರಾಗಿದ್ದರು. ಮೃತರು ಪತ್ನಿ ಗುಲಾಬಿ, ಮಕ್ಕಳಾದ ಪ್ರವೀಣ ಕಯ್ಯ, ಪ್ರತಿಭಾ, ಪ್ರಮೀಳ, ಸೊಸೆ ಜಯಲಕ್ಷಿ÷್ಮÃ, ಅಳಿಯಂದಿರಾದ ರತ್ನಾಕರ ಆಳ್ವ, ರಾಜೇಶ್ ಆಳ್ವ, ಸಹೋದರರಾದ ಪುರಂದರ ಭಂಡಾರಿ, ಪುರುಷೋತ್ತಮ ಭಂಡಾರಿ, ಬಾಲಕೃಷ್ಣ ಭಂಡಾರಿ, ನಾಗೇಶ್ ಭಂಡಾರಿ, ಸಹೋದರಿಯ ರಾದ ಹರಿಣಾಕ್ಷಿ, ಸರಸ್ವತಿ, …

ವಿದ್ಯಾರ್ಥಿಗಳ ಬಸ್ ದರ ಹೆಚ್ಚಳ ಆಗ್ರಹಿಸಿ ಬಸ್ ಮಾಲಕರಿಂದ ಅನಿರ್ದಿಷ್ಟಾವಧಿ ಮುಷ್ಕರ

ಕಾಸರಗೋಡು: ವಿದ್ಯಾರ್ಥಿಗಳ ಮಿನಿಮಮ್ ಚಾರ್ಜ್ 1 ರೂ.ನಿಂದ 5 ರೂ.ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಜುಲೈ 22ರಿಂದ ಖಾಸಗಿ ಬಸ್ ಮಾಲಕರು ನಡೆಸುವ ಅನಿರ್ದಿಷ್ಟ ಕಾಲ ಮುಷ್ಕರದಂಗವಾಗಿ ಜುಲೈ ೮ರಂದು ಸೂಚನಾ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ದರ ಹೆಚ್ಚಳ ಸಹಿತ ಬಸ್ ಮಾಲಕರು ಮುಂದಿಡುವ ಆರು ಪ್ರಧಾನ ಬೇಡಿಕೆಗಳಲ್ಲಿ ತೀರ್ಮಾನವಾಗ ದಿದ್ದರೆ ಅನಿರ್ದಿಷ್ಟ ಕಾಲ ಮುಷ್ಕರ ಹೂಡುವುದಾಗಿ ಮಾಲಕರ ಸಂಘಟನೆ ತಿಳಿಸಿದೆ. ಆದರೆ ಪ್ರಯಾಣಿಕರ ದರ ಹೆಚ್ಚಿಸಲು ಬೇಡಿಕೆ ಮುಂದಿಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಎಣ್ಮಕಜೆಯಲ್ಲಿ ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದ ಇಬ್ಬರಿಗೆ ಸ್ವಾಗತ

ಪೆರ್ಲ: ಎಣ್ಮಕಜೆ ಪಂಚಾಯತ್ ನಲ್ಲಿ ಸಿಪಿಎಂ ಶೇಣಿ ಬ್ರಾಂಚ್ ಕಾರ್ಯದರ್ಶಿ ನಜಿಮುಲ್ಲಾ ಶೇಣಿ ಹಾಗೂ ಮಾಜಿ ಕಾರ್ಯದರ್ಶಿ ಸಿದ್ದಿಕ್ ಶೇಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಡಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಇವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೇವಾದಳ್ ರಾಜ್ಯ ಅಧ್ಯಕ್ಷ ರಮೇಶನ್ ಕರ್ವಾಚೇರಿ, ಪಿ.ಎ. ಅಶ್ರಫಲಿ, ಎ. ಗೋವಿಂದನ್ ನಾಯರ್, ಸೋಮಶೇಖರ ಜೆ.ಎಸ್, ಸಿ.ವಿ. ಜೇಮ್ಸ್, ಎಂ. ಕುಂಞಂಬು ನಂಬ್ಯಾರ್, ಕೆ. ಖಾಲಿದ್, ಆರ್. …

ತಾಯಿಯನ್ನು ಮಗ ಕೊಲೆಗೈದ ಪ್ರಕರಣ: ಮಾದಕವಸ್ತು ಮಾಫಿಯಾಗಳನ್ನು ರಾಜ್ಯ ಸರಕಾರ ಪ್ರೋತ್ಸಾಹಿಸಿದ ಫಲ-ಪಿ.ಆರ್. ಸುನಿಲ್

ಕಾಸರಗೋಡು: ವರ್ಕಾಡಿಯಲ್ಲಿ ತಾಯಿಯನ್ನು ಮಗ ಸುಟ್ಟು  ಕೊಲೆಗೈದಿರುವುದು ಪಿಣರಾಯಿ ಸರಕಾರದ ಆಡಳಿತ ಮುಂದುವರಿ ಕೆಯ ಪ್ರಭಾವವಾಗಿದೆಯೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಆರೋಪಿಸಿದ್ದಾರೆ. ಮಾದಕವಸ್ತುವಿನ ಚಟ ಬೆಳೆಸಿಕೊಂಡ ಮಗ ತಾಯಿಯನ್ನು ಸುಟ್ಟು ಕೊಲೆಗೈದ ಘಟನೆ ಅತೀ ದಾರುಣ ಹಾಗೂ ನಾಡನ್ನು ಬೆಚ್ಚಿ ಬೀಳಿಸು ವಂತದ್ದಾಗಿದೆ. ಮಾದಕವಸ್ತುಗಳ ಚಟ ಬೆಳೆಸಿಕೊಂಡವರು ಮೊದಲು ಆಕ್ರಮಿಸುವುದು ಸ್ವಂತ ಕುಟುಂಬದವರನ್ನಾಗಿದೆ. ಮಾದಕ ಮಾಫಿಯಾ ಗಳನ್ನು ಇಲ್ಲದಾಗಿಸುವಲ್ಲಿ ಸರಕಾರದ ಭಾಗದಿಂದ ಗಂಭೀರ ಲೋಪವುಂಟಾಗಿದೆ. ಇದರ ಪರಿಣಾಮವಾಗಿಯೇ ವರ್ಕಾಡಿಯಲ್ಲಿ   ಕೊಲೆಕೃತ್ಯ ನಡೆದಿದೆ. ತೆರಿಗೆ …

ಸಂಯುಕ್ತ ಟ್ರೇಡ್ ಯೂನಿಯನ್ ಉತ್ತರ ವಲಯ ಜಾಥಾಕ್ಕೆ ಚಾಲನೆ

ಕಾಸರಗೋಡು: ಸಂಯುಕ್ತ ಟ್ರೇಡ್ ಯೂನಿಯನ್‌ನ ಉತ್ತರ ವಲಯ ವಾಹನ ಜಾಥಾಕ್ಕೆ  ಕಾಸರಗೋಡಿನಿಂದ ಚಾಲನೆ ನೀಡಲಾಗಿದೆ. ಜುಲೈ ೯ರಂದು ನಡೆಯಲಿರುವ ಸಂಯುಕ್ತ ಟ್ರೇಡ್ ಯೂನಿಯನ್ ಕೆಲಸ ಸ್ಥಗಿತ ಮುಷ್ಕರದ ಪೂರ್ವಭಾವಿಯಾಗಿ ಜಾಥಾ ಆರಂಭಗೊಂಡಿದೆ. ನಾಯಕ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಗೋಪಿನಾಥನ್‌ರಿಗೆ ಧ್ವಜ ಹಸ್ತಾಂತರಿಸಿ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಜೇಂದ್ರನ್ ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಸಜಿಲಾಲ್, ಜಾಥಾ ಮೆನೇಜರ್ ಒ.ಕೆ. ಸಂಧ್ಯಾ, ಸದಸ್ಯರಾದ …

ಐಎಂಎಯಿಂದ ಮಾದಕ ಪದಾರ್ಥ ವಿರುದ್ಧ ದಿನಾಚರಣೆ

ಕಾಸರಗೋಡು: ಇಂಡ್ಯನ್ ಮೆಡಿಕಲ್  ಅಸೋಸಿಯೇಶನ್, ಮೈಂಡ್‌ವೇರ್ ಕ್ಲಿನಿಕ್‌ನ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ಪದಾರ್ಥ ವಿರುದ್ಧ ದಿನ ಆಚರಿಸಲಾಯಿತು. ಇದೇ ವೇಳೆ ಮಾಲಿಕ್ ದೀನಾರ್ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಗಳಿಂದ ಮೋಕ್ ಡೆಮೋನ್‌ಸ್ಟ್ರೇಷನ್ ನಡೆಸಲಾಯಿತು. ಐಎಂಎ ಅಧ್ಯಕ್ಷ ಡಾ| ಹರಿಕಿರಣ್ ಬಂಗೇರ ಉದ್ಘಾಟಿಸಿದರು. ಡಾ| ಪಿ.ಎಂ.ಎ ನಿಶಾದ್ ಪೆರ್ಲ ಅಧ್ಯಕ್ಷತೆ ವಹಿಸಿದರು. ಐಎಂಎ ಉಪಾಧ್ಯಕ್ಷ ಡಾ| ಖಾಸಿಂ, ಅನ್ವರ್ ಸಾದತ್, ಡಾ| ಜ್ಯೋತ್ಸ್ನಾ, ಆಯಿಷಾ ಪೆರ್ಲ, ಎ.ಎ. ಮೊಹಮ್ಮದ್ ನುಹಾನ್ ಮಾತನಾಡಿದರು. ಅಭಿಜಿತ್ ಪಿ. ಸ್ವಾಗತಿಸಿದರು.

ಕಟ್ಟಡ ಕುಸಿದು ಬಿದ್ದು 3 ಮಂದಿ ಮಣ್ಣಿನಡಿಯಲ್ಲಿ

ತೃಶೂರು: ಕೊಡಕ್ಕರದಲ್ಲಿ ಎರಡು ಮಹಡಿಯ ಕಟ್ಟಡ ಕುಸಿದು ಬಿದ್ದು ಓರ್ವ ಮೃತಪಟ್ಟು ಇಬ್ಬರು ಅವಶಿಷ್ಟಗಳೆಡೆಯಲ್ಲಿ ಸಿಲುಕಿಕೊಂಡಿ ದ್ದಾರೆ. ಬಂಗಾಳ ನಿವಾಸಿಗಳಾದ ರಾಹುಲ್ (19), ರೂಪೇಲ್ (21), ಅಲೀಂ (30) ಎಂಬಿವರು ಕಟ್ಟಡದ ಅವಶಿಷ್ಟಗಳೊಳಗೆ ಸಿಲುಕಿದ್ದು ಇವರಲ್ಲಿ ಓರ್ವನನ್ನು ಹೊರ ತೆಗೆಯಲಾಗಿದೆ. ಓರ್ವನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಇನ್ನೋರ್ವನಿಗೆ ಬೇಕಾಗಿ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.

ಯುದ್ಧ ಪರಿಹಾರವಲ್ಲ: ಎಸ್‌ವೈಎಸ್‌ನಿಂದ ಕುಂಬಳೆ ವಲಯದ ನಾಲ್ಕು ಕಡೆ ರ‍್ಯಾಲಿ

ಕುಂಬಳೆ:  ಸಮಸ್ತ ಕೇರಳ ಸುನ್ನಿ ಯುವ ಜನ ಸಂಘ ರಾಜ್ಯದ 700  ಕೇಂದ್ರಗಳಲ್ಲಿ ಯುದ್ಧ ಪರಿಹಾರವಲ್ಲ ಎಂಬ ಘೋಷ ವಾಕ್ಯದಲ್ಲಿ ನಡೆಸಿದ ಶಾಂತಿ ರ‍್ಯಾಲಿಯಂ ಗವಾಗಿ ಕುಂಬಳೆ ವಲಯದಲ್ಲಿನ ನಾಲ್ಕು ಕೇಂದ್ರಗಳಲ್ಲಿ  ರ‍್ಯಾಲಿ ನಡೆಯಿತು. ಕುಂ ಬಳೆ, ಬಂಬ್ರಾಣ, ಕಟ್ಟತ್ತಡ್ಕ, ಪೆರ್ಮುದೆ ಯಲ್ಲಿ ರ‍್ಯಾಲಿ ನಡೆಸಲಾಗಿದೆ. ಕುಂಬಳೆ ಯಲ್ಲಿ ಅಬ್ದುಲ್ ಅಸೀಸ್ ಸಖಾಫಿ ಮಚ್ಚಂಪಾಡಿ ಉದ್ಘಾಟಿಸಿದರು. ಬಂಬ್ರಾಣದಲ್ಲಿ ಹನೀಫ್ ಸಅದಿ ಕುಂ ಬೋಳ್, ಕಟ್ಟತ್ತಡ್ಕದಲ್ಲಿ ಹುಸೈನ್ ಸಖಾಫಿ ಅರಂತೋಡು, ಪೆರ್ಮುದೆಯಲ್ಲಿ ಸುಬೈರ್ ಬಾಡೂರು ಉದ್ಘಾಟಿಸಿದರು. ಹಲವು ಗಣ್ಯರು …

ಮಸ್ಟರಿಂಗ್ ನಡೆಸದ 5 ಲಕ್ಷ ಮಂದಿಗೆ ಮುಂದಿನ ತಿಂಗಳಿಂದ ರೇಶನ್ ಮೊಟಕು ಸಾಧ್ಯತೆ

ತಿರುವಂನಂತಪುರ: ಇನ್ನೂ ಮಸ್ಟರಿಂಗ್ ನಡೆಸದ ಹಳದಿ ಮತ್ತು ಪಿಂಕ್ ಕಾರ್ಡ್‌ದಾರರ ಸದಸ್ಯರಿಗೆ ಮುಂ ದಿನ ತಿಂಗಳಿಂದ ರೇಶನ್ ಸಾಮಗ್ರಿಗಳ ವಿತರಣೆ ಮೊಟಕುಗೊಳ್ಳುವ ಸಾಧ್ಯತೆ ಯಿದೆ. ಈ ಎರಡು ವಿಭಾಗಗಳಿಗೆ ಸೇರಿದ ರೇಶನ್ ಕಾರ್ಡ್‌ಗಳ ಪೈಕಿ ಐದು ಲಕ್ಷದಷ್ಟು ಮಂದಿ ಸದಸ್ಯರು ಇನ್ನೂ ಮಸ್ಟರಿಂಗ್ ನಡೆಸಿಲ್ಲ. ಆದರೆ ಇಂತಹ ಕಾರ್ಡ್‌ನಲ್ಲಿ ಸದಸ್ಯರಾಗಿರುವವರ ಪೈಕಿ ಯಾರಾದರೂ ಒಬ್ಬ ಸದಸ್ಯ ಮಸ್ಟರಿಂಗ್ ನಡೆಸಿದಲ್ಲಿ ಅಂತವರಿಗೆ ರೇಶನ್ ಸಾಮಗ್ರಿ ಲಭಿಸಲಿದೆ. ಅಂತಹ ಕಾರ್ಡ್‌ಗಳು ರದ್ದಾಗದು. ಇನ್ನೂ ಮಸ್ಟ ರಿಂಗ್ ನಡೆಸದೇ ಇರುವವರನ್ನು ತಾತ್ಕಾಲಿಕವಾಗಿ …

ನಿದ್ರಿಸಿದ್ದ ತಾಯಿಯನ್ನು ಪೆಟ್ರೋಲ್ ಸುರಿದು ಕಿಚ್ಚಿಟ್ಟು ಕೊಲೆಗೈದ ಪುತ್ರ: ನೆರೆಮನೆಯ ಯುವತಿಯನ್ನು ಕೊಲೆಗೈಯ್ಯಲು ಯತ್ನ

ಮಂಜೇಶ್ವರ: ನಿದ್ರಿಸುತ್ತಿದ್ದ ತಾಯಿಯ ಮೇಲೆ ಪುತ್ರ ಪೆಟ್ರೋಲ್ ಸುರಿದು ಕಿಚ್ಚಿಟ್ಟು ಸುಟ್ಟು ಕೊಲೆಗೈದ ಭೀಕರ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯಲ್ಲಿ  ನಡೆದಿದೆ. ಮೃತದೇಹ ಮನೆ ಸಮೀಪದಲ್ಲಿರುವ ಪೊದೆಗಳೆಡೆ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಕೃತ್ಯದ ಬಳಿಕ ನೆರೆಮನೆ ನಿವಾಸಿಯೂ ಸಂಬಂಧಿಕೆಯಾದ ಯುವತಿಯನ್ನು ಆರೋಪಿ ಮನೆಗೆ ಕರೆಸಿ ಆಕೆಯನ್ನೂ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಗಂಭೀರವಾಗಿ ಸುಟ್ಟು ಗಾಯಗೊಂಡ ಯುವತಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವರ್ಕಾಡಿ ನಲ್ಲೆಂಗಿ ನಿವಾಸಿ ದಿ| ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) …