ಎಣ್ಮಕಜೆಯಲ್ಲಿ ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದ ಇಬ್ಬರಿಗೆ ಸ್ವಾಗತ

ಪೆರ್ಲ: ಎಣ್ಮಕಜೆ ಪಂಚಾಯತ್ ನಲ್ಲಿ ಸಿಪಿಎಂ ಶೇಣಿ ಬ್ರಾಂಚ್ ಕಾರ್ಯದರ್ಶಿ ನಜಿಮುಲ್ಲಾ ಶೇಣಿ ಹಾಗೂ ಮಾಜಿ ಕಾರ್ಯದರ್ಶಿ ಸಿದ್ದಿಕ್ ಶೇಣಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಡಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಇವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೇವಾದಳ್ ರಾಜ್ಯ ಅಧ್ಯಕ್ಷ ರಮೇಶನ್ ಕರ್ವಾಚೇರಿ, ಪಿ.ಎ. ಅಶ್ರಫಲಿ, ಎ. ಗೋವಿಂದನ್ ನಾಯರ್, ಸೋಮಶೇಖರ ಜೆ.ಎಸ್, ಸಿ.ವಿ. ಜೇಮ್ಸ್, ಎಂ. ಕುಂಞಂಬು ನಂಬ್ಯಾರ್, ಕೆ. ಖಾಲಿದ್, ಆರ್. ಗಂಗಾಧರನ್ ಭಾಗವಹಿಸಿದರು.

You cannot copy contents of this page