ಎನ್‌ಐಎ ದಾಳಿಯಲ್ಲಿ ಹಲವು ನಿರ್ಣಾಯಕ ಪುರಾವೆಗಳು ಪತ್ತೆ; ಓರ್ವ ಕಸ್ಟಡಿಗೆ

ಕಾಸರಗೋಡು: ದೆಹಲಿ ಕೇಂದ್ರೀಕರಿಸಿ ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ಸೇರ್ಪಡೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)   ಮಂಜೇಶ್ವರದ ಕುರುಡಪದವು ಮತ್ತು ಬೇಡಡ್ಕಕ್ಕೆ ಸಮೀಪದ ಪಡಿಪ್ಪುನಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ಹಲವು ನಿರ್ಣಾಯಕ ಪುರಾವೆಗಳನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಎನ್‌ಐಎ ಓರ್ವನನ್ನು ವಶಕ್ಕೆ ತೆಗೆದುಕೊಂಡಿದೆ. ಕುರುಡಪದವು ಮತ್ತು ಪಡುಪು ಎಂಬೆಡೆಗಳಲ್ಲಾಗಿ ಎರಡು ಮನೆಗಳಲ್ಲಿ ಎನ್‌ಐಎ  ತಪಾಸಣೆ ನಡೆಸಿದ್ದು, ಇದರಲ್ಲಿ   ಈ ಎರಡು ಮನೆಗಳಿಂದಾಗಿ ಮೊಬೈಲ್ ಫೋನ್, ಪೆನ್‌ಡ್ರೈವ್, ಸಿಮ್ ಕಾರ್ಡ್‌ಗಳು, ಆಧಾರ್ ಕಾರ್ಡ್ ಇತ್ಯಾದಿಗಳನ್ನು  …

ನಾಶದ ಹಂತದಲ್ಲಿರುವ ೫೦ಕ್ಕೂ ಅಧಿಕ ವರ್ಷದ ಧಾರಾಳ ನೀರಿರುವ ಬಾವಿ: ಸಂರಕ್ಷಣೆಗೆ ಒತ್ತಾಯ

ಉಪ್ಪಳ: ನೀರಿಗಾಗಿ ಅಲ್ಲಲ್ಲಿ ಬಾವಿ, ಕೊಳವೆ ಬಾವಿ ತೋಡಿ ಯೋಜನೆಗಳನ್ನು ಹಾಕಿ ಸರಕಾರದ ಹಣ ವ್ಯಯ ಮಾಡಿದಾಗ ಕೆಲವೇ ತಿಂಗಳುಗಳಲ್ಲಿ ನೀರು ಬತ್ತಿ ಉಪಯೋಗಶೂನ್ಯವಾಗುವ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ಮಧ್ಯೆ ನೀರಿರುವ ಬಾವಿಯನ್ನು ಉಳಿಸಲು ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿಲ್ಲವೆಂದು ಜನರು ಆರೋಪಿಸುತ್ತಾರೆ. ಇದಕ್ಕೆ ಪುಳಿಕುತ್ತಿಯಲ್ಲಿನ ಬಾವಿ ಸ್ಪಷ್ಟ ನಿದರ್ಶನವಾಗಿದೆ. ಈ ಬಾವಿಯನ್ನು ಸುಮಾರು ೫೦ ವರ್ಷದ ಹಿಂದೆ ಕೊರೆಯಲಾಗಿದ್ದು, ಈಗಲೂ ಸ್ಥಳೀಯರು ಇದರಿಂದ ನೀರು ಸೇದಿ ಉಪಯೋಗಿಸುತ್ತಿದ್ದಾರೆ. ಆದರೆ ಬಾವಿ ಶೋಚನೀಯ ಸ್ಥಿತಿಯಲ್ಲಿದೆ. ಬಾವಿಯೊಳಗೆ ಪೊದೆಗಳಿದ್ದು, …

ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ ಪೊಲೀಸರಿಂದ ಕಾನೂನು ಉಲ್ಲಂಘನೆ

ಕುಂಬಳೆ: ಪೊಲೀಸ್ ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ  ಸಂಚಾರಕ್ಕೆ ಅಡಚಣೆ ಸೃಷ್ಟಿಸಿದ ಬಗ್ಗೆ ದೂರಲಾಗಿದೆ. ನಿನ್ನೆ ಸಂಜೆ ಕುಂಬಳೆ ಪೇಟೆಯ ಸರ್ಕಲ್ ಬಳಿ ಈ ಘಟನೆ ನಡೆದಿದೆ.  ಬೇಡಗಂ ಠಾಣೆಯ ಪೊಲೀಸ್ ಜೀಪನ್ನು ಟ್ರಾಫಿಕ್ ಲೈನ್‌ನೊಳಗೆ ರಸ್ತೆಯಲ್ಲಿ ನಿಲ್ಲಿಸಿ ಅದರಲ್ಲಿದ್ದವರು ಚಹಾ ಕುಡಿಯಲು ತೆರಳಿದ್ದರೆನ್ನಲಾಗಿದೆ. ಜನರು ಕಿಕ್ಕಿರಿದಿರುವ ರಸ್ತೆಯಲ್ಲಿ ಈ ರೀತಿಯಲ್ಲಿ ಪೊಲೀಸರೇ ಕಾನೂನು ಉಲ್ಲಂಘಿಸಿ ತಮ್ಮ ಜೀಪನ್ನು ನಿಲ್ಲಿಸಿರುವುದು ಕುಂಬಳೆಯಲ್ಲಿ ಚರ್ಚಾ ವಿಷಯವಾಗಿದೆ. ಕಾನೂನು ಪಾಲಿಸಬೇಕಾದವರೇ ಈ ರೀತಿಯಲ್ಲಿ ಉಲ್ಲಂಘಿಸಿದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಬಂಧನ

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ಮೇಲೆ ಕಾಸರಗೋಡು ಪೊಲೀಸರು ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿದ್ದಾರೆ. ಕೂಡ್ಲು ವೀವರ್ಸ್ ಕಾಲನಿಯ ನಿವಾಸಿ ಅಜಯ್ ಕುಮಾರ್ ಶೆಟ್ಟಿ ಅಲಿಯಾಸ್ ತೇಜು (೨೯) ಬಂಧಿತನಾದ ಯುವಕ. ಆತನನ್ನು ಬಳಿಕ ಜೈಲಿಗೆ ಸಾಗಿಸಲಾಗಿದೆ. ಅಜಯ್ ಕುಮಾರ್ ಅಬಕಾರಿ ಸೇರಿದಂತೆ ಇತರ ಹಲವು ಪ್ರಕರಣಗಳ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಾಂಡಿಯಲ್ಲಿ ವ್ಯಾಪಕ ಅಬಕಾರಿ ಕಾರ್ಯಾಚರಣೆ ಕಳ್ಳಭಟ್ಟಿ ಸಾರಾಯಿ, ವಾಶ್ ವಶ

ಅಡೂರು: ಅಡೂರು ಗ್ರಾಮದ ಪಾಂಡಿ ಬೆದಿರಡ್ಕವನ್ನು ಕೇಂದ್ರೀಕರಿಸಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೨೦ ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ೩೦೦ ಲೀಟರ್ ಹುಳಿರಸ (ವಾಶ್) ಮಾತ್ರವಲ್ಲ ಅಲ್ಲಿ ಉಪೇಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ.  ಇದಕ್ಕೆ ಸಂಬಧಿಸಿ ಪಾಂಡಿ ಬೆದಿರಡ್ಕದ ರವೀಂದ್ರನ್  ಎಂಬಾತನ ವಿರುದ್ಧ ಬದಿಯಡ್ಕ ಅಬಕಾರಿ ರೇಂಜ್ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆತ ಆ ವೇಳೆ ತಪ್ಪಿಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ಹೇಳಿದ್ದಾರೆ. ಪಾಂಡಿ ಬೆದಿರಡ್ಕದಲ್ಲಿ ವ್ಯಾಪಕವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲಾಗುತ್ತಿದ್ದ …

ಶ್ರೀಕಾಂತ್‌ರಿಗೆ ಅಪರಿಚಿತನಿಂದ ಬೆದರಿಕೆ: ತನಿಖೆ ಆರಂಭ

ಕಾಸರಗೋಡು: ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್‌ರಿಗೆ ಅಪರಿಚಿತ ವ್ಯಕ್ತಿಯೋರ್ವರು ಬೆದರಿಕೆ ಒಡ್ಡಿದ್ದಾನೆ. ತೃಕ್ಕನ್ನಾಡಿನಲ್ಲಿರುವ ಶ್ರೀಕಾಂತ್ ರ ಮನೆಗೆ ಅಕ್ರಮಿಯೋರ್ವ ನಿನ್ನೆ ಅಕ್ರಮವಾಗಿ ನುಗ್ಗಿ ಬಂದು ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಆ ವೇಳೆ ಶ್ರೀಕಾಂತ್ ಅವರ ಪತ್ನಿ ಮನೆಯಲ್ಲಿರಲಿಲ್ಲ. ಮಕ್ಕಳು ಮಾತ್ರವೇ ಮನೆಯಲ್ಲಿದ್ದರು. ಅವರಲ್ಲೇ ಅಕ್ರಮಿ ಈ ಕೊಲೆ ಬೆದರಿಕೆ ಒಡ್ಡಿದ್ದಾನೆಂದು ದೂರಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಗಂ ಜಂಕ್ಷನ್‌ನಲ್ಲಿ ಅನಿರ್ಧಿಷ್ಟ ಮುಷ್ಕರ ಎಂಟನೇ ದಿನಕ್ಕೆ: ಸ್ಥಳೀಯ ಜನಪ್ರತಿನಿಧಿಗಳ ಬೆಂಬಲ

ಮಂಜೇಶ್ವರ: ಇಲ್ಲಿನ ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಭಿತ್ತಿಪತ್ರ ಪ್ರದರ್ಶಿಸಿ ಸ್ಥಳೀಯರು ಮುಷ್ಕರ ನಡೆಸುತ್ತಿದ್ದು, ಇಂದು ೮ನೇ ದಿನಕ್ಕೆ ಕಾಲಿರಿಸಿದೆ. ಹೆದ್ದಾರಿಯನ್ನು ಅಡ್ಡದಾಟಲು ಪರ‍್ಯಾಯ ವ್ಯವಸ್ಥೆ ಇಲ್ಲದ ಕಾರಣ ಸ್ಥಳೀಯರ ಸಮಸ್ಯೆ ತೀವ್ರಗೊಂಡಿದೆ. ಏಳನೇ ದಿನವಾದ ನಿನ್ನೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಇಲ್ಲಿ ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಸರಕಾರಿ ಆಸ್ಪತ್ರೆ, ಕಾಲೇಜು, ಸ್ಥಳೀಯಾಡಳಿತ ಸಂಸ್ಥೆ, ರೈಲ್ವೇ ನಿಲ್ದಾಣ ಸೇರಿದಂತೆ ಹಲವು …

ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ: ಇಂದು ವಿವಿಧ ದೈವಗಳ ನರ್ತನ

ಸೀತಾಂಗೋಳಿ: ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ನಿನ್ನೆ ಪುಲ್ಲೂರ್ ಕಣ್ಣನ್ ದೈವ, ಕಣ್ಣಾಂಗಾಟ್ ಭಗವತಿ ದೈವ, ಪುಲ್ಲೂರ್ ಕಾಳಿ ದೈವ, ಶ್ರೀ ವಿಷ್ಣುಮೂರ್ತಿ ದೈವಗಳ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ಮೂವಾಳಂಕುಯಿ ಚಾಮುಂಡಿ ದೈವದ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್ ಕಾಳಿ ದೈವಗಳ ಸ್ತೋತ್ರ ನಡೆಯಿತು. ಇಂದು ಬೆಳಿಗ್ಗೆ ಪುಲ್ಲೂರ್ ಕಣ್ಣನ್ ದೈವದ ನರ್ತನ, ಕಣ್ಣಂಗಾಟ್ …

ಚುನಾವಣೆಯಲ್ಲಿ ಮಾಧ್ಯಮದ ಪಾತ್ರ ನಿರ್ಣಾಯಕ-ಜಿಲ್ಲಾಧಿಕಾರಿ

ಕಾಸರಗೋಡು: ಸಾರ್ವತ್ರಿಕ ಚುನಾ ವಣೆಯ ಸುಗಮ ಕಾರ್ಯಾಚರಣೆಗಾಗಿ, ಚುನಾವಣೆಯ ಮಹತ್ವದ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ ಯೆಂದು ಜಿಲ್ಲಾಧಿಕಾರಿ ಕೆ. ಇಂಬ ಶೇಖರ್ ನುಡಿದರು. ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಸಭಾಂ ಗಣದಲ್ಲಿ ಚುನಾವಣೆಯಲ್ಲಿ ಮಾಧ್ಯಮ ಗಳ ಪಾತ್ರ ಎಂಬ ವಿಷಯದ ಕುರಿತು ಆಯೋಜಿಸಿದ ತರಬೇತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.  ನೀತಿ ಸಂಹಿತೆ ಉಲ್ಲಂಘನೆಯಾ ದರೆ ಕೂಡಲೇ ವರದಿ ನೀಡಬೇಕು. ಮತದಾನ ಪೂರ್ಣಗೊಳ್ಳುವ ಮೊದಲು ಎಕ್ಸಿಟ್ ಪೂಲ್ ಫಲಿತಾಂಶವನ್ನು …

ಕಾಸರಗೋಡು ನಗರಸಭೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಅಗತ್ಯದಷ್ಟು ಸಿಬ್ಬಂದಿಗಳಿಲ್ಲ: ನೆನೆಗುದಿಗೆ ಬಿದ್ದಿದೆ 38 ವಾರ್ಡ್‌ಗಳ ಬಿಲ್‌ಗಳು

ಕಾಸರಗೋಡು:  ಕಾಸರಗೋಡು ನಗರಸಭೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಈಗ  ತೀವ್ರ ಸಿಬ್ಬಂದಿಗಳ ಕೊರತೆ ತಲೆದೋರಿದೆ.  ಇದರಿಂದಾಗಿ ನಗರಸಭೆಯ ೩೮ ವಾರ್ಡ್‌ಗಳಲ್ಲಿ ನಡೆಸಲಾದ ವಿವಿಧ ನಿರ್ಮಾಣ ಯೋಜನೆಗಳ ಬಿಲ್ ಗಳನ್ನು ತಯಾರಿಸಲು ಇಲ್ಲಿ ಸಾಧ್ಯವಾಗದೆ ಹಾಗೇ ನೆನೆಗುದಿಗೆ ಬಿದ್ದಿದೆ. ಬಿಲ್‌ಗಳನ್ನು ಟ್ರಷರಿಯಲ್ಲಿ ನೀಡಿದಲ್ಲಿ ಮಾತ್ರವೇ ಅದರ ಹಣ ಲಭಿಸಲಿದೆ. ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರ ಲಭಿಸಿದ ಯಾವುದೇ ಯೋಜನೆಗಳ ಬಿಲ್‌ಗಳನ್ನು ಈ ಆರ್ಥಿಕ ವರ್ಷದ ಕೊನೆಯ ತಿಂಗಳ ೩೧ರೊಳಗಾಗಿ ಟ್ರಷರಿಯಲ್ಲಿ   ಸಲ್ಲಿಸಿದಲ್ಲಿ ಅದರ ಹಣ ಲಭಿಸಲಿದೆ.  ಇಂಜಿನಿಯರಿಂಗ್ ವಿಭಾಗದಲ್ಲಿ ಅಗತ್ಯದಷ್ಟು …