ಹಲವು ಪ್ರಕರಣಗಳ ಆರೋಪಿ ಕಾಪಾ ಪ್ರಕಾರ ಬಂಧನ

ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಯುವಕನ ಮೇಲೆ ಕಾಸರಗೋಡು ಪೊಲೀಸರು ಕಾಪಾ ಕಾನೂನು ಹೇರಿ ಆತನನ್ನು ಬಂಧಿಸಿದ್ದಾರೆ. ಕೂಡ್ಲು ವೀವರ್ಸ್ ಕಾಲನಿಯ ನಿವಾಸಿ ಅಜಯ್ ಕುಮಾರ್ ಶೆಟ್ಟಿ ಅಲಿಯಾಸ್ ತೇಜು (೨೯) ಬಂಧಿತನಾದ ಯುವಕ. ಆತನನ್ನು ಬಳಿಕ ಜೈಲಿಗೆ ಸಾಗಿಸಲಾಗಿದೆ. ಅಜಯ್ ಕುಮಾರ್ ಅಬಕಾರಿ ಸೇರಿದಂತೆ ಇತರ ಹಲವು ಪ್ರಕರಣಗಳ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page