ಎನ್.ಡಿ.ಎ. ಅಭ್ಯರ್ಥಿ ಪ್ರಚಾರ ಪರ್ಯಟನೆ ಆರಂಭ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಉಮೇದ್ವಾರರಾಗಿ ಸ್ಪರ್ಧಿಸುತ್ತಿರುವ ಬಿಜೆಪಿಯ ಎಂ.ಎಲ್. ಅಶ್ವಿನಿಯವರು ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ  ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಂತೆ ಅವರು ಇಂದು ಬೆಳಿಗ್ಗೆ ಎಡನೀರು ಸಂದರ್ಶಿಸಿ ಮಠಾಧೀಶರ ಆಶೀರ್ವಾದ ಪಡೆದರು. ಬಳಿಕ ಅವರು ಮಧೂರು ಕ್ಷೇತ್ರಕ್ಕೂ ಸಂದರ್ಶಿಸಿ ಪ್ರಾರ್ಥನೆ ನಡೆಸಿದರು. ಬಳಿಕ ಕೊಂಡೆವೂರು ಮಠ, ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ದರ್ಶನ, ಮಧ್ಯಾಹ್ನದ ಬಳಿಕ ಮುಚ್ಚಿಲೋಟ್ ಭಗವತೀ ಕ್ಷೇತ್ರ ಮತ್ತು ಶಿರಿಯಾ ಕ್ಷೇತ್ರ ಸಂದರ್ಶಿಸುವರು.

ರವಿ ಪೂಜಾರಿ ಕಾಂಗ್ರೆಸ್ ಮಂಡಲ ಅಧ್ಯಕ್ಷರಾಗಿ ಮುಂದುವರಿಕೆ

ಕುಂಬಳೆ: ಕಾಂಗ್ರೆಸ್ ಮಂಡಲ ಅಧ್ಯಕ್ಷರಾಗಿ ರವಿ ಪೂಜಾರಿ ಮುಂದುವರಿಯಲಿದ್ದಾರೆ. ಕೆಪಿಸಿಸಿಗೆ ಫಂಡ್ ನೀಡಿಲ್ಲವೆಂದು  ಆರೋಪಿಸಿ ಮಂಡಲ ಅಧ್ಯಕ್ಷ ಸ್ಥಾನದಿಂದ ರವಿ ಪೂಜಾರಿಯನ್ನು ಹೊರತುಪಡಿಸಲಾಗಿತ್ತು. ಆದರೆ ನೇತೃತ್ವದ ಈ ಕ್ರಮವನ್ನು ಕಾರ್ಯಕರ್ತರು ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ರವಿ ಪೂಜಾರಿ ಮಂಡಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆಂದು ಡಿಸಿಸಿ ಅಧ್ಯಕ್ಷ ತಿಳಿಸಿದ್ದಾರೆ.

ಕುಬಣೂರು ಶಾಲೆಯಲ್ಲಿ ಕಲಿಕೋತ್ಸವ

ಉಪ್ಪಳ: ಕುಬಣೂರು ಶ್ರೀರಾಮ ಎ ಯುಪಿ ಶಾಲೆಯಲ್ಲಿ ಕಲಿಕೋತ್ಸವ ಮೀನಾರು ಪಕೀರ ಶೆಟ್ಟಿ ಸಭಾಂಗ ಣದಲ್ಲಿ ಜರಗಿತು.ವಿದ್ಯಾರ್ಥಿನಿಯರ ಪ್ರಾರ್ಥ ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂU Àಲ್ಪಾಡಿ ಪಂಚಾಯತ್ ಸದಸ್ಯ ವಿಜಯ್ ಕುಮಾರ್ ರೈ ಉದ್ಘಾಟಿಸಿದರು. ಬಳಿಕ ಮಕ್ಕಳ ಕಲಿಕಾ ಉತ್ಪನ್ನವನ್ನು ಒಳಗೊಂಡ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಎಂ. ಪಿ. ಎಸ್. ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಎಂ.ಪಿ ಬಾಲಕೃಷ್ಣ ಶೆಟ್ಟಿ ಕಲಿಕೋತ್ಸವದ ಪ್ರಾಧಾನ್ಯತೆಯ ಕುರಿತು ಹೇಳಿದರು. ಹಿರಿಯ ಅಧ್ಯಾಪಕ ಯಾಹ್ಯ ಖಾನ್ ಶುಭಾಶಂಸನೆಗೈದರು. ಶಾಲಾ ಪ್ರಬಂಧಕಿ ಮೋಕ್ಷದ ಬಿ …

ವೇತನ ಮೊಟಕು: ಕೆಪಿಎಸ್‌ಟಿಎಯಿಂದ ಪ್ರತಿಭಟನೆ

ಕಾಸರಗೋಡು: ರಾಜ್ಯದ ಇತಿಹಾಸದಲ್ಲಿ ಪ್ರಥಮವಾಗಿ ಸರಕಾರಿ ನೌಕರರ, ಅಧ್ಯಾಪಕರ ವೇತನ ಮೊಟಕಾಗಿರುವುದನ್ನು ಪ್ರತಿಭಟಿಸಿ ಕೆಪಿಎಸ್‌ಟಿಎ ಜಿಲ್ಲಾ ಟ್ರಷರಿಗೆ ನಡೆಸಿದ  ಪ್ರತಿಭಟನೆಯನ್ನು ಡಿಸಿಸಿ ಅಧ್ಯಕ್ಷ ಪಿ.ಕೆ.  ಫೈಸಲ್ ಉದ್ಘಾಟಿಸಿದರು. ಅಧ್ಯಕ್ಷ ಕೆ.ವಿ. ವಾಸುದೇವನ್ ನಂಬೂದಿರಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ಜಿ.ಕೆ. ಗಿರೀಶ್, ಪಿ. ಶಶಿಧರನ್, ಕೆ. ಅನಿಲ್ ಕುಮಾರ್, ಕೆ. ಶ್ರೀನಿವಾ ಸನ್, ಸ್ವಪ್ನ ಜಾರ್ಜ್, ಟಿ. ರಾಜೇಶ್ ಕುಮಾರ್, ಕೆ. ಗೋಪಾಲಕೃಷ್ಣನ್, ಬಿಜು ಅಗಸ್ಟಿನ್, ಎಂ.ಕೆ. ಪ್ರಿಯ, ಕೆ. ಸಂಧ್ಯಾ, ನಿಕೇಶ್ ಮಾಡಾಯಿ, ವಿಮಲ್ ಅಡಿಯೋಡಿ, …

ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಆರೋಪಿಯ ನಿಗೂಢ ಸಾವು: ಮೃತದೇಹ ಪರಿಯಾರಂಗೆ; ಇಬ್ಬರು ಕಸ್ಟಡಿಯಲ್ಲಿ

ಮಂಜೇಶ್ವರ:  ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಬಂಧಿಸಿ ಜಾಮೀನಿನಲ್ಲಿ  ಬಿಡು ಗಡೆಗೊಳಿಸಿದ ಆರೋಪಿ ನಿಗೂಢವಾಗಿ ಮೃತಪಟ್ಟ ಪ್ರಕರಣದಲ್ಲಿ ತನಿಖೆ ಪೊಲೀಸರು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಇಬ್ಬರನ್ನು  ಕಸ್ಟಡಿಗೆ ತೆಗೆದ ಪೊಲೀಸರು ಮೃತಪಟ್ಟ ಯುವಕನ ಮೃತದೇಹವನ್ನು ತಜ್ಞ ಪೋಸ್ಟ್ ಮಾರ್ಟಂಗಾಗಿ ಪರಿ ಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮೀಯಪದವು ಮದಕ್ಕಳದ ದಿ| ಅಬ್ದುಲ್ಲರ ಪುತ್ರ ಮೊಯ್ದೀನ್ ಆರಿಫ್ (೨೨) ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಂಜಾ ಅಮಲಿನಲ್ಲಿ ಗಲಾಟೆ ನಡೆಸುತ್ತಿದ್ದ ಮಧ್ಯೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಮೊಯ್ದೀನ್ ಆರೀಫ್‌ನನ್ನು …

ಟೈಲರ್ ಅಸೌಖ್ಯದಿಂದ ನಿಧನ

ಉಪ್ಪಳ: ಮುಳಿಂಜ ಬಳಿಯ ಕೋರಿಕ್ಕಾರು  ಚುಳ್ಳಿ ನಿವಾಸಿ ರಮೇಶ.ಕೆ    (೬೩) ನಿಧನ ಹೊಂದಿದರು. ಇವರು ಪಚ್ಲಂಪಾರೆಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಅಸೌಖ್ಯ ಬಾಧಿಸಿದ್ದು, ಇದರಿಂದ ಚಿಕಿತ್ಸೆಯಲ್ಲಿದ್ದರು.  ಇಂದು ಬೆಳಿಗ್ಗೆ  ಮನೆಯಲ್ಲಿ ನಿಧನ ಸಂಭವಿಸಿದೆ. ದಿವಂಗತರಾದ ಐತ್ತಪ್ಪ-ಪರಮೇಶ್ವರಿ ದಂಪತಿಯ ಪುತ್ರನಾದ ಮೃತರು ಪತ್ನಿ ಬೇಬಿ, ಪುತ್ರ ಮಿಥುನ್ ರಾಜ್, ಸಹೋದರ-ಸಹೋದರಿ ಯರಾದ ಕೃಷ್ಣಪ್ಪ, ರಾಮಚಂದ್ರ, ಸುಂದರ, ರಾಧಾ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜೆಸ್ವಿಟ್ ಬ್ರದರ್ ಆಂಟನಿ ಕ್ರಾಸ್ತಾ ನಿಧನ

ಕಾಸರಗೋಡು : ಜೆಸ್ವಿಟ್ ಧರ್ಮ ಗುರುಗಳ ಸಂಸ್ಥೆಯ ಬ್ರದರ್ ಆಂಟನಿ ಕ್ರಾಸ್ತಾ (77) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಯ್ಯಾರು ಕೊಂದಲಕಾಡ್ ನಿವಾಸಿಯಾಗಿದ್ದು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.1963 ರಲ್ಲಿ ಜೆಸ್ವಿಟ್ ಸಂಸ್ಥೆಗೆ ಸೇರ್ಪಡೆಗೊಂಡಿದ್ದ ಅವರಿಗೆ 1981 ರಲ್ಲಿ ಬ್ರದರ್ ದೀಕ್ಷೆ ಲಭಿಸಿತ್ತು. ಪ್ರಾರಂ ಭದ ವರ್ಷಗಳಲ್ಲಿ ಮಂಗಳೂರು, ಬೆಂಗಳೂರು ಹಾಗೂ ನಾಗಲ್ಯಾಂಡ್ ನಲ್ಲಿ ಸೇವೆ ಸಲ್ಲಿಸಿದ್ದ ಅವರು 1985 ರಲ್ಲಿ ರೋಮ್ ಗೆ ತೆರಳಿದ್ದರು. ಅಲ್ಲಿ ಜೆಸ್ವಿಟ್ ಸಂಸ್ಥೆಯ ಕೇಂದ್ರ ಕಚೇರಿಯ …

ಬೆಂಗಳೂರು ಕೆಫೆ ಬಾಂಬ್ ಸ್ಫೋಟ: ಶಂಕಿತ ರೂವಾರಿ ಆಂಧ್ರ ಪ್ರದೇಶದಿಂದ ವಶಕ್ಕೆ

ಬೆಂಗಳೂರು: ಬೆಂಗಳೂರು ರಾಜಾಜಿನಗರದ ವೈಟ್ ಫೀಲ್ಡ್‌ನ ಕುಂದಲಪಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ರಂದು ಸಂಭವಿಸಿದ ಬಾಂಬ್ ಸ್ಫೋಟದ ಪ್ರಧಾನ ಸೂತ್ರಧಾರನೆಂದು ಶಂಕಿಸಲಾಗುತ್ತಿರುವ ವ್ಯಕ್ತಿಯನ್ನು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಂಧ್ರ ಪ್ರದೇಶದಿಂದ ವಶಕ್ಕೆ ತೆಗೆದುಕೊಂಡಿದೆ. ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಮೈದೂರು ಮಂಡಲಂನ ಚೆರ್ಲೋದಲ್ಲಿ ಅಡಗಿಕೊಂಡಿದ್ದ ಸಲೀಂ ಎಂಬಾತ ಎನ್.ಐ.ಎ. ವಶಕ್ಕೊಳಗಾದ ವ್ಯಕ್ತಿ. ಈತ ಉತ್ತರ ತೆಲಂಗಾಣದಲ್ಲಿ ನಿಷೇಧಿತ ಸಂಘಟನೆಯಾದ ಪಿಎಫ್‌ಐನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದನೆಂದೂ ಉತ್ತರ ತೆಲಂಗಾಣದ ಉಸ್ತುವಾರಿಯನ್ನೂ ಈತ …

ವ್ಯಾಪಾರಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪೊಯಿನಾಚಿಗೆ ಸಮೀಪದ ಬಟ್ಟತ್ತೂರುನಲ್ಲಿ ಕೋಳಿ ಮಾರಾಟದಂಗಡಿ ನಡೆಸುತ್ತಿರುವ ವ್ಯಾಪಾರಿ ಮೈಕಾನದ ನಿವಾಸಿ ಕೆ. ಸದಾನಂದ (೪೫) ಎಂಬವರು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ತೀವ್ರ ವ್ಯಾಪಾರ ನಷ್ಟ ಅನುಭವಿಸುತ್ತಿದ್ದರೆಂದು ಅವರ ಸ್ನೇಹಿತರು ಹೇಳುತ್ತಿದ್ದರು. ಸದಾನಂದರು ವ್ಯಾಪಾರಿ ವ್ಯವಸಾಯಿ ಸಮಿತಿಯ ಪನೆಯಾಲ್ ಘಟಕದ ಸದಸ್ಯರೂ ಆಗಿದ್ದರು. ಜನಾರ್ದನನ್ -ಕೃಷ್ಣಮ್ಮ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಶಕುಂತಳ, ಸಹೋದರ ಸಹೋದರಿಯರಾದ ಬಾಲಕಷ್ಣನ್, ಚಂದ್ರಶೇಖರ, ಪುರುಷೋತ್ತಮ, ನಾರಾಯಣ, ಲೀಲಾವತಿ ಪ್ರೇಮಲತ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

೩೦೦ ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕುಂಬಳೆ: ಮಂಜೇಶ್ವರಕ್ಕೆ ಸಮೀಪದ ಕಡಂಬಾರು ಸಂತಡ್ಕದಲ್ಲಿ ಕುಂಬಳೆ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಕೆ.ಪಿಯವರ ನೇತೃತ್ವದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ೩೦೦ ಗ್ರಾಂ ಗಾಂಜಾ ದೊಂದಿಗೆ ಓರ್ವನನ್ನು   ಬಂಧಿಸಿದೆ. ಕಡಂಬಾರು ಸಂತನಡ್ಕದ ಅಬ್ದುಲ್ ರಹ್ಮಾನ್ ಅಲಿಯಾಸ್  ಮುನೀರ್ (೪೦) ಬಂಧಿತನಾದ  ಆರೋಪಿ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸುರೇಶ್‌ಬಾಬು ಕೆ, ಪ್ರಿವೆಂಟೀವ್ ಆಫೀಸರ್‌ಗಳಾದ ಮನಾಸ್ ಕೆ.ವಿ,  ರಮೇಶನ್ (ಗ್ರೇಡ್), ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಹಮೀದ್, …