೩೦೦ ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕುಂಬಳೆ: ಮಂಜೇಶ್ವರಕ್ಕೆ ಸಮೀಪದ ಕಡಂಬಾರು ಸಂತಡ್ಕದಲ್ಲಿ ಕುಂಬಳೆ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಕೆ.ಪಿಯವರ ನೇತೃತ್ವದಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ೩೦೦ ಗ್ರಾಂ ಗಾಂಜಾ ದೊಂದಿಗೆ ಓರ್ವನನ್ನು   ಬಂಧಿಸಿದೆ.

ಕಡಂಬಾರು ಸಂತನಡ್ಕದ ಅಬ್ದುಲ್ ರಹ್ಮಾನ್ ಅಲಿಯಾಸ್  ಮುನೀರ್ (೪೦) ಬಂಧಿತನಾದ  ಆರೋಪಿ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸುರೇಶ್‌ಬಾಬು ಕೆ, ಪ್ರಿವೆಂಟೀವ್ ಆಫೀಸರ್‌ಗಳಾದ ಮನಾಸ್ ಕೆ.ವಿ,  ರಮೇಶನ್ (ಗ್ರೇಡ್), ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಹಮೀದ್, ಲಿಮ ಎಂಬವರು ಒಳಗೊಂಡಿದ್ದರು.

You cannot copy contents of this page