ಮಹಿಳೆ ಕುಸಿದು ಬಿದ್ದು ಮೃತ್ಯು

ಮುಳ್ಳೇರಿಯ: ಮಹಿಳೆ ಯೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬೆಳ್ಳೂರು ಬಳಿಯ ಕಾಯಿ ಮಲೆ ನಿವಾಸಿ ಬಾಬು ಎಂಬವರ ಪತ್ನಿ ಉಷಾ (೪೫) ಮೃತಪಟ್ಟವ ರಾಗಿದ್ದಾರೆ. ಇವರು ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮುಳ್ಳೇರಿ ಯಾದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಸಂಭವಿಸಿತ್ತೆನ್ನ ಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ದಿವಂಗತರಾದ ಕುಟ್ಟಿ- ಭಾಗಿ ದಂಪತಿಯ ಪುತ್ರಿಯಾದ ಮೃತರು ಪತಿ, ಮಕ್ಕಳಾದ ದೀಪ್ತಿ, ತೃಪ್ತಿ, ಅಳಿಯ …

ಹಳೆಯ ಘಟನೆಯನ್ನು ನಕಲಿಯಾಗಿ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ ಪ್ರಚಾರಗೈದು ಗಲಭೆಗೆ ಯತ್ನ: ೫ ಮಂದಿ ವಿರುದ್ಧ ಕೇಸು

ಕುಂಬಳೆ: ನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ನಿನ್ನೆ ನಡೆದುದಾಗಿ ಚಿತ್ರೀಕರಿಸಿ ಸಾಮಾಜಿಕ ತಾಣಗಳಲ್ಲಿ  ಪ್ರಚಾರಗೈದು ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನೌಶಾದ್, ಸಲಾಂ, ಖಾದರ್, ಹಬೀಬ್, ಮುಸ್ತಫ ಎಂಬೀ ಐದು ಮಂದಿ ವಿರುದ್ಧ  ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ೨೦೨೦ರಲ್ಲಿ ಬಂಬ್ರಾಣದಲ್ಲಿ ಘಟನೆಯೊಂದು ನಡೆದಿತ್ತು. ಆ ಘಟನೆ ಯ ವರದಿ ಅಂದು ಕೆಲವು ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಚಾರಗೈಯ್ಯಲಾಗಿತ್ತು. ಇದೀಗ ಆ ಘಟನೆಯ ದೃಶ್ಯಗಳನ್ನು ತಿದ್ದುಪಡಿ …

ಜನವಾಸ ಕೇಂದ್ರಕ್ಕೆ ಬಂದ ಕಾಡಾನೆ ದಾಳಿಗೆ ಓರ್ವ ಬಲಿ

ಮಾನಂತವಾಡಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ರೇಡಿಯೊ ಕಾಲರ್ ಅಳವಡಿಸಿದ ಕಾಡಾನೆಯೊಂದು ಊರಿಗೆ   ಏಕಾಏಕಿಯಾಗಿ ನುಗ್ಗಿ ಬಂದು ಟ್ರಾಕ್ಟರ್ ಚಾಲಕನೋರ್ವನ ಮೇಲೆ ದಾಳಿ ನಡೆಸಿ ಕೊಂದ ಭಯಾನಕ ಘಟನೆ ಮಾನಂತವಾಡಿಯಲ್ಲಿ ಇಂದು ಬೆಳಿಗ್ಗೆ ೭.೩೦ಕ್ಕೆ ನಡೆದಿದೆ. ಟ್ರಾಕ್ಟರ್ ಚಾಲಕ ಮಾನಂತವಾಡಿ ಪಡಮಲ ಚಾಲಿಗದ್ದ ಪನಚ್ಚಿಲ್ ಅಜೀಶ್ ಯಾನೆ ಅಜಿ (೪೭) ಎಂಬವರು ಕಾಡಾನೆಯ ದಾಳಿಗೆ ಬಲಿಯಾದ ದುರ್ದೈವಿ. ಅಜಿ ಇಂದು ಬೆಳಿಗ್ಗೆ ೭.೩೦ಕ್ಕೆ ತಮ್ಮ ಮನೆ ಪಕ್ಕದ ಹಿತ್ತಿಲಿನಿಂದ ಹುಲ್ಲು ತರಲೆಂದು ಹೋದ ವೇಳೆ ಅಲ್ಲಿಗೆ ಕಾಡಾನೆ …

ಅಡ್ಯನಡ್ಕ ಬ್ಯಾಂಕ್ ಕಳವು ತನಿಖೆಗೆ ವಿಶೇಷ ತಂಡ: ಕುಂಡಂಕುಳಿ ಜ್ಯುವೆಲ್ಲರಿ ಕಳವು ಮಾದರಿಯ ಕೃತ್ಯ

ಅಡ್ಯನಡ್ಕ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಕಳವು ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ತನಿಖಾ ತಂಡವನ್ನು ರೂಪೀಕರಿಸಲಾಗಿದೆ.  ಬ್ಯಾಂಕ್‌ನ ಸಿಸಿ ಕ್ಯಾಮರಾದಲ್ಲಿ ಲಭಿಸಿದ ದೃಶ್ಯವನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ.  ಆರೋಪಿಗಳನ್ನು ಶೀಘ್ರದಲ್ಲಿ ಬಲೆಗೆ ಹಾಕಲು ಸಾಧ್ಯವಿದೆಯೆಂಬ ನಿರೀಕ್ಷೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಬ್ಯಾಂಕ್ ಕಳವು ಹಿಂದೆ ನುರಿತ ಕಳ್ಳರೇ ಕಾರ್ಯಾಚರಿಸಿ ರಬಹುದೆಂದು ಅಂದಾಜಿಸಲಾಗಿದೆ. ಈ ಹಿಂದೆ ಕುಂಡಂಕುಳಿಯ ಸುಮಂಗಲಿ ಜ್ಯುವೆಲ್ಲರಿಯಿಂದ ನಡೆದ ಕಳವು  ಮಾದರಿಯಲ್ಲೇ ಅಡ್ಯನಡ್ಕ ಬ್ಯಾಂಕ್ ಕಳವು ನಡೆದಿದೆ. …

ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಹಿಳೆ ವಿರುದ್ಧ ಕೇಸು

ಆದೂರು: ಅಪ್ರಾಪ್ತನಿಗೆ ಚಲಾಯಿಸಲು ಸ್ಕೂಟರ್ ನೀಡಿದ ಮಹಿಳೆ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಳ್ಳೇರಿಯ ಪೆರಿಯಡ್ಕದ ೬೫ರ ಹರೆಯದ ಮಹಿಳೆ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ಬಾಲಕನನ್ನು ಆದೂರು ಪೊಲೀಸರು ತಡೆದು ನಿಲ್ಲಿಸಿ ಸ್ಕೂಟರ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಸ್ಕೂಟರ್ ಮಾಲಕಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಬಸ್ಸ್‌ಗಳೆರಡು ಢಿಕ್ಕಿ: ಹಾನಿ

ಕಾಸರಗೋಡು: ಕೆಎಸ್‌ಆರ್ ಟಿಸಿ ಹಾಗೂ ಖಾಸಗಿ ಬಸ್‌ಗಳೆ ರಡು ಢಿಕ್ಕಿ ಹೊಡೆದು ಹಾನಿ ಗೊಂಡ ಘಟನೆ ಪಿಲಿಕ್ಕೋಡ್ ರಾಷ್ಟ್ರೀಯ ಹೆದ್ದಾರಿ ಮಟ್ಟಲಾ ಯಿಯಲ್ಲಿ ನಿನ್ನೆ ನಡೆದಿದೆ. ಚೆರ್ವತ್ತೂರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಅದರ  ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕೆಎಸ್‌ಆರ್‌ಟಿಸಿ  ಬಸ್‌ಗೆ ಹಾನಿಯುಂಟಾಗಿದ್ದು, ಆ ಬಗ್ಗೆ ನೀಡಿದ ದೂರಿನಂತೆ ಖಾಸಗಿ ಬಸ್ ಚಾಲಕನ ವಿರುದ್ಧ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೊತ್ತು ವಿಂಗಡಣೆ ವೇಳೆ ಹೊಡೆದಾಟ: ಓರ್ವನಿಗೆ ಗಾಯ

 ಕುಂಬಳೆ: ಸೊತ್ತು ವಿಂಗಡಣೆ ಚರ್ಚೆ ವೇಳೆ ನಡೆದ ಹೊಡೆದಾಟ ದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಪೆರುವಾಡ್ ನಿವಾಸಿ ಪಿ.ಎಚ್. ಹಾರಿಸ್ (೪೧) ಗಾಯಗೊಂಡಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಪೆರುವಾಡ್‌ನ ಮನೆಯಲ್ಲಿ ಸೊತ್ತು  ವಿಂಗಡಣೆ ಚರ್ಚೆ ನಡೆದಿತ್ತು. ಈ ವೇಳೆ ವಾಗ್ವಾದ ನಡೆದು ಹಲ್ಲೆಗೈದಿರುವುದಾಗಿ ದೂರಲಾಗಿದೆ.

ಮನೆಯ ಕೊಠಡಿಯೊಳಗೆ ಸಿಲುಕಿಕೊಂಡ ಮಗು: ರಕ್ಷಿಸಿದ ಅಗ್ನಿಶಾಮಕದಳ

ಉಪ್ಪಳ: ಮನೆಯ ಕೊಠಡಿಯೊಳಗೆ ತೆರಳಿದ ಎರಡು ವರ್ಷದ ಹೆಣ್ಣುಮಗು ಬಾಗಿಲಿನ ಚಿಲಕ ಹಾಕಿದ್ದು ಬಳಿಕ ತೆಗೆಯಲಾಗದೆ ಸಂಕಷ್ಟಕ್ಕೀಡಾದ ಘಟನೆ ನಡೆದಿದೆ. ವಿಷಯ ತಿಳಿದು ತಲುಪಿದ ಉಪ್ಪಳ ಅಗ್ನಿಶಾಮಕದಳ ಬಾಗಿಲು ತೆರೆದು ಮಗುವನ್ನು ಸಂಬಂಧಿಕರಿಗೆ ಒಪ್ಪಿಸಿದೆ. ಉಪ್ಪಳ ಕೋಡಿಬಯಲಿನ ಮನೆಯೊಂ ದರಲ್ಲಿ ನಿನ್ನೆ ಅಪರಾಹ್ನ ೩.೪೫ರ ವೇಳೆ ಈ ಘಟನೆ ನಡೆದಿದೆ. ಮನೆ ಮಂದಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಗು ಬಾಗಿಲಿನ ಚಿಲಕ ಹಾಕಿದೆ. ಮಗು ಕಾಣದಾದುದರಿಂದ ತಾಯಿ ಸಹಿತ ಮನೆಯವರು ಹುಡುಕಾಡಿದಾಗ ಮಗು ಕೊಠಡಿಯೊಳಗೆ ಸಿಲುಕಿಕೊಂಡ ಬಗ್ಗೆ …

ವೃದ್ಧನ ಆರೂವರೆ ಲಕ್ಷ ರೂಪಾಯಿ ಲಪಟಾವಣೆ; ಓರ್ವ ಸೆರೆ

ಕಣ್ಣೂರು : ಹಳೆಯ ಚಿನ್ನ ಮಾರಾಟಕ್ಕಿದೆ ಎಂದು ಸುಳ್ಳು ಹೇಳಿ  ವೃದ್ದನನ್ನು ಕರೆಸಿ ಆರೂವರೆ ಲಕ್ಷ ರೂಪಾಯಿ ಲಪಟಾಯಿಸಿದ ಘಟನೆ ನಡೆದಿದೆ. ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.  ತಲಶ್ಶೇರಿ ನಿವಾಸಿ ಅಶ್ರಫ್ (೪೧) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗಾಂಜಾ, ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮನ್ಸೂರ್ ಎಂಬಾತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ತಳಿಪರಂಬ ಕೀಳಾಟೂರಿನ ಕೆ.ಎಂ. ಅಗಸ್ಟ್ಯನ್(೬೦) ಎಂಬವರ ಹಣವನ್ನು ಲಪಟಾಯಿಸಲಾಗಿದೆ. ಘಟನೆ ಕುರಿತು ಪೊಲೀಸರು  ರೀತಿ ತಿಳಿಸಿದ್ದಾರೆ. – ಹಳೆ …

ದೈವನರ್ತಕ, ವಿ.ವಿ. ನೌಕರ ಹೃದಯಾಘಾತದಿಂದ ನಿಧನ

ಉಪ್ಪಳ: ಪ್ರಸಿದ್ದ ದೈವ ನರ್ತಕ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಗೋಪಾಲಕೃಷ್ಣ.ಪಿ [53] ನಿಧನರಾದರು. ನಿನ್ನೆ ಬೆಳಿಗ್ಗೆ 7 ಗಂಟೆಯ ವೇಳೆ ಹೃದಯÁಘಾತ ಉಂಟಾಗಿದ್ದು, ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನಿೆÃಡಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಪ ಹೊತ್ತಿನಲ್ಲಿ ನಿಧನರಾಗಿದ್ದಾರೆ. ಇವರು ಮಂಗಳೂರು ಯೂನಿವರ್ ಸಿಟಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಪ್ರಸಿದ್ದ ದೈವ ನರ್ತಕರೂ, ಸಮಾಜ ಸೇವಕರೂ ಆಗಿದ್ದರು. ಕೋಮಾರು ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ, ಗುಳಿಗ, ಕೊರತಿ ಮೊದಲಾದ ದೈವದ …